ತನ್ವೀರ್‌ ಸೇಠ್‌ಗೆ ಜೆಡಿಎಸ್‌ಗೆ‌ ಆಹ್ವಾನ ನೀಡಿದ ಸಾ.ರಾ.ಮಹೇಶ

ಮೈಸೂರು: ಶಾಸಕ ತನ್ವೀರ್ ಸೇಠ್ ಅವರನ್ನು ಕಾಂಗ್ರೆಸ್ ವಜಾ ಮಾಡಿದರೆ ಅವರನ್ನು ಜೆಡಿಎಸ್‍ಗೆ ಸ್ವಾಗತಿಸುತ್ತೇವೆ ಎಂದು ಜೆಡಿಎಸ್‌ ಮುಖಂಡ ಹಾಗೂ ಶಾಸಕ ಸಾ.ರಾ. ಮಹೇಶ ಹೇಳಿದರು. ತನ್ವೀರ್ ಸೇಠ್ ಒಬ್ಬ ಅಲ್ಪಸಂಖ್ಯಾತ ಮುಖಂಡ, ನಮಗೆ ಅವರ ಬಗ್ಗೆ ಗೌರವವಿದೆ. ನಾವು ಯಾರ ಪಕ್ಷದಲ್ಲೂ ಬೆಂಕಿ ಹಚ್ಚಿಲ್ಲ. ಎಲ್ಲವು ಆ ಕ್ಷಣದಲ್ಲಿ ಆದ ನಿರ್ಧಾರ. ಇದರಿಂದ ತನ್ವೀರ್ … Continued

ದೆಹಲಿಗೂ ತಲುಪಲಿದೆಯೇ ಕಾಂಗ್ರೆಸ್‌ ಬಣ ರಾಜಕೀಯದ ಜಗಳ..?

ಬೆಂಗಳೂರು:  ಮೈಸೂರು ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಜತೆ ಕಾಂಗ್ರೆಸ್ ಕೊನೆಕ್ಷಣದಲ್ಲಿ ಮಾಡಿಕೊಂಡ ಮೈತ್ರಿ ಕಾಂಗ್ರೆಸ್‌ನಲ್ಲಿ ಆಂತರಿಕ ಜಗಳಕ್ಕೆ ಕಾರಣವಾಗಿದೆ. ಶುಕ್ರವಾರ ಶಾಸಕ ತನ್ವೀರ್‌ ಸೇಠ್‌ ಸಿದ್ದರಾಮಯ್ಯ ವಿರುದ್ಧ ಅಸಮಾದಾನ ವ್ಯಕ್ತಪಡಿಸಿದ ಬೆನ್ನಲ್ಲೇ ಏಕಪಕ್ಷೀಯವಾಗಿ ಮೈತ್ರಿ ನಿರ್ಧಾರ ತೆಗೆದುಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೈಕಮಾಂಡ್‌ಗೆ ದೂರು … Continued

ಪುದುಚೇರಿ: ಕಾಂಗ್ರೆಸ್‌ಗೆ‌ ಮೊದಲ ಶಾಂಕಿಂಗ್‌ ನ್ಯೂಸ್‌…!

ಪುದುಚೇರಿ: ತನ್ನ ಆಂತರಿಕ ಭಿನ್ನಮತದಿಂದಾಗಿ ಇತ್ತೀಚೆಗೆ ಸರ್ಕಾರ ಕಳೆದುಕೊಂಡ ಕಾಂಗ್ರೆಸ್ ಏ.೬ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲೂ ಹಿನ್ನಡೆ ಅನುಭವಿಸಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಯೊಂದು ಹೇಳಿದೆ. ಚುನಾವಣಾಪೂರ್ವ ಸಮೀಕ್ಷೆ ನಡೆಸಿರುವ ಎಬಿಪಿ-ವೋಟರ್ಸ್ ಸಮೀಕ್ಷೆ ಪಾಂಡಿಚೇರಿಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದೆ. ಒಟ್ಟು ೩೦ ವಿಧಾಸಭಾ ಕ್ಷೇತ್ರವಿರುವ ಪುದುಚೇರಿ ಕೇಂದ್ರಾಡಳಿತ ಪ್ರದೇಶವಾಗಿರುವ ಏಪ್ರಿಲ್ … Continued

ಪಿಎಸ್‌ಎಲ್‌ವಿಸಿ-೫೧ ಉಪಗ್ರಹ ಯಶಸ್ವಿ ಉಡಾವಣೆ: ಇಸ್ರೊ ಮತ್ತೊಂದು ಸಾಧನೆ

ಅಮೆಜೋನಿಯಾ-1 ಮತ್ತು ಇತರ 18 ಉಪಗ್ರಹಗಳನ್ನು ಹೊತ್ತ ಪಿಎಸ್ ಎಲ್ ವಿ-ಸಿ51 ಉಡಾವಣಾ ವಾಹಕವನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೊ ಸಂಸ್ಥೆ ಭಾನುವಾರ ಯಶಸ್ವಿಯಾಗಿ ಉಡಾಯಿಸಿದೆ. ಬ್ರೆಜಿಲ್ ವಿನ್ಯಾಸಗೊಳಿಸಿ ಸಂಯೋಜಿಸಿರುವ ಮೊಟ್ಟಮೊದಲ ಉಪಗ್ರಹ ಇದಾಗಿದೆ. ಇದನ್ನು ಯಶಸ್ವಿಯಾಗಿ ಉಡಾಯಿಸಿರುವುದು ತೀವ್ರ ಸಂತಸ ಉಂಟುಮಾಡುತ್ತಿದೆ. ಉಪಗ್ರಹ ಉತ್ತಮ ಸ್ಥಿತಿಯಲ್ಲಿದ್ದು ಇದಕ್ಕಾಗಿ ನಾನು … Continued

ಮೈಸೂರು ಮೇಯರ್‌ ಆಯ್ಕೆ ಗೊಂದಲಕ್ಕೆ ಸಿದ್ದರಾಮಯ್ಯನವರೇ ಕಾರಣ: ಸಾ.ರಾ.ಮಹೇಶ ತೀವ್ರ ವಾಗ್ದಾಳಿ

ಮೈಸೂರು: ಮೈಸೂರು ಮೇಯರ್‌ ಆಯ್ಕೆ ಗೊಂದಲಕ್ಕೆ ಸಿದ್ಧರಾಮಯ್ಯ ಅವರೇ ನೇರ ಕಾರಣ ಎಂದು ಜೆಡಿಎಸ್‌ ಮುಖಂಡ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಬಗ್ಗೆ ಎಳೆಎಳೆಯಾಗಿ ಬಿಡಿಸಿಟ್ಟರು. ಸಿದ್ದರಾಮಯ್ಯ ಜೆಡಿಎಸ್‍ ಟೀಕಿಸಿದ್ದರಿಂದ ಇಂದು ನಮಗೆ ಮೇಯರ್ ಸ್ಥಾನ ಲಭಿಸಿದೆ. ನಾವಾಗಿ ಮೇಯರ್ ಸ್ಥಾನ ಬಯಸಿರಲಿಲ್ಲ. ಜೆಡಿಎಸ್‍ಅನ್ನು ಹಗುರವಾಗಿ ಕಂಡಿದ್ದರಿಂದ ನಾವು … Continued

ಪರಿಸರ ಸ್ನೇಹಿ ಸೌರ ಟೆಂಟ್‌, ಲಡಾಕ್‌ನಲ್ಲಿ ಸೈನಿಕರಿಗೆ ಹೆಚ್ಚು ಉಪಯುಕ್ತ

ಬಾಲಿವುಡ್‌ ಸುಪರ್‌ಹಿಟ್‌ ಸಿನೆಮಾ  3 ಈಡಿಯಟ್ಸ್‌  ಫುನ್ಸುಖ್ ವಾಂಗ್ಡು, ನಿಜ ಜೀವನದ ಅನ್ವೇಷಕ ಮತ್ತು ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರು ಪರಿಸರ ಸ್ನೇಹಿ ಸೌರ ಬಿಸಿ ಟೆಂಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಲಡಾಖ್ ಪ್ರದೇಶದ ಸಿಯಾಚಿನ್ ಮತ್ತು ಗಾಲ್ವಾನ್ ಕಣಿವೆಯಂತಹ ಅತ್ಯಂತ ಶೀತ ಸ್ಥಳಗಳಲ್ಲಿ ಸೇನಾ ಸಿಬ್ಬಂದಿ ಬಳಸಬಹುದಾಗಿದೆ. ತನ್ನ ಹೆಸರಿಗೆ ಪರಿಸರ ಸ್ನೇಹಿ … Continued

ತಮಿಳುನಾಡು ವಿಧಾನಸಭೆ ಚುನಾವಣೆ: ಎಐಎಡಿಎಂಕೆ-ಪಿಎಂಕೆ ಮಧ್ಯೆ ಸೀಟುಗಳ ಹೊಂದಾಣಿಕೆ

ತಮಿಳುನಾಡಿನ ಮುಂಬರುವ ವಿಧಾನಸಭಾ ಚುನಾವಣೆಗೆ ಪಟ್ಟಾಲಿ ಮಕ್ಕಲ್ ಕಚ್ಚಿ (ಪಿಎಂಕೆ)ಯು ಎಐಎಡಿಎಂಕೆ ವಿಧಾಸಬೆ ಸೀಟು ಹಂಚಿಕೆ ನಿಗದಿ ಮಾಡಿಕೊಂಡಿದೆ. ಪಿಎಂಕೆಗೆ ಒಟ್ಟಾರೆಯಾಗಿ 23 ಸ್ಥಾನಗಳನ್ನು ನೀಡಲಾಗಿದೆ. ಜಂಟಿ ಸಂಯೋಜಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಸಮ್ಮುಖದಲ್ಲಿ ಎಐಎಡಿಎಂಕೆ ಸಂಯೋಜಕ ಒ ಪನ್ನೀರಸೆಲ್ವಂ ಈ ಘೋಷಣೆ ಮಾಡಿದ್ದಾರೆ. ಪ್ರಕಟಣೆ ಮಾಡಿದಾಗ ಪಿಎಂಕೆ ಅಅನ್ಬುಮಣಿ ರಾಮದಾಸ್ ಸಹ ಹಾಜರಿದ್ದರು. … Continued

ಅಸ್ಸಾಂ:ಬೋಡೋ ಲ್ಯಾಂಡ್ ಪೀಪಲ್ಸ್ ಫ್ರಂಟ್ ಕಾಂಗ್ರೆಸ್‌ ತೆಕ್ಕೆಗೆ..!

ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಮೈತ್ರಿಕೂಟವಾಗಿದ್ದ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಕೇಸರಿ ಪಕ್ಷದೊಂದಿಗಿನ ಸಂಬಂಧವನ್ನು ಮುರಿದಿದೆ. ಪಕ್ಷವು ಈಗ ಕಾಂಗ್ರೆಸ್ ನೇತೃತ್ವದ ಒಕ್ಕೂಟಕ್ಕೆ ಸೇರಲಿದೆ ಎಂದು ಬಿಪಿಎಫ್ ಅಧ್ಯಕ್ಷ ಹಗ್ರಾಮ ಮೊಹಿಲರಿ ಶನಿವಾರ ಪ್ರಕಟಿಸಿದ್ದಾರೆ. ಶಾಂತಿ, ಏಕತೆ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡಲು ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬೊಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) … Continued

ಮಾ.೨೦ರಂದು ಶಿವಮೊಗ್ಗದಲ್ಲಿ ದಕ್ಷಿಣ ಭಾರತದ ಮೊದಲ ರೈತ ಮಹಾಪಂಚಾಯತ್‌

ನವ ದೆಹಲಿ: ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯಲ್ಲಿ ರೈತರು ಪ್ರತಿಭಟನೆ ಇದೀಗ ದಕ್ಷಿಣ ಭಾರತದ ಕಡೆ ವಿಸ್ತರಿಸಲು ರೈತರು ಮುಂದಾಗಿದ್ದಾರೆ. ಮಾರ್ಚ್ 20 ರಂದು ಮೊದಲ ಮಹಾ ಪಂಚಾಯತ್ ಶಿವಮೊಗ್ಗದಲ್ಲಿ ನಡೆಯಲಿದೆ. ಶಿವಮೊಗ್ಗದಲ್ಲಿ ನಡೆಯಲಿರುವ ದಕ್ಷಿಣ ಭಾರತದ ಮೊದಲ ರೈತ ಮಹಾಪಂಚಾಯತ್‍ಗೆ 20 ಸಾವಿರ ರೈತರು ಸೇರುವ ನಿರೀಕ್ಷೆಯಿದೆ. ಮಹಾಪಂಚಾಯತ್‍ನಲ್ಲಿ ಭಾಗವಹಿಸುವಂತೆ ಕರ್ನಾಟಕದ … Continued

ಕೊವಿಡ್‌ ಲಸಿಕೆ: ಖಾಸಗಿ ಆಸ್ಪತ್ರೆಗಳಲ್ಲಿ ೨೫೦ ರೂ.ದರ ನಿಗದಿ

ನವ ದೆಹಲಿ: ದೇಶದಲ್ಲಿ ಮಾರ್ಚ್ 1 ರಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್‌ ಲಸಿಕೆ ಹಾಕುವ ಎರಡನೇ ಹಂತದ ಅಭಿಯಾನ ನಡೆಯಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್ ಗೆ 250 ರೂಪಾಯಿ ನಿಗದಿಪಡಿಸಿ ಕೇಂದ್ರ ಆರೋಗ್ಯ ಸಚಿವಾಲಯ ಆದೇಶ ಹೊರಡಿಸಿದೆ. ದೇಶದ 10,000 ಸರ್ಕಾರಿ ಆಸ್ಪತ್ರೆಗಳು ಹಾಗೂ 20,000 … Continued