ಕಾರವಾರ | ಸ್ವಾತಂತ್ರ್ಯ ದಿನಾಚರಣೆ : ಮೊಬೈಲ್ ಟಾರ್ಚ್ ಹಿಡಿದು ಭಾಷಣ ಓದಿದ ಸಚಿವ ಲಕ್ಷ್ಮಣ ಸವದಿ

 ಕಾರವಾರ: ಉತ್ತರ ಕನ್ನಡ ಜಿಲ್ಲಾ ಕೇಂದ್ರವಾದ ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಮಂದ ಬೆಳಕಿದ್ದ ಕಾರಣ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಲಕ್ಷ್ಮಣ ಸವದಿ ಅವರು ಮೊಬೈಲ್ ಟಾರ್ಚ್ ಬೆಳಕನ್ನು ಬಳಸಿ ಭಾಷಣ ಮಾಡಬೇಕಾಯಿತು. ನಗರದ ಕಾಜುಭಾಗದಲ್ಲಿರುವ ಪೊಲೀಸ್ ಪರೇಡ್ ಮೈದಾನದಲ್ಲಿ ಶನಿವಾರ 80ನೇ ಸ್ವಾತಂತ್ರ್ಯೋತ್ಸವವನ್ನು ಸಡಗರದಿಂದ ಆಚರಿಸಲಾಯಿತು. … Continued

ಕಾರವಾರ : ಬೀದಿ ಗೂಳಿಗಳ ಕಾಳಗಕ್ಕೆ ಪಾದಾಚಾರಿ ಮಹಿಳೆ ಸಾವು

ಕಾರವಾರ: ಬೀದಿ ಗೂಳಿಗಳ ಕಾಳಗಕ್ಕೆ ಸಿಲುಕಿ ಅಮಾಯಕ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಮಲ್ಲಾಪುರ ಗ್ರಾಮದ ನಿವಾಸಿ ರಾಜೇಶ್ವರಿ (29) ಎಂದು ಗುರುತಿಸಲಾಗಿದೆ. ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ವೇಳೆ ಗ್ರಾಮದ ಸುಭದ್ರಾ ಹೋಟೆಲ್ ಸಮೀಪ ರಸ್ತೆಯಲ್ಲಿ ಕಾದಾಡುತ್ತಿದ್ದ ಎರಡು ಗೂಳಿಗಳು … Continued

ಮಗನ ಅಪಘಾತದಿಂದ ನೊಂದು ದಂಪತಿಯ ದುರಂತ ಅಂತ್ಯ ; ತಾಯಿ-ತಂದೆ ಕಳೆದುಕೊಂಡ 10 ವರ್ಷದ ಬಾಲಕ ಅನಾಥ

ಕಾರವಾರ: ಕುಟುಂಬದಲ್ಲಿ ಸಂಭವಿಸಿದ ಅಪಘಾತವೊಂದು ಇಡೀ ಕುಟುಂಬವನ್ನೇ ದುರಂತಕ್ಕೆ ದೂಡಿದ ಕರುಣಾಜನಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡದ ಬಂಗಾರಪ್ಪ ನಗರದಲ್ಲಿ ನಡೆದಿದೆ. ಮಗನಿಗೆ ಸಂಭವಿಸಿದ ಅಪಘಾತದಿಂದ ಆತನ ಆರೋಗ್ಯದ ಬಗ್ಗೆ ಆತಂಕಗೊಂಡ ತಾಯಿ ಆತ್ಮಹತ್ಯೆಗೆ ಶರಣಾದರೆ, ಪತ್ನಿಯ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದ ಪತಿಯೂ ಕಾಳಿ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ … Continued

ವಿಡಿಯೊ | ಕಾರವಾರದಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಸ್ವದೇಶಿ ನಿರ್ಮಿತ ಯುದ್ಧ ನೌಕೆ ಮಾಲ್ವನ್

ಕಾರವಾರ: ಭಾರತೀಯ ನೌಕಾಪಡೆಯ ಸಮುದ್ರ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ಜಲಾಂತರ್ಗಾಮಿ ವಿರೋಧಿ ಸ್ವದೇಶಿ ನಿರ್ಮಿತ ಯುದ್ಧನೌಕೆ ಐಎನ್‌ಎಸ್‌ ಮಾಲ್ವನ್ ಅನ್ನು ಕಾರವಾರದಲ್ಲಿರುವ ಐಎನ್‌ಎಸ್‌ ಕದಂಬ ನೌಕಾನೆಲೆಯಲ್ಲಿ ಅಧಿಕೃತವಾಗಿ ಸೇವೆಗೆ ಸೇರ್ಪಡೆಗೊಳಿಸಲಾಗಿದೆ. ಭಾರತದ ಸ್ವದೇಶಿ ಹಡಗು ನಿರ್ಮಾಣ ಯೋಜನೆಯಡಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿರುವ ಐಎನ್‌ಎಸ್‌ ಮಾಲ್ವನ್, ಕರಾವಳಿ ಹಾಗೂ ಆಳ ಸಮುದ್ರ … Continued

ವಿಡಿಯೋ | ಕಾರವಾರದಿಂದ ಹೊರಟಿದ್ದ ತೈಲ ಸಾಗಣೆ ಹಡಗಿಗೆ ಒಮಾನ್‌ ಕರಾವಳಿಯಲ್ಲಿ ಹೊತ್ತಿಕೊಂಡ ಬೆಂಕಿ

ಮಸ್ಕತ್ (ಓಮನ್): ಕಾರವಾರದಿಂದ ಹೊರಟಿದ್ದ ಓಮನ್ ಕರಾವಳಿಯ ಸಮುದ್ರ ಪ್ರದೇಶದಲ್ಲಿ ಹೋಗುತ್ತಿದ್ದ  ‘ಮಾರಿವೆಕ್ಸ್’ (Marivex) ಎಂಬ ತೈಲ ಸಾಗಣೆ ಹಡಗಿನಲ್ಲಿ (ಆಯಿಲ್ ಟ್ಯಾಂಕರ್) ಸೋಮವಾರ ಭಾರಿ ಅಗ್ನಿ ಅವಘಡ ಸಂಭವಿಸಿದೆ ಎಂದುವರದಿಯಾಗಿದೆ.  ಅದೃಷ್ಟವಶಾತ್, ಹಡಗಿನಲ್ಲಿದ್ದ ಎಲ್ಲಾ 24 ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ. ಇರಾನ್ ಮತ್ತು ಇಸ್ರೇಲ್ ಗಳು ಕದನ ವಿರಾಮವನ್ನು ಉಲ್ಲಂಘಿಸಿ ಮತ್ತೆ … Continued

ಗೋವಾ ಕರಾವಳಿಯಲ್ಲಿ ಕಾರವಾರದ ಬೋಟ್ ಮುಳುಗಡೆ : 22 ಮೀನುಗಾರರ ರಕ್ಷಣೆ

ಬೆತುಲ್ (ಗೋವಾ): ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಕಾರವಾರ ಮೂಲದ ಪರ್ಶಿಯನ್ ಮಾದರಿಯ ಮೀನುಗಾರಿಕಾ ಬೋಟ್ ಗೋವಾದ ಬೆತುಲ್ ಕರಾವಳಿ ಪ್ರದೇಶದಲ್ಲಿ ಮುಳುಗಡೆಯಾಗಿದೆ. ಬೋಟ್‌ನಲ್ಲಿದ್ದ ಎಲ್ಲಾ 22 ಮೀನುಗಾರರನ್ನು ಹತ್ತಿರದಲ್ಲಿದ್ದ ಇತರ ಮೀನುಗಾರರು ರಕ್ಷಿಸಿದ್ದು, ಭಾರಿ ದುರಂತವೊಂದು ತಪ್ಪಿದಂತಾಗಿದೆ. ಕಾರವಾರದ ಮುದಗಾ ನಿವಾಸಿ ದಿನೇಶ ಕಾಂಚನ್ ಎಂಬವರಿಗೆ ಸೇರಿದ “ಶ್ರೀ ಅಮ್ಮ” ಹೆಸರಿನ ಬೋಟ್ ಸುಮಾರು … Continued

ಹಬ್ಬು ಸಮುದಾಯ ಒಂದು ಜನಾಂಗೀಯ ಅಧ್ಯಯನ ಕೃತಿ ಬಿಡುಗಡೆ

ಕಾರವಾರ: ಅನ್ನ ಹಾಗೂ ಅಕ್ಷರ ತೋರಿಸಿದ ಹಬ್ಬು ಬ್ರಾಹ್ಮಣರ ಕುರಿತು ಎಲ್ಲ ದಾಖಲೆ ಪರಿಶೀಲಿಸಿ ನಮ್ಮಲ್ಲಿ ಯಾವುದೆ ಗೊಂದಲ ಇರದ ಹಾಗೆ ಆರ್.ಎಸ್. ಹಬ್ಬು ಕೃತಿ ನೀಡಿದ್ದಾರೆ ಎಂದು ಪರಿಸರ ತಜ್ಞ ಶಿವಾನಂದ ಕಳವೆ ಅಭಿಪ್ರಾಯಪಟ್ಟರು. ನಗರದ ರಾಘವೇಂದ್ರ ಮಠದ ಸಭಾಭವನದಲ್ಲಿ ಆರ್.ಎಸ್.ಹಬ್ಬು ಅವರ ʼಹಬ್ಬು ಸಮುದಾಯʼ ಒಂದು ಜನಾಂಗೀಯ ಅಧ್ಯಯನ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ … Continued

ಭಾರತದ ನೌಕಾಪಡೆಗೆ ಮತ್ತಷ್ಟು ಬಲ: ಕಾರವಾರದಲ್ಲಿ ‘ಕಲ್ವರಿ’ ಜಲಾಂತರ್ಗಾಮಿಗಳ ಅತ್ಯಾಧುನಿಕ ನಿರ್ವಹಣಾ ಘಟಕ ಉದ್ಘಾಟನೆ

ಕಾರವಾರ : ಕಲ್ವರಿ ದರ್ಜೆಯ (Kalvari-class) ಜಲಾಂತರ್ಗಾಮಿ ನೌಕೆಗಳಲ್ಲಿ ಅಳವಡಿಸಲಾಗಿರುವ ಅತ್ಯಂತ ನಿರ್ಣಾಯಕ ‘ನ್ಯೂಮ್ಯಾಟಿಕ್’ (Pneumatic) ವ್ಯವಸ್ಥೆಗಳ ಪರೀಕ್ಷೆ, ನಿರ್ವಹಣೆ ಮತ್ತು ದುರಸ್ತಿಗಾಗಿ ದೇಶದ ಮೊದಲ ವಿಶೇಷ ಘಟಕವನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾ ನೆಲೆಯಲ್ಲಿ ಉದ್ಘಾಟಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಕಾರವಾರದ ಕದಂಬ ನೌಕಾ ನೆಲಯ ತಾಂತ್ರಿಕ ವರ್ಕ್‌ಶಾಪ್‌ನಲ್ಲಿ ನಿಯೋಜಿಸಲಾಗಿದೆ … Continued

ವೀಡಿಯೊಗಳು | ಕಾರವಾರ : ಶಾಲಾ ಕೊಠಡಿಯೊಳಗೆ ಬಂದ ಕಾಳಿಂಗ ಸರ್ಪ…!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಗುಡ್ಡಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ತರಗತಿ ಕೊಠಡಿಯಲ್ಲಿ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ತರಗತಿಯಲ್ಲಿ ಬೃಹತ್‌ ಹಾವಿನ ಆರ್ಭಟಕ್ಕೆ  ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ತಕ್ಷಣ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಗೆ ಕಳುಹಿಸಿದ … Continued

ಕಾರವಾರ : ಸಚಿವ-ಶಾಸಕರ ನಡುವೆ ವಾಗ್ವಾದ ; ಕೆಡಿಪಿ ಸಭೆಯಿಂದ ಹೊರನಡೆದ ಸತೀಶ ಸೈಲ್

ಕಾರವಾರ: ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಭೆಯಲ್ಲಿ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮತ್ತು ಕಾಂಗ್ರೆಸ್‌ ಶಾಸಕ ಸತೀಶ ಸೈಲ್ ನಡುವೆ ನಡೆದ ವಾಗ್ವಾದ ನಡೆದು, ಸೈಲ್ ಸಭೆಯ ಮಧ್ಯದಲ್ಲೇ ಹೊರನಡೆದ ಘಟನೆ ನಡೆದಿದೆ. ಇಬ್ಬರೂ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು ಎಂಬುದು ಗಮನಿಸಬೇಕಾದ ಸಂಗತಿ. ಜಿಲ್ಲಾ ಉಸ್ತುವಾರಿ … Continued