ಶ್ರೀಲಂಕಾ ಬಿಕ್ಕಟ್ಟು: ನಾಯಕರು ರಾಜೀನಾಮೆಗೆ ಒತ್ತಾಯಿಸಿದ ನಂತರ ಶ್ರೀಲಂಕಾ ಪ್ರಧಾನಿ ವಿಕ್ರಮಸಿಂಘೆ ರಾಜೀನಾಮೆ

ಕೊಲಂಬೊ: ಅಧ್ಯಕ್ಷರ ನಿವಾಸ ಮತ್ತು ಕಚೇರಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ ದಿನದಂದು ಶ್ರೀಲಂಕಾದ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರು ನಾಯಕರ ಶಿಫಾರಸಿನಂತೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ವಿಕ್ರಮಸಿಂಘೆ, “ಎಲ್ಲಾ ನಾಗರಿಕರ ಸುರಕ್ಷತೆ ಸೇರಿದಂತೆ ಸರ್ಕಾರದ ಮುಂದುವರಿಕೆಯನ್ನು ಖಚಿತಪಡಿಸಿಕೊಳ್ಳಲು ನಾನು ಇಂದು, ಶನಿವಾರ ಪಕ್ಷದ ನಾಯಕರ ಅತ್ಯುತ್ತಮ ಶಿಫಾರಸನ್ನು ಸ್ವೀಕರಿಸುತ್ತೇನೆ, ಸರ್ವಪಕ್ಷ ಸರ್ಕಾರಕ್ಕೆ ದಾರಿ ಮಾಡಿಕೊಡುತ್ತೇನೆ. … Continued

ಶ್ರೀಲಂಕಾ ಬಿಕಟ್ಟು: ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು ಈಜುಕೊಳದಲ್ಲಿ ಈಜಿದರು…! ನಿವಾಸದಲ್ಲಿ ಅಡುಗೆ ಮಾಡಿದರು…!! | ವೀಕ್ಷಿಸಿ

ಕೊಲಂಬೊ: ಅಭೂತಪೂರ್ವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಸಾರ್ವಜನಿಕ ಆಕ್ರೋಶದ ನಡುವೆ ಶ್ರೀಲಂಕಾ ಅಧ್ಯಕ್ಷ ಗೋತಾಬಯ ರಾಜಪಕ್ಸೆ ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು ಅಧಕ್ಷರ ನಿವಾಸದ ಕೊಳದಲ್ಲಿ ಈಜಾಡಿದ್ದಾರೆ. ಮತ್ತು ಅಡುಗೆಮನೆಯಲ್ಲಿ ಅಡುಗೆ ಮಾಡುತ್ತಿರುವುದು ಕಂಡುಬಂದಿದೆ. ದೇಶದ ರಾಷ್ಟ್ರಧ್ವಜಗಳನ್ನು ಬೀಸುತ್ತಾ ಪ್ರತಿಭಟನಾಕಾರರ ಗುಂಪೊಂದು ಶ್ರೀಲಂಕಾದ ಅಧ್ಯಕ್ಷರ ನಿವಾಸದ ಕೊಳವನ್ನು ಸುತ್ತುವರೆದಿತ್ತು. ಅಷ್ಟರಲ್ಲಾಗಲೇ ಅಡುಗೆ ಮನೆಯೊಳಗೆ ನುಗ್ಗಿದ … Continued

ಶ್ರೀಲಂಕಾ ಬಿಕ್ಕಟ್ಟು ಉಲ್ಬಣ: ಕೊಲಂಬೊದಲ್ಲಿರುವ ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ಪ್ರತಿಭಟನಾಕಾರರು ನುಗ್ಗುತ್ತಿದ್ದಂತೆ ಪಲಾಯನಗೈದ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ…!

ಕೊಲಂಬೊ: ಶನಿವಾರ ಕೊಲಂಬೊದ ತಮ್ಮ ಮನೆಯನ್ನು ಪ್ರತಿಭಟನಾಕಾರರು ಸುತ್ತುವರಿದ ನಂತರ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದ್ದಾರೆ ಎಂದು ವರದಿಯಾಗಿದೆ. ಶ್ರೀಲಂಕಾದ ಅಧ್ಯಕ್ಷ ಗೋತಾಬಯ ರಾಜಪಕ್ಸೆ ಅವರು ಶನಿವಾರ ರಾಜಧಾನಿಯಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದರು ಎಂದು ಉನ್ನತ ರಕ್ಷಣಾ ಮೂಲವು ಎಎಫ್‌ಪಿಗೆ ತಿಳಿಸಿದೆ, ದೂರದರ್ಶನದ ದೃಶ್ಯಾವಳಿಗಳು ಅಧ್ಯಕ್ಷರ … Continued

ಮುರಿದು ಬಿದ್ದ $44 ಶತಕೋಟಿ ಟ್ವಿಟರ್ ಖರೀದಿ ಒಪ್ಪಂದ: ಎಲೋನ್ ಮಸ್ಕ್ ವಿರುದ್ದ ಕಾನೂನು ಕ್ರಮಕ್ಕೆ ಮುಂದಾದ ಟ್ವೀಟರ್ |ಇದುವರೆಗಿನ ಘಟನಾವಳಿಗಳು

ಸ್ಯಾನ್‌ ಫ್ರಾನ್ಸಿಸ್ಕೊ : ಉದ್ಯಮಿ ಎಲೋನ್ ಮಸ್ಕ್ ಅವರು ಸಾಮಾಜಿಕ ಮಾಧ್ಯಮ ಟ್ವಿಟರ್‌ ಖರೀದಿ ಒಪ್ಪಂದ ಕೊನೆಗೊಳಿಸುತ್ತಿರುವುದಾಗಿ ಶುಕ್ರವಾರ ಪ್ರಕಟಿಸಿದ್ದಾರೆ. ಲಿಯನೇರ್ ಎಲೋನ್ ಮಸ್ಕ್ ಶುಕ್ರವಾರ ಟ್ವಿಟರ್ ಕಂಪನಿಯ $44 ಬಿಲಿಯನ್ ಖರೀದಿ ಒಪ್ಪಂದ ತ್ಯಜಿಸುವ ನಿರ್ಧಾರ ಪ್ರಕಟಿಸಿದ್ದು, ಈಗ ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟ್ಟರ್‌ ಈಗ ಟೆಸ್ಲಾ ಸಿಇಒ ಎಲೋನ್‌ ಮಸ್ಕ್ ವಿರುದ್ಧ ಕಾನೂನು … Continued

‘ಮೈ ಫ್ರೆಂಡ್ ಅಬೆ ಸ್ಯಾನ್’: ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ ಪ್ರಧಾನಿ ಮೋದಿ

ಜುಲೈ 8ರಂದು ಮುಂಜಾನೆ ಚುನಾವಣಾ ಪ್ರಚಾರ ಭಾಷಣ ಮಾಡುವಾಗ ಗುಂಡೇಟಿನಿಂದ ಮೃತಪಟ್ಟ ತಮ್ಮ ಸ್ನೇಹಿತ, ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಅವರು ಅದನ್ನು ಅಕ್ಷರ ರೂಪದಲ್ಲಿ ಇಳಿಸಿದ್ದಾರೆ. ನನ್ನ ಸ್ನೇಹಿತ, ಅಬೆ ಸ್ಯಾನ್ ಶಿಂಜೋ ಅಬೆ – ಜಪಾನ್‌ನ ಅತ್ಯುತ್ತಮ ನಾಯಕ, … Continued

ವೈಬೊದಲ್ಲಿ ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಹತ್ಯೆ ಸಂಭ್ರಮಿಸಿದ ಚೀನಾ ಪ್ರಜೆಗಳು..! ಡ್ಯಾಮೇಜ್‌ ಕಂಟ್ರೋಲ್‌ಗೆ ಸಿಸಿಪಿ ಪ್ರಯತ್ನ

ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಶುಕ್ರವಾರ (ಜುಲೈ 8) ರಂದು ನಾರಾ ಪ್ರಿಫೆಕ್ಚರ್‌ನಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದಾಗ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪ್ರಪಂಚದಾದ್ಯಂತದ ನಾಯಕರು ಈ ಸುದ್ದಿಗೆ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಚೀನಾದ ಸಾಮಾಜಿಕ ಜಾಲತಾಣಗಳಲ್ಲಿನ ದೃಶ್ಯವೇ ಬೇರೆ. ಹಲವಾರು ಬಳಕೆದಾರರು ಈ ಸುದ್ದಿಯಿಂದ ಸಂತೋಷಪಟ್ಟಿದ್ದಾರೆ. ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಚೀನಾದ ರಾಜಕೀಯ ವ್ಯಂಗ್ಯಚಿತ್ರಕಾರ, … Continued

ಬ್ರಿಟನ್‌ನ ಮುಂದಿನ ಪ್ರಧಾನಿಯಾಗಲು ಪ್ರಯತ್ನ ಆರಂಭಿಸಿದ ರಿಷಿ ಸುನಕ್

ಲಂಡನ್: ಬ್ರಿಟನ್‌ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ಬೋರಿಸ್ ಜಾನ್ಸನ್ ಅವರು ರಾಜೀನಾಮೆ ನೀಡಿದ ನಂತರ ಹೊಸ ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಮತ್ತು ಭವಿಷ್ಯದ ಪ್ರಧಾನಿಯಾಗಲು ಶುಕ್ರವಾರ ಔಪಚಾರಿಕವಾಗಿ ತಮ್ಮ ಪ್ರಯತ್ನವನ್ನು ಪ್ರಾರಂಭಿಸಿದರು “ನಾನು ಕನ್ಸರ್ವೇಟಿವ್ ಪಕ್ಷದ ಮುಂದಿನ ನಾಯಕ ಮತ್ತು ನಿಮ್ಮ ಪ್ರಧಾನಿಯಾಗಲು ನಿಂತಿದ್ದೇನೆ. ನಂಬಿಕೆಯನ್ನು ಮರುಸ್ಥಾಪಿಸೋಣ, ಆರ್ಥಿಕತೆಯನ್ನು ಪುನರ್ನಿರ್ಮಿಸೋಣ ಮತ್ತು … Continued

ಪ್ರಖ್ಯಾತ ಯಾತ್ರಾ ಸ್ಥಳ ಅಮರನಾಥ ಗುಹೆ ಬಳಿ ಮೇಘಸ್ಫೋಟ: 15 ಮಂದಿ ಸಾವು, 40 ಮಂದಿ ನಾಪತ್ತೆ

ಅಮರನಾಥ: ಜಮ್ಮು ಮತ್ತು ಕಾಶ್ಮೀರದ ಅಮರನಾಥ ಗುಹೆಯ ಬಳಿ ಶುಕ್ರವಾರ ಸಂಭವಿಸಿದ ಮೇಘಸ್ಫೋಟದ ನಂತರ ಕನಿಷ್ಠ 15 ಜನರು ಸಾವಿಗೀಡಾಗಿದ್ದಾರೆ ಮತ್ತು 40 ಮಂದಿ ಕಾಣೆಯಾಗಿದ್ದಾರೆ. ಮೇಘಸ್ಫೋಟವು ಸಂಜೆ 5:30 ರ ಸುಮಾರಿಗೆ ಸಂಭವಿಸಿತು, ಇದರ ಪರಿಣಾಮವಾಗಿ ಗುಹೆ ದೇಗುಲದ ಬಳಿ ಭಾರೀ ಪ್ರಮಾಣದ ನೀರು ಬಂತು. ಗುಹೆಯ ಮೇಲಿನಿಂದ ಮತ್ತು ಬದಿಗಳಿಂದ ನೀರಿನ ಹಠಾತ್ … Continued

ಪ್ರಚಾರದ ವೇಳೆ ಗುಂಡು ಹಾರಿಸಿ ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆ

ಟೋಕಿಯೊ: ಜಪಾನಿನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರನ್ನು ಚುನಾವಣಾ ಭಾಷಣದ ವೇಳೆ 41 ವರ್ಷದ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಶುಕ್ರವಾರಹತ್ಯೆ ಮಾಡಿದ್ದಾನೆ. ಜಪಾನ್‌ನ ಸುದೀರ್ಘ ಸೇವೆ ಸಲ್ಲಿಸಿದ ನಾಯಕ ಅಬೆ ಅವರು ಪಶ್ಚಿಮ ಜಪಾನ್‌ನ ನಾರಾದಲ್ಲಿ ಸಂಸತ್ತಿನ ಚುನಾವಣೆಗಾಗಿ ಪ್ರಚಾರ ಮಾಡುವಾಗ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇದಕ್ಕೂ ಮುನ್ನ … Continued

ತೀವ್ರ ಅಸ್ವಸ್ಥತೆಯಿಂದ ಖ್ಯಾತ ನಟ ವಿಕ್ರಂ ಚೆನ್ನೈ ಆಸ್ಪತ್ರೆಗೆ ದಾಖಲು

ಚೆನ್ನೈ: ನಟ ವಿಕ್ರಮ್ ಶುಕ್ರವಾರ ತೀವ್ರ ಆರೋಗ್ಯ ಸಮಸ್ಯೆಯಿಂದ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂಲಗಳ ಪ್ರಕಾರ, ಹೃದಯ ಸಂಬಂಧಿ ಕಾಯಿಲೆಯಿಂದಾಗಿ ವಿಕ್ರಮ್ ಅವರನ್ನು ದಾಖಲಿಸಲಾಗಿದೆ. ಸಂಜೆ 6 ಗಂಟೆಗೆ ಚೆನ್ನೈನಲ್ಲಿ ಮುಂಬರುವ ‘ಪೊನ್ನಿಯಿನ್ ಸೆಲ್ವನ್’ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ 56 ವರ್ಷದ ವಿಕ್ರಮ್ ಭಾಗವಹಿಸಬೇಕಿತ್ತು. ಆದರೆ ತೀವ್ರ ಅಸ್ವಸ್ಥತೆ ನಂತರ ಅವರನ್ನು ಆಸ್ಪತ್ರೆಗೆ … Continued