ಬೆಂಗಳೂರು ಐಐಎಸ್‌ಸಿಯಲ್ಲಿ ಮೆದುಳು ಸಂಶೋಧನಾ ಕೇಂದ್ರ ಉದ್ಘಾಟಿಸಿದ ಪ್ರಧಾನಿ ಮೋದಿ

ಬೆಂಗಳೂರು: ವಿಶ್ವ ಯೋಗ ದಿನಾಚರಣೆ ಹಿನ್ನೆಲೆ ಕರ್ನಾಟಕಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 280 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬ್ರೇನ್​ ರಿಸರ್ಚ್ ಸೆಂಟರ್​ ಉದ್ಘಾಟಿದರು. ಅಲ್ಲದೆ ಬಾಗ್ಚಿ ಪಾರ್ಥಸಾರಥಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದರು. ಮೆದುಳು ಸಂಶೋಧನಾ ಕೇಂದ್ರ ದೇಶದ ಅತಿದೊಡ್ಡ ಸಂಶೋಧನಾ ಕೇಂದ್ರವಾಗಿದ್ದು, ವಯಸ್ಸಿಗೆ ಸಂಬಂಧಿಸಿ … Continued

ಪ್ರಧಾನಿ ಮೋದಿ ಹಾದು ಹೋಗುವ ರಸ್ತೆಗಳಲ್ಲಿರುವ ಕಾಲೇಜುಗಳಿಗೆ ರಜೆ : ಡಿಕೆಶಿ ಆಕ್ಷೇಪ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುವ ರಸ್ತೆಗಳಲ್ಲಿರುವ ಕಾಲೇಜುಗಳಿಗೆ ರಜೆ ನೀಡಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪ್ರಯಾಣಿಸುವ ರಸ್ತೆಗಳಲ್ಲಿರುವ ಕಾಲೇಜುಗಳಿಗೆ ಯಾಕೆ ರಜೆ ಕೊಡಬೇಕು, ವಿದ್ಯಾರ್ಥಿಗಳು ಗಲಾಟೆ ಮಾಡ್ತಾರಾ ಎಂದು ಪ್ರಶ್ನಿಸಿದ ಅವರು, ವಿದ್ಯಾರ್ಥಿಗಳನ್ನು ಏಕೆ ಅನುಮಾನದಿಂದ ನೋಡುತ್ತೀರಿ. ನಮ್ಮ ವಿದ್ಯಾರ್ಥಿಗಳೇನೂ ಭಯೋತ್ಪಾದಕರಾ ಎಂದು ಪ್ರಶ್ನಿಸಿದ್ದಾರೆ. … Continued

ಕೊರೊನಾ ಇನ್ನೂ ಮುಗಿದಿಲ್ಲ, ಅದು ಮರುಕಳಿಸಬಹುದು: ಎಚ್ಚರಿಸಿದ ಪ್ರಧಾನಿ ಮೋದಿ

ನವದೆಹಲಿ: ಕೋವಿಡ್ ಇನ್ನೂ ಹೋಗಿಲ್ಲ. ಅದು ನಿರಂತರವಾಗಿ ತನ್ನ ರೂಪಗಳನ್ನು ಬದಲಾಯಿಸುತ್ತಿದೆ ಮತ್ತು ಮರುಕಳಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಜನತೆಗೆ ಎಚ್ಚರಿಸಿದ್ದಾರೆ. ಗುಜರಾತಿನ ಜುನಾಘಡದಲ್ಲಿರುವ ಉಮಿಯಾ ಮಾತಾ ದೇವಾಲಯದವ 14ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ವರ್ಚುವಲ್ ಭಾಷಣ‌ ಮಾಡಿದ ಅವರು, ದೇಶವ್ಯಾಪಿ ಲಸಿಕೆ ಯಶಸ್ವಿಯಾಗಿದೆ ಎಂದು ಒತ್ತಿ ಹೇಳಿದರು. ಕೊರೊನಾ ಮುಗಿದಿದೆ ಎಂದು ಭಾವಿಸಬೇಡಿ. … Continued

ದ್ವಿಪಕ್ಷೀಯ ಸಹಕಾರ: ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಬಿಡೆನ್ ನಾಳೆ ವರ್ಚವಲ್‌ನಲ್ಲಿ ಸಭೆ

ನವದೆಹಲಿ: ದ್ವಿಪಕ್ಷೀಯ ಸಹಕಾರದ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ವರ್ಚುವಲ್ ಸಭೆ ನಡೆಸಲಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಭಾನುವಾರ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 11 ರಂದು ಅಮೆರಿಕ ಅಧ್ಯಕ್ಷ ಜೋಸೆಫ್ ಆರ್ ಬಿಡೆನ್ ಅವರೊಂದಿಗೆ ವರ್ಚುವಲ್ ಸಭೆ ನಡೆಸಲಿದ್ದಾರೆ. ಉಭಯ ನಾಯಕರು … Continued

ವಿಕಲಾಂಗ ಮಹಿಳೆಯ ಕಾಲಿಗೆ ನಮಸ್ಕರಿಸಿದ ಮೋದಿ

ಲಕ್ನೋ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮನ್ನು ಭೇಟಿಯಾಗಲು ಬಂದಿದ್ದ ದಿವ್ಯಾಂಗ ಮಹಿಳೆಯೊರ್ವರ ಕಾಲಿಗೆ ನಮಸ್ಕರಿಸಿದ್ದಾರೆ. ಡಿ.13 ರಂದು ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಗೆ ಮೋದಿ ವಾರಾಣಸಿಗೆ ಆಗಮಿಸಿದ್ದರು. ಉದ್ಘಾಟನೆ ಬಳಿಕ ಮೋದಿ ಅವರನ್ನು ಭೇಟಿ ಮಾಡಲು ಶಿಖಾ ರಸ್ತೋಗಿ ಅವರು ಬಂದಿದ್ದರು. ಮಹಿಳೆಯನ್ನು ನೋಡಿದ ಪ್ರಧಾನಿ ತಕ್ಷಣವೇ ಆಕೆಯ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ. ಈ … Continued

ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ, 3 ಸೇನಾ ಮುಖ್ಯಸ್ಥರಿಂದ ಜನರಲ್ ಬಿಪಿನ್ ರಾವತ್, ಇತರ 12 ಜನರಿಗೆ ಅಂತಿಮ ಗೌರವ..ವೀಕ್ಷಿಸಿ

ನವದೆಹಲಿ: ಸೇನಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರ 11 ಮಂದಿಯ ಪಾರ್ಥಿವ ಶರೀರವನ್ನು ಭಾರತೀಯ ವಾಯುಪಡೆಯ ವಿಶೇಷ ವಿಮಾನದ ಮೂಲಕ ದೆಹಲಿಗೆ ತರಲಾಯಿತು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎನ್‌ಎಸ್‌ಎ ಅಜಿತ್ ದೋವಲ್ ಮತ್ತು ಮೂವರು ಸೇನಾ ಮುಖ್ಯಸ್ಥರು ಸಿಡಿಎಸ್ … Continued

ಪರಿಷತ್​ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಯೇ: ಮೋದಿ ಭೇಟಿ ನಂತರ ದೇವೇಗೌಡರು ಹೇಳಿರುವುದೇನು..?

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಈ ಮಧ್ಯೆ ಇಂದು ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು ಭೇಟಿ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ದೇವೇಗೌಡ, ಇದುವರೆಗೆ ನಾಲ್ಕೈದು ಬಾರಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದೇನೆ. ಇದುವರೆಗೂ ನನ್ನ ಬಗ್ಗೆ ಮೋದಿಯವರು ಅಗೌರವಯುತವಾಗಿ ನಡೆದುಕೊಂಡಿಲ್ಲ. ತುಂಬ ಪ್ರೀತಿಯಿಂದ ಮಾತನಾಡಿಸಿದ್ದಾರೆ. ಎಲ್ಲ ಬಾರಿ ಭೇಟಿಯಾದಾಗಲೂ ನನ್ನನ್ನು … Continued

ಕುಟುಂಬ ರಾಜಕಾರಣ ದೇಶಕ್ಕೆ ಮಾರಕ: ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಮೋದಿ ಪರೋಕ್ಷ ವಾಗ್ದಾಳಿ

ನವದೆಹಲಿ:ದೇಶದಲ್ಲಿ ಹೆಚ್ಚುತ್ತಿರುವ ಕುಟುಂಬ ರಾಜಕಾರಣದ ಬಗ್ಗೆ ತೀವ್ರ ಕಿಡಿಕಾರಿರುವ ಪ್ರಧಾನಿ ನರೇಂದ್ರ ಮೋದಿ ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂವಿಧಾನದ ಬಗ್ಗೆ ಹಾಗೂ ಕುಟುಂಬ ರಾಜಕಾರಣದ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಸಂವಿಧಾನದ ದಿನದ ಪ್ರಯುಕ್ತ ಸಂಸತ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, … Continued

ಟೈಮ್ ನಿಯತಕಾಲಿಕ 100 ಪ್ರಭಾವಿ ವ್ಯಕ್ತಿಗಳ’ ವಾರ್ಷಿಕ ಪಟ್ಟಿಯಲ್ಲಿ ಪ್ರಧಾನಿ ಮೋದಿ, ಮಮತಾ ಬ್ಯಾನರ್ಜಿ,ಆದರ್‌ ಪೂನಾವಾಲ್ಲಾ

ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಸಿಇಒ ಆದರ್ ಪೂನವಲ್ಲಾ ಅವರು ಟೈಮ್ ನಿಯತಕಾಲಿಕೆಯ 2021 ರ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟೈಮ್ ನಿಯತಕಾಲಿಕವು ತನ್ನ ವಾರ್ಷಿಕ ಜಾಗತಿಕ ಪಟ್ಟಿಯಾದ 100 ಪ್ರಭಾವಶಾಲಿ ಜನರು'(The 100 Most Influential People’) ಎಂಬ … Continued

ಮೋದಿ ಮಹತ್ವದ ಘೋಷಣೆ: ಆಗಸ್ಟ್ 14 -ವಿಭಜನೆ ಭಯಾನಕ ಸ್ಮರಣೆ ದಿನವಾಗಿ ಆಚರಣೆಯ ಘೋಷಣೆ

ನವದೆಹಲಿ: ವಿಭಜನೆಯ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಒಂದು ದಿನ ಮುಂಚಿತವಾಗಿ ಆಗಸ್ಟ್ 14 ಅನ್ನುವಿಭಜನ್ ವಿಭಿಶಿಕಾ ಸ್ಮೃತಿ ದಿವಸ (ವಿಭಜನೆಯ ಭಯಾನಕ ಸ್ಮರಣೆ) ಎಂದು ಆಚರಿಸಲಾಗುವುದು ಎಂದು ಘೋಷಿಸಿದರು. ಪಾಕಿಸ್ತಾನ ತನ್ನ ಸ್ವಾತಂತ್ರ್ಯ ದಿನವನ್ನು ಆಗಸ್ಟ್ 14 ರಂದು ಆಚರಿಸುತ್ತದೆ. ವಿಭಜನೆಯ … Continued