ಹುಬ್ಬಳ್ಳಿ ಹಿಂಸಾಚಾರ ಘಟನೆ: ಪೊಲೀಸ್ ಭದ್ರತೆಯಲ್ಲಿ ಪರೀಕ್ಷೆಗೆ ಹಾಜರಾದ ವಿವಾದಾತ್ಮಕ ಪೋಸ್ಟ್ ಆರೋಪಿ

ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿ ಬಂಧಿತನಾಗಿರುವ ವಿದ್ಯಾರ್ಥಿ ಅಭಿಷೇಕ ನ್ಯಾಯಾಲಯ ನಿರ್ದೇಶನ ಮೇರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದಾನೆ. ಇಂದಿನಿಂದ (ಶುಕ್ರವಾರ) ಆರಂಭವಾದ ದ್ವಿತೀಯ ಪಿಯುಸಿ ಪರೀಕ್ಷೆಗೆ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಹಾಜರಾಗಿದ್ದಾನೆ. ಹುಬ್ಬಳ್ಳಿಯಲ್ಲಿ ನಡೆದ ಗಲಭೆಯ ಪ್ರಮುಖ ಆರೋಪಿಯಾಗಿರುವ ಅಭಿಷೇಕ್ ಏಪ್ರಿಲ್‌ 30ರ ವರೆಗೆ ನ್ಯಾಯಾಂಗ ಬಂಧನದಲ್ಲಿದ್ದು, ಪರೀಕ್ಷೆ ಹಿನ್ನೆಲೆಯಲ್ಲಿ … Continued

ಹುಬ್ಬಳ್ಳಿ: ಬಸ್ – ಕಾರು ಢಿಕ್ಕಿ; ಇಬ್ಬರು ಸಾವು, ಐವರಿಗೆ ಗಾಯ

ಹುಬ್ಬಳ್ಳಿ: ಐರಾವತ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ, ಕಾರು ಚಲಾನೆ ಮಾಡುತ್ತಿದ್ದ ವ್ಯಕ್ತಿ ಹಾಗೂ ಅವರ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದು, ಇತರ ಐವರು ಗಾಯಗೊಂಡಿರುವ ಘಟನೆ ತಾಲೂಕಿನ ಶಿರಗುಪ್ಪಿ ಬಳಿ ನಡೆದ ಬಗ್ಗೆ ವರದಿಯಾಗಿದೆ. ಅಪಘಾತದಲ್ಲಿ ಮೃತಪಟ್ಟವರು ಗುಜರಾತ್ ಮೂಲದವವರು ಹಾಗೀ ಹಾಲಿ ಹುಬ್ಬಳ್ಳಿಯ ಗೋಕುಲ ರಸ್ತೆ ಡಾಲರ್ಸ್ ಕಾಲೋನಿ ನಿವಾಸಿಗಳು … Continued

ಹುಬ್ಬಳ್ಳಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳೆ ಜೇನು ದಾಳಿ- ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿ: ಕೇಶ್ವಾಪುರದ ಸೇಂಟ್ ಮೈಕಲ್ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಜೇನು ಹುಳುಗಳು ದಾಳಿ ನಡೆಸಿವೆ. ಪರೀಕ್ಷೆ ಕೊಠಡಿಗೆ ನುಗ್ಗಿದ ಜೇನುಹುಳುಗಳು ಪರೀಕ್ಷೆ ವಿದ್ಯಾರ್ಥಿಗಳು, ಪೊಲೀಸ್​ ಸಿಬ್ಬಂದಿ, ಶಿಕ್ಷಕರ ಮೇಲೆ ದಾಳಿ ಮಾಡಿವೆ. ಸೋಮವಾರ ಗಣಿತ ವಿಷಯ ಪರೀಕ್ಷೆ ನಡೆಯುತ್ತಿತ್ತು. ಜೇನುಹುಳುಗಳು, ಪರೀಕ್ಷಾ ಕೇಂದ್ರಕ್ಕೆ​ ದಾಳಿ ಮಾಡಿದೆ. ಭಯದಿಂದ ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಹೊರ ಓಡಿದರು. ಇಬ್ಬರು … Continued

ನೀವೂ ಗೆಲ್ಲಬಹುದು ಕೃತಿ ಬಿಡುಗಡೆ- ಮಕ್ಕಳಲ್ಲಿ ಚೈತನ್ಯ ಬಿತ್ತುವ ಕೃತಿ : ಪ್ರಕಾಶ ಕಡಮೆ

ಹುಬ್ಬಳ್ಳಿ :ಹದಿಹರೆಯದವರ ಕನಸು ಮತ್ತು ಕನವರಿಕೆಗೆ ಇಂಬು ಕೊಡುತ್ತಲೇ ಅವರನ್ನು ಕೀಳರಿಮೆಯಿಂದ ಹೊರ ತರುವ ಪ್ರಯತ್ನದಲ್ಲಿ ನೀವೂ ಗೆಲ್ಲಬಹುದು ಕೃತಿಯ ಮೂಲಕ ಲೇಖಕರು ಮಾಡಿದ್ದಾರೆ ಎಂದು ಹಿರಿಯ ಸಾಹಿತಿ ಪ್ರಕಾಶ ಕಡಮೆ ಹೇಳಿದರು. ಅವರು ಭಾನುವಾರ ಪುಸ್ತಕ ಬಳಗದ ವತಿಯಿಂದ ಏರ್ಪಡಿಸಿದ್ದ ಲೇಖಕಿ- ಶಿಕ್ಷಕಿ ಕವಿತಾ ಹೆಗಡೆ ಅಭಯಂ ಅವರ ನೀವೂ ಗೆಲ್ಲಬಹುದು ಎಂಬ ಕೃತಿಯನ್ನು … Continued

ಹುಬ್ಬಳ್ಳಿ: ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭದ ಆಮಿಷವೊಡ್ಡಿ ಉದ್ಯಮಿಗೆ ಬರೋಬ್ಬರಿ 32 ಲಕ್ಷ ರೂ. ಪಂಗನಾಮ..!

ಹುಬ್ಬಳ್ಳಿ: ಹೆಚ್ಚಿನ ಲಾಭದ ಆಮಿಷವೊಡ್ಡಿ ಉದ್ಯಮಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಉದ್ಯಮಿ ಬರೋಬ್ಬರಿ 32 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಹುಬ್ಬಳ್ಳಿಯ ಹೆಗ್ಗೇರಿ ಕಾಲೋನಿಯ ಉದ್ಯಮಿ ಗುರುಮೂರ್ತಿ ನಾಣ್ಯದ ಎಂಬವರಿಗೆ ಅಪರಿಚಿತರೊಬ್ಬರು ಪ್ಲಿಪ್‍ಕಾರ್ಟ್ ಕಂಪನಿಯ ಪ್ರಾಜೆಕ್ಟ್‍ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿ 32 ಲಕ್ಷ … Continued

ಹುಬ್ಬಳ್ಳಿ: ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಕಾನೂನು ವಿವಿ ಕುಲಪತಿ ಮೇಲೆ ಮಸಿ-ಹಲವರು ವಶಕ್ಕೆ

ಹುಬ್ಬಳ್ಳಿ: ಕಾನೂನು ಪದವಿ ವಿದ್ಯಾರ್ಥಿಗಳ ಬೇಡಿಕೆಗೆ ಸರಕಾರ, ಕುಲಪತಿ ಸ್ಪಂದಿಸುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ ಪ್ರತಿಭಟನಾ ನಿರತ ವಿದ್ಯಾರ್ಥಿಯೊಬ್ಬ ಕಾನೂನು ವಿವಿ ಕುಲಪತಿ ಮೇಲೆ ಮಸಿ ಎರಚಿದ ಘಟನೆ ಬುಧವಾರ ನಡೆದಿದೆ. ಸ್ಥಳದಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೂ ಮಸಿ ಬಿದ್ದಿದೆ. ಘಟನೆ ತೀವ್ರ ರೂಪ ಪಡೆಯುತ್ತಿದ್ದಂತೆ ಕೆಲ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರತಿಭಟನಾ … Continued

ಹುಬ್ಬಳ್ಳಿ: ಭಾರತೀಯ ಕಿಸಾನ್‌ ಸಂಘದ ಎರಡು ದಿನಗಳ ಕರ್ನಾಟಕ ಉತ್ತರ ಪ್ರಾಂತ ರೈತ ಸಮ್ಮೇಳನ ಉದ್ಘಾಟನೆ

ಹುಬ್ಬಳ್ಳಿ: ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ ಘಟಕದ ವತಿಯಿಂದ ಆಯೋಜಿಸಲಾಗಿರುವ ಎರಡು ದಿನಗಳ ಕರ್ನಾಟಕ ಉತ್ತರ ಪ್ರಾಂತ ರೈತ ಸಮ್ಮೇಳನ-೨೦೨೨ ಗೋ ಪೂಜೆಯೊಂದಿಗೆ ಸೋಮವಾರ ಆರಂಭವಾಯಿತು. ಗೋಕುಲ ರಸ್ತೆಯ ಹೆಬಸೂರ ಭವನದಲ್ಲಿ ನಡೆಯುತ್ತಿರುವ ಸಮ್ಮೇಳನವನ್ನು ಎಂಟನೂರು ದೇಶಿ ಗೋವುಗಳ ಸಂರಕ್ಷರ ಭರಮಣ್ಣ ಗುರಿಕಾರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗೋವುಗಳು ದೇವರಿದ್ದಂತೆ. ಬಹುಪಯೋಗಿಯಾಗಿವೆ. ಪ್ರತಿಯೊಬ್ಬರೂ … Continued

ಮೂವರನ್ನ ಗುಂಡಿಕ್ಕಿ ಕೊಂದಿದ್ದ ಯೋಧನಿಗೆ 24 ವರ್ಷ ಶಿಕ್ಷೆ

ಹುಬ್ಬಳ್ಳಿ: ಆಸ್ತಿ ಕಲಹದ ಹಿನ್ನೆಲೆಯಲ್ಲಿ 11 ವರ್ಷಗಳ ಹಿಂದೆ ಕುಂದಗೋಳ ತಾಲೂಕು ಬೆಟದೂರು ಗ್ರಾಮದ ಒಂದೇ ಕುಟುಂಬದ ಮೂವರನ್ನು ಗುಂಡಿಟ್ಟು ಹತ್ಯೆಗೈದಿದ್ದ ಸಿಆರ್ ಪಿಎಫ್ ಯೋಧ ಶಂಕ್ರಪ್ಪ ತಿಪ್ಪಣ್ಣ ಕೊರವರಗೆ 24 ವರ್ಷ ಜೀವಾವಧಿ ಶಿಕ್ಷೆ ಹಾಗೂ 2.20 ಲಕ್ಷ ರೂ. ದಂಡ ವಿಧಿಸಿ ಇಲ್ಲಿಯ 1ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಆದೇಶಿಸಿದೆ. … Continued

ಹುಬ್ಬಳ್ಳಿ: ಫೀಲ್ಡಿಂಗ್ ವೇಳೆ ಇಬ್ಬರು ಕ್ರಿಕೆಟ್‌ ಆಟಗಾರರ ಮಧ್ಯೆ ಡಿಕ್ಕಿ: ಒಬ್ಬ ಆಟಗಾರನಿಗೆ ಐಸಿಯುನಲ್ಲಿ ಚಿಕಿತ್ಸೆ

ಹುಬ್ಬಳ್ಳಿ: ಫೀಲ್ಡಿಂಗ್ ವೇಳೆ ಇಬ್ಬರು ಕ್ರಿಕೆಟ್‌ ಆಟಗಾರರ ಮಧ್ಯೆ ಡಿಕ್ಕಿ: ಒಬ್ಬ ಆಟಗಾರ ಐಸಿಯುಗೆ ದಾಖಲು ಹುಬ್ಬಳ್ಳಿ: ಹುಬ್ಬಳ್ಳಿಯ ರಾಜನಗರದ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಡಿವಿಷನ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಇಬ್ಬರು ಆಟಗಾರರು ಡಿಕ್ಕಿ ಹೊಡೆದ ಪರಿಣಾಮ ಆಟಗಾರನೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ. ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ ಎ … Continued

ಕರ್ನಾಟಕದಲ್ಲಿ ಶೇ.83 ಜನರಿಗೆ ಮೊದಲ ಡೋಸ್, ಶೇ.38 ಜನರಿಗೆ 2ನೇ ಡೋಸ್ ನೀಡಿಕೆ; ಸಚಿವ ಸುಧಾಕರ್

ಹುಬ್ಬಳ್ಳಿ : ಕರ್ನಾಟಕದಲ್ಲಿ ಶೇ.83 ಜನರಿಗೆ ಮೊದಲ ಡೋಸ್ ಹಾಗೂ ಶೇ.38 ಜನರಿಗೆ ಎರಡನೇ ಡೋಸ್ ನೀಡಲಾಗಿದೆ. ಭಾರತದಲ್ಲಿ ಅಮೆರಿಕದ ಎರಡೂವರೆ ಪಟ್ಟು, ಬ್ರೆಜಿಲ್ ನ 4 ಪಟ್ಟು, ಜಪಾನ್ ನ 8 ಪಟ್ಟು, ಇಂಗ್ಲೆಂಡ್ ನ 10 ಪಟ್ಟು, ಯುರೋಪ್ ದೇಶಗಳ 2 ಪಟ್ಟು ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ ಎಂದು ರಾಜ್ಯದ ಆರೋಗ್ಯ … Continued