ಶಿರಸಿ: ಕಾಡುಬೆಕ್ಕು ಹಿಡಿಯಲು ವಿದ್ಯುತ್ ಕಂಬ ಏರಿದ ಚಿರತೆ, ವಿದ್ಯುತ್ ತಗುಲಿ ಎರಡೂ ಸಾವು

ಶಿರಸಿ: ಕಾಡು ಬೆಕ್ಕು ಹಿಡಿಯಲು ವಿದ್ಯುತ್‌ ಕಂಬ ಏರಿದ ಚಿರತೆಯೊಂದು ವಿದ್ಯುತ್ ತಂತಿ ತಗುಲಿ ಮೃತಪಟ್ಟ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ಸಮೀಪದ ಬೆಳಗಲ ಮನೆ ಬಳಿ ಶುಕ್ರವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ. ಚಿರತೆ ಬೇಟೆಗೆಂದು ಅಟ್ಟಿಸಿಕೊಂಡು ಬಂದಾಗ ಜೀವ ಉಳಿಸಿಕೊಳ್ಳಲು ಕಾಡು ಬೆಕ್ಕು ವಿದ್ಯುತ್‌ ಕಂಬ ಏರಿ ಕುಳಿತಿತ್ತು. ತನ್ನ ಬೇಟೆ ಹಿಡಿಯುವ … Continued

ಮುಜರಾಯಿ ಇಲಾಖೆಗೆ ಸೇರದ ದೇವಸ್ಥಾನಗಳಿಗೂ ವ್ಯವಸ್ಥಾಪನಾ ಸಮಿತಿ ನೇಮಕಕ್ಕೆ ಮುಂದಾದ ಸರ್ಕಾರ : ಸ್ವರ್ಣವಲ್ಲೀ ಶ್ರೀಗಳ ವಿರೋಧ

ಶಿರಸಿ: ಮುಜರಾಯಿ ಇಲಾಖೆಗೆ ಸೇರದ ದೇವಸ್ಥಾನಗಳಿಗೂ ಸರ್ಕಾರ ವ್ಯವಸ್ಥಾಪನಾ ಸಮಿತಿ ನೇಮಕ ಮಾಡಲು ಮುಂದಾಗಿರುವುದನ್ನು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ, ಹಿಂದೂ‌ ಮಹಾ ಮಂಡಳದ ಗೌರವಾಧ್ಯಕ್ಷರಾದ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಖಂಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾಧಾರಿತ … Continued

ವೀಡಿಯೊ…| ಶಿರಸಿ : ಮನೆಯಂಗಳಕ್ಕೆ ಬಂದಿದ್ದ ಬೃಹತ್‌ ಕಾಳಿಂಗ ಸರ್ಪ ಸೆರೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಜಿಲ್ಲೆ ಶಿರಸಿ‌ ತಾಲೂಕಿನ ಮರ್ಲಮನೆ ಗ್ರಾಮದಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪವೊಂದು ಸೆರೆ ಹಿಡಿಯಲಾಗಿದೆ. ಗ್ರಾಮದ ಗಣಪತಿ ಆರ್. ಹೆಗಡೆ ಎಂಬವರ ತೋಟದಲ್ಲಿ ಕಳೆದ ಎರಡು-ಮೂರು ದಿನಗಳಿಂದ ಕಾಣಿಸಿಕೊಂಡಿದ್ದ ಕಾಳಿಂಗ ಸರ್ಪ ಅಲ್ಲಿಯೇ ಬೀಡುಬಿಟ್ಟಿತ್ತು. ಸುಮಾರು 10 ಅಡಿ ಉದ್ದದ ಭಾರೀ ಗಾತ್ರದ ಕಾಳಿಂಗ ಸರ್ಪ ತೋಟದಲ್ಲಿ ಓಡಾಡುತ್ತಿತ್ತು. ಎರಡು … Continued

ಶಿರಸಿ : ಬಸ್ ಗಳ ನಡುವೆ ಡಿಕ್ಕಿ ; 13 ಜನರಿಗೆ ಗಾಯ

ಶಿರಸಿ: ಸಾರಿಗೆ ಸಂಸ್ಥೆಯ ಬಸ್ ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಚಾಲಕ-ನಿರ್ವಾಹಕ ಸೇರಿ 13 ಜನರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಸಳೂರು ಸಮೀಪ ಭಾನುವಾರ ಬೆಳಿಗ್ಗೆ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರಸಿಯಿಂದ ಅಕ್ಕಿ ಆಲೂರು ಕಡೆಗೆ ಹೊರಟಿದ್ದ ಸಾರಿಗೆ ಸಂಸ್ಥೆ ಬಸ್‌ ಹಾಗೂ … Continued

ಶಿರಸಿ: ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೂರು ವರ್ಷದ ಮಗು ಸಾವು

ಶಿರಸಿ: ಪುಟ್ಟ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ನಡೆದಿದೆ. ಶಿರಸಿಯ ಸಿ.ಪಿ.ಬಜಾರಿನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೃತ ಬಾಲಕಿಯನ್ನು ಅನುಶ್ರೀ ರಾಜಶೇಖರ ನೂಲಾಶೆಟ್ಟರ (೩) ಎಂದು ಗುರುತಿಸಲಾಗಿದೆ. ಈಕೆಯ ತಾಯಿ ಬಾವಿಯಿಂದ ನೀರು ತರಲು ತೆರಳಿದ್ದ ವೇಳೆ ಬಾಲಕಿಯೂ ಜೊತೆ ಹೋಗಿದ್ದ ವೇಳೆ ಈ ದುರ್ಘಟನೆ … Continued

ಶಿರಸಿ : ರಾಷ್ಟ್ರಧ್ವಜ ವಿರೂಪಗೊಳಿಸಿದ ಆರೋಪ, ವ್ಯಕ್ತಿಯ ಬಂಧನ

ಶಿರಸಿ : ರಾಷ್ಟ್ರದ್ವಜಕ್ಕೆ  ವಿರೂಪಗಳಿಸಿ ಅಪಮಾನ ಪ್ರಕರಣದಲ್ಲಿ ಶಿರಸಿ ನಗರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ರಾಮನಬೈಲಿನ ಉಮರ್ ಫಾರೂಕ್ ಶೇಕ್ (38 )ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯು ಈದ್ ಮಿಲಾದ್ ಹಬ್ಬದಂದು ರಾಷ್ಟ್ರದ್ವಜದಲ್ಲಿದ್ದ ಆಶೋಕ ಚಕ್ರ ಇರುವ ಜಾಗದಲ್ಲಿ ಗುಮ್ಮಟದ ಚಿತ್ರ ಅಳವಡಿಸಿ ಧರ್ಮದ ಘೋಷಣೆಯ ಅಕ್ಷರ ಅಳವಡಿಸಿ … Continued

ಶಿರಸಿ : ಟಿಎಸ್ಎಸ್ ಚುನಾವಣೆಯಲ್ಲಿ ಗೋಪಾಲಕೃಷ್ಣ ವೈದ್ಯ ಬಣಕ್ಕೆ ಪ್ರಚಂಡ ಗೆಲುವು

ಶಿರಸಿ : ಟಿಎಸ್ಎಸ್ ಸಂಸ್ಥೆಯ ಚುನಾವಣೆಯಲ್ಲಿ ಗೋಪಾಲಕೃಷ್ಣ ವೈದ್ಯರ ಬಣಕ್ಕೆ ಪ್ರಚಂಡ ಗೆಲುವು ಸಾಧಿಸಿದೆ. ಜನ ಬದಲಾವಣೆ ಬಯಸಿದ್ದರೂ ಸಹ ಹಾಲಿ ಅಧ್ಯಕ್ಷ ಕಡವೆ ರಾಮಕೃಷ್ಣ ಹೆಗಡೆ ಮಾತ್ರ ಗೆದ್ದಿದ್ದಾರೆ. ರಾಜ್ಯದ ಪ್ರಮುಖ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿರುವ ಶಿರಸಿಯ ಟಿಎಸ್ಎಸ್ ಸಹಕಾರಿ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಭಾನುವಾರ ನಡೆದ ಚುನಾವಣೆ ನಡೆಯಿತು. ಆಡಳಿತ … Continued

ಶಿರಸಿ: ಗದ್ದೆಗೆ ಉರುಳಿದ ಬಸ್‌, ಹಲವರಿಗೆ ಗಾಯ

ಶಿರಸಿ : ಕುಮಟಾ-ಶಿರಸಿ ರಸ್ತೆಯ ಹನುಮಂತಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ರಾಜ್ಯ ಸಾರಿಗೆ ಸಂಸ್ಥೆ ಬಸ್ ಗದ್ದೆಗೆ ಪಲ್ಟಿಯಾದ ಘಟನೆ ಶನಿವಾರ ನಸುಕಿನ ಜಾವ ನಡೆದಿದೆ ಎಂದು ವರದಿಯಾಗಿದೆ. ಬಸ್‌ ಮಂಗಳೂರಿನಿಂದ ಕುಷ್ಟಗಿಗೆ ಹೋಗುತ್ತಿತ್ತು. ಹನುಮಂತಿ ಬಳಿ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ … Continued

ವಿಶ್ವ ಹಿಂದು ಪರಿಷತ್‌ ಪ್ರಮುಖ ಕೇಶವ ಹೆಗಡೆ ನಿಧನ

ಶಿರಸಿ: ವಿಶ್ವ ಹಿಂದು ಪರಿಷತ್ತಿನ ಹಿರಿಯ ಮುಖಂಡ, ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ (63) ಬುಧವಾರ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಶಂಕರಪುರದಲ್ಲಿರುವ ವಿಶ್ವ ಹಿಂದು ಪರಿಷತ್ ಕಾರ್ಯಾಲಯದಲ್ಲಿದ್ದ ಕೇಶವ ಹೆಗಡೆ ಅವರಿಗೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೃದಯಾಘಾತವಾಗಿತ್ತು. ಅವರನ್ನು ತಕ್ಷಣವೇ ಸಮೀಪದ ರಂಗದೊರೈ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆ ವೇಳೆಗಾಗಲೇ … Continued

ಬಿಜೆಪಿಯ ಕೊನೆಯ ಕ್ಷಣದ ಸಂಧಾನಕ್ಕೂ ಬಗ್ಗದ ಜಗದೀಶ ಶೆಟ್ಟರ್‌ : ಸ್ಪೀಕರ್‌ ಕಾಗೇರಿಗೆ ರಾಜೀನಾಮೆ ಸಲ್ಲಿಕೆ

ಶಿರಸಿ: ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ಮುಖಂಡ ಜಗದೀಶ ಶೆಟ್ಟರ ಅವರು ತಮ್ಮ ಶಾಸಕ ಸ್ಥಾನಕ್ಕೆ ಭಾನುವಾರ ರಾಜೀನಾಮೆ ನೀಡಿದರು. ಶಿರಸಿಯಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ಅವರಿಗೆ ಸಲ್ಲಿಸಿದರು. ಜಗದೀಶ್‌ ಶೆಟ್ಟರ್‌ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಶಿರಸಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಕಚೇರಿಗೆ … Continued