ಹೇಮಂತ್ ಸೊರೇನ್ ಇ.ಡಿ. ವಶಕ್ಕೆ; ಜಾರ್ಖಂಡ್ ನೂತನ ಸಿಎಂ ಆಗಿ ಚಂಪೈ ಸೊರೇನ್ ಆಯ್ಕೆ

ರಾಂಚಿ : ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಅವರನ್ನು ಬುಧವಾರ ಸಂಜೆ ಜಾರಿ ನಿರ್ದೇಶನಾಲಯವು ಅವರು ಹುದ್ದೆ ತ್ಯಜಿಸಿದ ಕೆಲವೇ ನಿಮಿಷಗಳಲ್ಲಿ ಕಸ್ಟಡಿಗೆ ತೆಗೆದುಕೊಂಡಿತು.  ಅವರ  ರಾಜೀನಾಮೆ ನಂತರ ಅವರ ಆಪ್ತ ಹಾಗೂ ಪಕ್ಷದ ಹಿರಿಯ ನಾಯಕ ಚಂಪೈ ಸೊರೇನ್ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ನೀಡಿದ ಕೆಲವೇ ನಿಮಿಷಗಳಲ್ಲಿ ಭೂ ಹಗರಣಕ್ಕೆ … Continued

ನಟಿ, ಮಾಜಿ ಸಂಸದೆ ವಿಜಯಶಾಂತಿ ಬಿಜೆಪಿಗೆ ಗುಡ್‌ ಬೈ

ಹೈದರಾಬಾದ್: ತೆಲಂಗಾಣ ವಿಧಾನಸಭೆಗೆ ಕೆಲವೇ ದಿನಗಳಿರುವಾಗ ಮಾಜಿ ಸಂಸದೆ, ನಟಿ ವಿಜಯಶಾಂತಿ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ ವಿಜಯಶಾಂತಿ ತಮ್ಮ ರಾಜೀನಾಮೆ ಪತ್ರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಜಿ.ಕಿಶನ್ ರೆಡ್ಡಿ ಅವರಿಗೆ ಕಳುಹಿಸಿದ್ದಾರೆ. ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಭಾಗವಹಿಸುವ ಸಮಾರಂಭದಲ್ಲಿ … Continued

ʼ ನಾವು ಗೌತಮಿ ಪರವಾಗಿ ಇದ್ದೇವೆ ‘: ನಟಿಯ ರಾಜೀನಾಮೆ ನಂತರ ತಮಿಳುನಾಡು ಬಿಜೆಪಿ ಮುಖ್ಯಸ್ಥರ ಹೇಳಿಕೆ

ಚೆನ್ನೈ: ʼಬೆಂಬಲದ ಕೊರತೆʼಯನ್ನು ಉಲ್ಲೇಖಿಸಿ ಖ್ಯಾತ ನಟಿ ಗೌತಮಿ ತಡಿಮಲ್ಲ ಅವರು ಬಿಜೆಪಿಗೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ, ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ತಪ್ಪು ತಿಳುವಳಿಕೆಯಿಂದಾಗಿ ಹೀಗಾಗಿದೆ ಮತ್ತು ಪಕ್ಷವು ನಿಜವಾಗಿ ನಟಿ ಗೌತಮಿ ಅವರ ಪರವಾಗಿದೆ ಎಂದು ಹೇಳಿದ್ದಾರೆ. ಶುಕ್ರವಾರ, ಗೌತಮಿ ಅವರು ಬಿಜೆಪಿಯೊಂದಿಗಿನ ತನ್ನ 25 ವರ್ಷಗಳ … Continued

ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಕಿರಣಕುಮಾರ ರಾಜೀನಾಮೆ

ತುಮಕೂರು: ಬಿಜೆಪಿ ಮಾಜಿ ಶಾಸಕ ಕಿರಣಕುಮಾರ ಶನಿವಾರ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರದಲ್ಲಿ ವೈಯಕ್ತಿಕ ಕಾರಣದಿಂದ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ. ತುಮಕೂರು … Continued

ಪ್ರವಾಹ ಪರಿಸ್ಥಿತಿ, ಬಿಎಸ್‌ವೈ ಪರ ಸ್ವಾಮೀಜಿಗಳ ಪ್ರದರ್ಶನ:ಆದ್ರೂ ಹೈಕಮಾಂಡಿನಿಂದ ನಾಳೆಯೇ ಸಂದೇಶವೂ? ಬಿಸಿ ತಣ್ಣಗಾಗುವ ವರೆಗೆ ವಿಳಂಬವೋ..?

ಬೆಂಗಳೂರು: ಹೈಕಮಾಂಡ್‍ನಿಂದ ನಾಳೆ (ಜುಲೈ 25) ಸೂಚನೆ ಬಂದ ನಂತರ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಆದರೆ ಅವರ ನಡೆ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಯಡಿಯೂರಪ್ಪ ಪರವಾಗಿ ನಾಳೆಯೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸ್ವಾಮೀಜಿಗಳ ಸಮಾವೇಶ ನಡೆಯಲಿದೆ. ಸುಮಾರು ಒಂದು ಸಾವಿರ ಸ್ವಾಮೀಜಿಗಳು ಸೇರಿಲಿದ್ದಾರೆ ಎಂದು ಹೇಳಲಾಗಿದೆ. ಯಡಿಯೂರಪ್ಪ ಅವರನ್ನು … Continued

ಉತ್ತರಾಖಂಡದ ಸಿಎಂ ಸ್ಥಾನಕ್ಕೆ ರಾವತ್‌ ರಾಜೀನಾಮೆ

ಡೆಹರಾಡೂನ್: ಉತ್ತರಾಖಂಡದ ಬಿಜೆಪಿ ಸರ್ಕಾರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಉಲ್ಬಣಿಸಿದ್ದು, ವಿಧಾನಸಭೆ ಚುನಾವಣೆಗೆ ವರ್ಷವಷ್ಟೇ ಬಾಕಿ ಉಳಿದಿರುವಾಗ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಮಂಗಳವಾರ ಸಂಜೆ ರಾಜೀನಾಮೆ ಸಲ್ಲಿಸಿದ್ದಾರೆ. ಹೈಕಮಾಂಡ್‌ ಸೂಚನೆ ಮೇರೆಗೆ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಮಂಗಳವಾರ ಸಂಜೆ ರಾಜಭವನದಲ್ಲಿ ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯ ಅವರನ್ನು ಭೇಟಿ ಮಾಡಿ ತಮ್ಮ … Continued

ರಾಸಲೀಲೆ ಸಿಡಿ ಪ್ರಕರಣ: ಸಚಿವ ಸ್ಥಾನಕ್ಕೆ ರಮೇಶ ಜಾರಕಿಹೊಳಿ ರಾಜೀನಾಮೆ

ಬೆಂಗಳೂರು: ಜಲಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿ ಬುಧವಾರ ರಾಜೀನಾಮೆ ನೀಡಿದ್ದಾರೆ. ರಮೇಶ್​ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆ ವಿಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ. ಅಲ್ಲದೆ ರಾಜ್ಯ ಸರ್ಕಾರಕ್ಕೂ ಮುಜುಗರ ಉಂಟಾಗಿದ್ದು, ವಿಪಕ್ಷಗಳಿಂದಲೂ ರಾಜೀನಾಮೆ ಪಡೆಯುವಂತೆ ಆಗ್ರಹ ಕೇಳಿಬಂದಿತ್ತು. ಸರ್ಕಾರಕ್ಕೆ ಮಾನ-ಮರ್ಯಾದೆ ಇದ್ದರೆ ಜಾರಕಿಹೊಳಿಯಿಂದ ಈ ಕೂಡಲೇ ರಾಜೀನಾಮೆ ಪಡೆಯಬೇಕು ಎಂದು … Continued

ಶಿವಸೇನೆ ಸಚಿವ ಸಂಜಯ ರಾಥೋಡ್‌ ರಾಜೀನಾಮೆ

ಮುಂಬೈ: 23 ವರ್ಷದ ಪುಣೆ ಮಹಿಳೆಯ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಶಿವಸೇನೆ ಸಚಿವ ಸಂಜಯ್ ರಾಥೋಡ್ ಅವರು ಭಾನುವಾರ ಮಧ್ಯಾಹ್ನ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಅಂಗೀಕರಿಸಲಾಗಿದೆ. ಬೆಳವಣಿಗೆಗಳ ಬಗ್ಗೆ ತಿಳಿದಿರುವ ನಾಯಕರು, ಅರಣ್ಯ ವಿಪತ್ತು ನಿರ್ವಹಣಾ ಸಚಿವರು, ಠಾಕ್ರೆ ಅವರ ರಾಜೀನಾಮೆಯನ್ನು ವಿಚಾರಣೆ ಮುಗಿಯುವವರೆಗೂ ಸ್ವೀಕರಿಸದಂತೆ ವಿನಂತಿಸಿದ್ದಾರೆ. … Continued