ಕಾಳಿ ಪೋಸ್ಟರ್ ಆಕ್ರೋಶದ ನಡುವೆ ಶಿವ-ಪಾರ್ವತಿ ವೇಷಾಧಾರಿಗಳು ಧೂಮಪಾನ ಮಾಡುತ್ತಿರುವ ಫೋಟೊ ಟ್ವೀಟ್ ಮಾಡಿದ ಲೀನಾ ಮಣಿಮೇಕಲೈ

ಮುಂಬೈ : ನಿರ್ದೇಶಕಿ ಲೀನಾ ಮಣಿಮೇಕಲೈ ಅವರು ಈಗ ಮತ್ತೊಂದು ವಿವಾದ ಸೃಷ್ಟಿದ್ದಾರೆ. ಕೆಲ ಹಿಂದೆಷ್ಟೇ ಕಾಳಿ ದೇವಿ ಸಿಗರೇಟ್‌ ಸೇದುತ್ತಿರುವ ಪೋಸ್ಟರ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದ ಬೆನ್ನಿಗೇ ಈಗ ಶಿವ ಮತ್ತು ಪಾರ್ವತಿ ವೇಷಾಧಾರಿಗಳು ಧೂಮಪಾನ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ನಿರ್ದೇಶಕಿ ಲೀನಾ ಮಣಿಮೇಕಲೈ … Continued

ಹೊಸ ಕೋವಿಡ್‌-19 ಉಪ-ವೇರಿಯಂಟ್ BA 2.75 ಭಾರತದಲ್ಲಿ ಪತ್ತೆ : ವಿಶ್ವ ಆರೋಗ್ಯ ಸಂಸ್ಥೆ

ವಿಶ್ವಸಂಸ್ಥೆ: ಭಾರತದಂತಹ ದೇಶಗಳಲ್ಲಿ ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರದ ಹೊಸ ಉಪ-ವಂಶಾವಳಿಯ ಬಿಎ.2.75 ಪತ್ತೆಯಾಗಿದೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಅನುಸರಿಸುತ್ತಿದೆ ಎಂದು ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ. ಕಳೆದ ಎರಡು ವಾರಗಳಲ್ಲಿ ಜಾಗತಿಕವಾಗಿ ವರದಿಯಾದ ಕೋವಿಡ್‌-19 ಪ್ರಕರಣಗಳಲ್ಲಿ ಸುಮಾರು 30 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಘೆಬ್ರೆಯೆಸಸ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.”ಯುರೋಪ್ ಮತ್ತು … Continued

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಇಳಯರಾಜ ಸೇರಿ ರಾಜ್ಯಸಭೆಗೆ ನಾಲ್ವರ ನಾಮ ನಿರ್ದೇಶನ

ನವದೆಹಲಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ. ಖ್ಯಾತ ಓಟಗಾರ್ತಿ ಪಿ. ಟಿ. ಉಷಾ, ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಹಾಗೂ ವಿ ವಿಜಯೇಂದ್ರ ಪ್ರಸಾದ್ ಅವರನ್ನು ಬುಧವಾರ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ನಾಲ್ಕು ನಾಮನಿರ್ದೇಶಿತರು ನಾಲ್ಕು ವಿಭಿನ್ನ ರಾಜ್ಯಗಳಿಂದ ಬಂದವರು. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭಾ ನಾಮನಿರ್ದೇಶಿತರಿಗೆ ಟ್ವಿಟರ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಶ್ರೀ … Continued

ಸಂವಿಧಾನದ ವಿರೋಧಿ ಹೇಳಿಕೆ ವಿವಾದ: ಕೇರಳ ಸಚಿವ ಸಾಜಿ ಚೆರಿಯನ್ ರಾಜೀನಾಮೆ

ತಿರುವನಂತಪರಂ: ಕೇರಳದ ಮೀನುಗಾರಿಕೆ ಮತ್ತು ಸಂಸ್ಕೃತಿ ಸಚಿವರಾದ ಸಾಜಿ ಚೆರಿಯನ್ ಅವರು ಸಂವಿಧಾನದ ಬಗ್ಗೆ ತಮ್ಮ ಹೇಳಿಕೆಗಳಿಂದ ವಿವಾದಕ್ಕೆ ಸಿಲುಕಿದ ಒಂದು ದಿನದ ನಂತರ ಇಂದು, ಬುಧವಾರ ರಾಜೀನಾಮೆ ನೀಡಿದ್ದಾರೆ. ಕೇರಳದ ಸಚಿವ ಸಾಜಿ ಚೆರಿಯನ್ ಅವರು ಭಾರತದ ಸಂವಿಧಾನವನ್ನು ಕಟುವಾಗಿ ಟೀಕಿಸಿದ್ದರು. ಇದು “ಶೋಷಣೆಯನ್ನು ಕ್ಷಮಿಸುತ್ತದೆ” ಮತ್ತು ದೇಶದ ಜನರನ್ನು “ಲೂಟಿ” ಮಾಡಲು ಸಹಾಯ … Continued

ಧಾರವಾಹಿ ನೋಡಿ ಮಲ ತಂದೆ ಮೇಲೆ ಅತ್ಯಾಚಾರದ ದೂರು ನೀಡಿದ ಮಗಳು:7 ವರ್ಷದ ನಂತರ ಖುಲಾಸೆ, ತಪ್ಪು ಮಾಡದೆ ಶಿಕ್ಷೆ ಅನುಭವಿಸಿದ ತಂದೆ…!

ಮುಂಬೈ: 2015ರಲ್ಲಿ ತನ್ನ 15 ವರ್ಷದ ಮಲ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಂಧಿತನಾಗಿದ್ದ 35 ವರ್ಷದ ವ್ಯಕ್ತಿಯನ್ನು ಕಲ್ಯಾಣ್ ಸೆಷನ್ಸ್ ನ್ಯಾಯಾಲಯವು ಏಳು ವರ್ಷ ಜೈಲುವಾಸ ಅನುಭವಿಸಿದ ನಂತರ ಖುಲಾಸೆಗೊಳಿಸಿದೆ. ಪ್ರಕರಣದಲ್ಲಿ ಈ ವ್ಯಕ್ತಿಯನ್ನು ಆತನ ಮಲ ಮಗಳು, ಪತ್ನಿ ಮತ್ತು ಪತ್ನಿಯ ಮೊದಲ ಪತಿ ತಪ್ಪಾಗಿ ಸಿಲುಕಿಸಿದ್ದಾರೆ. ತನ್ನ ಬಾಯ್‌ಫ್ರಂಡ್‌ ಜೊತೆಗಿನ … Continued

ಅತಿಗೆಂಪು ಬೆಳಕನ್ನು ನವೀಕರಿಸಬಹುದಾದ ಶಕ್ತಿಯನ್ನಾಗಿ ಪರಿವರ್ತಿಸುವ ‘ಹೊಸ ವಸ್ತು’ ಕಂಡುಹಿಡಿದ JNCASR ವಿಜ್ಞಾನಿಗಳು…!

ಬೆಂಗಳೂರು: ಅತಿಗೆಂಪು (infrared) ಬೆಳಕನ್ನು ಪರಿಣಾಮಕಾರಿಯಾಗಿ ಹೊರಸೂಸುವ, ಪತ್ತೆಹಚ್ಚುವ ಮತ್ತು ಮಾರ್ಪಡಿಸುವ ಹೊಸ ವಸ್ತುವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇದು ಸೌರ ಮತ್ತು ಉಷ್ಣ ಶಕ್ತಿ ಕೊಯ್ಲು ಮತ್ತು ಆಪ್ಟಿಕಲ್ ಸಂವಹನ ಸಾಧನಗಳಿಗೆ ಉಪಯುಕ್ತವಾಗಿದೆ. ವಿದ್ಯುತ್ಕಾಂತೀಯ ತರಂಗಗಳು ನವೀಕರಿಸಬಹುದಾದ ಶಕ್ತಿಯ ಮೂಲವಾಗಿದ್ದು, ವಿದ್ಯುತ್, ದೂರಸಂಪರ್ಕ, ರಕ್ಷಣಾ ಮತ್ತು ಭದ್ರತಾ ತಂತ್ರಜ್ಞಾನಗಳು, ಸಂವೇದಕಗಳು ಮತ್ತು ಆರೋಗ್ಯ ಸೇವೆಗಳ ಉತ್ಪಾದನೆಯಲ್ಲಿ … Continued

3,000 ಅಗ್ನಿವೀರ ಹುದ್ದೆಗಳಿಗೆ ದಾಖಲೆ ಅರ್ಜಿಗಳನ್ನು ಸ್ವೀಕರಿಸಿದ ಭಾರತೀಯ ವಾಯು ಸೇನೆ, ಗಡುವು ವಿಸ್ತರಣೆಗೆ ಮನವಿ..!

ನವದೆಹಲಿ: ದೇಶಾದ್ಯಂತ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಗಿದ್ದ ಸೇನಾ ನೇಮಕಾತಿ ಅಗ್ನಿಪಥ ಯೋಜನೆಗೆ ಈ ವರ್ಷ ಹೆಚ್ಚಿನ ಅರ್ಜಿಗಳು ಬಂದಿವೆ ಎಂದು ಭಾರತೀಯ ವಾಯುಪಡೆ (ಐಎಎಫ್) ತಿಳಿಸಿದೆ. ಕಳೆದ ಸೇನಾ ಭರ್ತಿ ಅಭಿಯಾನಕ್ಕೆ ಸ್ವೀಕರಿಸಿದ 6,31,528 ಅರ್ಜಿಗೆ ಹೋಲಿಸಿದರೆ ಈ ವರ್ಷ ಇದು 7,49,899 ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಐಎಎಫ್ ಟ್ವೀಟ್‌ನಲ್ಲಿ ತಿಳಿಸಿದೆ. ಯೋಜನೆಗಾಗಿ ಆನ್‌ಲೈನ್ ಅಪ್ಲಿಕೇಶನ್ … Continued

‘ಕಾಳಿ’ ಪೋಸ್ಟರ್ ವಿವಾದ: ಭಾರತೀಯ ಹೈಕಮಿಷನ್ ಆಕ್ಷೇಪದ ನಂತರ ಕ್ಷಮೆಯಾಚಿಸಿದ ಕೆನಡಾದ ಮ್ಯೂಸಿಯಂ

ನವದೆಹಲಿ: ಕೆನಡಾದಲ್ಲಿರುವ ಭಾರತೀಯ ಹೈಕಮಿಷನ್ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರ ‘ಧೂಮಪಾನ ಮಾಡುತ್ತಿರುವ ಕಾಲಿ’ ಪೋಸ್ಟರ್ ಅನ್ನು ತೆಗೆದುಹಾಕಲು ಕೋರಿದ ನಂತರ, ಆಗಾ ಖಾನ್ ಮ್ಯೂಸಿಯಂ ಮಂಗಳವಾರ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದು, ಹಿಂದೂ ಧರ್ಮದ ಸಮುದಾಯಗಳ ಸದಸ್ಯರಿಗೆ ನೋವು ಉಂಟಾಗಿದ್ದಕ್ಕೆ ತೀವ್ರ ವಿಷಾದವಿದೆ ಎಂದು ಹೇಳಿದೆ. “ಅಂಡರ್ ದಿ … Continued

4 ಕೈಗಳು 4 ಕಾಲುಗಳ ಮಗು ಜನನ: ಇದು ದೇವಿಯ ಅವತಾರ ಎಂದ ಜನ

ಹಾರ್ಡೋಯ್: ಉತ್ತರಪ್ರದೇಶದ ಹರ್ದೋಯಿಯಲ್ಲಿ ಅಸಾಮಾನ್ಯ ಹೆಣ್ಣು ಮಗುವೊಂದು ಜನಿಸಿದ್ದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಕೆಲವರು ಇದನ್ನು ದೇವರ ಪವಾಡ ಎಂದು ಕರೆಯಲು ಪ್ರಾರಂಭಿಸಿದ್ದಾರೆ. ಆದರೆ ವೈದ್ಯರು ಇದನ್ನು ಜೈವಿಕ ಅಸ್ವಸ್ಥತೆ ಎಂದು ಹೇಳುತ್ತಾರೆ. ಹರ್ದೋಯಿಯಲ್ಲಿರುವ ಶಹಾಬಾದ್ ಆರೋಗ್ಯ ಕೇಂದ್ರದಲ್ಲಿ ಮಹಿಳೆಯೊಬ್ಬರು ನಾಲ್ಕು ತೋಳುಗಳು ಮತ್ತು ನಾಲ್ಕು ಕಾಲಿನ ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆಯಾದ ಬಳಿಕ ಅಲ್ಲಿದ್ದ … Continued

ನೂಪುರ್ ಶರ್ಮಾ ಕುರಿತ ಸುಪ್ರೀಂ ಅಭಿಪ್ರಾಯ ವಿರೋಧಿಸಿ ನಿವೃತ್ತ ನ್ಯಾಯಮೂರ್ತಿಗಳು, ಅಧಿಕಾರಿಗಳು, ಸೇನಾನಿಗಳಿಂದ ಬಹಿರಂಗ ಪತ್ರ

ನವದೆಹಲಿ: ಪ್ರವಾದಿ ಮೊಹಮ್ಮದ್‌ ಕುರಿತು ರಾಷ್ಟ್ರೀಯ ಸುದ್ದಿ ವಾಹಿನಿಯೊಂದರಲ್ಲಿ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ ವಿರುದ್ಧ ಜುಲೈ 1ರಂದು ಸುಪ್ರೀಂ ಕೋರ್ಟ್‌ ನೀಡಿದ ಕಟ್ಟು ಟಪ್ಪಣಿಗಳನ್ನು ವಿರೋಧಿಸಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು, ಅಧಿಕಾರಿಗಳು ಮತ್ತು ಸಶಸ್ತ್ರ ಪಡೆಗಳ ಅಧಿಕಾರಿಗಳು ಬಹಿರಂಗ ಪತ್ರ ಬರೆದಿದ್ದಾರೆ. ಬಹಿರಂಗ ಪತ್ರವು ಸುಪ್ರೀಂಕೋರ್ಟಿನ ಇಬ್ಬರು ನ್ಯಾಯಮೂರ್ತಿಗಳಿದ್ದ … Continued