ವೀಡಿಯೊಗಳು… | ಪ್ರಸಿದ್ಧ ಮಣಕುಲಂಗರ ದೇವಸ್ಥಾನ ಉತ್ಸವದ ವೇಳೆ ರೊಚ್ಚಿಗೆದ್ದ ಆನೆಗಳು; 3 ಸಾವು, 30 ಜನರಿಗೆ ಗಾಯ
ಕೋಝಿಕ್ಕೋಡ್: ಗುರುವಾರ ಸಂಜೆ ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ದೇವಸ್ಥಾನದ ಉತ್ಸವದ ವೇಳೆ ಎರಡು ಆನೆಗಳು ರೊಚ್ಚಿಗೆದ್ದು ನುಗ್ಗಿದ್ದರಿಂದ ಮೂವರು ಮೃತಪಟ್ಟು 30 ಮಂದಿ ಗಾಯಗೊಂಡ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಕೊಯಿಲಾಂಡಿ ಪ್ರದೇಶದ ಮಣಕುಲಂಗರ ದೇವಸ್ಥಾನದಲ್ಲಿ ಉತ್ಸವದ ಸಮಯದಲ್ಲಿ ಪಟಾಕಿಗಳನ್ನು ಜೋರಾಗಿ ಸಿಡಿಸಿದ್ದರಿಂದ ಪೀತಾಂಬರನ್ ಎಂಬ ಆನೆಯು ಗಾಬರಿಗೊಂಡು ಓಡಿದ ನಂತರ ನಂತರ ಘಟನೆ ಪ್ರಾರಂಭವಾಯಿತು. … Continued