ಸಿಎಂ ಬೊಮ್ಮಾಯಿಗೆ ಮತ್ತೊಮ್ಮೆ ದೇವೇಗೌಡರಿಂದ ಅಭಯ: ಬಿಎಸ್‌ವೈ ಮಾರ್ಗದರ್ಶನದಲ್ಲಿ ಸರ್ಕಾರ ನಡೆಸಿ ಎಂದು ಸಲಹೆ

ನವದೆಹಲಿ: ಕರ್ನಾಟಕದಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಪ್ರಧಾನಿ ದೇವೇ ಗೌಡ ಅವರು ಅಭಯ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್​ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರು, ಬಿಜೆಪಿಯ ವಿದ್ಯಮಾನಗಳ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಗೊಂದಲ ನಿವಾರಿಸಲು ಬೊಮ್ಮಾಯಿ ಸಮರ್ಥರಿದ್ದಾರೆ. ಅವರ ಕಟುಂಬಕ್ಕೂ ನಮಗೂ ಮೊದಲಿನಿಂದಲೂ ಪರಿಚಯ ಇದೆ. ನನ್ನಿಂದ ಸರ್ಕಾರಕ್ಕೆ ಏನೂ ತೊಂದರೆ … Continued

ಕರ್ನಾಟಕದಲ್ಲಿ ಕೊರೊನಾ ಹೊಸ ಸೋಂಕು ಮತ್ತೆ ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ ಕಡಿಮೆಯಾಗಿದ್ದ ಪ್ರಕರಣಗಳ ಸಂಖ್ಯೆ ಬುಧವಾರ (ಕಳೆದ 24 ಗಂಟೆಯಲ್ಲಿ) ಮತ್ತೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 1,826 ಹೊಸ ಸೋಂಕು ವರದಿಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 29,22,875ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಮಹಾಮಾರಿಗೆ 33 ಮಂದಿ ಮೃತಪಟ್ಟಿದ್ದಾರೆ.ಒಟ್ಟು ಸಾವಿನ ಸಂಖ್ಯೆ 36,881ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಇದೇ ಸಮಯದಲ್ಲಿ ರಾಜ್ಯದಲ್ಲಿ … Continued

ಕೊರೊನಾ ಹೊಸ ಸೋಂಕು: ಬೆಂಗಳೂರು ಮೀರಿಸಿದ ದಕ್ಷಿಣ ಕನ್ನಡ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮಂಗಳವಾರ (ಆಗಸ್ಟ್ 10) ಹೊಸದಾಗಿ 1,338 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೇ ಸಮಯದಲ್ಲಿ 31 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 29,21,049 ಕ್ಕೆ ಏರಿಕೆಯಾಗಿದೆ. ಒಟ್ಟು 28,61,499 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 36,848 ಜನ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 22,676 … Continued

ಕರ್ನಾಟಕದಲ್ಲಿ ಸೋಮವಾರ 1,186 ಕೊರೊನಾ ಹೊಸ ಸೋಂಕು, ಪಾಸಿಟಿವಿಟಿ ದರ ಶೇ.0.89

ಬೆಂಗಳೂರು: ರಾಜ್ಯದಲ್ಲಿ ಸೋಮವಾರ 1,186 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಇದೇ ಸಮಯದಲ್ಲಿ 1,776 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ಒಂದು ಸಾವು ಸೇರಿದಂತೆ ರಾಜ್ಯದಲ್ಲಿ ಸೋಮವಾರ 24 ಸೋಂಕಿತರು ಮೃತಪಟ್ಟಿದ್ದಾರೆ. ಪಾಸಿಟಿವಿಟಿ ರೇಟ್ ಶೇ.0.89ರಷ್ಟಿದೆ. ಸದ್ಯ ರಾಜ್ಯದಲ್ಲಿ 23,316 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿಂದು 296 ಜನಕ್ಕೆ ಸೋಂಕು ತಗುಲಿದ್ದು, 8,378 ಸಕ್ರಿಯ … Continued

ಕರ್ನಾಟಕದಲ್ಲಿ ಭಾನುವಾರ ಕೊರೊನಾ ಸಾವಿನ ಸಂಖ್ಯೆ ಇಳಿಮುಖ

ಬೆಂಗಳೂರು: ಕರ್ನಾಟಕದಲ್ಲಿ ಭಾನುವಾರ ಕೊರೊನಾ ಮರಣ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅದೇರೀತಿ ದಯನಂದಿನ ಸೋಂಕಿನಲ್ಲಿಯೂ ತುಸು ಕಡಿಮೆಯಾಗಿದೆ. ರಾಜ್ಯದಲ್ಲಿ ಭಾನುವಾರ 1598 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಇದೇ ಅವಧಿಯಲ್ಲಿ 1914 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 20 ಮಂದಿ ಕೊರೊನಾ ವೈರಸ್ ಸೋಂಕಿನಿಂದಲೇ ಮೃತಪಟ್ಟಿದ್ದಾರೆ. ಭಾನುವಾರದ ಅಂಕಿ-ಅಂಶಗಳ ಪ್ರಕಾರ, ಈವರೆಗೂ 36793 ಮಂದಿ … Continued

ಐಎಎಸ್‌ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ಹಂಚಿಕೆ :ಯಾರಿಗೆ ಯಾವ ಜಿಲ್ಲೆ ಉಸ್ತುವಾರಿ..? ಇಲ್ಲಿದೆ ಮಾಹಿತಿ

ಬೆಂಗಳೂರು : ನೂತನ ಸಚಿವರಿಗೆ ಇಂದು (ಶನಿವಾರ) ಖಾತೆ ಹಂಚಿಕೆ ಮಾಡಿದ ನಂತರ ಈಗ ರಾಜ್ಯ ಸರ್ಕಾರವು ಅಪರ ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ವಿವಿಧ ಜಿಲ್ಲೆಗಳ ಉಸ್ತುವಾರಿ ಹೊಣೆಗಾರಿಕೆ ವಹಿಸಿ ಆದೇಶಿಸಿದೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಎನ್. ಎಸ್. ಗಾಯಿತ್ರಿದೇವಿ ಆದೇಶ ಹೊರಡಿಸಿದ್ದು, … Continued

ಕರ್ನಾಟಕದಲ್ಲಿ ಶುಕ್ರವಾರ 1,805 ಜನರಿಗೆ ಕೊರೊನಾ ಹೊಸ ಸೋಂಕು

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೋನಾ ಸೋಂಕಿನ ಪ್ರಕರಣ ಸಂಖ್ಯೆ ಏರಿಕೆ ಕಾಣುತ್ತಿದೆ. ಇಂದು (ಶುಕ್ರವಾರ) ಹೊಸದಾಗಿ 1805 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೇ ಸಮಯದಲ್ಲಿ ಸೋಂಕಿನಿಂದಾಗಿ 36 ಜನರು ಮೃತಪಟ್ಟಿದ್ದಾರೆ. ಇದೇವೇಳೆ ಸೋಂಕಿನಿಂದ ಚೇತರಿಸಿಕೊಂಡು 1854 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೇ ಕಾರಣದಿಂದಾಗಿ ಇಂದಿನಿಂದ ಆಗಸ್ಟ್.16ರವರೆಗೆ ಜಾರಿಗೊಳ್ಳುವಂತೆ ರಾತ್ರಿ 9 ರಿಂದ ಬೆಳಿಗ್ಗೆ … Continued

ಆರು ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು..ಕರ್ನಾಟಕದಲ್ಲಿ 1785 ಜನರಿಗೆ ಹೊಸ ಸೋಂಕು..

ಬೆಂಗಳೂರು: ರಾಜ್ಯದಲ್ಲಿ ಗುರುವಾರ ಹೊಸದಾಗಿ 1785 ಜನರಿಗೆ ಕೊರೋನಾ ಸೋಂಕು ದಾಖಲಾಗಿದೆ.ಇದೇ ಸಮಯದಲ್ಲಿ 25 ಸೋಂಕಿತರು ಮೃತಪಟ್ಟಿದ್ದಾರೆ ಹಾಗೂ 1651 ಸೋಂಕಿತರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 29,13,512 ಕ್ಕೆ ಏರಿಕೆಯಾಗಿದೆ. ಇದುವರೆಗೆ 28,12,368 ಜನ ಗುಣಮುಖರಾಗಿದ್ದು, 36,705 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೋವಿಡ್‌ ಸಕಾರಾತ್ಮಕ ದರ ಶೇಕಡ 1.10 ರಷ್ಟು … Continued

ತಮ್ಮ ನಾಯಕತ್ವದ ವಿರುದ್ಧ ಸೆಡ್ಡು ಹೊಡೆದ ಮೂವರು ಮಂತ್ರಿಯಾಗದಂತೆ ನೋಡಿಕೊಂಡ ಯಡಿಯೂರಪ್ಪ

ಬೆಂಗಳೂರು:ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವದ ವಿರುದ್ಧ ಸಡ್ಡು ಹೊಡೆದಿದ್ದ ಪ್ರಮುಖ ಮೂವರಿಗೆ ಮಂತ್ರಿ ಸ್ಥಾನ ಕೈ ತಪ್ಪಿದೆ. ಮಾಜಿ ಸಚಿವ ಸಿ.ಪಿ.ಯೋಗೇಶ್ವರ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ, ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ತಪ್ಪಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಈ ಮೂವರು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿಗಳಾಗುತ್ತಾರೆ ಎಂಬ ನಿರೀಕ್ಷೆ ಮಾಡಲಾಗಿತ್ತು. ಅದರಲ್ಲೂ … Continued

ಕರ್ನಾಟಕದಲ್ಲಿ ಮಂಗಳವಾರ 1674 ಜನರಿಗೆ ಕೊರೊನಾ ಸೋಂಕು, ಮೂರು ಜಿಲ್ಲೆಗಳಲ್ಲಿ ಶೂನ್ಯ

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 1674 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದೇ ಸಮಯದಲ್ಲಿ 38 ಸೋಂಕಿತರು ಮೃತಪಟ್ಟಿದ್ದಾರೆ ಹಾಗೂ 1376 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 29,09,958 ಕ್ಕೆ ಏರಿಕೆಯಾಗಿದೆ. ಇದುವರೆಗೆ 36,650 ಸೋಂಕಿತರು ಮೃತಪಟ್ಟಿದ್ದಾರೆ. 28,49,003 ಸೋಂಕಿತರು ಗುಣಮುಖರಾಗಿದ್ದಾರೆ. ಪಾಸಿಟಿವಿಟಿ ದರ ಶೇಕಡ 1.38 ರಷ್ಟು ಇದೆ. ರಾಜ್ಯದಲ್ಲಿ … Continued