ಟ್ರೈನಿ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ ; ಎಫ್‌ಐಆರ್ ವಿಳಂಬ : ಸಿಬಿಐ

ಕೋಲ್ಕತ್ತಾ : ಕೋಲ್ಕತ್ತಾ ಆರ್‌.ಜಿ.ಕರ್‌ ಕಾಲೇಜು ಮತ್ತು ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಇನ್ನಷ್ಟು ಆಘಾತಕಾರಿ ಸಂಗತಿಗಳು ಬಹಿರಂಗೊಳ್ಳುತ್ತಿದ್ದು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ ಘೋಷ್ ಅವರ ಫೌಲ್ ಪ್ಲೇ ಅನ್ನು ಅದು ಎತ್ತಿ ತೋರಿಸುತ್ತದೆ. ಆಗಸ್ಟ್ 9 ರಂದು ಸರ್ಕಾರಿ ಸ್ವಾಮ್ಯದ ಆರ್‌.ಜಿ.ಕರ್‌ ಆಸ್ಪತ್ರೆಯಲ್ಲಿ 31 ವರ್ಷದ … Continued

ಟಿಎಂಸಿಗೆ ಆಘಾತ | ಮಮತಾ ಸರ್ಕಾರ ಕೋಲ್ಕತ್ತಾ ಪ್ರತಿಭಟನೆ ನಿಭಾಯಿಸಿದ ರೀತಿಗೆ ಅಸಮಾಧಾನ ; ಟಿಎಂಸಿ ಸಂಸದ ರಾಜೀನಾಮೆ

ಕೋಲ್ಕತ್ತಾ : ಟಿಎಂಸಿ ರಾಜ್ಯಸಭಾ ಸಂಸದ ಜವಾಹರ ಸರ್ಕಾರ್ ಅವರು ಭಾನುವಾರ ರಾಜೀನಾಮೆ ನೀಡಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರ ಆರ್‌.ಜಿ. ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆಮಮತಾ ಸರ್ಕಾರವು ಪ್ರತಿಭಟನೆಗಳನ್ನು ನಿಭಾಯಿಸಿದ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡುತ್ತಿರುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕಳುಹಿಸಿರುವ ರಾಜೀನಾಮೆ … Continued

ಕೋಲ್ಕತ್ತಾ ಆರ್‌.ಜಿ. ಕರ್ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ ಘೋಷ್ ಬಂಧಿಸಿದ ಸಿಬಿಐ

ಕೋಲ್ಕತ್ತಾ: ಕಳೆದ ತಿಂಗಳು ವೈದ್ಯೆಯೊಬ್ಬರ ಅತ್ಯಾಚಾರ ಮತ್ತು ಹತ್ಯೆಗೈದ ಕೋಲ್ಕತ್ತಾ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ ಘೋಷ್ ಅವರನ್ನು ಸಿಬಿಐ ಸೋಮವಾರ ಬಂಧಿಸಿದೆ. ಅತ್ಯಾಚಾರ-ಕೊಲೆ ಪ್ರಕರಣದ ಜೊತೆಗೆ ಸಿಬಿಐ ತನಿಖೆ ನಡೆಸುತ್ತಿರುವ ಸಂದೀಪ ಘೋಷ್ ಅಧಿಕಾರಾವಧಿಯಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ. ಸಂದೀಪ್ ಘೋಷ್ ಜೊತೆ ಮಾರಾಟಗಾರರಾದ ಬಿಪ್ಲವ್ ಸಿಂಘಾ … Continued

ಅಸ್ವಸ್ಥ, ಗಂಭೀರ, ಆತ್ಮಹತ್ಯೆ..’: ಅತ್ಯಾಚಾರ-ಕೊಲೆಯಾದ ವೈದ್ಯೆ ಪೋಷಕರಿಗೆ ಆರ್‌ಜಿ ಕರ್ ಆಸ್ಪತ್ರೆಯಿಂದ ಮಾಡಿದ 3 ಫೋನ್‌ ಕರೆಗಳ ವಿವರ ಬಹಿರಂಗ…!

ಕೋಲ್ಕತ್ತಾ : ಅತ್ಯಾಚಾರ ಮತ್ತು ಹತ್ಯೆಗೀಡಾದ ವೈದ್ಯ ವಿದ್ಯಾರ್ಥಿನಿಯ ತಂದೆ-ತಾಯಿಗೆ, ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ಸಿಬ್ಬಂದಿ ಆಗಸ್ಟ್‌ 9ರ ಬೆಳಿಗ್ಗೆ ಮಾಡಿದ್ದು ಎನ್ನಲಾದ ದೂರವಾಣಿ ಕರೆಯ ವಿವರಗಳು ಗುರುವಾರ ಬಹಿರಂಗವಾಗಿವೆ. ಆಗಸ್ಟ್ 9 ರ ಬೆಳಿಗ್ಗೆ, ಅರ್ಧ ಗಂಟೆಯೊಳಗೆ ಮೂರು ಕರೆಗಳು ಅವರ ಹತ್ಯೆಗೀಡಾದ ವೈದ್ಯೆಯ ಕುಟುಂಬದ ಪುಟ್ಟ ಪ್ರಪಂಚವನ್ನು ಛಿದ್ರಗೊಳಿಸಿದವು. ಕೋಲ್ಕತ್ತಾ ಆಸ್ಪತ್ರೆಯಲ್ಲಿ … Continued

ದೀದಿಯತ್ತ ಯಾರಾದ್ರೂ ಬೆರಳು ತೋರಿಸಿದ್ರೆ ಬೆರಳು ಮುರಿಯ್ತೇವೆ ; ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಮಮತಾ ಬ್ಯಾನರ್ಜಿ ಸಂಪುಟದ ಸಚಿವ…!

ಕೋಲ್ಕತ್ತಾದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಹತ್ಯೆಯ ನಂತರ ಗೋಡೆಗೆ ತಳ್ಳಲ್ಪಟ್ಟ ಮಮತಾ ಬ್ಯಾನರ್ಜಿ ಸರ್ಕಾರವು ಸಾರ್ವಜನಿಕರ ಕೋಲಾಹಲಕ್ಕೆ ಪ್ರತಿಕ್ರಿಯೆ ನೀಡುತ್ತಿರುವ ರೀತಿ ಸರ್ಕಾರವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಇದಕ್ಕೆ ಮತ್ತೊಂದು ನಿರ್ದಶನದಲ್ಲಿ ಪಶ್ಚಿಮ ಬಂಗಾಳ ಸಚಿವ ಉದಯನ್ ಗುಹಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಬ್ಯಾನರ್ಜಿಯನ್ನು … Continued