“ಮುಂದಿನ 48 ತಾಸು ಎಲ್ಲಿದ್ದೀರೋ ಅಲ್ಲಿಯೇ ಇರಿ”: ಇರಾನಿನಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರದಿಂದ ತುರ್ತು ಎಚ್ಚರಿಕೆ

ತೆಹ್ರಾನ್/ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ತುತ್ತತುದಿಗೆ ತಲುಪಿದ್ದು, ಜಗತ್ತು ಮತ್ತೊಂದು ಮಹಾಯುದ್ಧದ ಭೀತಿಯಲ್ಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ಭೀಕರ ದಾಳಿಯ ಎಚ್ಚರಿಕೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ಇರಾನ್ ತಿರುಗೇಟು ನೀಡುವುದಾಗಿ ಎಚ್ಚರಿಸಿದೆ. ಇದರ ಬೆನ್ನಲ್ಲೇ ಇರಾನ್‌ನಲ್ಲಿರುವ ಭಾರತೀಯರಿಗೆ ಭಾರತೀಯ ರಾಯಭಾರ ಕಚೇರಿಯು ತುರ್ತು ಸಲಹೆ (Advisory) ನೀಡಿದೆ. ಮುಂದಿನ … Continued

ಏಜೆಂಟ್‌ ಮೋಸದಾಟ : ಉಕ್ರೇನ್‌ ಯುದ್ಧದಲ್ಲಿ ಬಲವಂತವಾಗಿ ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣದ ಯುವಕ ಸಾವು

ಹೈದರಾಬಾದ್‌/ ನವದೆಹಲಿ : ಬಲವಂತದಿಂದ ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣದ ಇಬ್ಬರು ಯುವಕರ ಪೈಕಿ ಒಬ್ಬ ರಷ್ಯಾ-ಉಕ್ರೇನ್‌ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಮಡಿದಿದ್ದಾನೆ. ಹೈದರಾಬಾದ್‌ನ ಹಳೆನಗರದ ಬಜಾರ್ ಘಾಟ್‌ನ ಮೊಹಮ್ಮದ್ ಅಸ್ಫಾನ್ (30) ಮತ್ತು ನಾರಾಯಣಪೇಟೆಯ ಮೊಹಮ್ಮದ್ ಸೂಫಿಯಾನ್ ಅವರು ರಷ್ಯಾ ಸೇನೆಯಲ್ಲಿ ಸಹಾಯಕರಾಗಿ ಕೆಲಸ ಮಾಡಲು ತೆರಳಿದ್ದರು. ಇದರಲ್ಲಿ ಅಸ್ಫಾನ್ ಮೃತಪಟ್ಟಿರುವುದಾಗಿ ವಿದೇಶಾಂಗ … Continued

ಪಾಕಿಸ್ತಾನ ಐಎಸ್‌ಐಗೆ ಭಾರತದ ಸೇನೆ ಬಗ್ಗೆ ಮಾಹಿತಿ ನೀಡುತ್ತಿದ್ದ ಭಾರತದ ರಾಯಭಾರಿ ಕಚೇರಿ ಕೆಲಸಗಾರನ ಬಂಧನ

ನವದೆಹಲಿ: ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಉತ್ತರ ಪ್ರದೇಶ ಎಟಿಎಸ್)ವು ಮಾಸ್ಕೋದ ಭಾರತೀಯ ರಾಯಭಾರ ಕಚೇರಿಯಲ್ಲಿ ನಿಯೋಜನೆಗೊಂಡಿದ್ದ ಪಾಕಿಸ್ತಾನಿ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಏಜೆಂಟ್‌ನನ್ನು ಬಂಧಿಸಿದೆ. ಸತ್ಯೇಂದ್ರ ಸಿವಾಲ್ ಎಂಬವರನ್ನು 2021 ರಿಂದ ರಾಯಭಾರ ಕಚೇರಿಯಲ್ಲಿ ಪೋಸ್ಟ್ ಮಾಡಲಾಗಿತ್ತು. ಹಾಪುರ ಮೂಲದ ಆತ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ(ಮಲ್ಟಿ-ಟಾಸ್ಕಿಂಗ್ ಸ್ಟಾಫ್ ( MTS) ಆಗಿ ಕೆಲಸ … Continued