ಎಎಪಿ ಬಂಡಾಯದ ಒಳನೋಟ : ಸಂಸದರ ಸಾಮೂಹಿಕ ಪಕ್ಷಾಂತರಕ್ಕೆ ರಾಘವ ಚಡ್ಡಾ ಸ್ಕೆಚ್ ಹಾಕಿದ್ದು ಹೇಗೆ ?

ನವದೆಹಲಿ: ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಾರ್ಟಿಯ (AAP) ಪ್ರಭಾವಿ ನಾಯಕ ರಾಘವ ಚಡ್ಡಾ ನೇತೃತ್ವದಲ್ಲಿ ಏಳು ಮಂದಿ ರಾಜ್ಯಸಭಾ ಸಂಸದರು ಪಕ್ಷಕ್ಕೆ ವಿದಾಯ ಹೇಳಿ ಭಾರತೀಯ ಜನತಾ ಪಾರ್ಟಿ (BJP) ಜೊತೆ ವಿಲೀನವಾಗಿದ್ದಾರೆ. ಈ ಬೆಳವಣಿಗೆಯು ಪಾರ್ಲಿಮೆಂಟ್‌ನಲ್ಲಿ ಎಎಪಿಯ ಬಲವನ್ನು ಕುಗ್ಗಿಸಿರುವುದು ಮಾತ್ರವಲ್ಲದೆ, 2027ರ ಪಂಜಾಬ್ ವಿಧಾನಸಭೆ ಚುನಾವಣೆಯ … Continued

ಎಎಪಿಗೆ ದೊಡ್ಡ ಆಘಾತ : ಬಿಜೆಪಿ ಸೇರುವುದಾಗಿ ರಾಘವ ಚಡ್ಡಾ ಸೇರಿ 7 ಸಂಸದರ ಘೋಷಣೆ…!

ನವದೆಹಲಿ: ಆಮ್ ಆದ್ಮಿ ಪಕ್ಷದಲ್ಲಿ (ಎಎಪಿ) ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಆಂತರಿಕ ಅಸಮಾಧಾನ ಸ್ಫೋಟಗೊಂಡಿದೆ. ರಾಜ್ಯಸಭೆಯ ಉಪನಾಯಕನ ಸ್ಥಾನದಿಂದ ಕೆಳಗಿಳಿಸಿದ ಬೆನ್ನಲ್ಲೇ ಅರವಿಂದ ಕೇಜ್ರಿವಾಲ್ ವಿರುದ್ಧ ಬಂಡೆದ್ದಿರುವ ಸಂಸದ ರಾಘವ್ ಚಡ್ಡಾ, ಶುಕ್ರವಾರ ಎಎಪಿಗೆ ರಾಜೀನಾಮೆ ನೀಡಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೇರುವುದಾಗಿ ಘೋಷಿಸಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಚಡ್ಡಾ, ಎಎಪಿಯ … Continued

ನನ್ನನ್ನು ಮೌನಗೊಳಿಸಬಹುದು..ಸೋಲಿಸಲಾಗದು : ರಾಘವ ಚಡ್ಡಾ ವೀಡಿಯೊ ಸಂದೇಶದಿಂದ ಎಎಪಿ ಆಂತರಿಕ ಕಲಹ ಸ್ಫೋಟ

ನವದೆಹಲಿ: ಆಮ್ ಆದ್ಮಿ ಪಕ್ಷವು (AAP) ರಾಜ್ಯಸಭೆಯ ಉಪ ನಾಯಕನ ಸ್ಥಾನದಿಂದ ರಾಘವ ಚಡ್ಡಾ ಅವರನ್ನು ದಿಢೀರ್ ಕೆಳಗಿಳಿಸಿದ ಬೆನ್ನಲ್ಲೇ, ಪಕ್ಷದ ಆಂತರಿಕ ಕಲಹ ಸ್ಫೋಟಗೊಂಡಿದೆ. ಈ ಬೆಳವಣಿಗೆಯ ಕುರಿತು ಶುಕ್ರವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಘವ ಚಡ್ಡಾ, “ನನ್ನನ್ನು ಮೌನಗೊಳಿಸಬಹುದು, ಆದರೆ ಸೋಲಿಸಲು ಸಾಧ್ಯವಿಲ್ಲ” ಎಂದು ಪಕ್ಷದ ನಾಯಕರ ವಿರುದ್ಧ ಹರಿಹಾಯ್ದಿದಾರೆ. ವಿಡಿಯೋ ಸಂದೇಶವೊಂದನ್ನು ಬಿಡುಗಡೆ … Continued

ಎಎಪಿ ರಾಜ್ಯಸಭೆ ಉಪನಾಯಕನ ಸ್ಥಾನದಿಂದ ಪ್ರಮುಖ ನಾಯಕ ರಾಘವ ಚಡ್ಡಾ ವಜಾ…! ದಿಢೀರ್‌ ಬದಲಾವಣೆಗೆ ಕಾರಣ ?

 ನವದೆಹಲಿ: ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ (AAP) ತನ್ನ ಸಂಸದೀಯ ಮಂಡಳಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕ ಸ್ಥಾನದಿಂದ ರಾಘವ್ ಚಡ್ಡಾ ಅವರನ್ನು ಕೆಳಗಿಳಿಸಿದ್ದು, ಅವರ ಜಾಗಕ್ಕೆ ಪಂಜಾಬ್ ಸಂಸದ ಅಶೋಕ್ ಮಿತ್ತಲ್ ಅವರನ್ನು ನೇಮಿಸಲಾಗಿದೆ. ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯ ಚಾನ್ಸಲರ್ ಆಗಿರುವ ಅಶೋಕ ಮಿತ್ತಲ್ ಈಗ ಮೇಲ್ಮನೆಯಲ್ಲಿ … Continued

ಕ್ಷಮೆಯಾಚಿಸುವೆ ಎಂದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ; ಪ್ರಕರಣವನ್ನು ಸಹಾನುಭೂತಿಯಿಂದ ಪರಿಗಣಿಸಿ ಎಂದು ರಾಜ್ಯಸಭಾ ಚೇರ್ಮನ್‌ ಗೆ ಸುಪ್ರೀಂ ಕೋರ್ಟ್‌ ಸಲಹೆ

ನವದೆಹಲಿ: ನಕಲಿ ಸಹಿ ಆರೋಪದ ಪ್ರಕರಣದಲ್ಲಿ ರಾಜ್ಯಸಭಾ ಚೇರ್ಮನ್‌ ಜಗದೀಪ ಧನಕರ ಅವರನ್ನು ಬೇಷರತ್ ಕ್ಷಮೆಯಾಚಿಸುವುದಾಗಿ ರಾಜ್ಯಸಭೆಯಿಂದ ಅಮಾನತುಗೊಂಡಿರುವ ಸದಸ್ಯ ರಾಜೀವ ಚಡ್ಡಾ ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ತಿಳಿಸಿದ್ದಾರೆ. ದೆಹಲಿ ಸೇವೆಗಳ ಮಸೂದೆಯ ಕುರಿತಾಗಿ ಅಧ್ಯಯನ ನಡೆಸಲು ಸ್ಥಾಯಿ ಸಮಿತಿಯೊಂದನ್ನು ರಚಿಸಬೇಕು ಎಂದು ಒತ್ತಾಯಿಸಿ ನಿರ್ಣಯ ಮಂಡಿಸಲು ರಾಘವ ಚಡ್ಡಾ ಅವರು ಐವರು ರಾಜ್ಯಸಭಾ ಸದಸ್ಯರ … Continued