ಚೀನಾದ ಟೆಲಿಕಾಂ ಸಂಸ್ಥೆ ಕ್ಸಿಯೋಮಿಯಿಂದ 5,551 ಕೋಟಿ ರೂ. ವಶಪಡಿಸಿಕೊಂಡ ಇಡಿ…?!

ಬೆಂಗಳೂರು: ಜಾರಿ ನಿರ್ದೇಶನಾಲಯ (ಇಡಿ) ತನ್ನ ಅತಿದೊಡ್ಡ ಕಾರ್ಯಾಚರಣೆಯಲ್ಲಿ ಬೆಂಗಳೂರು ಮೂಲದ ಚೀನಾದ ಟೆಲಿಕಾಂ ಸಂಸ್ಥೆ Xiaomi ಟೆಕ್ನಾಲಜಿ ಇಂಡಿಯಾದಿಂದ 5,551.27 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ ಎಂದು  ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌.ಕಾಮ್‌ ವರದಿ ಮಾಡಿದೆ. ವರದಿ ಪ್ರಕಾರ, ಸುದೀರ್ಘ ತನಿಖೆಯ ನಂತರ ವಶಪಡಿಸಿಕೊಳ್ಳಲಾಗಿದೆ.1999 ರ ನಿಬಂಧನೆಗಳ ಅಡಿಯಲ್ಲಿ Xiaomi ನ ನಾಲ್ಕು ಬ್ಯಾಂಕ್ ಖಾತೆಗಳಿಂದ ಹಣವನ್ನು … Continued

ಶಾಹಿದ್ ಅಫ್ರಿದಿ ಒಬ್ಬ ಚಾರಿತ್ರ್ಯಹೀನ, ನಕಲಿ ಮನುಷ್ಯ, ನಾನು ಹಿಂದೂ ಎಂಬ ಕಾರಣಕ್ಕೆ ಕೆಟ್ಟದಾಗಿ ನಡೆಸಿಕೊಂಡ: ಅಫ್ರಿದಿ ಮೇಲೆ ಪಾಕ್‌ ಕ್ರಿಕೆಟಿಗ ಕನೇರಿಯಾ ಸ್ಫೋಟಕ ಆರೋಪ

ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ದನೀಶ ಕನೇರಿಯಾ ಅವರು ತಮ್ಮ ಮಾಜಿ ಸಹ ಆಟಗಾರ ಮತ್ತು ಮಾಜಿ ನಾಯಕ ಶಾಹಿದ್ ಅಫ್ರಿದಿ ತಾನು ಹಿಂದೂ ಎಂಬ ಕಾರಣಕ್ಕಾಗಿ ಕ್ರಿಕೆಟ್‌ ಆಡುವಾಗ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕನೇರಿಯಾ ಅಫ್ರಿದಿಯನ್ನು ಚಾರಿತ್ರ್ಯವಿಲ್ಲದ ನಕಲಿ ಮನುಷ್ಯ ಮತ್ತು ಸುಳ್ಳುಗಾರ ಎಂದು ಕರೆದಿದ್ದಾರೆ. ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ … Continued

ಕಾಬೂಲ್ ಮಸೀದಿಯಲ್ಲಿ ಬಾಂಬ್ ಸ್ಫೋಟ: 50ಕ್ಕೂ ಹೆಚ್ಚು ಜನರ ಸಾವು, ಅನೇಕರಿಗೆ ಗಾಯ

ಕಾಬೂಲ್:‌ ಕಾಬೂಲ್ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ಪ್ರಬಲವಾದ ಬಾಂಬ್‌ ಸ್ಫೋಟದಿಂದ 50 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಇದು ರಂಜಾನ್ ಸಮಯದಲ್ಲಿ ಅಫ್ಘಾನಿಸ್ತಾನದಲ್ಲಿ ನಾಗರಿಕ ಗುರಿಗಳ ಮೇಲಿನ ಸರಣಿ ದಾಳಿಯ ಇತ್ತೀಚಿನ ದಾಳಿಯಾಗಿದೆ. ರಾಜಧಾನಿಯ ಪಶ್ಚಿಮದಲ್ಲಿರುವ ಖಲೀಫಾ ಸಾಹಿಬ್ ಮಸೀದಿಯಲ್ಲಿ ಮಧ್ಯಾಹ್ನ ಸ್ಫೋಟ ಸಂಭವಿಸಿದೆ ಎಂದು ಆಂತರಿಕ ಸಚಿವಾಲಯದ ಉಪ ವಕ್ತಾರ ಬೆಸ್ಮುಲ್ಲಾ ಹಬೀಬ್ … Continued

ಮದೀನಾದ ಮಸ್ಜಿದ್ ಅಲ್-ನಬಾವಿಯಲ್ಲಿ ಪಾಕ್‌ ಪ್ರಧಾನಿ ನಿಯೋಗಕ್ಕೆ ಎದುರಾಯ್ತು ‘ಚೋರ್, ಚೋರ್’ ಘೋಷಣೆ | ವೀಕ್ಷಿಸಿ

ನವದೆಹಲಿ: ಮೂರು ದಿನಗಳ ಅಧಿಕೃತ ಭೇಟಿಗಾಗಿ ಸೌದಿ ಅರೇಬಿಯಾದಲ್ಲಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ನಿಯೋಗವು ಮದೀನಾದ ಮಸೀದಿ ಅಲ್-ನಬವಿಯನ್ನು ಪ್ರವೇಶಿಸುತ್ತಿದ್ದಂತೆ  ಚೋರ್‌ ಚೋರ್‌ “ಎಂದು ಘೋಷಣೆಗಳನ್ನು ಕೂಗಿದರು. ನಿಯೋಗದ ಸುತ್ತ ನೆರೆದಿದ್ದ ಜನರು “ಚೋರ್, ಚೋರ್ (ಕಳ್ಳ)” ಘೋಷಣೆಗಳನ್ನು ಕೂಗುತ್ತಿರುವುದನ್ನು ತೋರಿಸುವ ವೀಡಿಯೊಗಳನ್ನು ಪಾಕಿಸ್ತಾನದ ವಿವಿಧ ಸುದ್ದಿ ವೇದಿಕೆಗಳು ಪ್ರಸಾರ ಮಾಡುತ್ತಿವೆ ಮತ್ತು … Continued

ಆಸ್ತಿ ಮರೆಮಾಚಿದ್ದಕ್ಕಾಗಿ ಆರು ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಬೋರಿಸ್ ಬೆಕರ್‌ಗೆ ಎರಡೂವರೆ ವರ್ಷ ಜೈಲು ಶಿಕ್ಷೆ

ಲಂಡನ್‌: ಮಾಜಿ ಟೆನಿಸ್ ತಾರೆ ಬೋರಿಸ್ ಬೆಕರ್ ಅವರು 2017 ರ ದಿವಾಳಿತನಕ್ಕೆ ಸಂಬಂಧಿಸಿದ ಆರೋಪಗಳಲ್ಲಿ ಬ್ರಿಟಿಷ್ ನ್ಯಾಯಾಲಯದಿಂದ ತಪ್ಪಿತಸ್ಥರೆಂದು ಕಂಡುಬಂದ ನಂತರ ಶುಕ್ರವಾರ ಎರಡೂವರೆ ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾದರು. ಆರು ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್, 54 ವರ್ಷದ ಅವರು ತಮ್ಮ ವ್ಯವಹಾರ ಖಾತೆಯಿಂದ ಭಾರಿ ಮೊತ್ತದ ಹಣವನ್ನು ವರ್ಗಾಯಿಸಿದ ಕಾರಣ … Continued

ಎಲ್ಲಿಂದಾದರೂ ಕೆಲಸ ಮಾಡಿ…ಈ ಕಂಪನಿಯ ಉದ್ಯೋಗಿಗಳು 170 ದೇಶಗಳಿಗೆ ಪ್ರವಾಸ ಹೋಗುತ್ತಲೇ ಕೆಲಸ ಮಾಡಬಹುದು…!

ನವದೆಹಲಿ: ಏರ್‌ಬಿಎನ್‌ಬಿ (Airbnb) ತನ್ನ ಉದ್ಯೋಗಿಗಳಿಗೆ ಅವರ ಆದ್ಯತೆಗೆ ಅನುಗುಣವಾಗಿ ಕಚೇರಿ, ಮನೆ ಅಥವಾ ದೇಶದ ಯಾವುದೇ ಭಾಗದಿಂದ ಎಲ್ಲಿಂದಲಾದರೂ ಕೆಲಸ ಮಾಡಲು ಅವಕಾಶ ನೀಡುವುದಾಗಿ ಘೋಷಿಸಿದೆ. ಉದ್ಯೋಗಿಗಳು ತಮ್ಮ ಕೆಲಸದ ವಾತಾವರಣವನ್ನು ಮುಕ್ತವಾಗಿ ನಿರ್ಧರಿಸಬಹುದು ಮತ್ತು ಅವರ ನಿರ್ಧಾರವು ಅವರ ಸಂಬಳದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಸಂಸ್ಥೆ … Continued

ಶಿವಸೇನೆಯ ಖಲಿಸ್ತಾನ್ ವಿರೋಧಿ ಮೆರವಣಿಗೆ ವೇಳೆ ಗುಂಪು ಘರ್ಷಣೆ: ಕಲ್ಲು ತೂರಾಟ, ಝಳಪಿಸಿದ ಕತ್ತಿಗಳು

ನವದೆಹಲಿ: ಶುಕ್ರವಾರ ಪಂಜಾಬ್‌ನ ಪಟಿಯಾಲದಲ್ಲಿರುವ ಕಾಳಿ ಮಾತಾ ದೇವಸ್ಥಾನದ ಬಳಿ ಎರಡು ಗುಂಪುಗಳು ಘರ್ಷಣೆ ನಡೆಸಿದ ನಂತರ ಕಲ್ಲು ತೂರಾಟ ನಡೆಸಲಾಯಿತು ಮತ್ತು ಕತ್ತಿಗಳನ್ನು ಬೀಸಲಾಯಿತು. ಪಟಿಯಾಲದಲ್ಲಿ ಖಲಿಸ್ತಾನಿ ಗುಂಪುಗಳ ವಿರುದ್ಧ ಶಿವಸೇನೆ (ಬಾಳ್‌ ಠಾಕ್ರೆ) ಮೆರವಣಿಗೆ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ರ್ಯಾಲಿಯ ನೇತೃತ್ವವನ್ನು ಪಂಜಾಬ್ ಶಿವಸೇನೆ (ಬಾಳ್‌ ಠಾಕ್ರೆ) ಕಾರ್ಯಾಧ್ಯಕ್ಷ ಹರೀಶ್ ಸಿಂಗ್ಲಾ … Continued

ವಿದ್ಯುತ್ ಬಿಕ್ಕಟ್ಟು: ಕಲ್ಲಿದ್ದಲು ಸಾಗಾಟಕ್ಕೆ ದಾರಿ ಮಾಡಿಕೊಡಲು ಭಾರತದಲ್ಲಿ 240 ಪ್ಯಾಸೆಂಜರ್ ರೈಲುಗಳು ರದ್ದು…!

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಉಂಟಾಗುತ್ತಿರುವ ವಿದ್ಯುತ್ ಬಿಕ್ಕಟ್ಟಿನ ಮಧ್ಯೆ, ದೇಶಾದ್ಯಂತ ಕನಿಷ್ಠ 400 ರೇಕ್‌ಗಳ ಚಲನೆಗೆ ಅನುಕೂಲವಾಗುವಂತೆ 240 ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಗಿದೆ. ಕಳೆದ ವರ್ಷ, ರೈಲ್ವೆ 347 ಕಲ್ಲಿದ್ದಲು ರೇಕ್‌ಗಳನ್ನು ಬಳಸಿತ್ತು. ಈ ವರ್ಷದ 400 ಕಲ್ಲಿದ್ದಲು ರೇಕ್‌ಗಳನ್ನು ಬಳಸುತ್ತಿದ್ದು, ಇದು ಇದುವರೆಗಿನ ಅತಿ ಹೆಚ್ಚು ಎಂದು ರೈಲ್ವೇ ಮೂಲಗಳು ತಿಳಿಸಿವೆ. ಅನೇಕ ರಾಜ್ಯಗಳು … Continued

ಪಿಎಸ್​ಐ ಹುದ್ದೆ ನೇಮಕಾತಿ ಮರು ಪರೀಕ್ಷೆಗೆ ರಾಜ್ಯ ಸರ್ಕಾರ ನಿರ್ಧಾರ: ಆರಗ ಜ್ಞಾನೇಂದ್ರ ಘೋಷಣೆ

ಬೆಂಗಳೂರು: ಕರ್ನಾಟಕದಲ್ಲಿ ಪಿಎಸ್​ಐ ಹುದ್ದೆ ನೇಮಕಾತಿಗೆ ಮರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಕಟಿಸಿದ್ದಾರೆ. ಈ ಹಿಂದೆ ನಡೆದಿದ್ದ ಪಿಎಸ್‌ಐ ಪರೀಕ್ಷೆ ಫಲಿತಾಂಶವನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ. 545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಶುಕ್ರವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಈ ಮಾಹಿತಿ … Continued

ಪಿಎಸ್​ಐ ನೇಮಕಾತಿ ಪರೀಕ್ಷೆ ಹಗರಣ: 18 ದಿನದಿಂದ ತಲೆಮರೆಸಿಕೊಂಡಿದ್ದ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನ

ಕಲಬುರಗಿ: 545 ಪಿಎಸ್​ಐ ಹುದ್ದೆಗಳ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 18 ದಿನಗಳಿಂದ ತಲೆಮರೆಸಿಕೊಂಡಿದ್ದ ಬಿಜೆಪಿ ನಾಯಕಿ ಹಾಗೂ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಸಿಐಡಿ ಅಧಿಕಾರಿಗಳು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಿವ್ಯ ಹಾಗರಗಿ ಕಳೆದ 18 ದಿನಗಳಿಂದ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದರು. ಪುಣೆಯ ಬಳಿ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಸಿಐಡಿ … Continued