ರಾಜ್ಯದಲ್ಲಿ ಹೆಚ್ಚಿದ ೫೨೧ ಜನರಿಗೆ ಕೊರೊನಾ ಸಂಕು, ಐದು ಸಾವು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರ ಹೆಚ್ಚಾಗುತ್ತಿದ್ದು, ರವಿವಾರ 521 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 9,51,251ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 5 ಮಂದಿ ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 12,331ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ರವಿವಾರ 312 ಮಂದಿಗೆ … Continued

ಲಗ್ನಪತ್ರಿಕೆಯಲ್ಲಿ ಕೃಷಿ ಮಾಹಿತಿ: ಸಮಗ್ರ ಕೃಷಿ ಉತ್ತೇಜನಕ್ಕೆ ಮುಂದಾದ ಯುವ ರೈತ

ರಾಮನಗರ: ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಸಮಗ್ರ ಕೃಷಿ ಬಗ್ಗೆ ಜಾಗೃತಿ ಮೂಡಿಸುವ ಮಾಹಿತಿ ಪ್ರಕಟಿಸಿದ ಕನಕಪುರದ ಯುವ ರೈತರೊಬ್ಬರು ಕೃಷಿಕರ ಚಿತ್ತ ಸೆಳೆದಿದ್ದಾರೆ. ತಾಲೂಕಿನ ಗೊಲ್ಲಹಳ್ಳಿ ಸಮೀಪದ ತೆರಿಗೆದೊಡ್ಡಿಯ ಅರ್ಜುನ ನಾಯಕ್‌ ಅವರ ಮದುವೆ ಗಂಗಾಬಾಯಿ ಅವರೊಂದಿಗೆ ಮಾರ್ಚ್‌ ೭ರಂದು ಜರುಗಲಿದೆ. ತಮ್ಮ ಲಗ್ನ ಪತ್ರಿಕೆಯಲ್ಲಿ ಒಂದು ಪುಟವನ್ನು ಕೃಷಿ ಪದ್ಧತಿಗಳು ಅವುಗಳ ಪ್ರಯೋಜನಗಳ ಬಗ್ಗೆ … Continued

ಒಂದು ವಾರದಲ್ಲಿ ರಾಜ್ಯ ನಾಲ್ಕು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಸಾಧ್ಯತೆ

ಬೆಂಗಳೂರು: ರಾಜ್ಯದ ಒಂದು ಲೋಕಸಭೆ ಮತ್ತು ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸುವ ಸಂಬಂಧ ಮುಂದಿನ ವಾರ ವೇಳಾ ಪಟ್ಟಿ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗದ ರಾಜ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು ಆಯಾ ರಾಜ್ಯಗಳಲ್ಲಿ ತೆರವಾಗಿರುವ ಲೋಕಸಭಾ … Continued

ಮೈಸೂರು: ಎಸಿಬಿ ಬಲೆಗೆ ಬಿದ್ದ ಪಿಡಿಒ-ಎಸ್‌ಡಿಎ

ಮೈಸೂರು: ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲೂಕಿನಲ್ಲಿ ಲಂಚ ಪಡೆಯುತ್ತಿದ್ದ ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಗೂ ದ್ವಿತಿಯ ದರ್ಜೆ ಸಹಾಯಕ ಎಸಿಬಿ ಬಲೆಗೆ ಬಿದ್ದಿದ್ದಾರೆ. ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಿವೇಶನವೊಂದರ ಖಾತೆ ಬದಲಾವಣೆಗೆ ೩೦,೦೦೦ರೂ. ಲಂಚ ಕೇಳಿದ್ದರು. ಈ ಕುರಿತು ಕೇಶರಾಮ್‌ ಎಂಬುವವರು ಎಸಿಬಿಗೆ ದೂರು ನೀಡಿದ್ದರು. ಶುಕ್ರವಾರ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ … Continued

ಕರ್ನಾಟಕ: ೩೧೭ ಜನರಿಗೆ ಕೊರೋನಾ ಸೋಂಕು ದೃಢ, ಐವರ ಸಾವು

ಬೆಂಗಳೂರು; ಕಳೆದ ೨೪ ತಾಸಿನಲ್ಲಿ ೩೧೭ ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಕೊರೊನಾದಿಂದ ಐವರು ಸೋಂಕಿತ ರು ಮೃತಪಟ್ಟಿದ್ದು ಬೆಂಗಳೂರು ನಗರದಲ್ಲಿ ಮೂರು, ಧಾರವಾಡ ಹಾಗೂ ತುಮಕೂರು ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಕೆಯ ಹಾದಿಯಲ್ಲಿದೆ. ರಾಜ್ಯದ 8 ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿಲ್ಲ. ಬೆಂಗಳೂರಿನಲ್ಲಿ ಕಳೆದ … Continued

೬ರಿಂದ ೮ನೇ ತರಗತಿಗಳು ಆರಂಭ

ಬೆಂಗಳೂರು: ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದರೊಂದಿಗೆ ಸೋಮವಾರದಿಂದ ರಾಜ್ಯದಲ್ಲಿ 6ರಿಂದ 8ನೇ ತರಗತಿಗಳು ಪೂರ್ಣಪ್ರಮಾಣದಲ್ಲಿ ಪ್ರಾರಂಭವಾಗಿವೆ. ಗಡಿಭಾಗದ ತಾಲ್ಲೂಕು, ಗ್ರಾಮ ಹಾಗೂ ಬೆಂಗಳೂರುನಗರದಲ್ಲಿ 8ನೇ ತರಗತಿಗಳನ್ನು ಮಾತ್ರ ಪ್ರಾರಂಭಿಸಲಾಗಿದೆ. ಕೇರಳ ಗಡಿಭಾಗದ ಶಾಲೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಆರು ಮತ್ತು 7ನೇ ತರಗತಿ ಆರಂಭವಾಗದ ಶಾಲೆಗಳಲ್ಲಿ ವಿದ್ಯಾಗಮವನ್ನು ಮುಂದುವರೆಸಲಾಗಿದೆ. ಆದರೆ ಹಾಜರಾತಿ … Continued

ರಾಜ್ಯದಲ್ಲಿ ಕೊರೊನಾ ರೂಪಾಂತರ ಸೋಂಕು ಕಾಣಿಸಿಕೊಂಡಿಲ್ಲ: ಡಾ. ರವಿ ಸ್ಪಷ್ಟನೆ

ರಾಜ್ಯದಲ್ಲಿ ಈವರೆಗೆ ರೂಪಾಂತರಗೊಂಡ ಕೊರೊನಾ ಸೋಂಕು ಕಾಣಿಸಿಕೊಂಡಿಲ್ಲ ಎಂದು ಕೊರೊನಾ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ವಿ. ರವಿ ಸ್ಪಷ್ಟಪಡಿಸಿದ್ದಾರೆ. ಈವರೆಗೆ ಯಾರಲ್ಲೂ ಬ್ರಿಟನ್‌, ಬ್ರೆಜಿಲ್‌, ದಕ್ಷಿಣ ಆಫ್ರಿಕಾ ಮಾದರಿ ಕೊರೊನಾ ಸೋಂಕು ಕಾಣಿಸಿಕೊಂಡಿಲ್ಲ. ಯಾವುದೇ ಕ್ಲಸ್ಟರ್‌ಗಳಲ್ಲಿ ಸೋಂಕಿತರಲ್ಲಿಯೂ ಸಿ.ಟಿ. ಮೌಲ್ಯ ೨೦ಕ್ಕಿಂತ ಕಡಿಮೆ ಇಲ್ಲ, ಆದ್ದರಿಂದ ಹೆಚ್ಚಿನ ಪರೀಕ್ಷೆಗೆ ಕಳಿಸುವ ಅವಶ್ಯಕತೆಯಿಲ್ಲ. ಕೊವಿಡ್‌-೧೯ … Continued

ಕರ್ನಾಟಕದಲ್ಲಿ ಮುಂದಿನ ೨೪ ತಾಸಿನಲ್ಲಿ ಮಳೆ ಸಾಧ್ಯತೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ, ಮಧ್ಯ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಕರ್ನಾಟಕ, ಕೇರಳ, ವಿದರ್ಭ, ಛತ್ತೀಸಗಡ, ಮಧ್ಯ ಮಹಾರಾಷ್ಟ್ರ, ತಮಿಳುನಾಡು, ಪುದುಚೇರಿ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕುರಿತಂತೆ ಭಾರತೀಯ ಹವಾಮಾನ ಇಲಾಖೆ ಮಾಹಿತಿ … Continued

ಮಾ.೨೦ರಿಂದ ರಾಜ್ಯದಲ್ಲಿ ರೈತರ ಸಮಾವೇಶ

ದೆಹಲಿಯಲ್ಲಿ ರೈತ ಹೋರಾಟ ಬೆಂಬಲಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಾರ್ಚ್‌ ೨೦ರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತ ಸಮಾವೇಶ ಆಯೋಜಿಸಲಾಗುವುದು ಎಂದು ರೈತ ಸಂಘದ ವರಿಷ್ಠೆ ಚುಕ್ಕಿ ನಂಜುಂಡಸ್ವಾಮಿ ಹೇಳಿದ್ದಾರೆ. ಮಾ.೨೦ರಂದು ಶಿವಮೊಗ್ಗ, ಮಾ.೨೧ರಂದು ಹಾವೇರಿ, ಮಾ.೨೨ರಂದು ಬೆಳಗಾವಿಯಲ್ಲಿ ರೈತ ಸಮಾವೇಶ ನಡೆಯಲಿದೆ. ಸಮಾವೇಶಗಳಲ್ಲಿ ಭಾರತೀಯ ಕಿಸಾನ ಯೂನಿಯನ್‌ ಮುಖಂಡ … Continued

ಫೆ.22ರಿಂದ ಶಾಲೆಗಳಲ್ಲಿ ಪೂರ್ಣ ಪ್ರಮಾಣದ ತಗತಿ ಶುರು ಆದರೆ ಕೆಲಭಾಗದಲ್ಲಿ 6-7ನೇ ತರಗತಿ ಆರಂಭವಿಲ್ಲ

  ಬೆಂಗಳೂರು: ಕೋವಿಡ್​ ಮಾರ್ಗಸೂಚಿಯನ್ವಯ 9 ರಿಂದ ದ್ವಿತೀಯ ಪಿಯುಸಿ ವರೆಗೆ ತರಗತಿಗಳನ್ನು ಆರಂಭಿಸಿರುವ ರಾಜ್ಯ ಸರ್ಕಾರ, ಇದೀಗ ಉಳಿದ ತರಗತಿಗಳ ಆರಂಭಕ್ಕೆ ಅನಮತಿ ನೀಡಿದೆ. ಫೆ.22ರಿಂದ 6ರಿಂದ 8 ನೇ ತರಗತಿ ವರೆಗೆ ಪೂರ್ಣ ಪ್ರಮಾಣದಲ್ಲಿ ತರಗತಿ ಶುರುವಾಗಲಿದೆ. 1ರಿಂದ5 ನೇ ತರಗತಿ ವರೆಗೆ ವಿದ್ಯಾಗಮ ಪ್ರಾರಂಭವಾಗಲಿದೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.​ಸುರೇಶ್​ … Continued