ಇವು ಸಮಸ್ಯೆಗಳೇ? ಪ್ರಮುಖ ವಿಷಯದ ಬಗ್ಗೆ ಚರ್ಚಿಸದೆ ಸಮಯ ವ್ಯರ್ಥ ಮಾಡ್ತಿದ್ದಾರೆ : ಪ್ರಧಾನಿ ಮೋದಿ ಪದವಿ ವಿವಾದಕ್ಕೆ ಶರದ್ ಪವಾರ್ ಆಕ್ಷೇಪ

ಮುಂಬೈ: ನಾಯಕರ ಶೈಕ್ಷಣಿಕ ಅರ್ಹತೆಯ ವಿಷಯವನ್ನು ಎತ್ತುತ್ತಿರುವವರು ಪ್ರಶ್ನೆ ಎತ್ತಲೇಬೇಕಾದ ಮಹತ್ವದ ವಿಷಯಗಳ ಕುರಿತಾಗಿನ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಟೀಕಿಸಿದ್ದಾರೆ. ದೇಶವು ಗಮನಹರಿಸಬೇಕಾದ ಹೆಚ್ಚು ನಿರ್ಣಾಯಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂಥ ಸಮಯದಲ್ಲಿ ಅಷ್ಟೊಂದು ಪ್ರಾಮುಖ್ಯವಲ್ಲದ ನಾಯಕರ ಶೈಕ್ಷಣಿಕ ಅರ್ಹತೆಯ ವಿಷಯದ ಬಗ್ಗೆ ಪದೇಪದೇ ಪ್ರಸ್ತಾಪಿಸುತ್ತಿರುವುದಕ್ಕೆ … Continued

ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಅವರ ತ್ಯಾಗವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ, ಆದರೆ …: ಶರದ್ ಪವಾರ್

ನಾಗ್ಪುರ: ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ದಿವಂಗತ ವಿ.ಡಿ. ಸಾವರ್ಕರ್ ಅವರ ತ್ಯಾಗವನ್ನು ಯಾರೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ಹಾಗೂ ಅವರ ಮೇಲಿನ ಭಿನ್ನಾಭಿಪ್ರಾಯಗಳನ್ನು ಇಂದು ರಾಷ್ಟ್ರೀಯ ವಿಷಯವನ್ನಾಗಿ ಮಾಡಲು ಸಾಧ್ಯವಿಲ್ಲ, ಏಕೆಂದರೆ ನಾವು ಅನೇಕ ಮುಖ್ಯ ವಿಷಯಗಳ ಮೇಲೆ ಕೇಂದ್ರೀಕರಿಸಬೇಕಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಶನಿವಾರ ಹೇಳಿದ್ದಾರೆ. ಇದೇ ವೇಳೆ ವಿದೇಶಿ … Continued

ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ನಾನಲ್ಲ; ಶರದ್ ಪವಾರ್ ಸ್ಪಷ್ಟನೆ

ಮುಂಬೈ: “ರಾಷ್ಟ್ರಪತಿ ಆಯ್ಕೆಗಾಗಿ 2022ರಲ್ಲಿ ನಡೆಯಲಿರುವ ಚುನಾವಣಾ ಅಭ್ಯರ್ಥಿ ನಾನಲ್ಲ” ಎಂದು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ. ನಾನು ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿಯಲ್ಲ. 2024ರ ಲೋಕಸಭಾ ಚುನಾವಣೆಯ ಪ್ರಧಾನಿ ಅಭ್ಯರ್ಥಿಯೂ ಅಲ್ಲ” ಎಂದು ಅವರು ಬುಧವಾರ ಸ್ಪಷ್ಟನೆ ನೀಡಿದ್ದಾರೆ. ಚುನಾವಣೆಗಳು ಇನ್ನೂ ಬಹಳ ದೂರವಿವೆ. ರಾಜಕೀಯ ಸನ್ನಿವೇಶಗಳು ಬದಲಾಗುತ್ತಿರುತ್ತವೆ. ಈ ಚುನಾವಣೆಗಳ ಕುರಿತು ಯೋಚಿಸಿಲ್ಲ” … Continued

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ಗೆ ಅನಾರೋಗ್ಯ, ಮಾ.೩೧ರಂದು ಶಸ್ತ್ರ ಚಿಕಿತ್ಸೆ

ಮುಂಬೈ: ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಆರೋಗ್ಯ ಹದಗೆಟ್ಟಿದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ. ಅವರ ಪಿತ್ತಕೋಶದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಭಾನುವಾರ ಸಂಜೆಯಿಂದ ಶರದ್ ಪವಾರ್ ಅವರ ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದ್ದು, ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದರು. ಅವರ ಪಿತ್ತಕೋಶದಲ್ಲಿ ಕಲ್ಲುಗಳು ಇರುವುದನ್ನು ವೈದ್ಯರು ಪತ್ತೆಹಚ್ಚಿದ್ದಾರೆ. ಹೀಗಾಗಿ ಮುಂದಿನ ಅವರ ಎಲ್ಲ … Continued

ಅನಿಲ್ ದೇಶ್ಮುಖ್ ವಿರುದ್ಧ ಪರಮ್ ಬಿರ್ ಸಿಂಗ್ ಆರೋಪದ ತನಿಖೆ ನಡೆಸಲು ಜೂಲಿಯೊ ರಿಬೆರಿಯೊ ನಿರಾಕರಣೆ

ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧದ ಭ್ರಷ್ಟಾಚಾರದ ಆರೋಪದ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಮುಂಬೈ, ಗುಜರಾತ್ ಮತ್ತು ಪಂಜಾಬ್‌ನ ಮಾಜಿ ಡಿಜಿಪಿ ಜೂಲಿಯೊ ರಿಬೆರಿಯೊ ಅವರ ಹೆಸರನ್ನು ಸೂಚಿಸಿದ ಕೆಲವೇ ಗಂಟೆಗಳ ನಂತರ, ಹಿರಿಯ ಪೋಲೀಸ್ ವಿಚಾರಣೆಯ ಭಾಗವಾಗಲು ಅವರು ನಿರಾಕರಿಸಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ ವರದಿಯ … Continued

ಗೃಹ ಸಚಿವ ದೇಶ್ಮುಖ್‌ ವಿರುದ್ಧ ಆರೋಪ ಗಂಭೀರ ಸ್ವರೂಪದ್ದು:ಶರದ್‌ ಪವಾರ್‌

ಮುಂಬೈ; ರಾಷ್ಟ್ರೀಯ ಪಕ್ಷದ (ಎನ್‌ಸಿಪಿ) ನಾಯಕ ಹಾಗೂ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಾಗಿ ಪರಿಣಮಿಸುತ್ತಿದ್ದಾರೆ. ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರು ಕಳಂಕಿತ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಗೃಹ ಸಚಿವ ಅನಿಲ ದೇಶ್ಮುಖ್ ‌ ಹಣ ಸುಲಿಗೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ … Continued

ಪರಮ್ ಬಿರ್ ಸಿಂಗ್ ಪತ್ರ: ಅಜಿತ ಪವಾರ್‌- ಜಯಂತ ಪಾಟೀಲ ಭೇಟಿ ಮಾಡಲಿರುವ ಶರದ್ ಪವಾರ್

ಮುಂಬೈ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಮಾ.೨೧ರಂದು (ಭಾನುವಾರ) ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಅವರನ್ನು ಭೇಟಿ ಮಾಡಿ ಮಹಾರಾಷ್ಟ್ರದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಲಿದ್ದಾರೆ. ಗೃಹ ಸಚಿವ ಅನಿಲ್ ದೇಶ್ಮುಖ್ “ದುಷ್ಕೃತ್ಯ” ದಲ್ಲಿ ತೊಡಗಿದ್ದಾರೆ. ಅಮಾನತುಗೊಂಡ ಎಪಿಐ ಸಚಿನ್ ವಾಝೆ ಅವರಿಗೆ ಪ್ರತಿ ತಿಂಗಳು … Continued