ಪ್ರಧಾನಿ ಮೋದಿಗೆ ಎಚ್ಚರಿಕೆ ನೀಡಿದ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು

ನವದೆಹಲಿ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬುಧವಾರದ ನೀಡಿದ ಹೇಳಿಕೆ ವಿರುದ್ಧ ವಕೀಲರೊಬ್ಬರು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಅವರು ನೀಡಿದ ಹೇಳಿಕೆಯು ಪ್ರಚೋದನಕಾರಿ ಮತ್ತು ಅಶಾಂತಿ ಪ್ರಚೋದಿಸುವ ಉದ್ದೇಶ ಹೊಂದಿದೆ ಎಂದು ಅವರು ಆರೋಪಿಸಿದ್ದಾರೆ. ತೃಣಮೂಲ ಛಾತ್ರ ಪರಿಷತ್ತಿನ ಕಾರ್ಯಕ್ರಮವೊಂದರಲ್ಲಿ ಬ್ಯಾನರ್ಜಿ ನೀಡಿದ ಹೇಳಿಕೆಯನ್ನು ಕೇಂದ್ರವಾಗಿಟ್ಟುಕೊಂಡು ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿರುವ … Continued

ದೀದಿಯತ್ತ ಯಾರಾದ್ರೂ ಬೆರಳು ತೋರಿಸಿದ್ರೆ ಬೆರಳು ಮುರಿಯ್ತೇವೆ ; ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಮಮತಾ ಬ್ಯಾನರ್ಜಿ ಸಂಪುಟದ ಸಚಿವ…!

ಕೋಲ್ಕತ್ತಾದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಹತ್ಯೆಯ ನಂತರ ಗೋಡೆಗೆ ತಳ್ಳಲ್ಪಟ್ಟ ಮಮತಾ ಬ್ಯಾನರ್ಜಿ ಸರ್ಕಾರವು ಸಾರ್ವಜನಿಕರ ಕೋಲಾಹಲಕ್ಕೆ ಪ್ರತಿಕ್ರಿಯೆ ನೀಡುತ್ತಿರುವ ರೀತಿ ಸರ್ಕಾರವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಇದಕ್ಕೆ ಮತ್ತೊಂದು ನಿರ್ದಶನದಲ್ಲಿ ಪಶ್ಚಿಮ ಬಂಗಾಳ ಸಚಿವ ಉದಯನ್ ಗುಹಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಬ್ಯಾನರ್ಜಿಯನ್ನು … Continued

ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ : ಕೋಲ್ಕತ್ತಾ ಪೊಲೀಸ್‌ ಆಯುಕ್ತ, ಮಾಜಿ ಪ್ರಾಂಶುಪಾಲರ ‘ಕಸ್ಟಡಿ ವಿಚಾರಣೆ’ಗೆ ಟಿಎಂಸಿ ಸಂಸದ ಒತ್ತಾಯ

ಕೋಲ್ಕತ್ತಾ : ಕೋಲ್ಕತ್ತಾದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಕೋಲ್ಕತ್ತಾ ಪೊಲೀಸ್ ಕಮಿಷನರ್ ಅವರನ್ನು ಸಿಬಿಐ “ಕಸ್ಟಡಿ ವಿಚಾರಣೆ”ಗೆ ಒಳಪಡಿಸಬೇಕು ಎಂದು ಆಡಳಿತಾರೂಢ ಟಿಎಂಸಿ ಸಂಸದ ಸುಖೇಂದು ಶೇಖರ ರೇ ಅವರು ಒತ್ತಾಯಿಸಿದ್ದಾರೆ. ಅಲ್ಲದೆ, ಸಿಬಿಐ, ವೈದ್ಯಕೀಯ ಸಂಸ್ಥೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ … Continued

ನೀತಿ ಆಯೋಗದ ಸಭೆಯಲ್ಲಿ ಮಾತನಾಡುವಾಗ ನನ್ನ ಮೈಕ್‌ ಮ್ಯೂಟ್‌ ಎಂದು ಮಮತಾ ಆರೋಪ ; ಅದು ಸುಳ್ಳು ಎಂದ ಪಿಐಬಿ ಫ್ಯಾಕ್ಟ್‌ ಚೆಕ್‌

ನವದೆಹಲಿ: ಶನಿವಾರ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ತನಗೆ ಮಾತನಾಡಲು ಅವಕಾಶ ನೀಡಿಲ್ಲ ಹಾಗೂ ತಾನು ಮಾತನಾಡುವಾಗ ಮೈಕ್‌ ಸ್ವಿಚ್‌ ಆಫ್‌ ಮಾಡಲಾಗಿದೆ ಎಂದು ಆರೋಪಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಡಿರುವ ಆರೋಪ ಸುಳ್ಳು ಎಂದು ಪಿಐಬಿ ಫ್ಯಾಕ್ಟ್‌ ಚೆಕ್‌ (PIB Fact Check) ಹೇಳಿದೆ. ಪಿಐಬಿ … Continued

ನೀತಿ ಆಯೋಗದ ಸಭೆಗೆ ವಿಪಕ್ಷಗಳ 7 ಸಿಎಂಗಳು ಗೈರು : ಅಸಮಾಧಾನದಿಂದ ಅರ್ಧದಲ್ಲೇ ಎದ್ದು ಹೋದ ಮಮತಾ ಬ್ಯಾನರ್ಜಿ

ನವದೆಹಲಿ : ಇಂದಿನಿಂದ(ಜುಲೈ 27) ನಡೆಯುತ್ತಿರುವ ನೀತಿ ಆಯೋಗದ ೯ನೇ ಗವರ್ನಿಂಗ್ ಕೌನ್ಸಿಲ್ ಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ತಾರತಮ್ಯದ ಆರೋಪ ಹೊರಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸಭೆಯಿಂದ ಅರ್ಧದಲ್ಲೇ ಎದ್ದು ಹೊರಬಂದಿದ್ದಾರೆ. ನನಗೆ ಮಾತನಾಡಲು ಸಮಯ ನೀಡಲಿಲ್ಲ ಹಾಗೂ ನನ್ನ ಮೈಕ್ ಅನ್ನು ಆಫ್ ಮಾಡಲಾಯಿತು ಎಂದು ಸಭೆಯಿಂದ ಹೊರಬಂದ ನಂತರ … Continued

ವೀಡಿಯೊ…| ಪಶ್ಚಿಮ ಬಂಗಾಳದಲ್ಲಿ ‘ಬೀದಿ ನ್ಯಾಯʼದಲ್ಲಿ ನಡು ರಸ್ತೆಯಲ್ಲೇ ಮಹಿಳೆಗೆ ದೊಣ್ಣೆಯಿಂದ ಥಳಿತ ; ವಿಪಕ್ಷಗಳಿಂದ ಮಮತಾ ವಿರುದ್ಧ ವಾಗ್ದಾಳಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಅನಾಗರಿಕ ಘಟನೆಯಲ್ಲಿ ಜನಸಂದಣಿ ಮುಂದೆಯೇ ನಡು ರಸ್ತೆಯಲ್ಲಿಯೇ ವ್ಯಕ್ತಿಯೊಬ್ಬ ಮಹಿಳೆ ಸೇರಿದಂತೆ ಇಬ್ಬರನ್ನು ಥಳಿಸುತ್ತಿರುವ ದೃಶ್ಯದ ವೀಡಿಯೊ ವೈರಲ್‌ ಆಗಿದ್ದು, ಪಶ್ಚಿಮ ಬಂಗಾಳದ ಪ್ರತಿಪಕ್ಷಗಳು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ವಿಪಕ್ಷಗಳಾದ ಸಿಪಿಎಂ ಮತ್ತು ಬಿಜೆಪಿ ಈ ವೀಡಿಯೊ ಉತ್ತರ ಬಂಗಾಳದ ಉತ್ತರ ದಿನಾಜಪುರ … Continued

ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಪಶ್ಚಿಮ ಬಂಗಾಳ ರಾಜ್ಯಪಾಲ

ನವದೆಹಲಿ: ರಾಜಭವನದಲ್ಲಿ ನಡೆಯುತ್ತಿರುವ ಚಟುವಟಿಕೆಗಳಿಂದಾಗಿ ರಾಜಭವನಕ್ಕೆ ಹೋಗಲು ಭಯವಾಗುತ್ತಿದೆ ಎಂದು ಮಹಿಳೆಯರು ತಮ್ಮ ಮುಂದೆ ದೂರು ನೀಡಿದ್ದಾರೆ ಎಂದು ಹೇಳಿದ ಒಂದು ದಿನದ ಬಳಿಕ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಶುಕ್ರವಾರ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಇದೇ ರೀತಿಯ ಹೇಳಿಕೆಗಳಿಗಾಗಿ … Continued

ಕಾಂಗ್ರೆಸ್‌ ನಾಯಕ ಅಧೀರ್‌ ಹೇಳಿಕೆ ತಿರಸ್ಕರಿಸಿದ ನಂತರ ಪಶ್ಚಿಮ ಬಂಗಾಳ ಕಾಂಗ್ರೆಸ್ ಕಚೇರಿ ಮುಂದಿನ ಮಲ್ಲಿಕಾರ್ಜುನ ಖರ್ಗೆ ಪೋಸ್ಟರ್‌ಗಳಿಗೆ ಮಸಿ

ಕೋಲ್ಕತ್ತಾ : ಇಂಡಿಯಾ ಮೈತ್ರಿಕೂಟಕ್ಕೆ ಮಮತಾ ಬ್ಯಾನರ್ಜಿ ಅವರು ಸೇರುವ ಬಗ್ಗೆ ಅಧೀರ್ ರಂಜನ್ ಚೌಧರಿ ಅವರು ನಿರ್ಧಾರ ತೆಗೆದುಕೊಳ್ಳುವವರಲ್ಲ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ವಿರೋಧಿಸಿ ಖರ್ಗೆಯವರ ಚಿತ್ರಕ್ಕೆ ಕೋಲ್ಕತ್ತಾದಲ್ಲಿ ಮಸಿ ಬಳಿಯಲಾಗಿದೆ. ಕೋಲ್ಕತ್ತಾದಲ್ಲಿನ ಕಾಂಗ್ರೆಸ್ ರಾಜ್ಯ ಕಚೇರಿಯ ಮುಂಭಾಗದಲ್ಲಿದ್ದ ಹಲವು ಪೋಸ್ಟರ್ ಗಳಲ್ಲಿನ ಖರ್ಗೆ ಭಾವಚಿತ್ರಕ್ಕೆ ಮಸಿ ಬಳಿಯಲಾಗಿದೆ. … Continued

ಲೈಂಗಿಕ ದೌರ್ಜನ್ಯ ಆರೋಪ: ಜನಸಾಮಾನ್ಯರಿಗೆ ರಾಜಭವನದ ಸಿಸಿಟಿವಿ ದೃಶ್ಯಾವಳಿ ತೋರಿಸಿದ ಪಶ್ಚಿಮ ಬಂಗಾಳದ ರಾಜ್ಯಪಾಲ

ಕೋಲ್ಕತ್ತಾ: ರಾಜಭವನದ ಮಹಿಳಾ ಉದ್ಯೋಗಿಯೊಬ್ಬರು ತಮ್ಮ ವಿರುದ್ಧ ಕಿರುಕುಳದ ಆರೋಪ ಹೊರಿಸಿದ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಗುರುವಾರ ಮೇ 2ರ ರಾಜಭವನದ ಸಿಸಿಟಿವಿ ದೃಶ್ಯಾವಳಿಗಳನ್ನು ಜನಸಾಮಾನ್ಯರಿಗೆ ತೋರಿಸಿದ್ದಾರೆ. ಮೇ 2ರ ಸಂಜೆ 5:30ರ ಸಮಯದ ಮುಖ್ಯ (ಉತ್ತರ) ಗೇಟ್‌ನಲ್ಲಿರುವ ಎರಡು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ರಾಜಭವನದ ನೆಲ ಮಹಡಿಯಲ್ಲಿರುವ … Continued

ಮಮತಾ ಬ್ಯಾನರ್ಜಿ ಹಣೆಗೆ ದೊಡ್ಡ ಗಾಯ : ಹೊಲಿಗೆ ಹಾಕಿದ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮನೆಯಲ್ಲಿ ಬಿದ್ದ ಪರಿಣಾಮ ಅವರ ಹಣೆಗೆ ದೊಡ್ಡ ಗಾಯವಾಗಿದೆ. ಅವರ ಹಣೆಗೆ ಹೊಲಿಗೆ ಹೊಲಿಗೆ ಹಾಕಿದ್ದು, ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಗತ್ಯ ಪರೀಕ್ಷೆಗಳನ್ನು ನಡೆಸಿದ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಅವರ ನಿವಾಸಕ್ಕೆ ಕರೆದೊಯ್ಯಲಾಯಿತು. ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಮತ್ತು ಇತರ ಕುಟುಂಬ ಸದಸ್ಯರು … Continued