ಪಶ್ಚಿಮ ಶಿಕ್ಷಕರ ಕ್ಷೇತ್ರ ಮತದಾರರ ನೋಂದಣಿ ನವೆಂಬರ್ 6 ರ ವರೆಗೆ ಅವಕಾಶ

ಹುಬ್ಬಳ್ಳಿ: ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು ನವೆಂಬರ್ 6ರ ವರೆಗೆ ಅವಕಾಶ ನೀಡಲಾಗಿದೆ. ಅರ್ಹರಿರುವ ಪ್ರತಿಯೊಬ್ಬ ವ್ಯಕ್ತಿಯು ನಮೂನೆ 19 ರಲ್ಲಿ ಅರ್ಜಿಯನ್ನು 2021 ನವೆಂಬರ್ 6 ರೊಳಗಾಗಿ ಮತದಾರರ ನೊಂದಣಾಧಿಕಾರಿಗಳು , ಸಹಾಯಕ ಮತದಾರರ ನೋಂದಣಾಧಿಕಾರಿಗಳ / ನಿಯೋಜಿತ ಅಧಿಕಾರಿಗಳ ಕಚೇರಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ವಿವರಗಳಿಗಾಗಿ ಮುಖ್ಯ ಚುನಾವಣಾಧಿಕಾರಿ … Continued

ರಾಜ್ಯ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕ’ರಿಗೆ ಗುಡ್ ನ್ಯೂಸ್: ಅ.26ರಿಂದ ‘ಶಿಕ್ಷಕರ ವರ್ಗಾವಣೆ’ಗೆ ಕೌನ್ಸಿಲಿಂಗ್ ಆರಂಭ

ಬೆಂಗಳೂರು: ವಿವಿಧ ಕಾರಣಗಳಿಂದಾಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ತಾಲೂಕಿನ ಹೊರಗೆ ಹಾಗೂ ಜಿಲ್ಲೆಯ ಹೊರಗೆ ವರ್ಗಾವಣೆಗೆ ವಿಶೇಷ ಕೌನ್ಸೆಲಿಂಗ್ ಅನ್ನು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ದಿನಾಂಕ ಅಕ್ಟೋಬರ್‌ 26ರಿಂದ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ದಿನಾಂಕ 28ರಿಂದ ಹಮ್ಮಿಕೊಳ್ಳಲು ಪರಿಷ್ಕೃತ ವರ್ಗಾವಣೆ ವೇಳಾಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ … Continued

ಕರ್ನಾಟಕದಲ್ಲಿ ಶುಕ್ರವಾರ ಹೊಸದಾಗಿ 378 ಜನರಿಗೆ ಕೊರೊನಾ ಸೋಂಕು; 11 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು (ಶುಕ್ರವಾರ) ಹೊಸದಾಗಿ 378 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಇದೇ ಸಮಯದಲ್ಲಿ ಸೋಂಕಿನಿಂದ 11 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,85,227 ಕ್ಕೆ ಏರಿಕೆಯಾಗಿದೆ. ಒಟ್ಟು 29,38,312 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 37,995 ಜನ ಮೃತಪಟ್ಟಿದ್ದಾರೆ. 8,891 ಸಕ್ರಿಯ ಪ್ರಕರಣಗಳಿವೆ.ಸೋಂಕಿನ ಪ್ರಮಾಣ ಶೇ. 0.36 ರಷ್ಟಿದ್ದು, … Continued

ಕರ್ನಾಟಕದಲ್ಲಿ ಶೇ.83 ಜನರಿಗೆ ಮೊದಲ ಡೋಸ್, ಶೇ.38 ಜನರಿಗೆ 2ನೇ ಡೋಸ್ ನೀಡಿಕೆ; ಸಚಿವ ಸುಧಾಕರ್

ಹುಬ್ಬಳ್ಳಿ : ಕರ್ನಾಟಕದಲ್ಲಿ ಶೇ.83 ಜನರಿಗೆ ಮೊದಲ ಡೋಸ್ ಹಾಗೂ ಶೇ.38 ಜನರಿಗೆ ಎರಡನೇ ಡೋಸ್ ನೀಡಲಾಗಿದೆ. ಭಾರತದಲ್ಲಿ ಅಮೆರಿಕದ ಎರಡೂವರೆ ಪಟ್ಟು, ಬ್ರೆಜಿಲ್ ನ 4 ಪಟ್ಟು, ಜಪಾನ್ ನ 8 ಪಟ್ಟು, ಇಂಗ್ಲೆಂಡ್ ನ 10 ಪಟ್ಟು, ಯುರೋಪ್ ದೇಶಗಳ 2 ಪಟ್ಟು ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ ಎಂದು ರಾಜ್ಯದ ಆರೋಗ್ಯ … Continued

ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣ: ಅಮಿಕಸ್‌ ಕ್ಯೂರಿಗೆ ಪ್ರಕರಣ ಹಿಂಪಡೆದ ಪಟ್ಟಿ ನೀಡಲು ಆದೇಶಿಸಿದ ಹೈಕೋರ್ಟ್‌

ಬೆಂಗಳೂರು: ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳನ್ನು ಹಿಂಪಡೆದಿರುವುದು ಮತ್ತು ಹಿಂಪಡೆಯಲು ಉದ್ದೇಶಿಸಿರುವ ಪ್ರಕರಣಗಳ ಪಟ್ಟಿಯನ್ನು ಅಮಿಕಸ್‌ ಕ್ಯೂರಿಗೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಶುಕ್ರವಾರ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ. ಅಮಿಕಸ್‌ ಕ್ಯೂರಿ ಅದನ್ನು ಪರಿಶೀಲಿಸಿ, ಅಗತ್ಯ ಬಿದ್ದರೆ ಪ್ರತಿಕ್ರಿಯೆ ದಾಖಲಿಸಬಹುದು ಎಂದು ಹೇಳಿದೆ. ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಮೇಲ್ವಿಚಾರಣೆ ನಡೆಸುವಂತೆ … Continued

ಉತ್ತರಾಖಂಡ ಪ್ರವಾಹ : ಕರ್ನಾಟಕದ 92 ಮಂದಿ ಸುರಕ್ಷಿತ, ನೆಟ್ವರ್ಕ್ ಸಮಸ್ಯೆಯಿಂದ ಸಿಗದ ನಾಲ್ವರು

ಬೆಂಗಳೂರು: ಉತ್ತರಾಖಂಡದಲ್ಲಿ ಉಂಟಾಗಿರುವ ನೆರೆ ಹಾಗೂ ಭೂಕುಸಿತದಲ್ಲಿ ರಾಜ್ಯದ 96 ಮಂದಿ ಸಿಲುಕಿದ್ದು, 92 ಜನರು ಸುರಕ್ಷಿತವಾಗಿದ್ದಾರೆ, ನಾಲ್ವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ. ಮಂಗಳವಾರ ರಾತ್ರಿ 10 ಗಂಟೆಯಿಂದ ಬುಧವಾರ ಸಂಜೆ 6 ಗಂಟೆ ವರೆಗೆ ಸಹಾಯವಾಣಿಗೆ ಹತ್ತು ಕರೆಗಳು ಬಂದಿದ್ದು, 96 ಮಂದಿ ಉತ್ತರಾಖಂಡದ ವಿವಿಧ ಸ್ಥಳಗಳಲ್ಲಿ ಸಿಲುಕಿದ್ದಾರೆ. … Continued

ಕರ್ನಾಟಕದಲ್ಲಿ ಬುಧವಾರ ಕೊರೋನಾ ಸೋಂಕು ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಬುಧವಾರ ಕೊರೊನಾ ಸೋಂಕು ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು (ಬುಧವಾರ) ಹೊಸದಾಗಿ 462 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 9 ಮಂದಿ ಮೃತಪಟ್ಟಿದ್ದಾರೆ.ಜೊತೆಗೆ 479 ಮಂದಿ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ‌. ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟು ಸೋಂಕಿತರ ಸಂಖ್ಯೆ 29,84,484 … Continued

ಮಕ್ಕಳ ಕೋವಿಡ್‌ ಲಸಿಕೆಗೆ ಅನುಮೋದನೆ ಸಿಕ್ಕಿದ ನಂತರ 16-17 ವರ್ಷದ ಮಕ್ಕಳು, ದೀರ್ಘಾವಧಿ ಕಾಯಿಲೆಯುಳ್ಳ ಮಕ್ಕಳಿಗೆ ಆದ್ಯತೆ

ಬೆಂಗಳೂರು: ಮಕ್ಕಳಿಗಾಗಿ ಸಿದ್ಧಪಡಿಸಲಾಗಿರುವ ಕೋವಿಡ್ ಲಸಿಕೆಗಳಿಗೆ ಅನುಮೋದನೆ ಸಿಕ್ಕ ಬಳಿಕ 16-17 ವರ್ಷದ ಮಕ್ಕಳಿಗೆ ಮೊದಲು ಲಸಿಕೆ ಹಾಕುವ ಸಾಧ್ಯತೆಗಳಿವೆ. ರಾಜ್ಯದ ತಾಂತ್ರಿಕ ಸಲಹಾ ಸಮಿತಿಯು, ಯೋಜನೆಗಳನ್ನು ರೂಪಿಸಿ, ಸಿದ್ಧತೆ ನಡೆಸುವಂತೆ ಸಲಹೆ ನೀಡಿದೆ. ಮಹಾಮಾರಿ ಕೊರೋನಾ ವಿರುದ್ಧ ಹೋರಾಡಲು ಲಸಿಕೆ ಅತ್ಯಂತ ಮುಖ್ಯವಾಗಿದ್ದು, ಮಕ್ಕಳಿಗಾಗಿ ಈಗಾಗಲೇ ಎರಡು ಲಸಿಕೆಗಳು ಸಿದ್ಧಗೊಂಡಿವೆ. ಝೈಡಸ್ ಕ್ಯಾಡಿಲಾದ ಝೈಕೋವ್ … Continued

ಇಂದಿನ ಕಲುಷಿತ ರಾಜಕಾರಣದಲ್ಲಿ ಎಂ.ಪಿ.ಕರ್ಕಿ ಡಾಕ್ಟ್ರು ಎಂಬ ಅಪರೂಪದ ಪರಿಶುದ್ಧ ರಾಜಕಾರಣಿ

ಕಾರವಾರ: ನೇರ ನಡೆ, ನುಡಿ ವ್ಯಕ್ತಿತ್ವದ ಅತ್ಯಂತ ಸಜ್ಜನ ಹಾಗೂ ಪ್ರಾಮಾಣಿಕ ರಾಜಕಾರಣಿ, ಮಾಜಿ ಶಾಸಕ ಡಾ. ಎಂ. ಪಿ. ಕರ್ಕಿಯಂಥವರು ಈಗಿನ ರಾಜಕಾರಣದಲ್ಲಿ ಹುಡುಕಿದರೂ ಸಿಗುವುದು ಕಷ್ಟ. ಕುಮಟಾ -ಹೊನ್ನಾವರ ಕ್ಷೇತ್ರದಿಂದ ಎರಡು ಸಲ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಪಕ್ಷ ರಾಜಕಾರಣದಾಚೆಗೂ ಮೀರಿ ಅಪಾರ ಗೌರವ ಪಡೆದಿದ್ದು ಅವರ ಈ ಗುಣಗಳಿಂದಾಗಿಯೇ. ಅವರಿಗೆ ಅವರ … Continued

ನವೆಂಬರ್ ತಿಂಗಳಿಂದ ಶಾಲಾ ಮಕ್ಕಳಿಗೆ ಬಿಸಿಯೂಟ ವ್ಯವಸ್ಥೆ

ಬೆಂಗಳೂರು: ರಾಜ್ಯದಲ್ಲಿ 1-5ನೇ ತರಗತಿಯನ್ನ ಪ್ರಾರಂಭ ಮಾಡುತ್ತಿದ್ದೇವೆ. ಅಕ್ಟೋಬರ್ 25 ರಿಂದ 1-5ನೇ ತರಗತಿ ವರೆಗೆ ಮಾರ್ಗಸೂಚಿಯನ್ನ ಪಾಲಿಸಿ ತರಗತಿ ಪ್ರಾರಂಭಿಸುತ್ತಿದ್ದೇವೆ. ಕೊವಿಡ್​ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ಹಿನ್ನೆಲೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಯನಾಡಿದ ಅವರು, ಅನೇಕ ತಾಲೂಕುಗಳಲ್ಲಿ ಪಾಸಿಟಿವಿಟಿ ದರ ಶೇಕಡಾ 0 ರಷ್ಟಿದೆ. ಇವೆಲ್ಲವನ್ನ … Continued