X ನಲ್ಲಿ 100 ಮಿಲಿಯನ್ ಫಾಲೋವರ್‌ ಗಳ ಗಡಿ ದಾಟಿದ ಮೋದಿ ; Xನಲ್ಲಿ ಟಾಪ್ 10 ಫಾಲೋವರ್ಸ್‌ ಹೊಂದಿರುವವರ ಪಟ್ಟಿ…

ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣ ‘ಎಕ್ಸ್‌’ (ಟ್ವಿಟರ್‌) ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಫಾಲೋವರ್‌ಗಳ ಸಂಖ್ಯೆ 100 ಮಿಲಿಯನ್ (10 ಕೋಟಿ) ದಾಟಿದೆ. ಈ ಮೂಲಕ ಮೋದಿ ಅವರು ಎಕ್ಸ್‌ನಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿದವರಲ್ಲಿ ಜಾಗತಿಕವಾಗಿ ಏಳನೇ ಸ್ಥಾನ ಪಡೆದಿದ್ದಾರೆ. ಭಾರತದಲ್ಲಿ ಮೊದಲನೇ ಸ್ಥಾನ ಪಡೆದಿದ್ದಾರೆ. ಅಲ್ಲದೆ, ವಿಶ್ವದ ರಾಜಕೀಯ ನಾಯಕರ … Continued

ವೀಡಿಯೊ..| ‘ವಂದೇ ಮಾತರಂ’ ಸಮೂಹ ಗಾಯನದ ಮೂಲಕ ವಿಯೆನ್ನಾದಲ್ಲಿ ಪ್ರಧಾನಿ ಮೋದಿಗೆ ವಿಶೇಷ ಸ್ವಾಗತ ನೀಡಿದ ಆಸ್ಟ್ರಿಯಾ

ವಿಯೆನ್ನಾ: ಅತ್ಯಂತ ಯಶಸ್ವಿ ರಷ್ಯಾ ಭೇಟಿ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಯುರೋಪ್‌ನ ಆಸ್ಟ್ರಿಯಾ ದೇಶಕ್ಕೆ ಮಂಗಳವಾರದಿಂದ ಎರಡು ದಿನ ಪ್ರವಾಸ ಕೈಗೊಂಡಿದ್ದಾರೆ. ವಿಯೆನ್ನಾಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಸ್ಟ್ರಿಯಾದ ಕಲಾವಿದರು ವಿಶೇಷವಾದ ‘ವಂದೇ ಮಾತರಂ’ ವಂದೇ ಮಾತರಂ ಸಮೂಹ ಗಾಯನದ ಮೂಲಕ ಸ್ವಾಗತಿಸಿದ್ದು ಹೆಚ್ಚು ವಿಶೇಷವಾಗಿದೆ. ವಿಯೆನ್ನಾದ ರಿಟ್ಜ್-ಕಾರ್ಲ್ಟನ್ ಹೋಟೆಲ್‌ಗೆ … Continued

ಬಾಂಬ್, ಗನ್, ಬುಲೆಟ್‌ಗಳ ನಡುವೆ ಶಾಂತಿ ಮಾತುಕತೆ ಸಫಲವಾಗಲ್ಲ: ಪುಟಿನ್‌ ಗೆ ಮೋದಿ

ಮಾಸ್ಕೊ: ಬಾಂಬ್, ಗನ್ ಮತ್ತು ಬುಲೆಟ್‌ಗಳ ನಡುವೆ ಶಾಂತಿ ಮಾತುಕತೆ ಸಫಲವಾಗುವುದಿಲ್ಲ. ಯುದ್ಧ ಭೂಮಿಯಲ್ಲಿ ಯಾವುದೇ ಸಂಘರ್ಷಕ್ಕೆ ಪರಿಹಾರ ದೊರಕುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದ ಕುರಿತಂತೆ ಉಭಯ ನಾಯಕರು ಮಂಗಳವಾರ ಮಾತುಕತೆ ನಡೆಸಿದ್ದಾರೆ. ‘ಮಾನವೀಯತೆ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬರಿಗೂ ಜೀವಗಳ ಹಾನಿಯಾದಾಗ … Continued

ಭದ್ರತೆ, ಆರ್ಥಿಕ, ರಾಜಕೀಯ ವ್ಯವಹಾರ ಸೇರಿದಂತೆ ಮೋದಿ ಸರ್ಕಾರದ ವಿವಿಧ ಸಂಪುಟ ಸಮಿತಿಗಳ ರಚನೆ : ಸಂಪೂರ್ಣ ಪಟ್ಟಿ ಇಲ್ಲಿದೆ

ನವದೆಹಲಿ: ಭದ್ರತೆ, ಆರ್ಥಿಕ ಮತ್ತು ರಾಜಕೀಯ ವ್ಯವಹಾರಗಳ ಕುರಿತು ದೇಶದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ   ವಿವಿಧ ಸಂಪುಟ ಸಮಿತಿಗಳನ್ನು ಮೋದಿ ಸರ್ಕಾರ ಬುಧವಾರ ರಚಿಸಿದೆ.ಸಂಸ್ಥೆಗಳು ಸೇರಿದಂತೆ ವಿವಿಧ ಕ್ಯಾಬಿನೆಟ್ ಸಮಿತಿಗಳನ್ನು ಮೋದಿ ಸರ್ಕಾರ ಬುಧವಾರ ರಚಿಸಿದೆ. ಸಂಪುಟ ಸಮಿತಿಗಳ ಸದಸ್ಯರಲ್ಲಿ ಬಿಜೆಪಿ ಮತ್ತು ಅದರ ಎನ್‌ಡಿಎ ಪಾಲುದಾರರಾದ ಜನತಾ ದಳ (ಯು), ತೆಲುಗು ದೇಶಂ ಪಕ್ಷ, … Continued

ಸಂಸತ್ತಿನಲ್ಲಿ ತಮ್ಮ ವಿರುದ್ಧ ಘೋಷಣೆ ಕೂಗುತ್ತಿದ್ದ ವಿಪಕ್ಷ ನಾಯಕರಿಗೆ ನೀರು ಕೊಟ್ಟ ಪ್ರಧಾನಿ ಮೋದಿ ; ವೀಡಿಯೊ ವೈರಲ್‌

ನವದೆಹಲಿ: ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಮಾತನಾಡುತ್ತಿದ್ದಾಗ ಅವರ ವಿರುದ್ಧ ಘೋಷಣೆ ಕೂಗಿ ಅಡ್ಡಿಪಡಿಸುತ್ತಿದ್ದ ವಿಪಕ್ಷದ ನಾಯಕರಿಗೆ ಮೋದಿ ನೀರು ಕೊಟ್ಟಿರುವ ವೀಡಿಯೊ ಎಲ್ಲೆಡೆ ವೈರಲ್ ಆಗುತ್ತಿದೆ. ಸುಮಾರು 135 ನಿಮಿಷಗಳ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸದನದ ಬಾವಿಗೆ ಇಳಿದು ಪ್ರತಿಭಟಿಸಿದ … Continued

ವೀಡಿಯೊ…| ನೂತನ ಸ್ಪೀಕರ್ ಓಂ ಬಿರ್ಲಾ ಸ್ವಾಗತಿಸುವ ವೇಳೆ ಪ್ರಧಾನಿ ಮೋದಿ-ರಾಹುಲ್ ಗಾಂಧಿ ಅಪರೂಪದ ಹಸ್ತಲಾಘವ

ನವದೆಹಲಿ: 18 ನೇ ಲೋಕಸಭೆಯಲ್ಲಿ ಸ್ಪೀಕರ್‌ ಆಗಿ ಓಂ ಬಿರ್ಲಾ ಅವರು ಇಂದು ಬುಧವಾರ (ಜೂನ್‌ 26) ಆಯ್ಕೆಯಾಗಿದ್ದಾರೆ. ನೂತನ ಸ್ಪೀಕರ್‌ ಅವರನ್ನು ಸ್ವಾಗಿಸುವಾಗ ಪ್ರಧಾನಿ ಮೋದಿ ಹಾಗೂ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಒಟ್ಟಾಗಿ ಬಂದಾಗ ಇಬ್ಬರು ಹಸ್ತಲಾಘವ ಮಾಡಿದ್ದಾರೆ. ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಅವರನ್ನು ಸ್ವಾಗತಿಸುವ ಸಂದರ್ಭದಲ್ಲಿ ಸಂಸದೀಯ ಏಕತೆಯ … Continued

ವೀಡಿಯೊ..| ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾದ ಬಿಜೆಪಿಯ ಓಂ ಬಿರ್ಲಾ

ನವದೆಹಲಿ: ಇಂದು ಬುಧವಾರ (ಜೂನ್‌ ೨೬) ನಡೆದ ಚುನಾವಣೆಯಲ್ಲಿ ಬಿಜೆಪಿಯ ಓಂ ಬಿರ್ಲಾ ಅವರು ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಓಂ ಬಿರ್ಲಾ ಅವರನ್ನು ಲೋಕಸಭೆಯ ಸ್ಪೀಕರ್ ಕುರ್ಚಿಗೆ ಕರೆದೊಯ್ದರು. ಲೋಕಸಭೆ ಸ್ಪೀಕರ್ ಆಯ್ಕೆಗೆ ಮೊದಲ ಬಾರಿಗೆ ಮತದಾನ ನಡೆದಿದೆ. ಅವಿರೋಧವಾಗಿ … Continued

ರೈತರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ : 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಅನುಮೋದನೆ ; ಉತ್ಪಾದನಾ ವೆಚ್ಚಕ್ಕಿಂತ 1.5 ಪಟ್ಟು ಹೆಚ್ಚು

ನವದೆಹಲಿ: ಪ್ರಮುಖ ನಿರ್ಧಾರದಲ್ಲಿ, ಖಾರಿಫ್ (ಬೇಸಿಗೆ) ಬಿತ್ತನೆ ಅವಧಿಗೆ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟವು 14 ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಅನುಮೋದಿಸಿದೆ. ಇದು ಉತ್ಪಾದನಾ ವೆಚ್ಚಕ್ಕಿಂತ 1.5 ಪಟ್ಟು ಹೆಚ್ಚಾಗಿದೆ. ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ₹ 117 ಹೆಚ್ಚಿಸಲಾಗಿದೆ. ಹೈಬ್ರೀಡ್ … Continued

ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ : ಕಾಶ್ಮೀರದ ಶ್ರೀನಗರದಲ್ಲಿ ನಡೆಯುವ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಭಾಗಿ

ನವದೆಹಲಿ: ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಜೂನ್ 21 ರಂದು ಶ್ರೀನಗರದ ಶೇರ್-ಇ-ಕಾಶ್ಮೀರ್ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ (ಎಸ್‌ಕೆಐಸಿಸಿ) ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಯೋಜಿಸಲಾಗುವುದು ಎಂದು ಆಯುಷ್ ಖಾತೆ ಸಚಿವ ಪ್ರತಾಪರಾವ್‌ ಜಾಧವ್ ಮಂಗಳವಾರ ತಿಳಿಸಿದ್ದಾರೆ. . ಜಾಧವ್ ಅವರು, ಆಯುಷ್ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ), ಈ ವರ್ಷದ … Continued

ಕ್ರೈಸ್ತ ಧರ್ಮ ಗುರು ಪೋಪ್ ಫ್ರಾನ್ಸಿಸ್ ಜೊತೆಗಿನ ಮೋದಿ ಭೇಟಿ ಅಣಕಿಸಿದ ಕಾಂಗ್ರೆಸ್; ಭಾರೀ ಆಕ್ರೋಶದ ನಂತರ ಕ್ರೈಸ್ತರ ಕ್ಷಮೆಯಾಚನೆ

ನವದೆಹಲಿ : ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರೈಸ್ತ ಧರ್ಮ ಗುರು ಪೋಪ್ ಫ್ರಾನ್ಸಿಸ್ ಅವರ ಭೇಟಿಯನ್ನು ಅಣಕಿಸಿ ಕಾಂಗ್ರೆಸ್ ಪಕ್ಷದ ಕೇರಳ ಘಟಕವು ಸಾಮಾಜಿಕ ಮಾಧ್ಯಮದಲ್ಲಿ ವ್ಯಂಗ್ಯಾತ್ಮಕ ಪೋಸ್ಟ್ ಮಾಡಿದ ನಂತರ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಕೇರಳ ಕಾಂಗ್ರೆಸ್‌ ಘಟಕವು ಕ್ರೈಸ್ತ ಸಮುದಾಯದ ಕ್ಷಮೆಯಾಚಿಸಿದೆ. ಅಳಿಸಲಾದ … Continued