ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಭದ್ರತೆ ಹೆಚ್ಚಳಕ್ಕೆ ಸಿಎಂ ಬೊಮ್ಮಾಯಿ ಸೂಚನೆ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಜೊತೆ ಖುದ್ದು ಮಾತಾಡಿದ್ದೇನೆ ಹಾಗೂ ಅವರಿಗೆ ಸೂಕ್ತ ಭದ್ರತೆ ಒದಗಿಸಲು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಶುಕ್ರವಾರ ಮಾಧ್ಯದವರ ಜೊತೆ ಮಾತನಾಡಿದ ಅವರು, ಯಾರಿಂದಲಾದರೂ ಬೆದರಿಕೆ ಕರೆ ಬಂದಿದೆಯಾ ಎಂದು ಸಿದ್ದರಾಮಯ್ಯ ಅವರನ್ನೇ … Continued

ಮುಂಬರುವ ವಿಧಾನಸಭಾ ಚುನಾವಣೆಯೇ ನನ್ನ ಕೊನೆಯ ಚುನಾವಣೆ, ಚಾಮುಂಡೇಶ್ವರಿಯಿಂದ ಸ್ಪರ್ಧಿಸಲ್ಲ: ಸಿದ್ದರಾಮಯ್ಯ

ಮೈಸೂರು: 2023ರ ವಿಧಾನಸಭಾ ಚುನಾವಣೆಯೇ ನನ್ನ ಕೊನೆಯ ಚುನಾವಣೆಯಾಗಿದೆ. ಆ ಬಳಿಕ ಸಕ್ರೀಯ ರಾಜಕಾರಣದಿಂದ ದೂರ ಉಳಿಯಲಿದ್ದೇನೆ ಎಂದು ಮಾಜಿ  ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಣೆ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರ ವಿಧಾನಸಭಾ ಚುನಾವಣೆಯಲ್ಲಿ ಮಾತ್ರ ಸ್ಪರ್ಧಿಸಲಿದ್ದು, ಇದು ನನ್ನ ಕೊನೆಯ ಚುನಾವಣೆಯಾಗಿದೆ. ನಂತರ ಯಾವುದೇ ಚುನಾವಣೆ ರಾಜಕೀಯದಿಂದ ದೂರ ಸರಿಯಲಿದ್ದೇನೆ. ಯಾವುದೇ ಹುದ್ದೆ … Continued

ಸಿದ್ದರಾಮಯ್ಯ ಕೊಟ್ಟ ಪರಿಹಾರದ ಹಣ ಕಾರಿನತ್ತ ಎಸೆದು ಮಹಿಳೆಯ ಆಕ್ರೋಶ

ಬಾಗಲಕೋಟೆ: ಬಾದಾಮಿಯ ಕೆರೂರು ಗುಂಪು ಘರ್ಷಣೆ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದವರನ್ನು ಭೇಟಿಯಾಗಿ ಸಾಂತ್ವನ ಹೇಳಲು ಬಂದಿದ್ದ ರಾಜ್ಯ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಇರಿಸು ಮುರಿಸಾಗುವ ಪ್ರಸಂಗ ನಡೆಯಿತು. ಕೆರೂರ ಗುಂಪು ಘರ್ಷಣೆಯಲ್ಲಿ ಗಾಯಗೊಂಡಿದ್ದವರು ಬಾಗಲಕೋಟೆ ಬಳಿಯ ಆಶೀರ್ವಾದ ಆಸ್ಪತ್ರೆಗೆ ದಾಖಲಾಗಿದ್ದರು.ಈ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿ, ಪರಿಹಾರ ನೀಡುವ ಸಲುವಾಗಿ … Continued

ಆತ್ಮಕಥನದಲ್ಲಿ ಸಿದ್ದು ವಿರುದ್ಧ ಮೋಟಮ್ಮ ಅಸಮಾಧಾನಕ್ಕೆ ದಲಿತ ವಿರೋಧಿ ಸಿದ್ದರಾಮಯ್ಯ ಎಂದು ಟೀಕಿಸಿದ ಬಿಜೆಪಿ

ಕಾಂಗ್ರೆಸ್ ನಾಯಕಿ, ಮಾಜಿ ಸಚಿವೆ ಮೋಟಮ್ಮ ಅವರ ‘ಬಿದಿರು ನೀನ್ಯಾರಿಗಲ್ಲದವಳು’ ಆತ್ಮಕಥನದಲ್ಲಿ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ತಮ್ಮದೇ ಪಕ್ಷದ ಹಲವರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ‘ಬಿಸಿಲುಗುದುರೆ ಬೆನ್ನೇರಿ’ ಎಂಬ ಭಾಗದಲ್ಲಿ ಸಿದ್ದರಾಮಯ್ಯ ಬಗ್ಗೆ ಅಸಮಾಧಾನ ಹೊರಹಾಕಿರುವ ಮೋಟಮ್ಮ ಅವರು, ”ನನ್ನನ್ನು ಮಂತ್ರಿ ಮಾಡಬಹುದಿತ್ತು ಆದರೆ ಮಾಡಲಿಲ್ಲ, ಸಭಾಧ್ಯಕ್ಷೆ ಆಗುವ ಅವಕಾಶ … Continued

ಮೇಕೆದಾಟು ಪಾದಯಾತ್ರೆ : ಸಿದ್ದರಾಮಯ್ಯ, ಡಿಕೆಶಿ ಸೇರಿ 29 ನಾಯಕರಿಗೆ ಕೋರ್ಟ್​ ಸಮನ್ಸ್

ಬೆಂಗಳೂರು: ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ದಾಖಲಾದ ದೂರಿಗೆ ಸಂಬಂಧಿಸಿದಂತೆ ರಾಜ್ಯ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸೇರಿದಂತೆ ಕಾಂಗ್ರೆಸ್ ನಾಯಕರು ಖುದ್ದು ಹಾಜರಾಗುವಂತೆ ಕೋರ್ಟ್‌ ಸಮನ್ಸ್ ನೀಡಿದೆ. . ಕಾಂಗ್ರೆಸ್ ಪ್ರಮುಖ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸದ ಡಿ.ಕೆ.ಸುರೇಶ್ … Continued

ಬಾಬು ಜಗಜೀವನರಾಂ ಅವರಿಗೆ ಕಾಂಗ್ರೆಸ್ ಕೊಟ್ಟ ಸನ್ಮಾನ ಏನೆಂದು ನಿಮಗೆ ಗೊತ್ತಾ: ಸಿದ್ದರಾಮಯ್ಯಗೆ ಮಾತಿನಲ್ಲಿ ತಿವಿದ ಸುರೇಶಕುಮಾರ

ಬೆಂಗಳೂರು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ನೀಡಿದ ಹೇಳಿಕೆಗಳಿಗೆ ಮಾಜಿ ಸಚಿವ ಸುರೇಶಕುಮಾರ್ ತಿರುಗೇಟು ನೀಡಿದ್ದಾರೆ. ಡಾ.ಬಾಬು ಜಗಜೀವನ್ ರಾಮ್‍ರ ಜಯಂತಿ ಆಚರಣೆ ವೇಳೆ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸುರೇಶಕುಮಾರ, ದಲಿತರ ಏಳಿಗೆಗೆ ದುಡಿದ ಬಾಬು ಜಗಜೀವನರಾಂ ಅವರಿಗೆ ಕಾಂಗ್ರೆಸ್ ಪಕ್ಷದವರು ಕೊಟ್ಟ ಸನ್ಮಾನ ನಿಮಗೆ ಗೊತ್ತಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಬಾಬು ಜಗಜೀವನ್ ರಾಮ್ … Continued

ನನಗೆ ಸ್ವಾಮೀಜಿಗಳ ಮೇಲೆ ಗೌರವವಿದೆ, ಹೇಳಿಕೆಯನ್ನು ಯಾವ್ಯಾವ್ದಕ್ಕೋ ಲಿಂಕ್‌ ಮಾಡ್ಬೇಡಿ: ಮಾಧ್ಯಮದವರ ಮೇಲೆ ಸಿದ್ದರಾಮಯ್ಯ ಗರಂ

ಮೈಸೂರು: ಸ್ವಾಮೀಜಿಗಳ ಜೊತೆ ನಾನು ಯಾವತ್ತೂ ಅಗೌರವದಿಂದ ನಡೆದುಕೊಂಡಿಲ್ಲ. ಮೊದಲಿನಿಂದಲೂ ಅವರೊಂದಿಗೆ ಸಂಬಂಧ ಚೆನ್ನಾಗಿದೆ. ಅಪಾರ ಗೌರವವಿಟ್ಟುಕೊಂಡಿದ್ದೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಹಿಜಾಬ್‌ ವಿಚಾರವಾಗಿ ಪ್ರಶ್ನೆಯನ್ನೇ ಮಾಡಿಲ್ಲ. ಹಿಜಾಬ್‌ ಬೇರೆ, ದುಪ್ಪಟ್ಟಾ ಬೇರೆ. ಸಮವಸ್ತ್ರ ಜೊತೆಗೆ ಅದೇ ಬಣ್ಣದ ದುಪ್ಪಟ್ಟಾ ಹಾಕಿಕೊಂಡು ಪರೀಕ್ಷೆ … Continued

ಮುಂದಿನ ಚುನಾವಣೆಯೇ ನನ್ನ ಕೊನೆಯ ಚುನಾವಣೆ, ನಂತರ ಚುನಾವಣಾ ರಾಜಕೀಯದಿಂದ ನಿವೃತ್ತಿ : ಸಿದ್ದರಾಮಯ್ಯ

ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಯೇ ನನ್ನ ಕೊನೆಯ ಚುನಾವಣೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನ ಸಿದ್ದರಾಮನಹುಂಡಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಚುನಾವಣಾ ರಾಜಕಾರಣದಿಂದ ನಾನು ನಿವೃತ್ತಿ ಪಡೆದರೂ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ತಿಳಿಸಿದರು. ವರುಣ, ಚಾಮುಂಡೇಶ್ವರಿ, ಹುಣಸೂರು, ಹೆಬ್ಬಾಳ, ಚಾಮರಾಜಪೇಟೆ, ಬಾದಾಮಿ, ಕೋಲಾರ ಹೀಗೆ ಎಲ್ಲ ಕ್ಷೇತ್ರದ ಜನರೂ ನನ್ನನ್ನು ಆಹ್ವಾನಿಸಿದ್ದಾರೆ. ಆದರೆ … Continued

ರಾಜ್ಯದ ಶಾಲೆಗಳಲ್ಲಿ ಭಗವದ್ಗೀತೆ ಕಲಿಸಲು ವಿರೋಧವಿಲ್ಲ: ಸಿದ್ದರಾಮಯ್ಯ

ಮಂಗಳೂರು: ಮಕ್ಕಳಿಗೆ ನೈತಿಕ ಶಿಕ್ಷಣ ನೀಡಲು ರಾಜ್ಯದ ಶಾಲೆಗಳಲ್ಲಿ ಭಗವದ್ಗೀತೆ ಪರಿಚಯಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದ್ದು, ಈ ಕ್ರಮಕ್ಕೆ ನಮ್ಮ ಪಕ್ಷದ ವಿರೋಧವಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮದವರೊಂದೊಗೆ ಮಾತನಾಡಿದ ಅವರು, ನಾನು ಭಗವದ್ಗೀತೆಯ ವಿರೋಧಿಯಲ್ಲ. ಶಾಲೆಗಳಲ್ಲಿ ಭಗವದ್ಗೀತೆ, ಖುರಾನ್ ಮತ್ತು … Continued

ಭಗವದ್ಗೀತೆ ಓದಿ ಭಯೋತ್ಪಾದಕರಾದ ಉದಾಹರಣೆ ಇಲ್ಲ: ಸಿ.ಟಿ. ರವಿ

ಚಿಕ್ಕಮಗಳೂರು : ಭಗವದ್ಗೀತೆ ಓದಿದವರು ಭಯೋತ್ಪಾದಕರಾಗಿಲ್ಲ, ಬದಲಾಗಿ ಜೀವನದಲ್ಲಿ ಸಾರ್ಥಕತೆ ಮೆರೆದಿದ್ದಾರೆ. ಈ ಗ್ರಂಥವು ಉತ್ತಮ ದಾರಿಯಲ್ಲಿ ನಡೆಯಲು ಪ್ರೇರಣೆ ನೀಡುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಕುರಿತು ಶನಿವಾರ ಪ್ರತಿಕ್ರಿಯಿಸಿದ ಅವರು, ಭಗವದ್ಗೀತೆ ಓದಿ ಭಯೋತ್ಪಾದಕರಾದ ಉದಾಹರಣೆ ಇಲ್ಲ ಎಂದು ತಿಳಿಸಿದರು. ಭಗವದ್ಗೀತೆ ಯಾರಿಗೂ … Continued