ಸರಕು ಸಾಗಣೆ ಹಡಗು ಡಿಕ್ಕಿಯಾಗಿ ನದಿಗೆ ಮಗುಚಿದ ಕ್ರೂಸ್ ಹಡಗು ; 130 ಪ್ರಯಾಣಿಕರು ಪಾರಾಗಿದ್ದೇ ಪವಾಡ ! ವಿಡಿಯೋ ವೈರಲ್‌

ಅಮೆರಿಕದ ಲೂಸಿಯಾನಾ ರಾಜ್ಯದ ನ್ಯೂ ಓರ್ಲಿಯನ್ಸ್‌ನಲ್ಲಿ ಶುಕ್ರವಾರ ನಿಲುಗಡೆ ಮಾಡಲಾಗಿದ್ದ ಕ್ರೂಸ್ ಹಡಗಿಗೆ ಸರಕು ಸಾಗಣೆ ಹಡಗು ಡಿಕ್ಕಿ ಹೊಡೆದ ಪರಿಣಾಮ ಕ್ರೂಸ್ ಹಡಗು ಮಿಸ್ಸಿಸ್ಸಿಪ್ಪಿ ನದಿಗೆ ಮಗುಚಿ ಬಿದ್ದಿದೆ. ಹಡಗಿನಲ್ಲಿದ್ದ ಸುಮಾರು 130 ಮಂದಿಯನ್ನು ರಕ್ಷಿಸಲಾಗಿದ್ದು, ಸಣ್ಣಪುಟ್ಟ ಗಾಯಗಳಾದ ಕನಿಷ್ಠ 32 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಘಟನೆಯಲ್ಲಿ ಯಾರೊಬ್ಬರೂ ನಾಪತ್ತೆಯಾಗಿಲ್ಲ. ಅಪಘಾತದಿಂದಾಗಿ ‘ಅಮೆರಿಕನ್ … Continued