46 ಭಾಷೆಗಳಲ್ಲಿ ಮಾತನಾಡುತ್ತಾರೆ….400 ಭಾಷೆಗಳಲ್ಲಿ ಪಾಂಡಿತ್ಯ ; 19 ವರ್ಷದ ಭಾರತದ ಅದ್ಭುತ ಪ್ರತಿಭೆ ಯಾರು ಗೊತ್ತೆ..?!

ಭಾರತದ ಹದಿಹರೆಯದ ವಿದ್ಯಾರ್ಥಿಯೊಬ್ಬ ತನ್ನ ಅದ್ಭುತ ಭಾಷಾ ಕೌಶಲ್ಯದಿಂದ ಎಲ್ಲರನ್ನು ಬೆರಗುಗೊಳಿಸಿದ್ದಾರೆ. 400 ಭಾಷೆಗಳನ್ನು ಅಧ್ಯಯನ ಮಾಡಿರುವ ಇವರು 46 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಮೂಲಕ ವಿಶ್ವ ದಾಖಲೆಗಳನ್ನು ಸ್ಥಾಪಿಸುತ್ತಿದ್ದಾರೆ. ಚೆನ್ನೈನ 19 ವರ್ಷದ ಮಹಮೂದ್ ಅಕ್ರಂ ಎಂಬವರೇ ಭಾರತದ ಈ ಭಾಷಾ ಪ್ರತಿಭೆ. ಅಕ್ರಂ ತಂದೆ ಸಹ ಭಾಷಾ ತಜ್ಞರು. ಹೀಗಾಗಿ ಚಿಕ್ಕ ವಯಸ್ಸಿನಲ್ಲೇ … Continued

ಕನ್ನಡ ನಾಮಫಲಕ ಹೋರಾಟ: ನಾರಾಯಣಗೌಡ ಹಲವು ಕರವೇ ಕಾರ್ಯಕರ್ತರಿಗೆ ಜ.10ರವರೆಗೆ ನ್ಯಾಯಾಂಗ ಬಂಧನ

ಬೆಂಗಳೂರು : ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಅಕ್ಷರಗಳಿರಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಅಂಗಡಿ-ಮುಂಗಟ್ಟುಗಳ ನಾಮಫಲಕ ಹರಿದು, ಕಲ್ಲು ತೂರಾಟ ನಡೆಸಿರುವ ಆರೋಪದಡಿ ಬಂಧಿತರಾಗಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ ಎ ನಾರಾಯಣ ಗೌಡ ಸೇರಿದಂತೆ ಬಂಧಿತ  ಕರವೇ ಕಾರ್ಯಕರ್ತರಿಗೆ ಬೆಂಗಳೂರಿನ ದೇವನಹಳ್ಳಿಯ ನ್ಯಾಯಾಲಯ ಜನವರಿ 10ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. … Continued

ಕೇಂದ್ರ ಸರ್ಕಾರ 22 ಭಾಷೆಗಳಿಗೆ ಸಮಾನ ಸ್ಥಾನಮಾನ ನೀಡಬೇಕು:ನಾಗಾಭರಣ

ಯಾದಗಿರಿ: ಕೇಂದ್ರ ಸರ್ಕಾರ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಹೇಳಿದಂತೆ 22 ಭಾಷೆಗಳಿಗೂ ಸಮಾನ ಅವಕಾಶ ಕೊಡಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ದೇಶದಲ್ಲಿ ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಿಗೆ ಅಗ್ರ ಸ್ಥಾನ ಕೊಡಲಾಗಿದೆ. ಅದೇ ತಮಿಳು ಭಾಷೆ ಬಿ.ಕೆಟಗೆರಿಯಲ್ಲಿ ಬರುವಲ್ಲಿ ಯಶಸ್ವಿಯಾಗಿದೆ. ಆದರೆ … Continued