ಕೇರಳದ ನಾಯಕ ಎಂ ಎ ಬೇಬಿ ಸಿಪಿಐ(ಎಂ)ನ ನೂತನ ಪ್ರಧಾನ ಕಾರ್ಯದರ್ಶಿ

ಮದುರೈ : ೭೧ ವರ್ಷ ವಯಸ್ಸಿನ ಹಿರಿಯ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಾಯಕ ಮತ್ತು ಕೇರಳದ ಪಾಲಿಟ್‌ಬ್ಯೂರೋ ಸದಸ್ಯ ಎಂಎ ಬೇಬಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಶನಿವಾರ (ಏಪ್ರಿಲ್ 5) ತಮಿಳುನಾಡಿನ ಮಧುರೈನಲ್ಲಿ ನಡೆದ ಪಾಲಿಟ್‌ಬ್ಯೂರೋ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಬೇಬಿ ಹೆಸರನ್ನು ಹಿರಿಯ ನಾಯಕ ಪ್ರಕಾಟ ಕಾರಟ್ ಪ್ರಸ್ತಾಪಿಸಿದರು. ಇವರು … Continued

ಹಿರಿಯ ಸಿಪಿಐ(ಎಂ) ನಾಯಕ ಸೀತಾರಾಮ ಯೆಚೂರಿ ಇನ್ನಿಲ್ಲ…

ನವದೆಹಲಿ: ದೀರ್ಘಕಾಲದ ಅನಾರೋಗ್ಯದಿಂದ ದೆಹಲಿಯ ಏಮ್ಸ್‌ಗೆ ದಾಖಲಾಗಿದ್ದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರು ಗುರುವಾರ ನಿಧನರಾಗಿದ್ದಾರೆ. ರಾಜಕೀಯ ತಂತ್ರಜ್ಞ, ಚಿಂತಕ, ಲೇಖಕ ಮತ್ತು ಪಕ್ಷದ ಮುಖವಾಣಿ ಪೀಪಲ್ಸ್ ಡೆಮಾಕ್ರಸಿಯ ಸಂಪಾದಕರಾಗಿದ್ದ ಸೀತಾರಾಮ್ ಯೆಚೂರಿ ಅವರ ನಿದನದಿಂದ ಸಿಪಿಐ(ಎಂ) ತನ್ನ ದೃಢವಾದ ಸ್ತಂಭಗಳಲ್ಲಿ ಒಂದನ್ನು ಕಳೆದುಕೊಂಡಿದೆ. ನ್ಯುಮೋನಿಯಾ ತರಹದ ಎದೆ ಸೋಂಕಿನ ಚಿಕಿತ್ಸೆಗಾಗಿ ಯೆಚೂರಿ … Continued

ಸಿಪಿಐ(ಎಂ) ಮುಖಂಡ ಸೀತಾರಾಮ ಯೆಚೂರಿ ಸ್ಥಿತಿ ʼಚಿಂತಾನಜಕʼ

ನವದೆಹಲಿ: ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಮತ್ತು ಪ್ರಸ್ತುತ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ನವದೆಹಲಿಯಲ್ಲಿ ಉಸಿರಾಟದ ಬೆಂಬಲದಲ್ಲಿದ್ದಾರೆ ಎಂದು ಪಕ್ಷವು ಮಂಗಳವಾರ ತಿಳಿಸಿದೆ. 72 ವರ್ಷದ ರಾಜಕಾರಣಿ ಯೆಚೂರಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ ಮತ್ತು ತೀವ್ರ ಉಸಿರಾಟದ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ … Continued

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಆರೋಗ್ಯ ಸ್ಥಿತಿ ಗಂಭೀರ ; ಏಮ್ಸ್‌ನಲ್ಲಿ ವೆಂಟಿಲೇಟರಗೆ ಶಿಫ್ಟ್‌

ನವದೆಹಲಿ: ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರನ್ನು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಆಸ್ಪತ್ರೆಯ ವೆಂಟಿಲೇಟರ್‌ಗೆ ಸ್ಥಳಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಯೆಚೂರಿ ಅವರ ಆರೋಗ್ಯ ಹದಗೆಟ್ಟ ಬೆನ್ನಲ್ಲೇ ವೆಂಟಿಲೇಟರ್‌ಗೆ ದಾಖಲಿಸಲಾಗಿತ್ತು. ಶ್ವಾಸಕೋಶದ ಸೋಂಕಿನ ಚಿಕಿತ್ಸೆಗಾಗಿ ದಾಖಲಾಗಿದ್ದ ಅವರಿಗೆ ಏಮ್ಸ್‌ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಯೆಚೂರಿ … Continued

ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ ದೆಹಲಿ ಏಮ್ಸ್ ಗೆ ದಾಖಲು

ನವದೆಹಲಿ : ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರನ್ನು ಸೋಮವಾರ ಸಂಜೆ ತೀವ್ರ ಜ್ವರದಿಂದ ಅಸ್ವಸ್ಥಗೊಂಡ ನಂತರ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್)ಗೆ ದಾಖಲಿಸಲಾಯಿತು. ಆಸ್ಪತ್ರೆಯ ಮೂಲಗಳ ಪ್ರಕಾರ, ಯೆಚೂರಿ ಅವರನ್ನು ತಕ್ಷಣದ ವೈದ್ಯಕೀಯ ಚಿಕಿತ್ಸೆಗಾಗಿ ತುರ್ತು ವಿಭಾಗಕ್ಕೆ ಕರೆದೊಯ್ಯಲಾಯಿತು. ಯೆಚೂರಿ ಅವರ ಆರೋಗ್ಯ … Continued

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ನಿಧನ

ಕೋಲ್ಕತ್ತಾ :  ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಾಯಕ ಬುದ್ಧದೇವ ಭಟ್ಟಾಚಾರ್ಯ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಗುರುವಾರ ಬೆಳಿಗ್ಗೆ ತಮ್ಮ ಕೋಲ್ಕತ್ತಾದ ಮನೆಯಲ್ಲಿ ನಿಧನರಾದರು. ಭಟ್ಟಾಚಾರ್ಯ ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಮೀರಾ ಮತ್ತು ಮಗಳು ಸುಚೇತನಾ ಅವರನ್ನು ಅಗಲಿದ್ದಾರೆ. ಭಟ್ಟಾಚಾರ್ಯ ಅವರು … Continued

ವೀಡಿಯೊ..| ಬಿಜೆಪಿಗೆ ಜಯ : ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲೇ ಕಾಂಗ್ರೆಸ್‌ ಕಾರ್ಯಕರ್ತರ ಮಾರಾಮಾರಿ…!

ತ್ರಿಶೂರ್‌ : ಶುಕ್ರವಾರ (ಜೂನ್ 7) ಕೇರಳದ ತ್ರಿಶೂರ್‌ನಲ್ಲಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಕಚೇರಿಯೊಳಗೆ ಕಾಂಗ್ರೆಸ್ ಕಾರ್ಯಕರ್ತರ ಎರಡು ಗುಂಪುಗಳ ನಡುವೆ ದೊಡ್ಡ ಹೊಡೆದಾಟ ನಡೆದಿದೆ. ತ್ರಿಶೂರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಮುರಳೀಧರನ್ ಸೋಲಿನ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದಾಗ ಈ ಘಟನೆ ನಡೆದಿದೆ. ಈ ಹಿಂದೆ, ಸಿಪಿಐ(ಎಂ) ಮತ್ತು ಕಾಂಗ್ರೆಸ್ “ಬಿಜೆಪಿ ಈ … Continued

“ನಾವು ಬಿಜೆಪಿ ವಿರುದ್ಧ ಮೈತ್ರಿ ಪ್ರಯತ್ನಿಸುತ್ತಿದ್ದೇವೆ, ಆದರೆ ಕಾಂಗ್ರೆಸ್, ಸಿಪಿಐ(ಎಂ)…” : ಮಮತಾ ಬ್ಯಾನರ್ಜಿ ವಾಗ್ದಾಳಿ

ಕೂಚ್ ಬೆಹಾರ (ಪಶ್ಚಿಮ ಬಂಗಾಳ): ಪಾಟ್ನಾದಲ್ಲಿ ನಡೆದ ಬೃಹತ್ ಪ್ರತಿಪಕ್ಷಗಳ ಸಭೆಯ ನಂತರ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಪಿಐ(ಎಂ) ಮತ್ತು ಕಾಂಗ್ರೆಸ್‌ ಅನ್ನು ಟೀಕಿಸಿದ್ದಾರೆ. ನಾವು ಕೇಂದ್ರದಲ್ಲಿ ಬಿಜೆಪಿ ವಿರುದ್ಧ ಮಹಾಮೈತ್ರಿ ರಚಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಸಿಪಿಐ(ಎಂ) ಮತ್ತು ಕಾಂಗ್ರೆಸ್ ಬಂಗಾಳದಲ್ಲಿ ಬಿಜೆಪಿಯೊಂದಿಗೆ ಕೆಲಸ ಮಾಡಲು ಪ್ರಯತ್ನಿಸುತ್ತಿವೆ. ನಾನು ಬಂಗಾಳದಲ್ಲಿ ಈ ಅಪವಿತ್ರ … Continued

ಬೂಟುಗಳಿಂದ ಹೊಡೆದರೆ ನಮ್ಮನ್ನು ದೂಷಿಸಬೇಡಿ: ಬಿಜೆಪಿ, ಸಿಪಿಐ(ಎಂ) ಪಕ್ಷಗಳಿಗೆ ಟಿಎಂಸಿ ಸಂಸದ ಸೌಗತ ರಾಯ್ ಎಚ್ಚರಿಕೆ

ಕೋಲ್ಕತ್ತಾ:ಕೆಲವರ ದುಷ್ಕೃತ್ಯಗಳಿಗಾಗಿ ತಮ್ಮ ಪಕ್ಷದ ಮೇಲೆ ದಾಳಿ ಮಾಡುವಾಗ ಸಭ್ಯತೆಯ ಮಿತಿಯನ್ನು ದಾಟಬೇಡಿ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಸೌಗತ ರಾಯ್ ಅವರು ಬಿಜೆಪಿ ಮತ್ತು ಸಿಪಿಐ(ಎಂ) ಪಕ್ಷಗಳಿಗೆ ಎಚ್ಚರಿಕೆ ನೀಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಬೂಟುಗಳಿಂದ ಥಳಿಸಿ ಸ್ಥಳದಿಂದ ಓಡಿಸಿದರೆ ದೂರು ಹೇಳಬೇಡಿ ಎಂದು ಸಂsದ ರಾಯ್‌ ಬಿಜೆಪಿ ಮತ್ತು ಸಿಪಿಐ(ಎಂ) ಮುಖಂಡರಿಗೆ ಹೇಳಿದ್ದಾರೆ. … Continued