ಸುಖೋಯ್ ಯುದ್ಧವಿಮಾನದಿಂದ ಹಾರಿಸಲಾದ ವಿಸ್ತೃತ ಶ್ರೇಣಿಯ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ನವದೆಹಲಿ : ಯುದ್ಧ ವಿಮಾನಗಳ ಮೂಲಕ ಹಾರಿಸಲಾಗುವ ವಿಸ್ತೃತ ಶ್ರೇಣಿಯ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಭಾರತೀಯ ವಾಯುಪಡೆ ಇಂದು, ಗುರುವಾರ ಯಶಸ್ವಿಯಾಗಿ ಪರೀಕ್ಷಿಸಿದೆ. ಎಸ್‌ಯು-30 ಎಂಕೆಐ ಫೈಟರ್ ಜೆಟ್‌ನಿಂದ ಹಾರಿಸಲಾದ ಬ್ರಹ್ಮೋಸ್ ಕ್ಷಿಪಣಿಯ ವಿಸ್ತೃತ ಶ್ರೇಣಿಯು ದೂರದ ಸಮುದ್ರದ ಹಡಗಿನ ಗುರಿಯನ್ನು ಯಶಸ್ವಿಯಾಗಿ ತಲುಪಿದೆ. ಬ್ರಹ್ಮೋಸ್ ಕ್ಷಿಪಣಿಯ ವಿಸ್ತೃತ ಶ್ರೇಣಿಯು 400 ಕಿಮೀ ದೂರದ … Continued

ಲಿಂಗಾಯತ ಪಂಚಮಸಾಲಿ, ಒಕ್ಕಲಿಗರಿಗೆ ಮೀಸಲಾತಿ: ಇದಕ್ಕಾಗಿ ಪ್ರತ್ಯೇಕ ಪ್ರವರ್ಗ 2C, 2D ರಚನೆಗೆ ರಾಜ್ಯ ಸಂಪುಟ ಸಭೆ ತೀರ್ಮಾನ

ಬೆಳಗಾವಿ : ಕರ್ನಾಟಕದ ಎರಡು ಪ್ರಬಲ ಸಮುದಾಯದವಾಗಿರುವ ಲಿಂಗಾಯತ ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯದ ಮೀಸಲಾತಿಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಕೆಟಗರಿ ರಚನೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಗುರುವಾರ ಸಂಜೆ ಸುವರ್ಣ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಕುರಿತ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. … Continued

ಕರ್ನಾಟಕದ ಅತ್ಯಂತ ಅಗತ್ಯದ ಕಳಸಾ-ಬಂಡೂರಿ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಸರ್ಕಾರದಿಂದ ಅನುಮತಿ : ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ಇಂದು, ಗುರುವಾರ ಕೇಂದ್ರ ಜಲ ಆಯೋಗವು ಕರ್ನಾಟಕದ ಕಳಸಾ -ಬಂಡೂರಿ ವಿಸ್ತೃತ ಯೋಜನಾ ವರದಿಗೆ ಅನುಮತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟರಿನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಕರ್ನಾಟಕಕ್ಕೆ ಅತ್ಯಂತ ಅವಶ್ಯಕವಾಗಿದ್ದ ಈ ಯೋಜನೆಗೆ ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಗೃಹ ಸಚಿವ ಅಮಿತ್ … Continued

‘ ಬಾಳ ಸಂಗಾತಿ ಆಗಲು ಈ ಗುಣಗಳಿರುವ ಮಹಿಳೆಗೆ ಆದ್ಯತೆ…’: ಬಾಳ ಸಂಗಾತಿ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ತಮ್ಮ ಜೀವನ ಸಂಗಾತಿ ಹೇಗಿರಬೇಕು ಎಂಬುದರಿಂದ ಹಿಡಿದು ಮೋಟಾರ್‌ ಸೈಕಲ್‌ಗಳ ಮೇಲಿನ ಪ್ರೀತಿಯ ವರೆಗೆ ತಮ್ಮ ಜೀವನದ ಬಗೆಗಿನ ಕೆಲವು ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿ ಅವರು, ತಮ್ಮ ಬಾಳ ಸಂಗಾತಿ ಆಗುವವರು ತಮ್ಮ ತಾಯಿ ಸೋನಿಯಾ … Continued

ಚಂದ್ರಬಾಬು ನಾಯ್ಡು ರೋಡ್‌ ಶೋ ವೇಳೆ ನೂಕಾಟದಲ್ಲಿ ಕನಿಷ್ಠ 8 ಮಂದಿ ಸಾವು, ಹಲವರಿಗೆ ಗಾಯ

ನೆಲ್ಲೂರು: ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ರೋಡ್‌ಶೋ ವೇಳೆ ಓರ್ವ ಮಹಿಳೆ ಸೇರಿ ಎಂಟು ಜನರು ಕಾಲ್ತುಳಿತದಲ್ಲಿ ಸಾವಿಗೀಡಾಗಿದ್ದಾರೆ. ಈಗ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಚಂದ್ರಬಾಬು ನಾಯ್ಡು ಅವರು ತಮ್ಮ “ಇದೇಮಿ ಖರ್ಮ ಮನ ರಾಷ್ಟ್ರಿಕಿ ಅಭಿಯಾನದ ಭಾಗವಾಗಿ ಕಂದುಕೂರು ಪಟ್ಟಣದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುವ … Continued

13 ತಿಂಗಳ ನಂತರ ಜೈಲಿನಿಂದ ಬಿಡುಗಡೆಯಾದ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ ದೇಶಮುಖ : ಓಪನ್-ಟಾಪ್ ಜೀಪ್‌ನಲ್ಲಿ ದೇವಾಲಯಕ್ಕೆ ಭೇಟಿ | ವೀಕ್ಷಿಸಿ

ಮುಂಬೈ: ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿ ಮುಂಬೈನ ಆರ್ಥರ್ ರೋಡ್ ಜೈಲಿನಿಂದ ಇಂದು, ಬುಧವಾರ ಬಿಡುಗಡೆಯಾಗಿರುವ ಮಹಾರಾಷ್ಟ್ರದ ಮಾಜಿ ಸಚಿವ ಅನಿಲ ದೇಶಮುಖ ಅವರಿಗೆ ಪಕ್ಷದ ಪ್ರಮುಖ ನಾಯಕರು ಹಾಗೂ ಬೆಂಬಲಿಗರುಸ್ವಾಗತ ಕೋರಿದ್ದಾರೆ. 72 ವರ್ಷದ ಎನ್‌ಸಿಪಿ ನಾಯಕ ಸಿಬಿಐ ದಾಖಲಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದರು. ದೇಶಮುಖ ಅವರನ್ನು ಸ್ವಾಗತಿಸಲು ಜೈಲಿನ ಹೊರಗೆ … Continued

ಮುಂಬೈ ಮಹಾರಾಷ್ಟ್ರಕ್ಕೆ ಸೇರಿದ್ದು, ಯಾರಪ್ಪಂದಲ್ಲ : ಕರ್ನಾಟಕ ನಾಯಕರ ಹೇಳಿಕೆಗೆ ಫಡ್ನವಿಸ್ ಖಂಡನೆ

ನಾಗ್ಪುರ :ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮುಂಬೈ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ್ದು ಯಾರಪ್ಪಂದಲ್ಲ ಎಂದು ಬುಧವಾರ ಹೇಳಿದ್ದಾರೆ. ಎರಡು ರಾಜ್ಯಗಳ ನಡುವಿನ ಗಡಿ ವಿವಾದದ ನಡುವೆ ಕರ್ನಾಟಕದ ಕೆಲವು ನಾಯಕರು ಮಾಡಿದ ಟೀಕೆಗಳನ್ನು ಅವರು ಬಲವಾಗಿ ಖಂಡಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾತನಾಡಿದ ಫಡ್ನವೀಸ್, ಮರಾಠಿಗರ ಭಾವನೆಗಳನ್ನು ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವ … Continued

ಕೋವಿಡ್ -19 : ಮುಂದಿನ 40 ದಿನಗಳು ಭಾರತಕ್ಕೆ ನಿರ್ಣಾಯಕ, ದೇಶ ಜನವರಿಯಲ್ಲಿ ಕೊರೊನಾ ಉಲ್ಬಣ ಕಾಣಬಹುದು-ಅಧಿಕೃತ ಮೂಲಗಳು

ನವದೆಹಲಿ: ಮುಂದಿನ 40 ದಿನಗಳು ನಿರ್ಣಾಯಕವಾಗಲಿವೆ. ಏಕೆಂದರೆ ಭಾರತವು ಜನವರಿಯಲ್ಲಿ ಕೋವಿಡ್‌-19 ಪ್ರಕರಣಗಳಲ್ಲಿ ಉಲ್ಬಣವನ್ನು ಕಾಣಬಹುದು ಎಂದು ಹಿಂದಿನ ಕೋವಿಡ್‌ ಉಲ್ಬಣದ ಮಾದರಿಯನ್ನು ಉಲ್ಲೇಖಿಸಿ ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ. ಹಿಂದೆ, ಪೂರ್ವ ಏಷ್ಯಾಕ್ಕೆ ಅಪ್ಪಳಿಸಿದ 30-35 ದಿನಗಳ ನಂತರ ಕೋವಿಡ್‌-19 ನ ಹೊಸ ಅಲೆಯು ಭಾರತವನ್ನು ಅಪ್ಪಳಿಸಿದ್ದನ್ನು ಗಮನಿಸಲಾಗಿದೆ…. ಇದು ಒಂದು ಪ್ರವೃತ್ತಿಯಾಗಿದೆ” ಎಂದು … Continued

ಕಾಂಗ್ರೆಸ್‌ ನಾಯಕ ಆರ್. ವಿ. ದೇಶಪಾಂಡೆಗೆ 2022ರ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ

ಬೆಳಗಾವಿ: ಆರ್. ವಿ. ದೇಶಪಾಂಡೆ ಅವರಿಗೆ 2022ರ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಬೆಳಗಾವಿ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಹಿರಿಯ ಶಾಸಕ ಆರ್. ವಿ. ದೇಶಪಾಂಡೆ ಅವರಿಗೆ 2022ರ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ … Continued

“ತಾಯಿ, ಸಹೋದರಿಗೆ ಸಾಧ್ಯವಾಗದಿದ್ದರೆ…”: ಆಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ವಿಶ್ವವಿದ್ಯಾನಿಲಯದ ಶಿಕ್ಷಣ ನಿಷೇಧ ಪ್ರತಿಭಟಿಸಿ ಟಿವಿ ಲೈವ್‌ನಲ್ಲಿ ತನ್ನ ಡಿಪ್ಲೋಮಾ ಸರ್ಟಿಫಿಕೇಟ್‌ ಹರಿದು ಹಾಕಿದ ಪ್ರೊಫೆಸರ್ | ವೀಕ್ಷಿಸಿ

ಕಾಬೂಲ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರು ದೂರದರ್ಶನದ ಲೈವ್‌ನಲ್ಲಿ ತಮ್ಮ ಡಿಪ್ಲೊಮಾ ಸರ್ಟಿಫಿಕೇಟ್‌ಗಳನ್ನು ಹರಿದು ಹಾಕಿದ್ದಾರೆ. ತಾಯಿ ಮತ್ತು ಸಹೋದರಿಗೆ ಅಧ್ಯಯನ ಮಾಡಲು ಸಾಧ್ಯವಾಗದಿದ್ದರೆ” ಈ ಶಿಕ್ಷಣವನ್ನು ನಾನು ಸ್ವೀಕರಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಟಿವಿ ಕಾರ್ಯಕ್ರಮದ ಕ್ಲಿಪ್, ಈಗ ವೈರಲ್ ಆಗಿದ್ದು, ಪ್ರಾಧ್ಯಾಪಕರು ತಮ್ಮ ಡಿಪ್ಲೊಮಾ ಸರ್ಟಿಫಿಕೇಟ್‌ಗಳನ್ನು ಒಂದೊಂದಾಗಿ ಎತ್ತಿ ಹಿಡಿದಿರುವುದನ್ನು ತೋರಿಸುತ್ತದೆ. ನಂತರ ಅವನು ಅವುಗಳನ್ನು … Continued