ಮೈಸೂರು: ವಾಕಿಂಗ್‌ ವೇಳೆ ನಿವೃತ್ತ ಐಬಿ ಅಧಿಕಾರಿ ಮೇಲೆ ವಾಹನ ಹಾಯಿಸಿ ಪರಾರಿ, ಕೊಲೆ ಶಂಕೆ

ಮೈಸೂರು: ಮೈಸೂರಿನಲ್ಲಿ ಕೇಂದ್ರ ಇಂಟೆಲಿಜೆನ್ಸ್ ಬ್ಯೂರೊದ ‌ನಿವೃತ್ತ ಅಧಿಕಾರಿಯೋರ್ವರು ಹಿಟ್‌ & ರನ್‌ ಪ್ರಕರಣದಲ್ಲಿ ಮೃತಪಟ್ಟಿದ್ದಾರೆ. ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್‌ನ ಕಂಪ್ಯೂಟರ್ ಸೈನ್ಸ್ ವಿಭಾಗದ ಪಕ್ಕದ ರಸ್ತೆಯಲ್ಲಿ ಕುಲಕರ್ಣಿಯವರು ವಾಕಿಂಗ್ ಮಾಡುತ್ತಿದ್ದಾಗ ಇದು ಸಂಭವಿಸಿದ್ದು, 83 ವರ್ಷದ ಕೇಂದ್ರ ಇಂಟೆಲಿಜೆನ್ಸ್ ಬ್ಯೂರೊದ ‌ನಿವೃತ್ತ ಅಧಿಕಾರಿ ಆರ್.ಎಸ್.ಕುಲಕರ್ಣಿ ಎಂಬವರನ್ನು ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. … Continued

ಶೀಲ ಶಂಕಿಸಿ ಪತ್ನಿಯ ರುಂಡ-ಮುಂಡ ಬೇರ್ಪಡಿಸಿದ ಪತಿ…!

ಮೈಸೂರು : ಪತ್ನಿಯ ಶೀಲ ಶಂಕಿಸಿ ಪತಿ ಮಹಾಶಯ ಪತ್ನಿಯ ರುಂಡಮುಂಡ ಬೇರೆಯಾಗುವಂತೆ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನ ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯ ಚೆಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪುಟ್ಟಮ್ಮ(40) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಪರಾರಿಯಾಗಿರುವ ಆರೋಪಿ ಪತಿ ದೇವರಾಜ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮೊದಲ ಹೆಂಡತಿಯನ್ನೂ ಸಹ ಕೊಲೆ ಮಾಡಲು ಯತ್ನಿಸಿ … Continued

ಕಾಂಗ್ರೆಸ್‌ ಜೆಡಿಎಸ್‌ ಬಿ ಟೀಮ್‌ ಎಂಬುದು ಮೈಸೂರು ಪಾಲಿಕೆಯಲ್ಲಿ ಸಾಬೀತು

ಹಗರಿಬೊಮ್ಮನಹಳ್ಳಿ: ‘ಕರ್ನಾಕದಲ್ಲಿ ಕಾಂಗ್ರೆಸ್ ಪಕ್ಷವು ಜೆಡಿಎಸ್ ಪಕ್ಷದ ‘ಬಿ’ ಟೀಮ್ ಎನ್ನುವುದು ಮೈಸೂರು ಮಹಾನಗರ ಪಾಲಿಕೆ ಮೇಯರ್‌ ಆಯ್ಕೆ ವಿಚಾರದಲ್ಲಿ ಸಾಬೀತಾಗಿದೆ’ ಎಂದು ರಾಜ್ಯದ ಸಮಾಜ‌ ಕಲ್ಯಾಣ ಖಾತೆ ಸಚಿವ ಬಿ. ಶ್ರೀರಾಮುಲು ಹೇಳಿದರು. ನೂತನ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಉಪನಾಯಕನಹಳ್ಳಿ ಬಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ … Continued