“ಭೀಮಾತೀರ”ದ ಕುಖ್ಯಾತ ಬಾಗಪ್ಪ ಹರಿಜನ ಬರ್ಬರ ಹತ್ಯೆ

 ವಿಜಯಪುರ: ಭೀಮಾ ತೀರದ ಕುಖ್ಯಾತ ಹಂತಕ ಚಂದಪ್ಪ ಹರಿಜನ ಸಹಚರ ಹಾಗೂ ಸೋದರ ಸಂಬಂಧಿ ಬಾಗಪ್ಪ ಹರಿಜನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮಂಗಳವಾರ ರಾತ್ರಿ 8:50 ರ ಸುಮಾರಿಗೆ ವಿಜಯಪುರದ ರೇಡಿಯೋ ಕೇಂದ್ರದ ಬಳಿ ಮದಿನಾ ನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ವಿಜಯಪುರದ ಮದಿನಾ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ ಬಾಗಪ್ಪ ರಾತ್ರಿ … Continued

ಮಕ್ಕಳನ್ನು ಕಾಲುವೆಗೆ ಎಸೆದು, ಆತ್ಮಹತ್ಯೆಗೆ ಯತ್ನಿಸಿದ ತಾಯಿ ; ಮಕ್ಕಳು ನೀರು ಪಾಲು, ತಾಯಿ ಬಚಾವ್‌

ವಿಜಯಪುರ : ಕೌಟುಂಬಿಕ ಕಲಹದ ಕಾರಣದಿಂದ ತಾಯಿಯೊಬ್ಬಳು ತನ್ನ ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದು, ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಆಲಮಟ್ಟಿಯ ಬೇನಾಳ ಬ್ರಿಜ್ ಬಳಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ಸೋಮವಾರ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆಯಲ್ಲಿ ಮಕ್ಕಳು ಸಾವಿಗೀಡಾಗಿದ್ದು, ತಾಯಿ ಭಾಗ್ಯ ಅವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ ಎಂದು … Continued

ಕೊಲ್ಹಾರ : ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ 6 ಮಂದಿ ನೀರುಪಾಲು

ವಿಜಯಪುರ: ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ಆರು ಜನ ನೀರು ಪಾಲಾಗಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಜಾಕವೆಲ್ ಬಳಿ ಮಂಗಳವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ. ಆರು ಮಂದಿ ತೆಪ್ಪದಲ್ಲಿ ನದಿ ಪಕ್ಕದ ನಡುಗಡ್ಡೆಗೆ ಹೋಗುತ್ತಿದ್ದಾಗ ಏಕಾಏಕಿ ತೆಪ್ಪ ಮಗುಚಿ ನೀರು ಪಾಲಾಗಿದ್ದಾರೆ ಎನ್ನಲಾಗಿದೆ. ಅದರಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದ್ದು, … Continued

ವಿಜಯಪುರ ; ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ನಾಲ್ವರು ಸಾವು

ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಬಳಿ ಸಂಭವಿಸಿದ ಕಾರು ಹಾಗೂ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವಿಜಯಪುರದ ಅರ್ಜುನ ಕುಶಾಲ ಸಿಂಗ್ ರಜಪೂತ (32), ಮೇಘರಾಜ ಅರ್ಜುನ ಸಿಂಗ್ ರಜಪೂತ(12), ರವಿನಾಥ ಸುನಿಲಾಲ ಪತ್ತಾರ (52), ಪುಷ್ಪಾ ರವಿನಾಥ ಪತ್ತಾರ ( … Continued

ಕೃಷ್ಣಾ ನದಿಗೆ ತೆರಳಿದ್ದ ಇಬ್ಬರು ಬಾಲಕರು ನೀರು ಪಾಲು

ವಿಜಯಪುರ: ಯುಗಾದಿ ಅಮಾವಾಸ್ಯೆ ನಿಮಿತ್ತ ಸೋಮವಾರ ದೇವರ ಪಲ್ಲಕ್ಕಿಯೊಂದಿಗೆ ನದಿಗೆ ಸ್ನಾನಕ್ಕೆ ತೆರಳಿದ್ದ ಇಬ್ಬರು ಬಾಲಕರು ನದಿ ಪಾಲಾಗಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಲಾರ ಬಳಿಯ ಕೃಷ್ಣಾ ನದಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ನದಿ ಪಾಲಾದ ಬಾಲಕರನ್ನು ಕಾರಜೋಳ ಗ್ರಾಮದ ಸುದೀಪ ದೊಡ್ಡಮನಿ (12) ಹಾಗೂ ಶ್ರೀಧರ ದೊಡ್ಡಮನಿ (10) ಎಂದು ಗುರುತಿಸಲಾಗಿದೆ. ಯುಗಾದಿ ಅಮಾವಾಸ್ಯೆ … Continued

ಇಂಡಿ : ಯಶಸ್ವಿ ಕಾರ್ಯಾಚರಣೆ ; ಜೀವಂತವಾಗಿ ಹೊರಬಂದ ಬೋರ್‌ ವೆಲ್‌ ನಲ್ಲಿ ಬಿದ್ದಿದ್ದ 2 ವರ್ಷದ ಬಾಲಕ

ವಿಜಯಪುರ : ಜಿಲ್ಲೆಯ ಇಂಡಿ ತಾಲೂಕಿನ‌ ಲಚ್ಯಾಣ ಗ್ರಾಮದ ಜಮೀನಿನಲ್ಲಿ ಬುಧವಾರ ಸಂಜೆ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕನನ್ನು ಯಶಸ್ವಿಯಾಗಿ ರಕ್ಷಣಾ ಕಾರ್ಯ ನಡೆಸಿ ಜೀವಂತವಾಗಿ ಹೊರ ತೆಗೆಯಲಾಗಿದೆ. ಸುಮಾರು 16 ಗಂಟೆಗಳ ಕಾರ್ಯಾಚರಣೆ ಬಳಿಕ ಎರಡು ವರ್ಷದ ಸಾತ್ವಿಕ ಮುಜಗೊಂಡ ಎಂಬ ಮಗುವನ್ನು ಜೀವಂತವಾಗಿ ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ತಂದೆ-ತಾಯಿ ಸೇರಿ ಲಕ್ಷಾಂತರ ಜನರು … Continued

ಸಾರಿಗೆ ಬಸ್‍ಗಳ ಮುಖಾಮುಖಿ ಡಿಕ್ಕಿ; ಇಬ್ಬರು ಸಾವು, 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ವಿಜಯಪುರ: ಎರಡು ಸಾರಿಗೆ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಮೃತಪಟ್ಟು, 10ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಕವಲಗಿ ಗ್ರಾಮದ ಮದಭಾವಿ ಕ್ರಾಸ್ ಬಳಿ ನಡೆದಿದೆ ಎಂದು ವರದಿಯಾಗಿದೆ. ಬಸವನ ಬಾಗೇಬಾಡಿ ತಾಲೂಕಿನ ಡೋಣೂರ ಗ್ರಾಮದ ಸಾಜೀದಾ ಬೇಗಂ ಮಕಾನದಾರ್ (36) ಮತ್ತು ಕಲಬುರಗಿ ಪಟ್ಟಣದ ನಿವಾಸಿ ರೋಹಿಣಿ ಪಂಚಾಳ (31) … Continued

ವಿಜಯಪುರದಲ್ಲಿ ಮೆಕ್ಕೆಜೋಳ ಸಂಸ್ಕರಣೆ ಘಟಕ ಕುಸಿತ : ಐವರು ಕಾರ್ಮಿಕರ ಶವ ಹೊರಕ್ಕೆ

ವಿಜಯಪುರ: ನಗರದ ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿ ಸೋಮವಾರ ಸಂಜೆ ಸಂಭವಿಸಿದ ಸಂಸ್ಕರಣಾ ಘಟಕ ಕುಸಿತ ದುರಂತದಲ್ಲಿ ಸಿಲುಕಿದ್ದ ಐವರು ಕಾರ್ಮಿಕರು ಮೃದೇಹಗಳನ್ನು ಹೊರತೆಗೆಯಲಾಗಿದೆ, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಸೋಮವಾರ ಸಂಜೆ ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಆಹಾರ ಸಂಸ್ಕರಣಾ ಘಟಕದಲ್ಲಿ ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾಗ ಸೋಮವಾರ ಸಂಜೆ ಮೆಕ್ಕೆಜೋಳ ಸಂಸ್ಕರಣ ಘಟಕ ಕುಸಿದು ಕಾರ್ಮಿಕರು ಸಿಲುಕಿ … Continued

ಮಳೆಗಾಗಿ ಹೂತಿದ್ದ ಶವಗಳ ಬಾಯಿಗೆ ನೀರು ಬಿಟ್ಟ ಗ್ರಾಮಸ್ಥರು…!

ವಿಜಯಪುರ: ಮಳೆಗಾಗಿ ಪ್ರಾರ್ಥಿಸಿ ನಾನಾ ರೀತಿಯ ಜನಪದ ಆಚರಣೆಗಳು ಗ್ರಾಮೀಣ ಪ್ರದೇಶಗಳಲ್ಲಿ ರೂಢಿಯಲ್ಲಿದೆ. ಆದರೆ, ಈ ಊರಿನಲ್ಲಿ ಸ್ಮಶಾನದಲ್ಲಿ ಹೂತಿರುವ ಶವಗಳ ಬಾಯಿಗೆ ನೀರುಣಿಸಿ ಮಳೆಗಾಗಿ ಪ್ರಾರ್ಥಿಸಿರುವ ವಿಚಿತ್ರ ವಿದ್ಯಮಾನ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ರಾಜ್ಯದಲ್ಲಿ ಈ ವರ್ಷ ಮುಂಗಾರು ದುರ್ಬಲವಾಗಿದ್ದು ನಿರೀಕ್ಷಿತ ಮಳೆ ಬಾರದೆ ರೈತರು ಕಂಗಾಲಾಗಿದ್ದಾರೆ. ಜೂನ್ ಮುಗಿಯುತ್ತಾ ಬಂದರೂ ಬಹುತೇಕ ಮಳೆಯೇ … Continued

5ನೇ ಸ್ನಾತಕೋತ್ತರ ಪರೀಕ್ಷೆ ಬರೆದ 81ರ ವೃದ್ಧ….!

ವಿಜಯಪುರ: ಕಲಿಕೆಗೆ ವಯಸ್ಸು ಎಂಬುದಿಲ್ಲ ಎಂಬುದನ್ನು 81 ವರ್ಷದ ಹಿರಿಯ ನಾಗರಿಕರೊಬ್ಬರು ತೋರಿಸಿಕೊಟ್ಟಿದ್ದಾರೆ. ವಿಜಯಪುರ ನಗರದ ಪ್ರತಿಷ್ಠಿತ ಬಿ. ಎಲ್. ಡಿ. ಇ ಸಂಸ್ಥೆಯ ನರ್ಸಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ಇಗ್ನೋ ಪರೀಕ್ಷೆಯಲ್ಲಿ ನಿಂಗಯ್ಯ ಒಡೆಯರ ಎಂಬವರು ಇಂಗ್ಲಿಷ್‌ ಎಂಎ ಅಂತಿಮ ವರ್ಷದ ಪರೀಕ್ಷೆ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ. ನಿಂಗಯ್ಯ ಒಡೆಯರ ಅವರ 5ನೇ ಸ್ನಾತಕೋತ್ತರ … Continued