ಯತ್ನಾಳ್‌ ಕಾಂಗ್ರೆಸ್‌ ʼಬಿʼ ಟೀಮ್‌ನಂತೆ ಕೆಲಸ ಮಾಡುತ್ತಿದ್ದಾರೆ: ಸಚಿವ ನಿರಾಣಿ

ಬೆಂಗಳೂರು: ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾಂಗ್ರೆಸ್‌ “ಬಿʼ ಟೀಮ್‌ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಮುರಗೇಶ ನಿರಾಣಿ ಆರೋಪಿಸಿದರು. ಪಂಚಮಸಾಲಿ ಸಮುದಾಯದ ಶಾಸಕರು ಹಾಗೂ ಸಚಿವರು ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸನಗೌಡ ಪಾಟೀಲ ಯತ್ನಾಳ ಬೇರೆ ಪಕ್ಷದವರಿಗಿಂತ ನಮ್ಮ ಪಕ್ಷದವರ ಮೇಲೆ ನಿರಂತರ ವಾಗ್ದಾಳಿ ನಡೆಸುತ್ತ ಬಂದಿದ್ದಾರೆ. ಯತ್ನಾಳ ನಮ್ಮ … Continued

ಬಿಎಸ್‌ವೈ ದೂರಿನ ಹಿನ್ನೆಲೆ ಯತ್ನಾಳಗೆ ದೆಹಲಿ ಬುಲಾವ್‌: ಎಲ್ಲರ ಚಿತ್ತ ಬಿಜೆಪಿ ಹೈಕಮಾಂಡ್‌ನತ್ತ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಕುಟುಂಬದ ವಿರುದ್ಧ ತಿರುಗಿಬಿದ್ದಿರುವ ವಿಜಯಪುರ ನಗರ ಶಾಸಕ ಹಾಗೂ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ ಯತ್ನಾಳ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಂದ ತುರ್ತು ಬುಲಾವ್‌ ಹಿನ್ನೆಲೆಯಲ್ಲಿ ಅವರು ದೆಹಲಿಗೆ ಭಾನುವಾರ ರಾತ್ರಿ ದಿಢೀರ್‌ ತೆರಳಿದ್ದಾರೆ. ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪಂಚಾಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡಬೇಕು … Continued

ಪುದುಚೇರಿ: ಬಹುಮತ ಸೋತ ನಾರಾಯಣಸಾಮಿ, ಕಾಂಗ್ರೆಸ್‌ ಸರ್ಕಾರ ಪತನ

ಪುದುಚೇರಿಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಪತನವಾಗಿದೆ. ಮುಖ್ಯಮಂತ್ರಿ ವಿ. ನಾರಾಯಣಸಾಮಿ ಅವರು ಸೋಮವಾರ ಸದನದಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ಸದನದಲ್ಲಿ ಮುಖ್ಯಮಂತ್ರಿ ವಿ. ನಾರಾಯಣಸಾಮಿ ಮಂಡಿಸಿದ ವಿಶ್ವಾಸದ ನಿರ್ಣಯಕ್ಕೆ ಸೋಲಾಯಿತು. ಸದನದಲ್ಲಿ ಮಾತನಾಡಿದ ಮುಖ್ಯಮಂತ್ರಿ ನಾರಾಯಣಸಾಮಿ, ತಮ್ಮ ಸರ್ಕಾರ ಮತ್ತು ಪುದುಚೇರಿಯ ಜನರು ಎದುರಿಸುತ್ತಿರುವ ಅಡೆತಡೆಗಳನ್ನು ಪಟ್ಟಿ ಮಾಡಿದರು, ಆಡಳಿತದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಮತ್ತು … Continued

ವರವರ ರಾವ್‌ಗೆ ೬ ತಿಂಗಳ ಮಧ್ಯಂತರ ಜಾಮೀನು ನೀಡಿದ ಮುಂಬೈ ಹೈಕೋರ್ಟ್‌

ಎಲ್ಗರ್ ಪರಿಷತ್-ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ 81 ವರ್ಷದ ವರವರ ರಾವ್ ಅವರಿಗೆ ಮುಂಬೈ ಹೈಕೋರ್ಟ್ ಸೋಮವಾರ ಆರು ತಿಂಗಳ ಮಧ್ಯಂತರ ಜಾಮೀನು ನೀಡಿದೆ. ಆಗಸ್ಟ್ 2018ರಿಂದ ವಿಚಾರಣೆಗೆ ಕಾಯುತ್ತಿರುವ ರಾವ್, ಆರು ತಿಂಗಳ ಜಾಮೀನು ಅವಧಿಯ ನಂತರ ಶರಣಾಗಬೇಕು ಅಥವಾ ವಿಸ್ತರಣೆಗೆ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ. ರಾವ್ ಅವರು ಮುಂಬೈಯಲ್ಲಿಯೇ ಇರಬೇಕು … Continued

ರೈತ ಪ್ರತಿಭಟನಾ ಸ್ಥಳದಲ್ಲಿ ರೈತರ ವ್ಯಥೆ ಹೇಳುತ್ತಿರುವ ಕಲಾವಿದನ ಮಣ್ಣಿನ ಅಚ್ಚು

ರೈತರ ಪ್ರತಿಭಟನೆಯಲ್ಲಿ ಸೇರಲು ರೂರ್ಕೆಲಾದ ಸಾಂಪ್ರದಾಯಿಕ ವಿಗ್ರಹ ತಯಾರಕರೊಬ್ಬರು ದೆಹಲಿಗೆ 1,400 ಕಿಮೀ ಸೈಕಲ್‌ ಓಡಿಸಿದ್ದಾರೆ. ಹೊಸ ಕೃಷಿ ಕಾನೂನುಗಳು ರೈತರ ಶೋಷಣೆಗೆ ಹೇಗೆ ಕಾರಣವಾಗುತ್ತವೆ ಎಂಬುದನ್ನು ಚಿತ್ರಿಸಲು ಗಾಜಿಪುರ ಗಡಿಯಲ್ಲಿ ಮಣ್ಣಿನ ಮಾದರಿಗಳನ್ನು ತಯಾರಿಸುತ್ತಿದ್ದಾರೆ.ಮೂರು ಮಣ್ಣಿನ ಮಾದರಿಗಳನ್ನು ಚಿತ್ರಿಸಲಾಗುತ್ತಿದೆ ಎಂದು 32 ವರ್ಷದ ಮುಕ್ತಿಕಾಂತ ಬಿಸ್ವಾಲ್ ದೂರವಾಣಿಯಲ್ಲಿ ದಿ ಟೆಲಿಗ್ರಾಫ್‌ಗೆ ತಿಳಿಸಿದ್ದಾರೆ. ದಿ ಟೆಲಿಗ್ರಾಫ್‌ … Continued

ಈ ಹಣಕಾಸು ವರ್ಷದಲ್ಲಿ ರಾಜ್ಯಗಳ ಜಿಎಸ್‌ಟಿ ಆದಾಯದ ಕೊರತೆ 40,000 ಕೋಟಿ ರೂ.ಕಡಿಮೆಯಾಗುವ ಸಾಧ್ಯತೆ

ನವ ದೆಹಲಿ: ಕಳೆದ ನಾಲ್ಕು ತಿಂಗಳುಗಳಲ್ಲಿ ಸುಧಾರಿತ ಸಂಗ್ರಹಣೆಯ ಮೇಲಿನ ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯಗಳು ಎದುರಿಸುತ್ತಿರುವ ಜಿಎಸ್‌ಟಿ ಆದಾಯ ಕೊರತೆಯು ಸುಮಾರು 40,000 ಕೋಟಿ ರೂ.ಗಳಷ್ಟು ಕಡಿಮೆಯಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಿಎಸ್ಟಿ ಸಂಗ್ರಹದಲ್ಲಿನ ತೀವ್ರ ಕುಸಿತವು ರಾಜ್ಯಗಳ ಜಿಎಸ್ಟಿ ಆದಾಯದಲ್ಲಿ 1.80 ಲಕ್ಷ ಕೋಟಿ ರೂ.ಆಗಿದ್ದು, ಜಿಎಸ್‌ಟಿ ಅನುಷ್ಠಾನದಿಂದಾಗಿ 1.10 ಲಕ್ಷ ಕೋಟಿ … Continued

ಪುದುಚೆರಿ: ಮತ್ತಿಬ್ಬರು ಶಾಸಕರು ರಾಜೀನಾಮೆ, ಸಂಕಷ್ಟದಲ್ಲಿ ಕಾಂಗ್ರೆಸ್‌ ಸರ್ಕಾರ

ವಿಧಾನಸಭೆಯಲ್ಲಿ ಬಹುಮತ ಪರೀಕ್ಷೆಗೆ ಒಂದು ದಿನ ಮೊದಲು, ಪುದುಚೇರಿಯಲ್ಲಿ ಕಾಂಗ್ರೆಸ್ ಸರ್ಕಾರದ ಬಿಕ್ಕಟ್ಟು ಉಲ್ಬಣಗೊಂಡಿದೆ. ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದ ಇನ್ನೆರಡು ಶಾಸಕರು ಭಾನುವಾರ ರಾಜೀನಾಮೆ ನೀಡಿದರು. ಡಿಎಂಕೆ ಶಾಸಕ ವೆಂಕಟೇಶನ್ ಮತ್ತು ಕಾಂಗ್ರೆಸ್ ಶಾಸಕ ಕೆ. ಲಕ್ಷ್ಮೀನಾರಾಯಣನ್ ಅವರ ರಾಜೀನಾಮೆಯೊಂದಿಗೆ, ಆಡಳಿತಾರೂಢ ಮೈತ್ರಿಕೂಟದ ಬಲ ಈಗ 12 ಕ್ಕೆ ಇಳಿಸಲಾಗಿದೆ. 33 ಸದಸ್ಯರ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು 14 … Continued

೨ಎ ಮೀಸಲಾತಿಗೆ ಸೇರ್ಪಡೆ ಮಾಡಿ: ಬೆಂಗಳೂರು ಸಮಾವೇಶದಲ್ಲಿ ಪಂಚಮಸಾಲಿಗಳ ಹಕ್ಕೊತ್ತಾಯ

ಬೆಂಗಳೂರು: ೨ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಲಿಂಗಾಯತ ಪಂಚಮಸಾಲಿ ಬೃಹತ್ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಯಿತು. ಸಮಾವೇಶಕ್ಕೆ ವಿಶೇಷವಾಗಿ ಲಿಂಗಾಯತ ಪಂಚಮಸಾಲಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಕಲಬುರಗಿ, ಬಾಗಲಕೋಟೆ, ವಿಜಯಪುರ,ಯಾದಗಿರಿ, ಬೀದರ್, ರಾಯಚೂರು,ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಬೆಳಗಾವಿ ಮೊದಲಾದ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. … Continued

ಗೋಮಾತೆ ಮಹತ್ವ ಕುರಿತ ಆನ್‌ಲೈನ್‌ ಪರೀಕ್ಷೆ: ೫ ಲಕ್ಷ ಜನರ ನೋಂದಣಿ

ನವದೆಹಲಿ: ಸರಕಾರಿ ಸಂಸ್ಥೆ ರಾಷ್ಟ್ರೀಯ ಕಾಮಧೇನು ಆಯೋಗ ಫೆ.೨೫ರಂದು ನಡೆಸುವ ಭಾರತೀಯ ಗೋ ತಳಿಗಳ ಮಹತ್ವ ಕುರಿತು ನಡೆಸುವ ಆನ್‌ಲೈನ್‌ ಪರೀಕ್ಷೆಯನ್ನು ೫ ಲಕ್ಷ ಜನರು ಬರೆಯಲಿದ್ದಾರೆ. ಗೋವುಗಳ ಮಹತ್ವ, ಗೋ ತಳಿಗಳು, ಗೋವುಗಳ ಗುಣವಿಶೇಷಗಳ ಕುರಿತು ಪರೀಕ್ಷೆ ನಡೆಸಲಾಗುತ್ತದೆ. ಹಿಂದಿ, ಇಂಗ್ಲಿಷ್ ಮತ್ತು 12 ಪ್ರಾದೇಶಿಕ ಭಾಷೆಗಳಲ್ಲಿ ನಡೆಯುವ ಪರೀಕ್ಷೆಗೆ ಭಾರತದ ಪ್ರತಿಯೊಂದು ಜಿಲ್ಲೆಯ … Continued

ಬದಾಮಿಯಲ್ಲಿ ನನ್ನ ಸೋಲಿಗೆ ಕೆಲ ಬಿಜೆಪಿ ಮುಖಂಡರ ಷಡ್ಯಂತ್ರವೇ ಕಾರಣ: ಸಚಿವ ಶ್ರೀರಾಮುಲು

ಮೊಳಕಾಲ್ಮೂರು: ಬದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ನಾನು ಸೋಲನುಭವಿಸಲು ಮತದಾರರಲ್ಲ, ಕೆಲ ಬಿಜೆಪಿ ಮುಖಂಡರ ಷಡ್ಯಂತ್ರವೇ ಕಾರಣ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮಲು ಹೇಳಿದರು. ಕೆಲವು ಬಿಜೆಪಿ ನಾಯಕರ ಷಡ್ಯಂತ್ರವೇ ನನ್ನ ಸೋಲಿಗೆ ಕಾರಣ. ನಾನು ಬದಾಮಿ ಕ್ಷೇತ್ರದಲ್ಲಿ ಗೆದ್ದರೆ ಎಲ್ಲಿ ತಮಗೆ ಮುಳುವಾಗಬಹುದೆಂದು ಕೆಲವರು ಷಡ್ಯಂತ್ರ ಮಾಡಿ ನನ್ನನ್ನು ಸೋಲಿಸಿದರು. ಪ್ರಧಾನಿ ನರೇಂದ್ರ ಮೋದಿ … Continued