ಇಂಟರ್ನೆಟ್‌-ಸಾಮಾಜಿಕ ಮಾಧ್ಯಮದಲ್ಲಿ ಧೂಳೆಬ್ಬಿಸಿದ ಗಿಬ್ಲಿ ಇಮೇಜ್‌…: ಏನಿದು ಗಿಬ್ಲಿ ಚಿತ್ರ..?

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ (AI) ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಈಗ ಇಂಟರ್ನೆಟ್​ನಲ್ಲಿ ಘಿಬ್ಲಿ ಸ್ಟೈಲ್ (Ghibli Trend) ಇಮೇಜ್ ಭಾರಿ ಸುದ್ದಿ ಮಾಡುತ್ತಿದೆ.ಅದು Instagram ಅಥವಾ X ಆಗಿರಲಿ, ಸಾಮಾಜಿಕ ಮಾಧ್ಯಮ ಫೀಡ್‌ಗಳು ದೊಡ್ಡದಾಗಿ, ಅನಿಮೆ ಮೋಡ್‌ನಲ್ಲಿವೆ..! ಕಳೆದ 48 ಗಂಟೆಗಳಲ್ಲಿ ಸ್ಟುಡಿಯೋ ಘಿಬ್ಲಿ ಭಾವಚಿತ್ರಗಳು ಇಂಟರ್ನೆಟ್ ನಲ್ಲಿ ಧೂಳೆಬ್ಬಿಸಿವೆ. … Continued

ಕಿತ್ತೂರು ರಾಣಿ ಚನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿ: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಬೆಳಗಾವಿ: ರಾಣಿ ಕಿತ್ತೂರು ಚನ್ನಮ್ಮ ಅವರ ಸಮಾಧಿಯನ್ನು ಪ್ರಾಚೀನ ಸ್ಮಾರಕಗಳು ಮತ್ತು ಐತಿಹಾಸಿಕ ತಾಣಗಳು ಮತ್ತು ಅವಶೇಷಗಳ ಕಾಯ್ದೆ 1958ರ ಅಡಿಯಲ್ಲಿ ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಘೋಷಿಸಬೇಕು ಎಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಕರ್ನಾಟಕದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿರುವ ವೀರ ರಾಣಿ ಕಿತ್ತೂರು ಚೆನ್ನಮ್ಮ ಸಮಾಧಿಯು … Continued

ಪ್ರಧಾನಿ ಮೋದಿ ಪಾಡ್‌ಕ್ಯಾಸ್ಟ್‌ ಸಂವಾದಕ್ಕೆ ಮುನ್ನ ಲೆಕ್ಸ್ ಫ್ರಿಡ್‌ಮನ್ 45 ಗಂಟೆಗಳ ಕಾಲ ಉಪವಾಸ ಮಾಡಿದ್ದು ಯಾಕೆ ಗೊತ್ತಾ..?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪಾಡ್‌ಕ್ಯಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಅವರೊಂದಿಗೆ ವ್ಯಾಪಕ ಸಂವಾದ ನಡೆಸಿದರು. “ಈ ಸಂವಾದದ ಗೌರವಾರ್ಥ” ಪಾಡ್‌ಕ್ಯಾಸ್ಟ್‌ಗೆ ಮೊದಲು 45 ಗಂಟೆಗಳ ಕಾಲ ಉಪವಾಸ ಮಾಡಿದ್ದೇನೆ ಎಂದು ಫ್ರಿಡ್‌ಮನ್ ಹೇಳಿದ್ದಾರೆ . “ನಾನು ಇದೀಗ ಉಪವಾಸ ಮಾಡುತ್ತಿದ್ದೇನೆ. ಇದು ಸುಮಾರು 45 ಗಂಟೆಗಳು ಸಂದರೆ ಸುಮಾರು ಎರಡು ದಿನಗಳು. ಆದ್ದರಿಂದ … Continued

ಉಕ್ರೇನ್ ಸಂಘರ್ಷಕ್ಕೆ ಇತಿಶ್ರೀ ಹಾಡಲು ಪ್ರಯತ್ನಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್, ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ರಷ್ಯಾ ಅಧ್ಯಕ್ಷ

ಮಾಸ್ಕೋ/ನವದೆಹಲಿ: ಉಕ್ರೇನ್‌ನಲ್ಲಿ 30 ದಿನಗಳ ಕದನ ವಿರಾಮಕ್ಕಾಗಿ ವಾಷಿಂಗ್ಟನ್‌ನ ಯೋಜನೆಯ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಗುರುವಾರ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ರಾಷ್ಟ್ರಗಳ ಮುಖ್ಯಸ್ಥರು ಉಕ್ರೇನ್ ಸಂಘರ್ಷದ ಬಗ್ಗೆ ಗಮನ ಹರಿಸಿದ್ದಕ್ಕಾಗಿ “ಕೃತಜ್ಞತೆ” ಸಲ್ಲಿಸಿದ್ದಾರೆ. … Continued

ಪ್ರಧಾನಿ ಮೋದಿ ನನ್ನ ನೆಚ್ಚಿನ ನಟ ಎಂದು ಹೇಳಿಕೆ ನೀಡಿ ಬಿಜೆಪಿಯನ್ನೇ ಪೇಚಿಗೆ ಸಿಲುಕಿಸಿದ ರಾಜಸ್ಥಾನ ಸಿಎಂ…!

ಜೈಪುರ: ಜೈಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ (ಐಐಎಫ್‌ಎ) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಭಜನಲಾಲ ಶರ್ಮಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ನೆಚ್ಚಿನ ನಟ ಎಂದು ಹೇಳಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜಸ್ಥಾನ ಮುಖ್ಯಮಂತ್ರಿಗಳ ಈ ಹೇಳಿಕೆಗೆ ವಿಪಕ್ಷಗಳು ಬಿಜೆಪಿಯನ್ನು ಅಪಹಾಸ್ಯ ಮಾಡಿವೆ. ಜೈಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಭಾರತೀಯ … Continued

ವೀಡಿಯೊ : ವಂತಾರ ವನ್ಯಜೀವಿ ಕೇಂದ್ರದಲ್ಲಿ ಸಿಂಹ-ಹುಲಿಗಳೊಂದಿಗೆ ಮುಖಾಮುಖಿ, ಸಿಂಹದ ಮರಿಗಳು-ಜಿರಾಫೆಗಳಿಗೆ ಆಹಾರ ಉಣಿಸಿದ ಪ್ರಧಾನಿ ಮೋದಿ-ವೀಕ್ಷಿಸಿ

ಜಾಮನಗರ : ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಗುಜರಾತಿನ ಜಾಮನಗರದಲ್ಲಿ ಹೊಸದಾಗಿ ಉದ್ಘಾಟನೆಗೊಂಡ ‘ವಂತರಾ’ – ಪ್ರಾಣಿ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ಅವರು ಪ್ರಾಣಿಗಳೊಂದಿಗೆ ಕೆಲ ಕ್ಷಣಗಳನ್ನು ಕಳೆದರು. 1.5 ಲಕ್ಷಕ್ಕೂ ಹೆಚ್ಚು ರಕ್ಷಿಸಲ್ಪಟ್ಟ ಪ್ರಾಣಿಗಳಿಗೆ ನೆಲೆಯಾಗಿರುವ ವಂತಾರದ ಸುಧಾರಿತ ಪಶುವೈದ್ಯಕೀಯ ಸೌಲಭ್ಯಗಳನ್ನು ಅವರು ಪರಿಶೋಧಿಸಿದರು, ಪ್ರಾಣಿಗಳೊಂದಿಗೆ ಸಮಯ … Continued

ಬೊಜ್ಜು ವಿರುದ್ಧದ ಜಾಗೃತಿ ಅಭಿಯಾನ: ಆನಂದ ಮಹೀಂದ್ರಾ, ಸುಧಾಮೂರ್ತಿ, ನಂದನ್ ನಿಲೇಕಣಿ ಸೇರಿ 10 ಗಣ್ಯರ ನಾಮನಿರ್ದೇಶನ ಮಾಡಿದ ಪ್ರಧಾನಿ ಮೋದಿ

ನವದೆಹಲಿ : ಬೊಜ್ಜು ವಿರುದ್ಧದ ಅಭಿಯಾನ ಬಲಪಡಿಸಲು ಆಹಾರದಲ್ಲಿ ಖಾದ್ಯಗಳಲ್ಲಿ ಅಡುಗೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡುವ ಬಗ್ಗೆ ಜಾಗೃತಿ ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಮುಖ ಹತ್ತು ವ್ಯಕ್ತಿಗಳ ಹೆಸರಗಳನ್ನು ನಾಮ ನಿರ್ದೇಶನ ಮಾಡಿದ್ದಾರೆ. ಇತ್ತೀಚಿಗೆ ನಡೆದ ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಹತ್ತು ಹೆಸರುಗಳನ್ನು ನಾಮ ನಿರ್ದೇಶನ ಮಾಡುವುದಾಗಿ ಹೇಳಿದ್ದರು. … Continued

ತಾನು ಕಾಂಗ್ರೆಸ್‌ ಪಕ್ಷಕ್ಕೆ ಲಭ್ಯ ; ಆದ್ರೆ ಪಕ್ಷಕ್ಕೆ ತನ್ನ ಅಗತ್ಯ ಇಲ್ಲದಿದ್ರೆ ನನಗೆ ʼಆಯ್ಕೆʼಗಳು ಇವೆ ; ಸಂಸದ ಶಶಿ ತರೂರ್‌

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇರಳದ ಎಲ್‌ಡಿಎಫ್ ಸರ್ಕಾರವನ್ನು ಹೊಗಳಿದ್ದಕ್ಕಾಗಿ ಕಾಂಗ್ರೆಸ್‌ ಹೈಕಮಾಂಡ್‌ ಜೊತೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ವದಂತಿಗಳ ನಡುವೆ, ಶಶಿ ತರೂರ್ ತಾವು ಪಕ್ಷಕ್ಕೆ ಲಭ್ಯವಿರುವುದಾಗಿ ಹೇಳಿದ್ದಾರೆ, ಆದರೆ ಪಕ್ಷಕ್ಕೆ ತಮ್ಮ ಸೇವೆಯ ಅಗತ್ಯವಿಲ್ಲದಿದ್ದರೆ ತನಗೆ “ಆಯ್ಕೆಗಳು” ಸಹ ಇವೆ ಎಂದು ಎಚ್ಚರಿಸಿದ್ದಾರೆ. ಆದರೆ, ಪಕ್ಷ ಬದಲಾಯಿಸುವ ಮಾತನ್ನು ತಳ್ಳಿ ಹಾಕಿರುವ … Continued

ಪ್ರಧಾನಿ ಮೋದಿ ಭೇಟಿಯಾದ ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್ ಕುಟುಂಬ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್ ಹಾಗೂ ಅವರ ಕುಟುಂಬದವರನ್ನು ಭೇಟಿಯಾಗಿದ್ದಾರೆ. ದೆಹಲಿಯಲ್ಲಿ ಪ್ರಧಾನಿ ಮೋದಿ ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿಯಾದರು. ಈ ವೇಳೆ ರಿಷಿ ಸುನಕ್ ಅವರನ್ನು ಭಾರತದ ದೊಡ್ಡ ಸ್ನೇಹಿತ ಎಂದು ಮೋದಿ ಬಣ್ಣಿಸಿದ್ದಾರೆ. ಭೇಟಿಯ ವೇಳೆ ಇಬ್ಬರು ನಾಯಕರು ವಿವಿಧ … Continued

ಎಲಾನ್ ಮಸ್ಕ್-ಮೋದಿ ಭೇಟಿ ಬೆನ್ನಲ್ಲೇ ಟೆಸ್ಲಾದಿಂದ ಭಾರತದಲ್ಲಿ ನೇಮಕಾತಿ ಆರಂಭ

ನವದೆಹಲಿ : ಟೆಸ್ಲಾ ಇಂಕ್ ಭಾರತದಲ್ಲಿ ನೇಮಕ ಮಾಡಿಕೊಳ್ಳುತ್ತಿದೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲೋನ್ ಮಸ್ಕ್ ಅವರು ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಸ್ವಲ್ಪ ಸಮಯದ ನಂತರ ಅದು ಭಾರತದಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲು ಯೋಜಿಸುತ್ತಿದೆ. ತನ್ನ ಲಿಂಕ್ಡ್‌ಇನ್ ಪುಟದಲ್ಲಿ ಸೋಮವಾರದ ಜಾಹೀರಾತುಗಳ ಪ್ರಕಾರ, ಎಲೆಕ್ಟ್ರಿಕ್-ವಾಹನ ತಯಾರಕರು ಗ್ರಾಹಕರನ್ನು ಎದುರಿಸುವ ಮತ್ತು ಬ್ಯಾಕ್-ಎಂಡ್ … Continued