ಮಂಗಳೂರಿನ ಶಮಾ ವಾಜಿದಗೆ ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್ನ್ಯಾಶನಲ್ ಯೂನಿವರ್ಸ್ ಪ್ರಶಸ್ತಿ

ಮಂಗಳೂರು: ಮಂಗಳೂರಿನ ಶಮಾ ವಾಜಿದ್ ಅವರು ಪ್ರತಿಷ್ಠಿತ ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್‌ನ್ಯಾಶನಲ್ ಯೂನಿವರ್ಸ್ -2023 ಪ್ರಶಸ್ತಿ ಗೆದ್ದಿದ್ದಾರೆ ಹಾಗೂ ಗ್ಲೋಬಲ್ ಮಿಸೆಸ್ ಯೂನಿವರ್ಸ್ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ನವದೆಹಲಿಯಲ್ಲಿ ಗ್ಲೋಬಲ್ ಇಂಡಿಯಾ ಎಂಟರ್‌ಟೈನ್‌ಮೆಂಟ್‌ ಪ್ರೊಡಕ್ಷನ್ಸ್ ನಡೆಸಿದ ಸ್ಪರ್ಧೆಯಲ್ಲಿ ಮಂಗಳೂರಿನ ಶಮಾ ವಾಜಿದ್ ಈ ಪ್ರಶಸ್ತಿ ಗೆದ್ದಿದ್ದಾರೆ. ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್ನ್ಯಾಷನಲ್ ಯೂನಿವರ್ಸ್ … Continued

ವಿಧಾನಸಭೆ ಉಪಾಧ್ಯಕ್ಷರಾಗಿ ಶಾಸಕ ರುದ್ರಪ್ಪ ಲಮಾಣಿ ಅವಿರೋಧ ಆಯ್ಕೆ

ಬೆಂಗಳೂರು : ವಿಧಾನಸಭೆ ಉಪಾಧ್ಯಕ್ಷರಾಗಿ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿಧಾನಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಇಂದು, ಗುರುವಾರ ಚುನಾವಣೆ ನಿಗದಿಯಾಗಿತ್ತು, ಈ ಸ್ಥಾನಕ್ಕೆ ಕಾಂಗ್ರೆಸ್‌ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಅವರನ್ನು ಅಭ್ಯರ್ಥಿಯಾಗಿ ಕಾಂಗ್ರೆಸ್ ಕಣಕ್ಕಿಳಿಸಿತ್ತು ನಿನ್ನೆ ಬುಧವಾರ ಶಾಸಕ ರುದ್ರಪ್ಪ ಲಮಾಣಿ ಉಮೇದುವಾರಿಕೆ ಸಲ್ಲಿಸಿದ್ದರು. ಇಂದು ವಿಧಾನಸಭೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. … Continued

ಹವ್ಯಕ ಮಹಾಮಂಡಲಕ್ಕೆ ನೂತನ ಅಧ್ಯಕ್ಷರಾಗಿ ಮೋಹನ ಹೆಗಡೆ ಆಯ್ಕೆ

ಗೋಕರ್ಣ: ಹವ್ಯಕ ಮಹಾಮಂಡಲದ ನೂತನ ಅಧ್ಯಕ್ಷರಾಗಿ ಮೋಹನ ಭಾಸ್ಕರ ಹೆಗಡೆ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಪತ್ರಕರ್ತ ಉದಯಶಂಕರ ಭಟ್ ಮಿತ್ತೂರು ನೇಮಕಗೊಂಡಿದ್ದಾರೆ. ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಚಾತುರ್ಮಾಸ್ಯ ವ್ರತಾರಂಭದ ಸಂದರ್ಭದಲ್ಲಿ ಪುನರ್ರಚಿತ ಹವ್ಯಕ ಮಹಾಮಂಡಲವನ್ನು ಉದ್ಘೋಷಿಸಿದರು. ಗೌರವ ಕಾರ್ಯದರ್ಶಿಯಾಗಿ ನಾಗರಾಜ ಭಟ್ ಪೆದಮಲೆ ಮತ್ತು ಕೋಶಾಧ್ಯಕ್ಷರಾಗಿ ಅಂಬಿಕಾ ಎಚ್.ಎನ್.ನಿಯುಕ್ತರಾಗಿದ್ದಾರೆ. ಮೂಲತಃ ಕುಮಟಾದ ಹೆರವಟ್ಟಾದವರಾದ … Continued

ವಾಹನ ಸವಾರರಿಗೆ ಟ್ರಾಫಿಕ್ ದಂಡ ಪಾವತಿಗೆ ಮತ್ತೆ ಶೇ.50ರಷ್ಟು ರಿಯಾಯಿತಿ ಘೋಷಣೆ

ಬೆಂಗಳೂರು : ವಾಹನ ಸವಾರರಿಗೆ ಸರ್ಕಾರ ಮತ್ತೆ ಸಿಹಿಸುದ್ದಿ ನೀಡಿದೆ. ಟ್ರಾಫಿಕ್ ದಂಡ ಪಾವತಿಗೆ ಮತ್ತೆ ಶೇ.50ರಷ್ಟು ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ದಂಡ ಕಟ್ಟಲು ಈ ಹಿಂದೆ ಸರ್ಕಾರ ಶೇ 50ರಷ್ಟು ರಿಯಾಯಿತಿ ನೀಡಿತ್ತು. ಇದೀಗ ಮತ್ತೆ ಸಂಚಾರ ನಿಯಮ ಉಲ್ಲಂಘಿಸಿರುವ ವಾಹನ ಸವಾರರು ಶೇ 50ರ … Continued

ಐಸಿಸ್ ಸಂಚು ಪ್ರಕರಣ : ಕರ್ನಾಟಕದ 9 ಜನರ ವಿರುದ್ಧ ಪೂರಕ ಚಾರ್ಜ್ ಶೀಟ್ ಸಲ್ಲಿಸಿದ ಎನ್ಐಎ

ನವದೆಹಲಿ : ಜಾಗತಿಕ ಭಯೋತ್ಪಾದಕ ಗುಂಪು ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದನಾ ದಾಳಿ ನಡೆಸಲು ಸಂಚು ರೂಪಿಸಿದ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕರ್ನಾಟಕದ ಒಂಬತ್ತು ಜನರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನ್ನ ಮೊದಲ ಪೂರಕ ಚಾರ್ಜ್ ಶೀಟ್ ಸಲ್ಲಿಸಿದೆ. ಫೆಡರಲ್ ಏಜೆನ್ಸಿ ಪ್ರಕಾರ, ಚಾರ್ಜ್ ಶೀಟ್‌ನಲ್ಲಿರುವ ಐವರು ಆರೋಪಿಗಳು ತಂತ್ರಜ್ಞಾನದ (ಟೆಕ್‌) … Continued

ವಿರೋಧ ಪಕ್ಷದ ನಾಯಕರು ಬೇಕಾಗಿದ್ದಾರೆ : ಟ್ವೀಟ್‌ನಲ್ಲಿ ಬಿಜೆಪಿ ಲೇವಡಿ ಮಾಡಿದ ಕಾಂಗ್ರೆಸ್‌

ಬೆಂಗಳೂರು: ವಿಪಕ್ಷ ನಾಯಕನ ಆಯ್ಕೆ ಇನ್ನೂ ಆಗದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಘಟಕ ಬಿಜೆಪಿ ಕಾಲೆಳೆದಿದೆ. ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ ಎಂದು ಎಂದು ಟ್ವೀಟ್ ಮಾಡಿದ್ದು, ವಿಪಕ್ಷ ನಾಯಕನ ಆಯ್ಕೆ ಇನ್ನೂ ಆಗದಿರುವ ಕುರಿತು ಬಿಜೆಪಿ ಬಗ್ಗೆ ಲೇವಡಿ ಮಾಡಿದೆ. ಸಂವಿಧಾನ ತಿಳಿದವರು, ಪ್ರಜಾಪ್ರಭುತ್ವ ಅರಿತವರು, ಸಿಡಿಗೆ ತಡೆಯಾಜ್ಞೆ ತರದವರು, ಭ್ರಷ್ಟಾಚಾರಿಯಲ್ಲದ ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ. … Continued

ನಾಳೆಯಿಂದಲೇ ಅನ್ನಭಾಗ್ಯ ಯೋಜನೆ ಜಾರಿ : ಸಚಿವ ಮುನಿಯಪ್ಪ

ಬೆಂಗಳೂರು: ಅನ್ನಭಾಗ್ಯ ಯೋಜನೆ ನಾಳೆಯಿಂದಲೇ ಜಾರಿಯಾಗಲಿದೆ. 5 ಕೆಜಿ ಅಕ್ಕಿ ನೀಡಲಾಗುವುದು, ಉಳಿದ 5 ಕೆಜಿ ಅಕ್ಕಿ ಬದಲಿಗೆ ಜನರ ಬ್ಯಾಂಕ್‌ ಖಾತೆಗೆ ಹಾಕಲು ಹಣ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಳೆ (ಜುಲೈ 1)ಯಿಂದಲೇ ಅನ್ನಭಾಗ್ಯ ಯೋಜನೆ ಆರಂಭವಾಗುತ್ತಿದೆ. ಎಲ್ಲ … Continued

ಅಕ್ರಮ ಆಸ್ತಿ ಪ್ರಕರಣ: ಕೆ.ಆರ್. ಪುರಂ ತಹಶೀಲ್ದಾರ್ ಅಜಿತ್ ರೈ ಬಂಧನ

ಬೆಂಗಳೂರು: ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದ ಹಿನ್ನಲೆಯಲ್ಲಿ ನಿನ್ನೆ ಹಲವೆಡೆ ದಾಳಿ ಮಾಡಿದ್ದ ಲೋಕಾಯುಕ್ತ ಪೊಲೀಸರು ಇಂದು, ಗುರುವಾರ ಕೆ.ಆರ್​. ಪುರ ತಹಶೀಲ್ದಾರ್ ಅಜಿತ್​ ರೈ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರು ಸೇರಿ ಅಜಿತ್ ರೈ ಅವರಿಗೆ ಸೇರಿದ ಆಸ್ತಿಗಳ ಮೇಲೆ ಲೋಕಾಯುಕ್ತ ಪೊಲೀಸರು ನಿನ್ನೆ ದಾಳಿ ನಡೆಸಿದ್ದರು. ಸತತ 30 ಗಂಟೆಗಳ … Continued

ಮರ್ಯಾದಾ ಹತ್ಯೆ: ಪ್ರೀತಿಯಲ್ಲಿ ಬಿದ್ದ ಮಗಳನ್ನೇ ಕೊಂದ ತಂದೆ, ಸುದ್ದಿ ಕೇಳಿ ಪ್ರಿಯತಮನೂ ಆತ್ಮಹತ್ಯೆ

ಕೋಲಾರ : ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆಯೇ ಕತ್ತು ಹಿಸುಕಿ ಕೊಲೆ ಮಾಡಿದ ʼಮರ್ಯಾದ ಹತ್ಯೆʼ ಘಟನೆ ನಡೆದಿದ್ದು, ಇದೇವೇಳೆ ಪ್ರೇಯಸಿ ಸಾವಿನಿಂದ ಮನನೊಂದು ಪ್ರಿಯಕರನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರದ ಬಂಗಾರಪೇಟೆಯಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕು ಕಾಮಸಮುದ್ರ ಹೋಬಳಿ ಬೋಡಗುರ್ಕಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, … Continued

ಬೆಳ್ಳಂಬೆಳಿಗ್ಗೆ ರಾಜ್ಯದ ಹಲವೆಡೆ ಅಧಿಕಾರಿಗಳ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು : ಇಂದು ಬುಧವಾರ ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ದಾಖಲೆ ಪರಿಶೀಲನೆ ನಡೆಯುತ್ತಿದೆ. ಭ್ರಷ್ಟಾಚಾರ ಆರೋಪಗಳು ಹಾಗೂ ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲನೆ … Continued