ತರಗತಿಯಲ್ಲಿ ವಿದ್ಯಾರ್ಥಿ ಕಪಾಳಕ್ಕೆ ಹೊಡೆದ ಶಿಕ್ಷಕ ; ಊಟದ ಡಬ್ಬಿಯಲ್ಲಿ ಪಿಸ್ತೂಲ್‌ ತಂದು ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ…!!

ಡೆಹ್ರಾಡೂನ್: ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಗಂಗನ್‌ದೀಪ್ ಸಿಂಗ್ ಕೊಹ್ಲಿ ಎಂಬ ಶಿಕ್ಷಕರು ಭೌತಶಾಸ್ತ್ರ ಬೋಧಿಸುತ್ತಿದ್ದಾಗ ತಮ್ಮ ವಿದ್ಯಾರ್ಥಿಯೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದರು. ಬುಧವಾರ, ಅದೇ ವಿದ್ಯಾರ್ಥಿ ತನ್ನ ಟಿಫಿನ್ ಬಾಕ್ಸ್‌ನಲ್ಲಿ ಬಂದೂಕನ್ನು ತಂದು ಕೊಹ್ಲಿಯ ಬೆನ್ನಿಗೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುನಾನಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕನ … Continued

ಕಾಯಿಲೆ ಗುಣವಾಗುತ್ತದೆಂದು ಬಾಲಕನನ್ನು ಗಂಗಾ ನದಿಯಲ್ಲಿ ಮುಳುಗಿಸಿದ ಪೋಷಕರು..: ಆದ್ರೆ ಬಾಲಕನ ಪ್ರಾಣವೇ ಹೋಯ್ತು…

ಡೆಹ್ರಾಡೂನ್: ಕುಟುಂಬದ ಮೂಢನಂಬಿಕೆ ಮತ್ತು ಪವಾಡದ ಮೇಲಿನ ಅಂಧಶ್ರದ್ಧೆಯು ಐದು ವರ್ಷದ ಬಾಲಕನ ಸಾವಿಗೆ ಕಾರಣವಾದ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ. ಐದು ವರ್ಷದ ಬಾಲಕ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಗಂಗಾ ನದಿ ನೀರು ಗುಣಪಡಿಸುತ್ತದೆ ಎಂದು ಆತನ ಹೆತ್ತವರು ನಂಬಿದ್ದರು. ಗಂಗಾನದಿ ನೀರಿನಲ್ಲಿ ಮುಳುಗಿದರೆ ಆತನ ಕಾಯಿಲೆ ಕಡಿಮೆಯಾಗುತ್ತದೆ ಎಂಬ ಮೂಡನಂಬಿಕೆಯಲ್ಲಿ ಉತ್ತರ ಭಾರತದ … Continued

ಸಾಲಕ್ಕೆ ಹೆದರಿ ದಂಪತಿ ಆತ್ಮಹತ್ಯೆ : ಹೆತ್ತವರ ಶವದ ಜೊತೆ ಆಹಾರವಿಲ್ಲದೆ 3 ದಿನ ಕಳೆದರೂ ಬದುಕಿತ್ತು 6 ದಿನದ ಹಸುಳೆ….!

ಹಾಲುಗಲ್ಲದ ಕಂದ. ಜಗತ್ತನ್ನ ಕಂಡು ಇನ್ನೂ ಒಂದು ವಾರ ಕೂಡ ತುಂಬಿರಲಿಲ್ಲ. ಜನಿಸಿದ ಮೂರೇ ದಿನಕ್ಕೆ ಉಸಿರನ್ನೇ ನಿಲ್ಲಿಸುವಂಥ ಹಸಿವು ಕಾಡಿತ್ತು. ಅಮ್ಮನ ಎದೆಹಾಲಿಗಾಗಿ ಮಲಗಿದ್ದಲ್ಲೇ ಚೀರುತ್ತಿತ್ತು. ಆದರೆ ಹೆತ್ತವಳಿಗೆ ಕಂದನ ಅಳು ಕೇಳುತ್ತಿರಲಿಲ್ಲ. ಅಪ್ಪನಿಗೆ ಅರ್ಥವಾಗುತ್ತಿರಲಿಲ್ಲ. ಯಾಕೆಂದರೆ ಪುಟಾಣಿಯ ಪಕ್ಕದಲ್ಲೇ ಹೆತ್ತವರು ಸಾವಿನ ಮನೆ ಸೇರಿದ್ದರು…! ಗಂಡ ಹೆಂಡತಿ ಸಾವಿನ ಮನೆ ಸೇರಿದ್ದರೆ ಹೆತ್ತವರ … Continued