ಸೆಲ್ಫಿ ತೆಗೆದುಕೊಳ್ಳಲು ಹೋಗಿ ನೀರು ಪಾಲಾದ ಯುವಕ

ಹುಬ್ಬಳ್ಳಿ: ನೀರಸಾಗರ ಜಲಾಶಯದಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಯುವಕನೊಬ್ಬ ಜಾರಿ ಬಿದ್ದು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ನಡೆದಿದೆ. ಮೃತ ಯುವಕನನ್ನು ಕಿರಣ್ ರಜಪೂತ(22) ಎಂದು ಗುರುತಿಸಲಾಗಿದೆ. ಕಲಘಟಗಿ ತಾಲೂಕಿನ ಬೇಗೂರು ಗ್ರಾಮದ ನಿವಾಸಿ ಕಿರಣ್, ಭಾನುವಾರ ತನ್ನ ಗೆಳೆಯರೊಡನೆ ಪ್ರವಾಸಕ್ಕೆಂದು ಹೋಗಿದ್ದ. ಜಲಾಶಯದ ದಡದಲ್ಲಿ ನಿಂತು ಸೆಲ್ಫಿ … Continued

ಹುಬ್ಬಳ್ಳಿ: ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ನಡೆದ ಹೋಟೆಲ್​ನಲ್ಲಿ ಹೋಮ-ಹವನ

ಹುಬ್ಬಳ್ಳಿ: ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಕೊಲೆಯಾದ ನಗರದ ಉಣಕಲ್ ಬಳಿಯ ದಿ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಶುಕ್ರವಾರ ಸುದರ್ಶನ ಹೋಮ ಮಾಡಲಾಯಿತು. ಚಂದ್ರಶೇಖರ್​ ಗುರೂಜಿ ಹತ್ಯೆ ನಡೆದ ಸ್ಥಳದಲ್ಲೇ ಹೋಮ-ಹವನ ನಡೆಸಲಾಗಿದೆ. ಗುರೂಜಿ ಹತ್ಯೆಯಿಂದ ಹೋಟೆಲ್​ನಲ್ಲಿ ಆತಂಕ ನಿರ್ಮಾಣವಾಗಿತ್ತು. ಭಯ ದೂರ ಮಾಡಿ, ಹೋಟೆಲ್ ಶುದ್ಧಗೊಳಿಸಲು ಸುದರ್ಶನ ಹೋಮ ಮಾಡಲಾಗಿದೆ. ನಗರದ ಉಣಕಲ್ ಕೆರೆ … Continued

ಹುಬ್ಬಳ್ಳಿ: ಸರಳ ವಾಸ್ತು ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ

ಹುಬ್ಬಳ್ಳಿ: ಇಲ್ಲಿನ ಖಾಸಗಿ ಹೋಟೆಲ್‍ನಲ್ಲಿ ಮಂಗಳವಾರ ಬರ್ಬರವಾಗಿ ಹತ್ಯೆಯಾಗಿದ್ದ ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ ಇಂದು, ಬುಧವಾರ ಅಪರಾಹ್ನದ ನಂತರ ಹುಬ್ಬಳ್ಳಿ ಬಳಿಯ ಸುಳ್ಳ ರಸ್ತೆಯಲ್ಲಿರುವ ಕೃಷಿಭೂಮಿಯಲ್ಲಿ ನೆರವೇರಿತು. ಕುಟುಂಬಸ್ಥರ ಸಮ್ಮುಖದಲ್ಲಿ 10ಕ್ಕೂ ಹೆಚ್ಚು ಸ್ವಾಮೀಜಿಗಳ ಸಮ್ಮುಖದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಗುರೂಜಿ ಅಣ್ಣನ ಮಗ ಸಂಜಯ ಅಂತಿಮ ವಿಧಿವಿಧಾನ ನೆರವೇರಿಸಿದರು. ಗುರೂಜಿ 2ನೇ … Continued

ನಾಳೆ ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ

ಹುಬ್ಬಳ್ಳಿ: ಸರಳ ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 1 ಗಂಟೆಗೆ ನಗರದ ಸುಳ್ಳ ರಸ್ತೆಯಲ್ಲಿ ಇರುವ ಅವರ ಹೊಲದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸುಳ್ಳ ರಸ್ತೆಯಲ್ಲಿನ ಚಂದ್ರಶೇಖರ ಗುರೂಜಿ ಅವರಿಗೆ ಸೇರಿದ ಹೊಲದಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬದವರು ತೀರ್ಮಾನಿಸಿದ್ದಾರೆ ಎಂದು ಗುರೂಜಿ ಆಪ್ತರೂ ಆಗಿರುವ ವಿಧಾನಪರಿಷತ್ತು ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ತಿಳಿಸಿದರು ಹಾಗೂ … Continued

ಚಂದ್ರಶೇಖರ ಗುರೂಜಿ ಕೊಲೆ ಆರೋಪಿಗಳು ಅರೆಸ್ಟ್

ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್‌ ಗುರೂಜಿ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ 4 ಗಂಟೆಗಳಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಹಾಂತೇಶ ಶಿರೂರು, ಮಂಜುನಾಥ ದುಮ್ಮವಾಡ ಎಂದು ಹೇಳಲಾಗಿದೆ. ಹತ್ಯೆ ನಂತರ ಕಾರಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಗಳನ್ನು ವಿದ್ಯಾನಗರ ಪೊಲೀಸರು ರಾಮದುರ್ಗದ ಬಳಿ ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಆರೋಪಿಗಳನ್ನು … Continued

ಹುಬ್ಬಳ್ಳಿ : ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಭೀಕರ ಹತ್ಯೆ

ಹುಬ್ಬಳ್ಳಿ: ನಗರದ ಖಾಸಗಿ ಹೋಟೆಲ್​ನಲ್ಲಿ ತಂಗಿದ್ದ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರನ್ನು ಮಂಗಳವಾರ ಚಾಕುವಿನಿಂದ ಇರಿದು ಮಂಗಳವಾರ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಭಕ್ತರ ಸೋಗಿನಲ್ಲಿ ಬಂದ ಕಿಡಿಗೇಡಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಅವರು ಹುಬ್ಬಳ್ಳಿಯ ಉಣಕಲ್‌ ಕರೆ ಸಮೀಪವಿರುವ ಹೋಟೆಲ್​ನಲ್ಲಿ ಚಂದ್ರಶೇಖರ ತಂಗಿದ್ದರು. ದುಷ್ಕರ್ಮಿಗಳು ಚಾಕು ಹಿಡಿದು ಹೋಟೆಲ್​ನಿಂದ ಪರಾರಿಯಾಗುತ್ತಿರುವ … Continued

ಗ್ರಾಮ ಪಂಚಾಯತ ಸದಸ್ಯನ ಭೀಕರ ಕೊಲೆ

ಹುಬ್ಬಳ್ಳಿ: ರಾಯನಾಳ ಗ್ರಾಮ ಪಂಚಾಯತ ಸದಸ್ಯನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ ಘಟನೆ ಸೋಮವಾರ ರಾತ್ರಿ ರಾಯನಾಳ ಬಳಿ ನಡೆದ ಬಗ್ಗೆ ವರದಿಯಾಗಿದೆ. ರಾಯನಾಳ ಗ್ರಾ.ಪಂ ಸದಸ್ಯ ಗಂಗಿವಾಳ ಗ್ರಾಮದ ದೀಪಕ ಪಟದಾರಿ ಎಂಬವರನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದು, ಹಳೆ ದ್ವೇಷ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾರೆಂದು ಪೊಲೀಸ್ ಮೂಲಗಳು ಶಂಕಿಸಿವೆ, ತನಿಖೆ ಚುರುಕುಗೊಳಿಸಲಾಗಿದೆ. ದೀಪಕಕುಟುಂಬದವರ ವಿರೋಧಗಳ … Continued

ಹುಬ್ಬಳ್ಳಿ: ಜೊಮ್ಯಾಟೊ ಆರ್ಡರ್​ನಲ್ಲಿ ಚಿಕನ್ ಸುಕ್ಕಾ ಜೊತೆ ಪಾರ್ಸಲ್‌ನಲ್ಲಿ ಬಂತು ಮಿಕ್ಸರ್ ಬ್ಲೇಡ್…!

ಹುಬ್ಬಳ್ಳಿ: ಜೊಮ್ಯಾಟೊ ಮೂಲಕ ಆನ್‌ಲೈನ್​ನಲ್ಲಿ ಚಿಕನ್ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬರಿಗೆ ಆಹಾರದಲ್ಲಿ ಮಿಕ್ಸರ್ ಗ್ರೈಂಡರ್​ನ ಬ್ಲೇಡ್​ನ ತುಂಡು ಸಿಕ್ಕಿದೆ ಎಂದು ವರದಿಯಾಗಿದೆ. ನಗರದ ಮಲ್ಲಿಕಾರ್ಜುನ ಎಂಬವರು ಜೊಮ್ಯಾಟೊ ಆಪ್ ಮೂಲಕ ವಿದ್ಯಾನಗರದ ಹೋಟೆಲ್​ನಿಂದ ಚಿಕನ್ ಸುಕ್ಕಾ ಆರ್ಡರ್ ಮಾಡಿದ್ದರು. ಅದರಂತೆ ಚಿಕನ್‌ ಸುಕ್ಕಾ ಪಾರ್ಸಲ್‌ ಬಂದಿದೆ. ಊಟ ಮಾಡುವಾಗ ಚಿಕನ್ ಸುಕ್ಕಾದಲ್ಲಿ ಮಿಕ್ಸರ್ ಬ್ಲೇಡ್ ಕಾಣಿಸಿಕೊಂಡಿದೆ. … Continued

ಹುಬ್ಬಳ್ಳಿ : ಜೂನ್‌ 3ರಂದು ವಿಶ್ವ ಹಿಂದೂ ಪರಿಷದ್‌ನ ಪ್ರೇರಣಾ ಸೇವಾ ಸಂಸ್ಥೆಯ ನೂತನ ಕಟ್ಟಡ ಧರ್ಮಸಿರಿ ಉದ್ಘಾಟನೆ

ಹುಬ್ಬಳ್ಳಿ: ವಿಶ್ವ ಹಿಂದೂ ಪರಿಷದ್‌ನ ಉತ್ತರ ಕರ್ನಾಟಕ ಟ್ರಸ್ಟ್‌ ಪ್ರೇರಣಾ ಸೇವಾ ಸಂಸ್ಥೆಯ ನೂತನ ಕಟ್ಟಡ ಧರ್ಮಸಿರಿಯ ಉದ್ಘಾಟನಾ ಸಮಾರಂಭ ಜೂನ್‌ 3ರಂದು ಬೆಳಿಗ್ಗೆ 10:45ಕ್ಕೆ ನಗರದಲ್ಲಿ ನಡೆಯಲಿದೆ. ಧರ್ಮಸಿರಿ ನೂತನ ಕಟ್ಟಡವು  ಹುಬ್ಬಳ್ಳಿಯ ವಿದ್ಯಾನಗರದ ಶಿರೂರ ಪಾರ್ಕಿನ ಪುರುಷೋತ್ತಮ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿದೆ. ನಗರದ ಮೂರು ಸಾವಿರ ಮಠದ ಶ್ರೀ ಗುರುಸಿದ್ಧ … Continued

ಹುಬ್ಬಳ್ಳಿ: ಇಂದು ಯೋಗ ಕಹಳೆ ಕಾರ್ಯಕ್ರಮ

ಹುಬ್ಬಳ್ಳಿ: ಉಡುಪಿ ಜಿಲ್ಲೆಯ ಸಾಲಿಗ್ರಾಮದ ಡಿವೈನ ಪಾರ್ಕ್‌ನ ವಿವೇಕ ಜಾಗೃತ ಬಳಗಗಳ ಆಶ್ರಯದಲ್ಲಿ ಸರ್ವೋತೊಮುಖ ಪ್ರಗತಿಗೆ ಪೂರಕವಾದ ‘ಯೋಗ ಕಹಳೆ’ ಕಾರ್ಯಕ್ರಮ ಭಾನುವಾರ ಮೇ ೮ರಂದು ಬೆಳಿಗ್ಗೆ ೧೦:೩೦ ರಿಂದ ವಿದ್ಯಾನಗರದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಬಯೋಟೆಕ್ನಾಲಜಿ ಸಭಾ ಭವನದಲ್ಲಿ ನಡೆಯಲಿದೆ. ಯೋಗ ಕಹಳೆ ಕಾರ್ಯಕ್ರಮದಲ್ಲಿ ಕೋಟದ ಮೂಡುಗಿಳಿಯಾರು ಯೋಗಬನ ವೈದ್ಯಕೀಯ ನಿರ್ದೇಶಕರು ಮತ್ತು  ಸರ್ವಕ್ಷೇಮ … Continued