ಬೆಂಗಳೂರು : ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಲಿವ್​ ಇನ್ ರಿಲೇಷನ್ ಶಿಪ್ ನಲ್ಲಿದ್ದ ಪ್ರೇಮಿಗಳು

ಬೆಂಗಳೂರು: ಲಿವ್-ಇನ್ ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದ ಇಬ್ಬರು ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ 20 ವರ್ಷದಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ (ವಿವಾಹಿತೆ) ಹಾಗೂ ಆಕೆಯ 29 ವರ್ಷದ ಲಿವ್-ಇನ್ ಪಾಲುದಾರ ಭಾನುವಾರ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು … Continued

ತಮಿಳುನಟ ವಿಜಯ ಆಂಟೋನಿ ಪುತ್ರಿ ಆತ್ಮಹತ್ಯೆ

ಚೆನ್ನೈ: ಸಂಗೀತ ಸಂಯೋಜಕ, ನಟ ಮತ್ತು ನಿರ್ಮಾಪಕ ವಿಜಯ ಆಂಟೋನಿ ಅವರ ಪುತ್ರಿ ಮೀರಾ ಸೆಪ್ಟೆಂಬರ್ 19 ರ ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆಕೆಗೆ 16 ವರ್ಷ ವಯಸ್ಸಾಗಿತ್ತು. ವರದಿಗಳ ಪ್ರಕಾರ, ಮೀರಾ ಚೆನ್ನೈನ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದ ನಂತರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯನ್ನು ಪರೀಕ್ಷಿಸಿದ ವೈದ್ಯರು … Continued

ಆನ್‌ಲೈನ್ ನಲ್ಲಿ ಸಾಲ : ಕಿರುಕುಳ ತಡೆಯಲಾರದೆ ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು : ಚೀನಾ ಆ್ಯಪ್ ಮೂಲಕ ಆನ್ಲೈನ್ ನಲ್ಲಿ ಸಾಲ ಪಡೆದಿದ್ದ ಇಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಸಾಲ ನೀಡಿದವರ ಕಿರುಕುಳ ತಡೆಯಲಾರದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದ ವರದಿಯಾಗಿದೆ. ಬೆಂಗಳೂರು ನಗರದ ಹೆಚ್​ಎಂಟಿ ಕ್ವಾರ್ಟರ್ಸ್​ನಲ್ಲಿ ಈ ಘಟನೆ ನಡೆದಿದ್ದು ತೇಜಸ್ (೨೧) ಎಂಬಾತ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಈತ ಯಲಹಂಕದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ … Continued

ಶಿರಸಿ: ಆನ್​ಲೈನ್​​ ಗೇಮ್​​ನಲ್ಲಿ ಸುಮಾರು 65 ಲಕ್ಷ ರೂ. ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ಯುವಕ

ಶಿರಸಿ: ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದ ಯುವಕನೊಬ್ಬ ಲಕ್ಷಾಂತರ ರೂ. ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕುಳವೆ ಅರಣ್ಯ ಪ್ರದೇಶದಲ್ಲಿ ಸಂಭವಿಸಿದೆ. ಶಿರಸಿ ತಾಲೂಕಿನ ಬಾಳೆತೋಟ ನಿವಾಸಿ ವಿಜೇತ ಶಾಂತಾರಾಮ ಹೆಗಡೆ (37) ಆತ್ಮಹತ್ಯೆಗೆ ಶರಣಾದ ಯುವಕ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಈತ ಆನ್ … Continued

ಯಲ್ಲಾಪುರ : ಮದುವೆಯಾಗಲು ಹೆಣ್ಣು ಸಿಗಲಿಲ್ಲವೆಂದು ಮನನೊಂದು ಸಾವಿಗೆ ಶರಣಾದ ಯುವಕ

ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ತೇಲಂಗಾರ ಗ್ರಾಮದ ಹೊರವಲಯದಲ್ಲಿ ಯುವಕನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಮೃತ ವ್ಯಕ್ತಿಯನ್ನು ನಾಗರಾಜ ಗಣಪತಿ ಗಾಂವ್ಕರ (35) ಎಂದು ಗುರುತಿಸಲಾಗಿದೆ. ಈತ ತೇಲಂಗಾರದ ಕಿರಗಾರಿಮನೆಯ ನಿವಾಸಿ. ಮನೆಯ ಸಮೀಪದ ಗುಡ್ಡದಲ್ಲಿ ಮರಕ್ಕೆ … Continued

ಪತ್ನಿ, ಇಬ್ಬರು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ

ಬೆಂಗಳೂರು : ಕ್ಯಾನ್ಸರ್‌ಗೆ ಹೆದರಿದ ಗಂಡ ತನ್ನ ಪತ್ನಿ ಮತ್ತು ಮಕ್ಕಳಿಗೆ ವಿಷವುಣಿಸಿ ಸಾಯಿಸಿದ ನಂತರ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕೋಣನಕುಂಟೆಯಲ್ಲಿ ಈ ಘಟನೆ ನಡೆದಿದ್ದು, ನಾಗೇಂದ್ರ ಎಂಬಾತ ಈ ಕೃತ್ಯ ಎಸಗಿದ್ದಾನೆ. ಪತ್ನಿ ವಿಜಯ (28), ಮಕ್ಕಳಾದ ನಿಷಾ (7), ದೀಕ್ಷಾ (5) ಅವರಿಗೆ ವಿಷವುಣಿಸಿದ್ದಾನೆ. ಅವರು … Continued

4 ವರ್ಷದ ಮಗಳೊಂದಿಗೆ ನೇಣು ಬಿಗಿದುಕೊಂಡು ತಾಯಿ ಆತ್ಮಹತ್ಯೆ, ಮತ್ತೋರ್ವ ಮಗಳು ಪಾರು

ಮಂಗಳೂರು: ನಗರದ ಕೊಡಿಯಾಲ್ ಗುತ್ತಿನಲ್ಲಿ ಮಹಿಳೆ ತನ್ನ ಮಗಳೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬುಧವಾರ ಮಧ್ಯಾಹ್ನ ಘಟನೆ ಬೆಳಕಿಗೆ ಬಂದಿದೆ. ಕೊಡಿಯಾಲ್ ಬೈಲ್ ಗುತ್ತು ಬಳಿ ಘಟನೆ ಸಂಭವಿಸಿದ್ದು ವಿಜಯ(33) ಮತ್ತು ಶೋಭಿತಾ (4) ಮೃತಪಟ್ಟವರು. 12 ವರ್ಷದ ಯಜ್ಞಾ ಬದುಕುಳಿದಿದ್ದಾಳೆ. ವಿಜಯ ತನ್ನ ಇಬ್ಬರು ಮಕ್ಕಳಿಗೂ ಕುಣಿಕೆ ಹಾಕಿ ತಾನು … Continued

ಸವಣೂರು : ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಹಾವೇರಿ: ನೇಣು ಬಿಗಿದುಕೊಂಡು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ತೊಂಡೂರು ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಹನುಮಂತಗೌಡ ಪಾಟೀಲ (54), ಪತ್ನಿ ಲಲಿತಾ ಪಾಟೀಲ (50) ಮತ್ತು ಮಗಳು ನೇತ್ರಾ (22) ಎಂದು ಗುರುತಿಸಲಾಗಿದೆ. ಹನುಮಂತಗೌಡ ಅವರು ತಮ್ಮ ಏಕೈಕ ಪುತ್ರಿ ನೇತ್ರಾ ಅವರನ್ನು 7 ತಿಂಗಳ … Continued

ಕರುಳ ಕುಡಿಯನ್ನು ಸಾಯಿಸಿ ತಾನೂ ಆತ್ಮಹತ್ಯೆಗೆ ಶರಣಾದ ದಂತ ವೈದ್ಯೆ

ಬೆಂಗಳೂರು: ದಂತ ವೈದ್ಯೆಯೊಬ್ಬಳು ತನ್ನ ಹತ್ತು ವರ್ಷದ ಮಗಳನ್ನು ಸಾಯಿಸಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಂತ ವೈದ್ಯೆ ಸೈಮಾ (36) ತನ್ನ ಹತ್ತು ವರ್ಷದ ಮಗಳು ಆರಾಧನಾಳನ್ನು ಸಾಯಿಸಿ ಆತ್ಮಹತ್ಯೆ ಮಾಡಿಕೊಂಡಿರುವವಳು ಎಂದು ಗುರುತಿಸಲಾಗಿದೆ. ಜನಶಂಕರಿ 2ನೆ ಹಂತ, ಸೇವಾಶ್ರಮ ಆಸ್ಪತ್ರೆ ಸಮೀಪ ಸೈಮಾ ಅವರ … Continued

ಕಾರವಾರ: ಮೊಬೈಲ್ ಜಾಸ್ತಿ ಬಳಸಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವತಿ

ಕಾರವಾರ: ಮೊಬೈಲ್ ಜಾಸ್ತಿ ಬಳಕೆ ಮಾಡದಂತೆ ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಹಬ್ಬುವಾಡದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಮೇಘ (20) ಎಂದು ಗುರುತಿಸಲಾಗಿದೆ. ಈ ಯುವತಿ ಮೂಲತಃ ಸಿದ್ದಾಪುರದವಳಾಗಿದ್ದು, ಕಾರವಾರದ ಹಬ್ಬುವಾಡದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು ಎಂದು ಹೇಳಲಾಗಿದೆ. ಪ್ಯಾರಾಮೇಡಿಕಲ್ ಕೋರ್ಸ್ … Continued