ಕೈಗಾ ಅಣು ವಿದ್ಯುತ್ ಸ್ಥಾವರ: 5, 6ನೇ ಘಟಕಗಳ ಕಾಮಗಾರಿಗೆ ಚಾಲನೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳ ನಿರ್ಮಾಣದ ಪ್ರಮುಖ ಹಂತವಾದ ‘ಕಾಂಕ್ರೀಟಿಂಗ್’ ಕಾರ್ಯಕ್ಕೆ ಭಾರತೀಯ ಅಣುಶಕ್ತಿ ಆಯೋಗದ ಅಧ್ಯಕ್ಷ ಅಜಿತಕುಮಾರ ಮೊಹಾಂತಿ ಭಾನುವಾರ ಅಧಿಕೃತವಾಗಿ ಚಾಲನೆ ನೀಡಿದರು. ದೇಶೀಯ ತಂತ್ರಜ್ಞಾನದ PHW (Pressurised Heavy Water) ಮಾದರಿಯ ರಿಯಾಕ್ಟರ್‌ಗಳನ್ನು ಇಲ್ಲಿ ಬಳಸಲಾಗುತ್ತಿದೆ. ಈ ತಂತ್ರಜ್ಞಾನದ … Continued

ಕಾರವಾರ : ಒಂದೇ ಸ್ಥಳದಲ್ಲಿ 6 ಹೆಬ್ಬಾವುಗಳು ಪತ್ತೆ…!

ಕಾರವಾರ : ನಗರದ ಕಠಿಣಕೋಣ ಭಾಗದಲ್ಲಿ ಭಾನುವಾರ ಅಪರೂಪದ ಘಟನೆಯೊಂದು ನಡೆದಿದ್ದು, ಇಲ್ಲಿನ ನಿವಾಸಿಯೊಬ್ಬರ ಮನೆಯ ಆವರಣದಲ್ಲಿ ಒಟ್ಟಿಗೆ ಆರು ಹೆಬ್ಬಾವುಗಳು ಪತ್ತೆಯಾಗಿವೆ. ವಿಜಯ ತಳೇಕರ ಎಂಬವರ ಮನೆಯ ಆವರಣದಲ್ಲಿ ಕಾಂಕ್ರೀಟ್ ಕಮಾನು ನಿರ್ಮಾಣಕ್ಕಾಗಿ ಇರಿಸಲಾಗಿದ್ದ ಕಬ್ಬಿಣದ ಸಾಮಗ್ರಿಗಳ ಮಧ್ಯೆ ಈ ಬೃಹತ್ ಹಾವುಗಳು ಅಡಗಿಕೊಂಡಿದ್ದವು. ಒಂದೇ ಕಡೆ ಇಷ್ಟೊಂದು ಸಂಖ್ಯೆಯ ಹೆಬ್ಬಾವುಗಳನ್ನು ಕಂಡ ಸ್ಥಳೀಯರು … Continued

ಕಾರವಾರ : ಸಮುದ್ರ ಸ್ನಾನ ಮಾಡುವಾಗ ಮುಳುಗಿ ಬಾಲಕ ಸಾವು

ಕಾರವಾರ: ಶಿವರಾತ್ರಿ ಹಿನ್ನೆಲೆಯಲ್ಲಿ ಸಮುದ್ರ ಸ್ನಾನಕ್ಕೆ ಇಳಿದ ಬಾಲಕನೊಬ್ಬ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಬಳಿ ಸಂಭವಿಸಿದೆ ಎಂದು ವರದಿಯಾಗಿದೆ. ಗಾಂವಗೇರಿಯ ಯಶ್ (17) ಎಂಬಾತ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಬಾಲಕನಾಗಿದ್ದಾನೆ. ಶಿವರಾತ್ರಿ ಹಿನ್ನೆಲೆಯನ್ನು ಮಾಜಾಳಿ ಸಮುದ್ರಕ್ಕೆ ರಾಮನಾಥ ಪರಿವಾರ ದೇವರು ಸೇರುದಂತೆ ಸುತ್ತಮುತ್ತಲಿನ ದೇವರನ್ನು ಪಲ್ಲಕ್ಕಿಯಲ್ಲಿ ತಂದು … Continued

ಫಾರ್ಮಾಸಿಸ್ಟ್ ಆತ್ಮಹತ್ಯೆ ಪ್ರಕರಣ: ವೀಡಿಯೊ ವೈರಲ್ ಮಾಡಿದ ಮೂವರ ಬಂಧನ

ಕಾರವಾರ:  ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅವರ್ಸಾದಲ್ಲಿ ನಡೆದ ಫಾರ್ಮಾಸಿಸ್ಟ್ ರಾಜೀವ ಪಿಕ್ಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್ ಮಾಡಿದ ಆರೋಪದ ಮೇಲೆ ಅಂಕೋಲಾ ಪೊಲೀಸರು ಮೂವರನ್ನು ಬಂಧಿಸಿದ್ದಾರೆಎಂದು ವರದಿಯಾಗಿದೆ. ಕಾರವಾರ ತಾಲೂಕಿನ ವೈಲವಾಡ ಗ್ರಾಮದ ಸುಭಾಷ, ಹರಿಶ್ಚಂದ್ರ ಮತ್ತು ಅನಿಲ ಎಂಬವರು ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಕಾರವಾರದ … Continued

ಕಾರವಾರ : ನೌಕಾಪಡೆಯ ಸಬ್‌ಮರಿನ್‌ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಚಾರ

ಕಾರವಾರ: ಭಾರತೀಯ ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಆಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಕಾರವಾರದಲ್ಲಿ ನೌಕಾಪಡೆಯ ‘ಐಎನ್ಎಸ್ ವಾಗ್ಶೀರ್’ (INS Vaghsheer) ಸಬ್‌ಮರಿನ್‌ನಲ್ಲಿ (ಜಲಾಂತರ್ಗಾಮಿ) ಸಮುದ್ರದ ಆಳಕ್ಕೆ ಇಳಿಯುವ ಮೂಲಕ ಐತಿಹಾಸಿಕ ಸಾಹಸ ಮೆರೆದಿದ್ದಾರೆ. ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ನಂತರ ಸಬ್‌ಮರಿನ್‌ನಲ್ಲಿ ಪಯಣಿಸಿದ ಎರಡನೇ ರಾಷ್ಟ್ರಪತಿ ಎಂಬ … Continued

ಕಾರವಾರ: ಕಡಲತೀರದಲ್ಲಿ ಹೆಲಿಕಾಪ್ಟರ್ ಏರಿ ಸಂಭ್ರಮಪಟ್ಟ ಮಕ್ಕಳು…

ಕಾರವಾರ : ಕಾರವಳಿ ಉತ್ಸವದ ಸಂಭ್ರಮದ ನಡುವೆ ವಿಶೇಷ ಶಾಲೆಯ ಮಕ್ಕಳು ಇಂದು, ಬುಧವಾರ ಹೆಲಿಕಾಪ್ಟರ್ ಏರಿ ಅರಬ್ಬಿ ಸಮುದ್ರ, ಕಾಳಿ ನದಿ ಸಂಗಮ ಮತ್ತು ಕಾರವಾರದ ನಿಸರ್ಗ ಸೌಂದರ್ಯವನ್ನು ಆಕಾಶದಿಂದ ವೀಕ್ಷಿಸುವ ಮೂಲಕ ಸಂಭ್ರಮಿಸಿದರು. ಕರಾವಳಿ ಉತ್ಸವದ-2025 ರ ಅಂಗವಾಗಿ ಉತ್ತರ ಕನ್ನಡ ಜಿಲ್ಲಾಡಳಿತ ಹಾಗೂ ಖಾಸಗಿ ವಿಮಾನಯಾನ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿರುವ ಐದು … Continued

ಕಾರವಾರ | ಅಮದಳ್ಳಿಯಲ್ಲಿ ಸುಟ್ಟು ಕರಕಲಾದ ಆಟೋ, ಎರಡು ಕಾರು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಮದಳ್ಳಿಯಲ್ಲಿತಡರಾತ್ರಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಆಟೋ  ಮತ್ತು ಎರಡು ಕಾರುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ ಎಂದು ವರದಿಯಾಗಿದೆ. ಮಧ್ಯರಾತ್ರಿ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಬೆಂಕಿ ವಾಹನಗಳನ್ನು ಆವರಿಸಿಕೊಂಡಿದೆ. ಬೆಂಕಿಯ ತೀವ್ರತೆಯಿಂದಾಗಿ ಸ್ಥಳದಲ್ಲಿದ್ದ ಕಾರುಗಳು ಮತ್ತು ಆಟೋ ರಿಕ್ಷಾ ಸಂಪೂರ್ಣವಾಗಿ ನಾಶವಾಗಿವೆ. ಈ ಅವಘಡದಿಂದ … Continued

ಕಾರವಾರ | ಮಾದಕ ವಸ್ತುಗಳನ್ನು ನಿರ್ಬಂಧಿಸಿದ್ದಕ್ಕೆ ಕೈದಿಗಳಿಂದ ಜೈಲು ಸಿಬ್ಬಂದಿ ಮೇಲೆ ಹಲ್ಲೆ

ಕಾರವಾರ: ಜಿಲ್ಲಾ ಕಾರಾಗೃಹದಲ್ಲಿ ಮಾದಕ ವಸ್ತುಗಳ ಪೂರೈಕೆಗೆ ಅವಕಾಶ ನೀಡದೆ ಕಠಿಣ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ, ಜೈಲರ್ ಹಾಗೂ ಮೂವರು ಸಿಬ್ಬಂದಿ ಮೇಲೆ ವಿಚಾರಣಾಧೀನ ಕೈದಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಗಂಭೀರ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಮಂಗಳೂರು ಮೂಲದ ಕುಖ್ಯಾತ ರೌಡಿಗಳಾದ ಮೊಹ್ಮದ್ ಅಬ್ದುಲ್ ಫಯಾನ್ ಹಾಗೂ ಕೌಶಿಕ ನಿಹಾಲ್ ಎಂಬವರು … Continued

ಕಾರವಾರ : ಡಿಸೆಂಬರ್ 22 ರಿಂದ 7 ದಿನಗಳ ಕರಾವಳಿ ಉತ್ಸವ

ಕಾರವಾರ : ನಗರದ ರವೀಂದ್ರನಾಥ ಠಾಗೂರ್ ಕಡಲತೀರದಲ್ಲಿ ಡಿಸೆಂಬರ್ 22 ರಿಂದ 28 ರ ವರೆಗೆ 7 ದಿನಗಳ ಕಾಲ ಕರಾವಳಿ ಉತ್ಸವ ಆಯೋಜಿಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ. ಡಿಸೆಂಬರ್ 22 ರಂದು ಮುಖ್ಯಮಂತ್ರಿಗಳು ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ವಿವಿಧ ಸಚಿವರು, ಜಿಲ್ಲೆಯ ಎಲ್ಲ … Continued

ಕಾರವಾರ : ಕೈಗಾ ಅಣು ಸ್ಥಾವರದಲ್ಲಿ ಗೇಟ್‌ ಕುಸಿದು ಸಿಐಎಸ್ಎಫ್ ಸಿಬ್ಬಂದಿ ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರದ (Kaiga Nuclear Power Plant) ಅಣು ತ್ಯಾಜ್ಯ ಘಟಕದಲ್ಲಿ ಕಾವಲಿಗೆ ನಿಂತಿದ್ದ ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆಯ (CISF) ಹೆಡ್‌ಕಾನ್ಸ್‌ಟೇಬಲ್ ಒಬ್ಬರು ಮೈಮೇಲೆ ಕಬ್ಬಿಣದ ಗೇಟ್ ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರನ್ನು ಮಹಾರಾಷ್ಟ್ರದ ಮಹಿಮಾನಗಢ ಮೂಲದ ಶೇಖರ ಜಗದಾಲೆ (48)‌ … Continued