ನನ್ನ ಭೇಟಿಗೆ ಬರುವ ಜನರು ಆಧಾರ ಕಾರ್ಡ್‌ ತರಬೇಕು ಎಂದ ಸಂಸದೆ ಕಂಗನಾ ರಣಾವತ್‌ ; ಕಾಂಗ್ರೆಸ್‌ ಟೀಕೆ

ಶಿಮ್ಲಾ : ಹಿಮಾಚಲ ಪ್ರದೇಶದ ಮಂಡಿಯ ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ತಮ್ಮನ್ನು ಭೇಟಿಯಾಗಲು ಬರುವವರು ಕಡ್ಡಾಯವಾಗಿ ಆಧಾರ್​ ಕಾರ್ಡ್​ ತೆಗೆದುಕೊಂಡು ಬರಬೇಕು ಎಂದು ಹೇಳಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಕಂಗನಾ ರಣಾವತ್‌, ಯಾವುದೇ ಅನಾನುಕೂಲತೆ ಆಗದಂತೆ ನೋಡಿಕೊಳ್ಳಲು ಭೇಟಿಗೆ ಬರುವವರು ಆಧಾರ್​ ಕಾರ್ಡ್​ ತೆಗೆದುಕೊಂಡು ಬರಬೇಕು. … Continued

23 ಸಂಸದರ ಆಸ್ತಿ 15 ವರ್ಷಗಳಲ್ಲಿ ಸರಾಸರಿ 1,045%ರಷ್ಟು ಏರಿಕೆ : ಕರ್ನಾಟಕದ ಯಾವ ಸಂಸದರ ಆಸ್ತಿಯಲ್ಲಿ ಏರಿಕೆ ?

ನವದೆಹಲಿ : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಕಳೆದ ಇಪ್ಪತ್ತು ವರ್ಷಗಳಲ್ಲಿ ಆಸ್ತಿ ಹೆಚ್ಚಿಸಿಕೊಂಡ ಸಂಸದರ ಪಟ್ಟಿ ಬಹಿರಂಗವಾಗಿದೆ. ವರದಿಯೊಂದರ ಪ್ರಕಾರ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೇನಕಾ ಗಾಂಧಿ ಸೇರಿದಂತೆ 2004ರಿಂದ ಪುನರಾಯ್ಕೆಗೊಳ್ಳುತ್ತಿರುವ 23 ಸಂಸದರ ಒಟ್ಟಾರೆ ಆಸ್ತಿ ಮೌಲ್ಯವು 35.18 ಕೋಟಿ ರೂ.ಗಳಿಂದ 402.79 ಕೋಟಿರೂ.ಗಳಿಗೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ. ಅಸೋಸಿಯೇಷನ್‌ … Continued

ಬಿಎಸ್​ವೈ-ಬಿಜೆಪಿ ಹೈಕಮಾಂಡ್ ನಡುವೆ 2 ವರ್ಷದ ಒಪ್ಪಂದ ಆಗಿತ್ತು. ಇದು ಬಿಜೆಪಿ ಸಂಸದರೇ ಹೊರಹಾಕಿದ ಮಾಹಿತಿ

ಚಾಮರಾಜನಗರ: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಕ್ಷಣಕ್ಕೊಂದು ಹೊಸ ಬೆಳವಣಿಗೆ ಕಾಣುತ್ತಿದೆ. ಶುಕ್ರವಾರ ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ ಈಗ ಮತ್ತೊಂದು ಮಾಹಿತಿ ಹೊರಹಾಕಿದ್ದಾರೆ. ಮುಖ್ಯಮಂತ್ರಿ ಸ್ಥಾನ ಕುರಿತು ಹೈಕಮಾಂಡ್ ಮತ್ತು ಬಿ.ಎಸ್​.ಯಡಿಯೂರಪ್ಪ ನಡುವೆ 2 ವರ್ಷಕ್ಕೆ ಒಪ್ಪಂದ ಆಗಿತ್ತು. ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಾಗಲೇ ಈ ಒಪ್ಪಂದ … Continued

ಸಿಡಿಲು ಬಡಿದು ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶದಲ್ಲಿ 68 ಮಂದಿ ಸಾವು

ನವದೆಹಲಿ: ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನದಾದ್ಯಂತ ಭಾನುವಾರ ನಡೆದ ಸಿಡಿಲು ಬಡಿದ ಘಟನೆಗಳಲ್ಲಿ ಒಟ್ಟು 68 ಜನರು ಮೃತಪಟ್ಟಿದ್ದಾರೆ. ಉತ್ತರಪ್ರದೇಶದಲ್ಲಿ ಸಿಡಿಲು ಬಡಿದು ಮೃತಪಟ್ಟವರ ಸಂಖ್ಯೆ ಸೋಮವಾರ 41 ಕ್ಕೆ ಏರಿದರೆ, ಮಧ್ಯಪ್ರದೇಶದಲ್ಲಿ ಏಳು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ರಾಜಸ್ಥಾನದಲ್ಲಿ ಭಾನುವಾರ ಸಿಡಿಲು ಬಡಿದು 20 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಏಳು ಮಂದಿ … Continued

ಪಶ್ಚಿಮ ಬಂಗಾಳ ಚುನಾವಣೆ: ಅಚ್ಚರಿ ನೀಡಿದ ಬಿಜೆಪಿ, ನಾಲ್ವರು ಸಂಸದರಿಗೆ ಟಿಕೆಟ್‌

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿಯು 27 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು , ಮೂವರು ಹಾಲಿ ಲೋಕಸಭಾ ಸದಸ್ಯರು ಮತ್ತು ಒಬ್ಬ ರಾಜ್ಯಸಭಾ ಸದಸ್ಯರನ್ನು ಕಣಕ್ಕಿಳಿಸುವ ಮೂಲಕ ಅಚ್ಚರಿಯನ್ನುಂಟು ಮಾಡಿದೆ. ದಕ್ಷಿಣ ಕೊಲ್ಕತ್ತಾದ ಟೋಲಿಗುಂಗ್ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿಯಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಅರೂಪ್ ಬಿಸ್ವಾಸ್ ವಿರುದ್ಧ ಹಾಲಿ ಕೇಂದ್ರ ಸಚಿವ … Continued

ಸಂಸದರು, ಸಚಿವರು, ಶಾಸಕರಿಗೆ ಹೊಸ ಕಾರು ಖರೀದಿಗೆ ಸರ್ಕಾರದ ಸಮ್ಮತಿ..!

ಬೆಂಗಳೂರು: ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ನೆಪವೊಡ್ಡುವ ರಾಜ್ಯ ಸರ್ಕಾರ ಇಂತಹ ಸಂದರ್ಭದಲ್ಲೂ ಸಚಿವರು ಮತ್ತು ಶಾಸಕರಿಗಾಗಿ ಹೊಸ ಕಾರುಗಳ ಖರೀದಿಗೆ ಅನುಮತಿ ನೀಡಿದೆ. 32 ಸಚಿವರು ಹಾಗೂ 28 ಸಂಸದರಿಗೆ ತಲಾ 23 ಲಕ್ಷ ರೂ.ಗಳಂತೆ ಹೊಸ ಕಾರುಗಳನ್ನು ಖರೀದಿಸಲು ಸಮ್ಮತಿಸಿದೆ. ವಿಶೇಷವೆಂದರೆ ಈ ಹಿಂದೆ ಇದೇ ಕಾರುಗಳನ್ನು ಖರೀದಿಸಲು 21 ಲಕ್ಷ ರೂ.ಗಳನ್ನು ನಿಗದಿಪಡಿಸಲಾಗಿತ್ತು. … Continued