ತಮ್ಮ ತಂದೆಯ 45339 ಕೋಟಿ ರೂ. ಮೌಲ್ಯದ ಉದ್ಯಮ ಸಾಮ್ರಾಜ್ಯ ತ್ಯಜಿಸಿ ಸನ್ಯಾಸಿ ಜೀವನ ಆಯ್ಕೆ ಮಾಡಿಕೊಂಡ ಅಜಾನ್ ಸಿರಿಪಾನ್ಯೊ…!

ಮಲೇಷ್ಯಾದ ಉದ್ಯಮಿ ಆನಂದ ಕೃಷ್ಣನ್ ಅವರ ಪುತ್ರ ವೆನ್ ಅಜಾನ್ ಸಿರಿಪಾನ್ಯೊ ಅವರು ನಿರೀಕ್ಷಿಸಿದ್ದಕ್ಕಿಂತ ವಿಭಿನ್ನವಾದ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆನಂದ ಕೃಷ್ಣನ್ ಅವರು ಸರಿಸುಮಾರು ₹45,339 ಕೋಟಿ ನಿವ್ವಳ ಸಂಪತ್ತನ್ನು ಹೊಂದಿರುವ ಉದ್ಯಮಿಯಾಗಿದ್ದಾರೆ. ಅವರು ಟೆಲಿಕಾಂ, ಮಾಧ್ಯಮ, ತೈಲ, ಅನಿಲ, ರಿಯಲ್ ಎಸ್ಟೇಟ್ ಮತ್ತು ಉಪಗ್ರಹಗಳನ್ನು ವ್ಯಾಪಿಸಿರುವ ಉದ್ಯಮ ಸಾಮ್ರಾಜ್ಯವನ್ನು ಹೊಂದಿರುವ ಮಲೇಷ್ಯಾದ ಶ್ರೀಮಂತ … Continued

ವೀಡಿಯೊ..| 22 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕ ಈಗ ಸನ್ಯಾಸಿಯಾಗಿ ತಾಯಿ ಬಳಿಗೆ ಬಂದ: ಬಂದವ ಹೊರಟು ಹೋದ : ಯಾಕೆ ? ಅದೇ ಸ್ವಾರಸ್ಯ…

ನವದೆಹಲಿ : ನಾಪತ್ತೆಯಾಗಿದ್ದ ಮಗ, ಎರಡು ದಶಕಗಳ ನಂತರ ವಾಪಸ್ಸಾಗಿದ್ದು ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಗ್ರಾಮವೊಂದರಲ್ಲಿ ತಲ್ಲಣಕ್ಕೆ ಕಾರಣವಾಗಿದೆ. 22 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 11 ವರ್ಷದ ಬಾಲಕ ಈಗ ಸನ್ಯಾಸಿಯಾಗಿ ಗ್ರಾಮಕ್ಕೆ ಮರಳಿದ್ದು, ಎಲ್ಲರಿಗೂ ದಿಗ್ಭ್ರಮೆಗೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೀಡಿಯೊವು ತಾಯಿ ಮತ್ತು ಮಗನ ನಡುವಿನ ಭಾವನಾತ್ಮಕ ಪುನರ್ಮಿಲನವನ್ನು ತೋರಿಸುತ್ತದೆ. … Continued