ಕುಂದಾಪುರ: ಅರಶಿಣಗುಂಡಿ ಜಲಪಾತ ವೀಕ್ಷಣೆ ಮಾಡುವಾಗ ನೀರು ಪಾಲಾದ ಯುವಕ

ಉಡುಪಿ : ಜಲಪಾತ ವೀಕ್ಷಣೆಗೆ ಹೋಗಿದ್ದ ಯುವಕ ಕಾಲು ಜಾರಿ ನೀರು ಪಾಲಾದ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಲ್ಲೂರು ಸಮೀಪದ ಅರಶಿಣ ಗುಂಡಿ ಜಲಪಾತದಲ್ಲಿ ನಡೆದಿದೆ. ನೀರಿಗೆ ಬಿದ್ದ ಯುವಕನನ್ನು ಭದ್ರಾವತಿ ಮೂಲದ 23 ವರ್ಷದ ಶರತಕುಮಾರ ಎಂದು ಗುರುತಿಸಲಾಗಿದೆ. ಭಾನುವಾರ ಸ್ನೇಹಿತನೊಂದಿಗೆ ಕೊಲ್ಲೂರಿಗೆ ಬಂದಿದ್ದ ಈತ ಅರಶಿನಗುಂಡಿ ಜಲಪಾತ ನೊಡಲು ತೆರಳಿದ್ದರು. ಬಂಡೆಕಲ್ಲಿನ … Continued

ವೀಡಿಯೊ…; ಮೊಬೈಲ್ ಬಳಸಿದ್ದಕ್ಕೆ ತಂದೆ-ತಾಯಿ ಬೈದರೆಂದು ಜಲಪಾತಕ್ಕೆ ಹಾರಿದ ಹುಡುಗಿ

ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯ ಚಿತ್ರಕೋಟೆ ಜಲಪಾತದ 90 ಅಡಿಗಳಷ್ಟು ಎತ್ತರದಿಂದ ಬಾಲಕಿಯೊಬ್ಬಳು ಜಿಗಿದ ಆಘಾತಕಾರಿ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಂದೆ-ತಾಯಿಗಳು ಬಾಲಕಿ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ಬೈದಿದ್ದಕ್ಕೆ ಅವಳು ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣ ಎಂದು ಹೇಳಲಾಗಿದೆ. ಅದೃಷ್ಟವಶಾತ್ ಬಾಲಕಿ ನೀರಿನಲ್ಲಿ ತೇಲುತ್ತಿದ್ದರಿಂದ ಬದುಕುಳಿದಿದ್ದಾಳೆ. ಮಂಗಳವಾರ ಸಂಜೆ ಚಿತ್ರಕೂಟ ಚೌಕಿ ಪ್ರದೇಶದಲ್ಲಿ ಈ … Continued

ಹೊಡೆಯಬೇಡಿ ಎಂದು ಅಂಗಲಾಚುತ್ತಿದ್ದರೂ ದೆಹಲಿ ಪ್ರವಾಸಿಗನ ಬೆನ್ನಟ್ಟಿ ದೊಣ್ಣೆಯಿಂದ ಮನಸೋಇಚ್ಛೆ ಥಳಿಸಿದ ಹಲ್ಲೊಕೋರರು | ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಆಗ್ರಾದಲ್ಲಿ, ತಾಜ್‌ಮಹಲ್‌ಗೆ ಭೇಟಿ ನೀಡಲು ನವದೆಹಲಿಯಿಂದ ಬಂದ ಪ್ರವಾಸಿಗನ ಮೇಲೆ ಲಾಠಿ ಮತ್ತು ರಾಡ್‌ಗಳಿಂದ ಹಲ್ಲೆ ನಡೆಸಲಾಗಿದೆ. ಆತನ ಕಾರು ಹಲ್ಲೆ ಮಾಡಿದವರೊಬ್ಬರ ಕಾರನ್ನು ಟಚ್‌ ಮಾಡಿದ ನಂತರ ಆತನ ಬೆನ್ನಟ್ಟಿ ಲಾಠಿ ಮತ್ತು ರಾಡ್‌ಗಳಿಂದ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ. ಸೋಮವಾರ ಈ ಘಟನೆ ನಡೆದಿದ್ದು, ಟ್ವಿಟ್ಟರ್ ನಲ್ಲಿ ವೀಡಿಯೊ ವೈರಲ್ ಆಗಿದೆ. ಹಲವಾರು … Continued

ವೀಡಿಯೊ…: ಮಕ್ಕಳು ಮಮ್ಮಿ..ಮಮ್ಮಿ.. ಎಂದು ಕೂಗುತ್ತಿದ್ದಾಗಲೇ ಫೋಟೊ ತೆಗೆಯುವಾಗ ಸಮುದ್ರ ಪಾಲಾದ ಮಹಿಳೆ

ಮುಂಬೈ: ಬಾಂದ್ರಾದ ಮುಂಬೈನ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ಪತಿ ಹಾಗೂ ಮಕ್ಕಳು ನೋಡನೋಡುತ್ತಿದ್ದಂತೆಯೇ 32 ವರ್ಷದ ಜ್ಯೋತಿ ಸೋನಾರ್ ಎಂಬ ಮಹಿಳೆಯನ್ನು ಭಾರಿ ಅಲೆ ಸಮುದ್ರಕ್ಕೆ ಎಳೆದೊಯ್ದಿದೆ. ದಂಪತಿ ಬಂಡೆಯ ಮೇಲೆ ಕುಳಿತಿದ್ದರು ಮತ್ತು ಅವರ ಮಕ್ಕಳು ಸಂತೋಷದಾಯಕ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದರು, ಆಗ ದುರದೃಷ್ಟಕರ ಘಟನೆ ನಡೆದಿದೆ. ಶಕ್ತಿಯುತವಾದ ಅಲೆಯು ಅಪ್ಪಳಿಸಿದಾಗ ಕಣ್ಣು ಮಿಟುಕಿಸುವುದರಲ್ಲಿ ಎಲ್ಲವೂ … Continued

ವೀಡಿಯೊ…| ಬೆಂಗಳೂರು ಕಂಪನಿ ಮುಖ್ಯಸ್ಥರ ಜೋಡಿ ಕೊಲೆ : ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರಿನ ಏರೋನಿಕ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅವರ ಜೋಡಿ ಕೊಲೆ ಪ್ರಕರಣದ ಸಿಸಿಟಿವಿ ದೃಶ್ಯಗಳು ಗುರುವಾರ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಈ ದೃಶ್ಯಾವಳಿಯು ಎರಡು ವಿಭಿನ್ನ ಕ್ಷಣಗಳನ್ನು ಸೆರೆಹಿಡಿದಿದೆ. ಕಂಪನಿಯ ಇಬ್ಬರು ಉನ್ನತಾಧಿಕಾರಿಗಳ ಹತ್ಯೆಯ ನಂತರ ಮೂವರು ಆರೋಪಿಗಳು ಸ್ಥಳದಿಂದ ಓಡಿಹೋಗುವುದು ವೀಡಿಯೊದಲ್ಲಿ ಕಂಡುಬರುತ್ತದೆ. ಜುಲೈ 11ರಂದು ಸಂಜೆ 4:14 ಕ್ಕೆ … Continued

ವೀಡಿಯೊ…| ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಬಂದ ಶಾಸಕನಿಗೆ ಕಪಾಳಮೋಕ್ಷ ಮಾಡಿದ ಮಹಿಳೆ

ಚಂಡೀಗಢ: ಹರಿಯಾಣದ ಗುಲಾದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸುವಾಗ ಪ್ರವಾಹ ವಿಕೋಪಕ್ಕೆ ಹೋದ ಬಗ್ಗೆ ಕೋಪಗೊಂಡ ಮಹಿಳೆಯೊಬ್ಬರು ಜನನಾಯಕ ಜನತಾ ಪಾರ್ಟಿ (ಜೆಜೆಪಿ) ಶಾಸಕ ಈಶ್ವರ್ ಸಿಂಗ್ ಅವರಿಗೆ ಬುಧವಾರ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಹರಿಯಾಣದ ಘಗ್ಗರ್ ನದಿಯ ಉಕ್ಕಿ ಹರಿಯುತ್ತಿರುವುದರಿಂದ ಆ ಪ್ರದೇಶದಲ್ಲಿನ ಪ್ರವಾಹದಿಂದ ಉಂಟಾದ ಪರಿಸ್ಥಿತಿಯ ಬಗ್ಗೆ ಮಹಿಳೆ ಕೋಪಗೊಂಡಿದ್ದರು.‘ಈಗೇಕೆ ಬಂದಿದ್ದೀರಿ’ ಎಂದು … Continued

ವೀಡಿಯೊ…| ರೈಲಿನಲ್ಲಿ ಮಹಿಳೆಯರ ಜಂಗೀ ನಿಖಾಲಿ ಕುಸ್ತಿ : ಪರಸ್ಪರ ಕಪಾಳಮೋಕ್ಷ, ಗುದ್ದಾಟ-ಪರಸ್ಪರ ಕೂದಲು ಜಗ್ಗಾಟ

ಕೋಲ್ಕತ್ತಾ: ಕೋಲ್ಕತ್ತಾದ ಲೋಕಲ್‌ ರೈಲಿನಲ್ಲಿ ಮಹಿಳೆಯರು ಪರಸ್ಪರ ಹೊಡೆದಾಡುತ್ತಿರುವುದನ್ನು ತೋರಿಸುವ ಆಘಾತಕಾರಿ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವೀಡಿಯೊವನ್ನು ಆಯುಷಿ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮಹಿಳಾ ಕಂಪಾರ್ಟ್‌ಮೆಂಟ್‌ನೊಳಗೆ ಮಹಿಳೆಯರು ಹೊಡೆದಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಅವರು ಚಪ್ಪಲಿ ಮತ್ತು ಮುಷ್ಟಿಯಿಂದ ಹೊಡೆದಾಡಿಕೊಂಡಿದ್ದಾರೆ. ಒಬ್ಬರ ಮೇಲೆ ಒಬ್ಬರು ಕಿರುಚಾಟ ಮತ್ತು ದೈಹಿಕವಾಗಿ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. … Continued

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ ದೂತಾವಾಸಕ್ಕೆ ಬೆಂಕಿ: ಅಮೆರಿಕ ತೀವ್ರ ಖಂಡನೆ : ವೀಡಿಯೊ

ನವದೆಹಲಿ: ಭಾನುವಾರ ಬೆಳಗಿನ ಜಾವ 1:30 ರಿಂದ 2:30ರ ನಡುವೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಸ್ಥಳೀಯ ಚಾನೆಲ್ ದಿಯಾ ಟಿವಿ ಮಂಗಳವಾರ ವರದಿ ಮಾಡಿದೆ. ಐದು ತಿಂಗಳ ಅವಧಿಯಲ್ಲಿ ಕಾನ್ಸುಲೇಟ್‌ನ ಮೇಲಿನ ಇದು ಎರಡನೇ ದಾಳಿಯಾಗಿದ್ದು, ಖಲಿಸ್ತಾನಿ ಬೆಂಬಲಿಗರು ಈ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಖಲಿಸ್ತಾನಿ ಬೆಂಬಲಿಗರು ಮಾರ್ಚ್‌ನಲ್ಲಿ … Continued

ನಡು ರಸ್ತೆಯಲ್ಲೇ ಯುವತಿಗೆ ಕತ್ತಿಯಿಂದ ಹಲ್ಲೆ ಮಾಡಿದ ವ್ಯಕ್ತಿ : ಸ್ಥಳೀಯರಿಂದ ರಕ್ಷಣೆ | ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮಂಗಳವಾರ ಪುಣೆಯ ಸದಾಶಿವ ಪೇಟದಲ್ಲಿ 19 ವರ್ಷದ ಯುವತಿಯ ಮೇಲೆ ಕತ್ತಯಿಂದ ಹಲ್ಲೆ ನಡೆಸಲಾಗಿದ್ದು, ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಸಂತ್ರಸ್ತೆಯ ತಲೆ ಮತ್ತು ಕೈಗೆ ಗಾಯಗಳಾಗಿದ್ದು, ವೈದ್ಯಕೀಯ ಚಿಕಿತ್ಸೆ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಒಂದು ನಿಮಿಷದ ಸಿಸಿಟಿವಿ ಫೂಟೇಜ್‌ನಲ್ಲಿ, ದಾಳಿಕೋರ ಜನನಿಬಿಡ ರಸ್ತೆಯಲ್ಲಿ ಆಯುಧದೊಂದಿಗೆ ಮಹಿಳೆಯನ್ನು ಹಿಂಬಾಲಿಸುತ್ತಿರುವುದನ್ನು ಕಾಣಬಹುದು. ದಾಳಿಕೋರ ಯುವತಿಗೆ … Continued

ಪತ್ನಿಯ ಜೊತೆ ಅಕ್ರಮ ಸಂಬಂಧದ ಶಂಕೆ : ಸ್ನೇಹಿತನ ಕತ್ತು ಸೀಳಿ ರಕ್ತ ಕುಡಿದ ಗಂಡ…!

ಚಿಕ್ಕಬಳ್ಳಾಪುರ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಮೇರೆಗೆ ವ್ಯಕ್ತಿಯೋರ್ವ ತನ್ನ ಸ್ನೇಹಿತನ ಕತ್ತು ಸೀಳಿ ರಕ್ತ ಕುಡಿದ ಭೀಭತ್ಸ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಚಿಂತಾಮಣಿ ತಾಲೂಕಿನ ಬಟ್ಲಪಲ್ಲಿ ನಿವಾಸಿ ವಿಜಯ ಎಂಬವರು ಬಾಗೇಪಲ್ಲಿ ತಾಲೂಕು ಮಂಡಂಪಲ್ಲಿ ನಿವಾಸಿ ಮಾರೇಶ ಎಂಬಾತನ ಕತ್ತು ಸೀಳಿ ಅದರ ರಕ್ತ ಕುಡಿದಿದ್ದಾನೆ ಎಂದು … Continued