ಪಿಆರ್ ಒ ವಿರುದ್ಧ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪ: ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

ಕುಂದಾಪುರ: ವಿದ್ಯಾರ್ಥಿನಿಯರಿಗೆ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿರುವ ವಿದ್ಯಾರ್ಥಿಗಳು ಅವರನ್ನು ತಕ್ಷಣವೇ ವಜಾಗೊಳಿಸಲು ಆಗ್ರಹಿಸಿ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಗುರುವಾರ (ಫೆ.24) ಪ್ರತಿಭಟನೆ ನಡೆಸಿದರು. ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ವಿದ್ಯಾರ್ಥಿನಿಯರಿಗೆ ರಾತ್ರಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿರುವ ವಿದ್ಯಾರ್ಥಿಗಳು ಈ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿದರೂ ಶಿಸ್ತು ಕ್ರಮ … Continued

ಕುಂದಾಪುರ: ಈಗ ಮತ್ತೊಂದು ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು

ಉಡುಪಿ: : ಹಿಜಾಬ್‌ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತೆಲೆ ಇದ್ದು, ದಿನದಿಂದ ದಿನಕ್ಕೆ ಉಡುಪಿ ಜಿಲ್ಲೆಯ ಹೊಸ ಹೊಸ ಕಾಲೇಜುಗಳಲ್ಲಿ ಈ ವಿವಾದ ಹಬ್ಬುತ್ತಿದೆ. ಜಿಲ್ಲೆಯ ಕುಂದಾಪುರದ ವೆಂಕಟರಮಣ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಮೆರವಣಿಗೆ ನಡೆಸಿದರು.ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳು ಕ್ಯಾಂಪಸ್‌ ಪ್ರವೇಶಿಸಲು ಯತ್ನಿಸಿದರು. ಈ ವೇಳೆ ಕೇಸರಿ … Continued

ಕುಂದಾಪುರದಲ್ಲಿ ತೀವ್ರಗೊಂಡ ಹಿಜಾಬ್‌ ವಿವಾದ: ಬೇರೆ ಕಾಲೇಜುಗಳಿಗೂ ವಿಸ್ತರಣೆ.. ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳ ಮೆರವಣಿಗೆ

ಉಡುಪಿ:ಕುಂದಾಪುರದಲ್ಲಿ ಹಿಜಾಬ್ ವಿವಾದ ಸಂಘರ್ಷ 4ನೇ ದಿನಕ್ಕೆ ಕಾಲಿಟ್ಟಿದ್ದು ಈಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕುಂದಾಪುರದಲ್ಲಿ ಹಿಜಬ್ ವಿವಾದ ಮುಂದುವರೆದಿದ್ದು, ಹಿಜಾಬ್ ಧರಿಸುವುದನ್ನು ವಿರೋಧಿಸಿ ಆರ್. ಎನ್. ಶೆಟ್ಟಿ ಮತ್ತು ಬಂಡಾರ್ಕಾರ್ಸ್ ಕಾಲೇಜಿವ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಮೆರವಣಿಗೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕುಂದಾಪುರದ ಆರ್‌.ಎನ್‌.ಶೆಟ್ಟಿ ಕಾಲೇಜಿಗೆ ಶನಿವಾರ ದಿಢೀರ್‌ ರಜೆ ಘೋಷಿಸಲಾಗಿದೆ ಎಂದು … Continued

ಮುಂದುವರಿದ ಹಿಜಾಬ್‌ ವಿವಾದ: ಕುಂದಾಪುರ ಕಾಲೇಜಿಗೆ ನಾಳೆ ರಜೆ

ಉಡುಪಿ: ಕುಂದಾಪುರ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್‌ ಮತ್ತು ಕೇಸರಿ ಶಲ್ಯ ವಿವಾದ ತಾರಕಕ್ಕೇರಿದ್ದು, ಕಾಲೇಜಿಗೆ ಶನಿವಾರ ರಜೆ ಘೋಷಿಸಲಾಗಿದೆ.  ಕಾಲೇಜಿನ ಪ್ರಾಂಶುಪಾಲರು ಈ ನಿರ್ಧಾರ ಕೈಗೊಂಡಿದ್ದಾರೆ. ಆಡಳಿತ ಮಂಡಳಿಯು ವಿದ್ಯಾರ್ಥಿಗಳನ್ನು ಕಾಲೇಜಿನ ಮೈದಾನದ ವರೆಗೆ ಮಾತ್ರ ಬಿಟ್ಟುಕೊಂಡಿದೆ. ಆದರೆ ತಮ್ಮನ್ನು ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ಕೊಡುವಂತೆ ಪ್ರಾಂಶುಪಾಲರನ್ನು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಇಂದು, ಶುಕ್ರವಾರ ತರಗತಿಗೆ … Continued

ಹಲವೆಡೆ ಗುಡುಗು ಸಹಿತ ಆಲಿಕಲ್ಲು ಮಳೆ

ಕುಂದಾಪುರ/ಹುಬ್ಬಳ್ಳಿ/ವಿಜಯಪುರ: ಕುಂದಾಪುರ ತಾಲೂಕಿನ ಹಲವಡೆ ಭಾನುವಾರ ಸಂಜೆ ಗಾಳಿ ಮಳೆಯಾಗಿದೆ. ಕೆಲವೆಡೆ ತೋಟದಲ್ಲಿ ಅಡಿಕೆ ಮರಗಳು, ಬಾಳೆ ಗಿಡಗಳು ಉರುಳಿಬಿದ್ದು ಅಪಾರ ಹಾನಿ ಸಂಭವಿಸಿದೆ.ಹಲವೆಡೆ ಆಲಿಕಲ್ಲುಗಳೂ ಬಿದ್ದಿವೆ. ಸಿದ್ದಾಪುರ, ಹೊಸಂಗಡಿ, ಹಳ್ಳಿಹೊಳೆ, ಅಜ್ರಿ, ಶಂಕರನಾರಾಯಣ, ಹಾಲಾಡಿ, ಗೋಳಿಯಂಗಡಿ, ಉಳ್ಳೂರು ಮೊದಲಾದೆಡೆ ಗುಡುಗು ಸಿಡಿಲು ಸಹಿತ ಮಳೆಯಾಗಿದೆ.ಗೋಳಿಯಂಗಡಿ ಪೇಟೆಯಲ್ಲಿ ಧಾರಾಕಾರ ಮಳೆ ಸುರಿದು ವಾರದ ಸಂತೆಗೆ ತೊಂದರೆಯಾಗಿತ್ತು. … Continued