ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಲಿಮ್ಕಾ ಬುಕ್‌ ಆಫ್‌ ರೆಕಾರ್ಡಿನಲ್ಲಿ ದಾಖಲು

ಬೆಂಗಳೂರು: ಸೋಲಾಪುರ- ವಿಜಯಪುರ ಮಾರ್ಗದ 25.54 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಡಾಂಬರೀಕರಣ ಕಾಮಗಾರಿಯು ಕೇವಲ 18 ಗಂಟೆಗಳಲ್ಲಿ ಪೂರ್ಣಗೊಳಿಸಿದ್ದು ಈಗ ಲಿಮ್ಕಾ ಬುಕ್‌ ಆಫ್‌ ರೆಕಾರ್ಡಿನಲ್ಲಿ ದಾಖಲಾಗಿದೆ. ಹೀಗೆಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೇ ಟ್ವೀಟ್ ಮಾಡಿದ್ದಾರೆ.ಅಲ್ಲದೆ ತಂಡಕ್ಕೆ ಅಭಿನೆಂದನೆಯನ್ನೂ ಸಲ್ಲಿಸಿದ್ದಾರೆ.ಈ ಕಾಮಗಾರಿಯು ರಾಷ್ಟ್ರೀಯ ಹೆದ್ದಾರಿ ಮೂಲಕ ಅನುಷ್ಠಾನಗೊಳ್ಳುತ್ತಿದೆ. ಇದು ಶಾಳಘಣೀಯ … Continued

ಮುಕೇಶ ಅಂಬಾನಿ ಮನೆ ಸಮೀಪ ನಿಂತಿದ್ದ ಜೆಲೆಟಿನ್‌ ಇಟ್ಟಿದ್ದ ಸ್ಕಾರ್ಪಿಯೋ ಕದ್ದು ತಂದಿದ್ದು..!

ಮುಂಬೈ: ವಾಹನದ ಮಾಲೀಕ (ಸ್ಕಾರ್ಪಿಯೋ) ಹಿರೆನ್ ಮನ್ಸುಖ್, ಶುಕ್ರವಾರ ಮಧ್ಯಾಹ್ನ ದಕ್ಷಿಣ ಮುಂಬೈನ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದು, ಅಂಬಾನಿಯ ಮನೆಯ ಬಳಿ ಪತ್ತೆಯಾದ ಎಸ್‌ಯುವಿಯ ದೃಶ್ಯಗಳನ್ನು ನೋಡಿದ ನಂತರ, ಇದು ತಮ್ಮ ವಾಹನಕ್ಕೆ ಹೋಲುತ್ತದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಥಾಣೆ ನಿವಾಸಿ ಮನ್ಸುಖ್ ಸುದ್ದಿಗಾರರೊಂದಿಗೆ ಮಾತನಾಡಿ, ಫೆಬ್ರವರಿ 17 ರಂದು ಎಸ್‌ಯುವಿಯನ್ನು … Continued

 ನಾಲ್ಕು ವಾರದಲ್ಲಿ  ಸ್ಫೋಟಕ ವಸ್ತು ಹಿಂತಿರುಗಿಸದಿದ್ದರೆ ಲೈಸೆನ್ಸ್ ರದ್ದು 

ರಾಯಚೂರು, ( ಹಟ್ಟಿ ಚಿನ್ನದ ಗಣಿ): ಕಲ್ಲುಕ್ವಾರಿ ಮತ್ತು ಗಣಿಗಾರಿಕೆ ಪ್ರದೇಶಗಳಲ್ಲಿ ಯಾರಾದರೂ ಕಾನೂನು ಬಾಹಿರವಾಗಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರೆ, ನಾಲ್ಕು ವಾರದೊಳಗೆ ಹಿಂತಿರಿಗಿಸಬೇಕು.ಇಲ್ಲದಿದ್ದರೆ ಅಂತಹವರ ಲೈಸೆನ್ಸ್ ( ಪರವನಾಗಿ)ಯನ್ನು ರದ್ದುಪಡಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್. ನಿರಾಣಿ ಎಚ್ಚರಿಕೆ ನೀಡಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಪ್ರದೇಶಕ್ಕೆ ಇಂದು … Continued

 ಕೊವಿಡ್ ಸಮಯದ ೩ನೇ ತ್ರೈಮಾಸಿಕ: ಮೊದಲ ಸಲ ಶೇ. ೦.೪ ಬೆಳವಣಿಗೆ ಕಂಡ ಜಿಡಿಪಿ 

ಮೊದಲ ಸಲ ಸಕಾರಾತ್ಮ ಬೆಳವಣಿಗೆ ಕಂಡ ಆರ್ಥಿಕ ದರ ಶುಕ್ರವಾರ ಬಿಡುಗಡೆಯಾದ ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಸತತ ಎರಡು ತ್ರೈಮಾಸಿಕಗಳ ನಂತರ ಡಿಸೆಂಬರ್ ಅಂತ್ಯದ ಮೂರು ತಿಂಗಳಲ್ಲಿ ಭಾರತದ ಒಟ್ಟು ಜಿಡಿಪಿ 0.4% ರಷ್ಟು  ಬೆಳವಣಿಗೆ ( ಗ್ರೋಥ್‌) ಕಂಡಿದೆ. ಕೊರೊನಾ ವೈರಸ್ ಸೋಂಕುಗಳ ಉಲ್ಬಣದಿಂದ ಉಂಟಾದ ಹೊಸ ಸವಾಲುಗಳನ್ನು ಎದುರಿಸುತ್ತಿರುವ ಏಷ್ಯಾದ ಮೂರನೇ … Continued

ಪಂಚ ರಾಜ್ಯಗಳಿಗೆ ಚುನಾವಣೆ ದಿನಾಂಕ ಪ್ರಕಟ: ಪಶ್ಚಿಮ ಬಂಗಾಳದಲ್ಲಿ ೮ಹಂತ, ಅಸ್ಸಾಂನಲ್ಲಿ 3ಹಂತ, ತಮಿಳುನಾಡು- ಕೇರಳ, ಪುದುಚೇರಿಯಲ್ಲಿ ಒಂದೇ ಹಂತದ ಚುನಾವಣೆ

ನವದೆಹಲಿ: ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತದ ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ. ಅಸ್ಸಾಂ ಚುನಾವಣೆ ಮಾರ್ಚ್ 27, ಏಪ್ರಿಲ್ 1 ಮತ್ತು ಏಪ್ರಿಲ್ 6 ರಂದು ಮೂರು ಹಂತಗಳಲ್ಲಿ ನಡೆಯಲಿದ್ದು, ಕೇರಳ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಏ.೬ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಕೇರಳದ ಮಲಪ್ಪುರಂ … Continued

ಇದು ಕೇವಲ ಟ್ರೈಲರ್’ .. ಅಂಬಾನಿ ನಿವಾಸದ ಬಳಿ ನಿಲ್ಲಿಸಿದ್ದ ಎಸ್‌ಯುವಿ ಕಾರಿನ ಬ್ಯಾಗ್‌ನಲ್ಲಿ ಪತ್ತೆಯಾದ ಪತ್ರದಲ್ಲಿದ್ದ ಎಚ್ಚರಿಕೆ

ಮುಂಬೈ: ಮುಖೇಶ್ ಅಂಬಾನಿಯ ನಿವಾಸ ಆಂಟಿಲಿಯಾ ಬಳಿ ಎಸ್‌ಯುವಿಯಿಂದ ವಶಪಡಿಸಿಕೊಂಡ 20 ಜೆಲೆಟಿನ್ ಸ್ಟಿಕ್‌ಗಳ ಜೊತೆಗೆ, ರಿಲಯನ್ಸ್ ಇಂಡಸ್ಟ್ರಿಗಳ ಒಡೆತನದ ಫ್ರ್ಯಾಂಚೈಸ್ ಕ್ರಿಕೆಟ್ ತಂಡವಾದ ಮುಂಬೈ ಇಂಡಿಯನ್ಸ್‌ನ ಚೀಲವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮುಖೇಶ್ ಮತ್ತು ನೀತಾ ಅಂಬಾನಿ ಅವರನ್ನು ಉದ್ದೇಶಿಸಿ ಬೆದರಿಕೆ ಪತ್ರವನ್ನೂ ಪೊಲೀಸರು ಪತ್ತೆ ಮಾಡಿದ್ದಾರೆ. “ಇದು ಕೇವಲ ಟ್ರೈಲರ್ ಆಗಿದ್ದು, ಮುಂದಿನ ಬಾರಿ … Continued

ಇಂಥ ಪಿಚ್‌ಗಳಲ್ಲಿ ಬೌಲಿಂಗ್‌ ಮಾಡಿದ್ದರೆ ಕುಂಬ್ಳೆ-ಹರಭಜನ್‌ ೧೦೦೦, ೮೦೦ವಿಕೆಟ್‌ ಪಡೆಯುತ್ತಿದ್ದರು: ಚರ್ಚೆಗೆ ಗ್ರಾಸವಾದ ಯುವರಾಜ್‌ ಟ್ವೀಟ್‌

ಭಾರತ- ಇಂಗ್ಲೆಂಡ್ ಕ್ರಿಕೆಟ್‌ ಸರಣಿಯಲ್ಲಿ ಪಿಚ್‌ಗಳ ಸುತ್ತ ಚರ್ಚೆಯು ಸಾಯುವಂತೆ ಕಾಣುತ್ತಿಲ್ಲ. ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಕೆಲವು ಮಾಜಿ ಇಂಗ್ಲೆಂಡ್ ಕ್ರಿಕೆಟಿಗರು ಚೆನ್ನೈ ಪಿಚ್ ಮೇಲೆ ಟೀಕೆ-ಟಪ್ಪಣಿ ಮಾಡಿದ ನಂತರ ಈಗ ಭಾರತ ತಂಡದ ನಿವೃತ್ತ ಆಟಗಾರ ಯುವರಾಜ್ ಸಿಂಗ್ ಅವರಂತಹ ಕೆಲವು ಪ್ರಸಿದ್ಧ ಮಾಜಿ ಕ್ರಿಕೆಟಿಗರು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಗಲು-ರಾತ್ರಿ … Continued

ಕೋ-ವಿನ್ ಅಪ್ಲಿಕೇಶನ್ ನವೀಕರಿಸಲು ಫೆ.೨೭, ೨೮ರಂದು ಕೊವಿಡ್‌ ವ್ಯಾಕ್ಸಿನೇಷನ್ ಇಲ್ಲ

ಭಾರತದಲ್ಲಿ ಚುಚ್ಚುಮದ್ದಿನ ಪ್ರಮಾಣ ನಿದಾನಗತಿಯಲ್ಲಿದೆ ಎಂಬ ಟೀಕೆಗಳ ಮಧ್ಯಯೇ ಫೆ.೨೭ ಹಾಗೂ ೨೮ರಂದು ಎರಡು ದಿನಗಳು ಲಸಿಕೆ ಡ್ರೈವ್‌ಗೆ ವಿರಾಮ ಬೀಳಲಿದೆ.ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಫೆ.೨೭ ಹಾಗೂ ೨೮ರಂದು (ಶನಿವಾರ ಮತ್ತು ಭಾನುವಾರ) ಕೊವಿಡ್‌ ವ್ಯಾಕ್ಸಿನ್‌ ಅವಧಿಗಳನು ನಿಗದಿ ಪಡಿಸಲಾಗುವುದಿಲ್ಲ ಎಂದು ಶುಕ್ರವಾರ ಪ್ರಕಟಣೆ ಮೂಲಕ ತಿಳಿಸಿದೆ. ಕೋ-ವಿನ್ ಡಿಜಿಟಲ್ ಪ್ಲಾಟ್‌ಫಾರ್ಮ್ … Continued

ಕೋಝಿಕೋಡ್ ರೈಲ್ವೆ ನಿಲ್ದಾಣದಲ್ಲಿ ಅಪಾರ ಪ್ರಮಾಣದ ಸ್ಫೋಟಕ ವಶ:ಮಹಿಳೆ ಬಂಧನ

ರೈಲಿನಲ್ಲಿ ಸ್ಫೋಟಕಗಳನ್ನು ಸಾಗಿಸುತ್ತಿದ್ದ ತಮಿಳುನಾಡಿನ ಮಹಿಳೆಯನ್ನು ಪೊಲೀಸರು ಬಂದಿಸಿದ್ದಾರೆ. ತಮಿಳುನಾಡು ಮೂಲದ ರಮಣಿ ಬಂಧಿತಳಾಗಿದ್ದು, ಅವಳ ಬಳಿ 100 ಜಿಲೆಟಿನ್ ಕಡ್ಡಿ ಹಾಗೂ 350 ಡಿಟೋನೇಟರ್‌ಗಳನ್ನು ಆರ್‌ಪಿಎಫ್ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಮಹಿಳೆ ಚೆನ್ನೈ-ಮಂಗಳೂರು ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಳು ಕೋಜಿಕ್ಕೋಡ್‌ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್, ಆರ್‌ಪಿಎಫ್ ಪೊಲೀಸರು ಮಹಿಳೆಯಿಂದ ಭಾರೀ ಪ್ರಮಾಣದ … Continued

ಕೊರೊನಾ ಪ್ರಕರಣ: ಭಾರತ ವಿಶ್ವದಲ್ಲಿ ನಂ.೨, ಆದರೆ ಕೊವಿಡ್‌ ವೈಜ್ಞಾನಿಕ ಅಧ್ಯಯನದ ಪಾಲು ಶೇ.೬.೭ ಮಾತ್ರ

ಭಾರತವು ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳನ್ನು ದಾಖಲಿಸಿದೆ. ಹೆಚ್ಚಿನ ಪ್ರಮಾಣದ ಸೋಂಕುಗಳ ಹೊರತಾಗಿಯೂ, ಕೋವಿಡ್ -19 ಕುರಿತ ಜಾಗತಿಕ ವೈಜ್ಞಾನಿಕ ಸಂಶೋಧನೆಯಲ್ಲಿ ಭಾರತದ ಪಾಲು ಕೇವಲ 6.7 ಶೇಕಡಾ ಮಾತ್ರ ಎಂದು ಹೊಸ ಅಧ್ಯಯನದಿಂದ ತಿಳಿದುಬಂದಿದೆ. 2020 ರ ಅಕ್ಟೋಬರ್ 5 ರ ವರೆಗೆ ಒಟ್ಟು 87,515 ಸಂಶೋಧನಾತ್ಮಕ ಅಧ್ಯಯನದ ಪ್ರಕಟಣೆಗಳನ್ನು … Continued