ಆಭರಣ ಅಂಗಡಿಗೆ ಬಂದು ಚಿನ್ನದ ಸರ ಕಚ್ಚಿಕೊಂಡು ಹೋದ ಪಾರಿವಾಳ…!

ನಾಗೌರ್ (ರಾಜಸ್ಥಾನ): ಇಲ್ಲಿನ ದೇಗಾನಾ ಪಟ್ಟಣದ ಚಿನಿವಾರ ಪೇಟೆಯಲ್ಲಿ ಗುರುವಾರ ಅತ್ಯಂತ ವಿಲಕ್ಷಣ ಘಟನೆಯೊಂದು ನಡೆದಿದೆ. ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಪಾರಿವಾಳವೊಂದು ತನ್ನ ಕೊಕ್ಕಿನಲ್ಲಿ ಕಚ್ಚಿಕೊಂಡು ಹಾರಿಹೋದ ಘಟನೆ ನಡೆದಿದೆ. ದೇಗಾನಾ ಬುಲಿಯನ್ ಮಾರ್ಕೆಟ್‌ನಲ್ಲಿರುವ ಚಿನ್ನಾಭರಣ ಮಳಿಗೆಯೊಂದರ ಮೇಲಿನ ಮಹಡಿಯಲ್ಲಿ ಕುಶಲಕರ್ಮಿಗಳು ಚಿನ್ನದ ಆಭರಣಗಳನ್ನು ತಯಾರಿಸುವ ಕೆಲಸದಲ್ಲಿ ನಿರತರಾಗಿದ್ದರು. ಈ … Continued

ಜಮ್ಮು ರೈಲು ನಿಲ್ದಾಣ ಸ್ಫೋಟಿಸುವ ಬೆದರಿಕೆ ಪತ್ರವನ್ನು ಉಗುರುಗಳಿಗೆ ಕಟ್ಟಿದ್ದ ಪಾರಿವಾಳದ ಸೆರೆ ಹಿಡಿದ ಭದ್ರತಾ ಪಡೆಗಳು…!

ಜಮ್ಮು: ಆಘಾತಕಾರಿ ಘಟನೆಯೊಂದರಲ್ಲಿ, ಜಮ್ಮು ಜಿಲ್ಲೆಯ ಆರ್‌.ಎಸ್. ಪುರದ ಅಂತಾರಾಷ್ಟ್ರೀಯ ಗಡಿಯಲ್ಲಿ (ಐಬಿ) ಉಗುರುಗಳಿಗೆ ಕಟ್ಟಲಾದ ಬೆದರಿಕೆ ಪತ್ರವಿದ್ದ ಪಾರಿವಾಳವನ್ನು ಭದ್ರತಾ ಪಡೆಗಳು ಸೆರೆಹಿಡಿದಿವೆ. ಆಗಸ್ಟ್ 18 (ಸೋಮವಾರ) ರಾತ್ರಿ 9:00 ಗಂಟೆ ಸುಮಾರಿಗೆ ಕಟ್ಮರಿಯಾ ಪ್ರದೇಶದಲ್ಲಿ ಈ ಪಕ್ಷಿಯನ್ನು ಸೆರೆ ಹಿಡಿಯಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಉರ್ದು ಮತ್ತು ಇಂಗ್ಲಿಷ್ ಎರಡರಲ್ಲೂ ಬರೆಯಲಾದ ಚೀಟಿಯಲ್ಲಿ, … Continued