ವಕ್ಫ್ ತಿದ್ದುಪಡಿ ಕಾಯ್ದೆ ಏಪ್ರಿಲ್ 8ರಿಂದ ಜಾರಿಗೆ

ನವದೆಹಲಿ : ಕಳೆದ ವಾರ ಸಂಸತ್ತು ಅಂಗೀಕರಿಸಿದ ವಕ್ಫ್ (ತಿದ್ದುಪಡಿ) ಕಾಯ್ದೆ ಏಪ್ರಿಲ್ 8ರಿಂದ ಜಾರಿಗೆ ಬಂದಿದೆ ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಅಧಿಸೂಚನೆಯಲ್ಲಿ, “ವಕ್ಫ್ (ತಿದ್ದುಪಡಿ) ಕಾಯ್ದೆ-2025 (2025 ರ 14) ರ ಸೆಕ್ಷನ್ 1 ರ ಉಪವಿಭಾಗ (2) ರಿಂದ ನೀಡಲಾದ ಅಧಿಕಾರವನ್ನು ಚಲಾಯಿಸಿ, ಕೇಂದ್ರ ಸರ್ಕಾರವು ಈ … Continued

ರಾಜ್ಯಸಭೆಯಲ್ಲೂ ಅಂಗೀಕಾರಗೊಂಡ ವಕ್ಫ್ ತಿದ್ದುಪಡಿ ಮಸೂದೆ -2025

ನವದೆಹಲಿ: ಸುದೀರ್ಘ 13 ತಾಸುಗಳ ಚರ್ಚೆಯ ನಂತರ ವಕ್ಫ್ ತಿದ್ದುಪಡಿ ಮಸೂದೆ -2025 ಶುಕ್ರವಾರ ಬೆಳಗಿನ ಜಾವ 2: 30ರ ಸುಮಾರಿಗೆ ರಾಜ್ಯಸಭೆಯಲ್ಲಿಯೂ ಅಂಗೀಕಾರವಾಗಿದೆ. ಇದು ರಾಜ್ಯಸಭೆಯಲ್ಲಿ 128-95 ಮತಗಳಿಂದ ಅಂಗೀಕಾರಗೊಂಡಿದೆ. ಸುದೀರ್ಘ ಚರ್ಚೆಯ ನಂತರ ಇಇದು ಗುರುವಾರ ಮುಂಜಾನೆ (ಏಪ್ರಿಲ್ 3) ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತು. ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆಯ ಪರವಾಗಿ 288 ಮತಗಳು … Continued

ವಕ್ಫ್ ತಿದ್ದುಪಡಿ ಮಸೂದೆ : ಲೋಕಸಭೆಯಲ್ಲಿ ಅಂಗೀಕಾರದ ನಂತರ ಇಂದು ರಾಜ್ಯಸಭೆಯತ್ತ ಎಲ್ಲರ ಕಣ್ಣು; ಪಕ್ಷಗಳ ಬಲಾಬಲ ಹೇಗಿದೆ…?

ನವದೆಹಲಿ : ಲೋಕಸಭೆಯು ಬುಧವಾರ ಮಧ್ಯರಾತ್ರಿ ವಕ್ಫ್ (ತಿದ್ದುಪಡಿ) ಮಸೂದೆ 2025ಕ್ಕೆ ಅಂಗೀಕಾರ ನೀಡಿದ್ದು, ಇಂದು ರಾಜ್ಯಸಭೆಯತ್ತ ಎಲ್ಲರ ಚಿತ್ತವಿದೆ. ಲೋಕಸಭೆಯಲ್ಲಿ ಮಸೂದೆಯ ಪರವಾಗಿ 288 ಮತ್ತು ವಿರುದ್ಧವಾಗಿ 232 ಮತಗಳು ಬಂದವು. 100 ಕ್ಕೂ ಹೆಚ್ಚು ತಿದ್ದುಪಡಿಗಳನ್ನು ವಿಪಕ್ಷದ ಸದಸ್ಯರು ಪ್ರಸ್ತಾಪಿಸಿದರು, ಆದರೆ ಮತದಾನದ ಸಮಯದಲ್ಲಿ ಎಲ್ಲವನ್ನೂ ತಿರಸ್ಕರಿಸಲಾಯಿತು. ಚರ್ಚೆಯ ಸಂದರ್ಭದಲ್ಲಿ, ಸರ್ಕಾರವು ಮಸೂದೆಯನ್ನು … Continued

ಸುದೀರ್ಘ ಚರ್ಚೆಯ ನಂತರ ಮಧ್ಯರಾತ್ರಿ ವಕ್ಫ್ (ತಿದ್ದುಪಡಿ) ಮಸೂದೆ 2024 ಅಂಗೀಕರಿಸಿದ ಲೋಕಸಭೆ

ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆಯನ್ನು ಬುಧವಾರ ಮಧ್ಯರಾತ್ರಿ  2 ಗಂಟೆಗೆ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು, ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ತಮ್ಮ ವಾದವನ್ನು ಮಂಡಿಸಿದ 12 ಗಂಟೆಗಳ ಬಿಸಿ ಚರ್ಚೆಯ ನಂತರ ಮಸೂದೆಯ ಪರವಾಗಿ 288 ಮತ್ತು ವಿರುದ್ಧ 232 ಮತಗಳು ಚಲಾವಣೆಯಾದವು. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ ರಿಜಿಜು ಅವರು ಬುಧವಾರ ಬೆಳಗ್ಗೆ ಲೋಕಸಭೆಯಲ್ಲಿ ಮಸೂದೆಯನ್ನು … Continued

100 ವರ್ಷಗಳಲ್ಲಿ ವಕ್ಫ್ ಮಂಡಳಿಗಳ ಬಳಿ 18 ಲಕ್ಷ ಎಕರೆ ಭೂಮಿ ಇತ್ತು… ಕಳೆದ 12 ವರ್ಷಗಳಲ್ಲಿ 21 ಲಕ್ಷ ಎಕರೆಗಳು ಅದಕ್ಕೆ ಸೇರ್ಪಡೆ ; ಲೋಕಸಭೆಯಲ್ಲಿ ಅಮಿತ್‌ ಶಾ

ನವದೆಹಲಿ : ಭಾರತದಲ್ಲಿ ವಕ್ಫ್ ಆಸ್ತಿಯ ಇತಿಹಾಸವು 12 ನೇ ಶತಮಾನದ ಕೊನೆಯಲ್ಲಿ ಎರಡು ಗ್ರಾಮಗಳೊಂದಿಗೆ ಪ್ರಾರಂಭವಾಯಿತು ಮತ್ತು ಈಗ 39 ಲಕ್ಷ ಎಕರೆಗಳಿಗೆ ಬೆಳೆದಿದೆ. ಭಾರತದಲ್ಲಿ ವಕ್ಫ್ ಮಂಡಳಿಗಳ ಅಡಿಯಲ್ಲಿ ಒಟ್ಟು ಭೂಮಿ ಕಳೆದ 12 ವರ್ಷಗಳಲ್ಲಿ ದ್ವಿಗುಣಗೊಂಡಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ಬುಧವಾರ ಸಂಜೆ ಗೃಹ ಸಚಿವ ಅಮಿತ್ ಶಾ ಅವರು ವಕ್ಫ್ … Continued

ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ-2024 ಮಂಡನೆ ; ಮಸೂದೆಯ ಪ್ರಮುಖ ಬದಲಾವಣೆ ಸೆಕ್ಷನ್ 40ರ ರದ್ದತಿ ; ಇತರ ಪ್ರಮುಖ ಅಂಶಗಳೆಂದರೆ…

ನವದೆಹಲಿ : ವಿಪಕ್ಷಗಳ ಆಕ್ಷೇಪ ಹಾಗೂ ಭಾರೀ ಗದ್ದಲದ ನಡುವೆ ವಕ್ಫ್ (ತಿದ್ದುಪಡಿ) ಮಸೂದೆ-2024 ಲೋಕಸಭೆಯಲ್ಲಿ ಬುಧವಾರ ಮಂಡನೆಯಾಗಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರೆನ್‌ ರಿಜಿಜು ಲೋಕಸಭೆ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಮಸೂದೆ ಮಂಡಿಸಿದರು. ವಕ್ಫ್ ಆಸ್ತಿಗಳ ನಿಯಂತ್ರಣಕ್ಕಾಗಿ 1995ರ ವಕ್ಫ್ ಕಾಯಿದೆಯನ್ನು ತಿದ್ದುಪಡಿ ಮಾಡುವ ಮಸೂದೆಯನ್ನು ಮೊದಲ ಬಾರಿಗೆ ಆಗಸ್ಟ್ 2024ರಲ್ಲಿ ಲೋಕಸಭೆಯಲ್ಲಿ … Continued

ಪರಿಷ್ಕೃತ ವಕ್ಫ್ ಮಸೂದೆಗೆ ಸಂಪುಟದ ಅನುಮೋದನೆ ; ಬಜೆಟ್ ಅಧಿವೇಶನದ ದ್ವಿತೀಯಾರ್ಧದಲ್ಲಿ ಮಂಡನೆಗೆ ಸರ್ಕಾರದ ಸಿದ್ಧತೆ ; ಮೂಲಗಳು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ತನ್ನ ಇತ್ತೀಚಿನ ಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ, 2024 ಕ್ಕೆ ತನ್ನ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಫೆಬ್ರವರಿ 13 ರಂದು ಸಂಸತ್ತಿನಲ್ಲಿ ಮಂಡಿಸಲಾದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವರದಿಯ ಆಧಾರದ ಮೇಲೆ ಕೇಂದ್ರ ಸಚಿವ ಸಂಪುಟವು ವಕ್ಫ್ (ತಿದ್ದುಪಡಿ) ಮಸೂದೆಯನ್ನು … Continued

ಈಗ ಲೋಕಸಭೆ ಚುನಾವಣೆ ನಡೆದರೆ ಗೆಲ್ಲೋದು ಬಿಜೆಪಿ ಮೈತ್ರಿಕೂಟವೋ-ಕಾಂಗ್ರೆಸ್‌ ಮೈತ್ರಿಕೂಟವೋ ; ಮೂಡ್ ಆಫ್ ದಿ ನೇಷನ್ ಸರ್ವೆ ಹೇಳಿದ್ದೇನು..?

ಈಗ ಲೋಕಸಭೆ ಚುನಾವಣೆ ನಡೆದರೆ ಎನ್‌ಡಿಎ ಪ್ರಬಲ ಪ್ರದರ್ಶನ ನೀಡಲಿದ್ದು, 343 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಇಂಡಿಯಾ ಟುಡೇ-ಸಿ ವೋಟರ್ ಮೂಡ್ ಆಫ್ ದಿ ನೇಷನ್ ಅಭಿಪ್ರಾಯ ಸಮೀಕ್ಷೆಯ ಹೇಳಿದೆ. 2024ರ ಲೋಕಸಭೆ ಚುನಾವಣೆಯಲ್ಲಿ 232 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಈಗ ಚುನಾವಣೆ ನಡೆದರೆ 188 ಸ್ಥಾನಗಳಿಗೆ ಕುಸಿಯಲಿದೆ ಎಂದು … Continued

ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ; ವಕ್ಫ್ (ತಿದ್ದುಪಡಿ) ಮಸೂದೆಗೆ ಸರ್ಕಾರದ ಆದ್ಯತೆ ; ಮಣಿಪುರ ಬಿಕ್ಕಟ್ಟು ಪ್ರಸ್ತಾಪಕ್ಕೆ ವಿಪಕ್ಷಗಳ ಚಿಂತನೆ

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಇಂದಿನಿಂದ (ನವೆಂಬರ್‌ 25) ಆರಂಭವಾಗಿದ್ದು, ಮೂರು ಪ್ರಮುಖ ಮಸೂದೆಗಳನ್ನು ನಿಗದಿಪಡಿಸಲಾಗಿದೆ. ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಬೃಹತ್ ವಿಜಯದ ನೆರಳಿನಲ್ಲೇ ಈ ಅಧಿವೇಶನವು ನಡೆಯುತ್ತಿದೆ. ಅಧಿವೇಶನದಲ್ಲಿ ವಕ್ಫ್ ಕಾಯ್ದೆ (ತಿದ್ದುಪಡಿ) ಮಸೂದೆ ಸೇರಿದಂತೆ ಹಲವು ವಿಧೇಯಕಗಳ ಕುರಿತು ಚರ್ಚೆ ನಡೆಸುವ ನಿರೀಕ್ಷೆಯಿದೆ. ಅಲ್ಲದೆ, ಮಣಿಪುರದ ಹಿಂಸಾಚಾರ, ಉತ್ತರ ಭಾರತದಲ್ಲಿ … Continued

ಮಹಾರಾಷ್ಟ್ರದಲ್ಲಿ 235 ಕ್ಷೇತ್ರಗಳಲ್ಲಿ ಗೆದ್ದು ದಾಖಲೆ ಬರೆದ ʼಮಹಾಯುತಿʼ ; ಜಾರ್ಖಂಡ್‌ನಲ್ಲಿ 56 ಸ್ಥಾನಗಳಲ್ಲಿ ಗೆದ್ದ ಇಂಡಿಯಾ ಮೈತ್ರಿಕೂಟ

ನವದೆಹಲಿ: ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ 235 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ‘ಪ್ರಚಂಡ’ ಗೆಲುವು ಸಾಧಿಸಿದೆ. ಜಾರ್ಖಂಡ್ ನಲ್ಲಿ ಇಂಡಿಯಾ ಮೈತ್ರಿಕೂಟ (INDIA bloc) 56 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಇಲ್ಲಿ ಬಿಜೆಪಿಗೆ ಮುಖಭಂಗವಾಗಿದೆ. ಮಹಾರಾಷ್ಟ್ರದ ಒಟ್ಟು 288 ಕ್ಷೇತ್ರಗಳಲ್ಲಿ ಮಹಾಯುತಿ ಮೈತ್ರಿಕೂಟ 235  ಕ್ಷೇತ್ರಗಳಲ್ಲಿ … Continued