ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಾರ್ವಜನಿಕರ ತೀವ್ರ ವಿರೋಧ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪಾ ಶ್ರೀ ಗುತ್ತಿಕನ್ನಿಕಾ ನಗರದೇವಿ ದೇವಾಲಯದ ಸಭಾಭವನದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಕುರಿತು ನಡೆದ ಸಾರ್ವಜನಿಕ ಆಕ್ಷೇಪಣೆ ಸಭೆಯಲ್ಲಿ ಸಾರ್ವಜನಿಕರು ಯೋಜನೆಯ ವಿರುದ್ಧ ತಮ್ಮ ಬಲವಾದ ವಿರೋಧ ವ್ಯಕ್ತಪಡಿಸಿದರು. ಈ ಸಭೆ ಕೇವಲ ಒಂದು ಕಾಟಾಚಾರದ ಪ್ರಕ್ರಿಯೆ ಎಂಬಂತೆ ನಡೆಸಲಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. … Continued