ಇ.ಡಿ. ಅಧಿಕಾರಿಗಳ ಮೇಲೆ ದಾಳಿ ನಡೆಸಿದ ನಂತರ ತೃಣಮೂಲ ನಾಯಕನ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ

ಕೋಲ್ಕತ್ತಾ : ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶಹಜಹಾನ್ ಶೇಖ್‌ಗಾಗಿ ಜಾರಿ ನಿರ್ದೇಶನಾಲಯ (ಇಡಿ) ಲುಕ್‌ಔಟ್ ನೋಟಿಸ್ ಜಾರಿ ಮಾಡಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಶಹಜಹಾನ್ ಶೇಖ್ ಅವರ ಮನೆ ಮೇಲೆ ದಾಳಿ ಮಾಡಲು ಹೊರಟಿದ್ದ ಇ.ಡಿ. ತಂಡದ ಮೇಲೆ ನೂರಾರು ಜನ … Continued

ಪಡಿತರ ಹಗರಣದ ಶೋಧ ಕಾರ್ಯಕ್ಕೆ ತೆರಳಿದ್ದ ಇ.ಡಿ. ಅಧಿಕಾರಿಗಳು, ವಾಹನಗಳ ಮೇಲೆ ದಾಳಿ

ಕೋಲ್ಕತ್ತಾ: ಪಡಿತರ ಹಗರಣ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಶಹಜಹಾನ್ ಶೇಖ್ ಮನೆ ಮೇಲೆ ದಾಳಿ ನಡೆಸಲು ತೆರಳಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತು ಕೇಂದ್ರ ಭದ್ರತಾ ಪಡೆಗಳ ತಂಡದ ಮೇಲೆ ಬಂಗಾಳದ ಉತ್ತರ 24 ಪರಗಣದಲ್ಲಿ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ದಾಳಿ ವೇಳೆ ಸ್ಥಳದಲ್ಲಿದ್ದ ಹಲವಾರು ಮಾಧ್ಯಮ ವಾಹನಗಳನ್ನು ಸಹ ಧ್ವಂಸಗೊಳಿಸಲಾಯಿತು ಎಂದು … Continued

ಗೂಡ್ಸ್ ರೈಲು ಡಿಕ್ಕಿ ಹೊಡೆದು ಮೂರು ಆನೆಗಳು ಸಾವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಕ್ಸಾ ಹುಲಿ ಸಂರಕ್ಷಿತ ಅರಣ್ಯದಲ್ಲಿ ಸೋಮವಾರ (ನವೆಂಬರ್‌ 27) ಪಾರ್ಸೆಲ್ ರೈಲು ಡಿಕ್ಕೆ ಹೊಡೆದ ಪರಿಣಾಮ ಮೂರು ಆನೆಗಳು ಮೃತಪಟ್ಟಿವೆ. ರಾಜಭಟ್ಖಾವಾ ಮತ್ತು ಕಲ್ಚಿನಿ ರೈಲು ನಿಲ್ದಾಣಗಳ ನಡುವಿನ ಶಿಖಾರಿ ಗೇಟ್ ಬಳಿ ಬೆಳಿಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಒಂದು ಮರಿ ಮತ್ತು ಎರಡು ವಯಸ್ಕ ಆನೆಗಳಿಗೆ … Continued

ʼ ಪಾಪಿಗಳು ಹೋಗಿದ್ರು, ಅದಕ್ಕೆ ಸೋತರುʼ : ಭಾರತ ವಿಶ್ವಕಪ್ ಸೋಲಿಗೆ ಪ್ರಧಾನಿ ಮೋದಿ ವಿರುದ್ಧ ಮಮತಾ ಬ್ಯಾನರ್ಜಿ ಪರೋಕ್ಷ ವಾಗ್ದಾಳಿ

ಕೋಲ್ಕತ್ತಾ: ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲಿನ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಬಿಜೆಪಿ ವಿರುದ್ಧ ಹೊಸ ತಗಾದೆ ತೆಗೆದಿದ್ದು, ಫೈನಲ್ ಹೊರತುಪಡಿಸಿ ವಿಶ್ವಕಪ್‌ ನಲ್ಲಿ ಭಾರತ ಕ್ರಿಕೆಟ್ … Continued

ಪಡಿತರ ಹಗರಣ: ಕೋರ್ಟ್​​ನೊಳಗೆ ಮೂರ್ಛೆ ಹೋದ ಬಂಧಿತ ಪಶ್ಚಿಮ ಬಂಗಾಳದ ಸಚಿವ

ಕೋಲ್ಕತ್ತಾ : ಪಶ್ಚಿಮ ಬಂಗಾಳದ ಬಹುಕೋಟಿ ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶುಕ್ರವಾರ (ಅ.27) ಬಂಧನಕ್ಕೊಳಗಾಗಿದ್ದ ಪಶ್ಚಿಮ ಬಂಗಾಳದ ಸಚಿವ ಜ್ಯೋತಿಪ್ರಿಯಾ ಮಲ್ಲಿಕ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಕೋರ್ಟ್​ಗೆ ಹಾಜರುಪಡಿಸಿದ ವೇಳೆ ಆದೇಶ ಕೇಳಿದ ನಂತರ ಸಚಿವರು ನ್ಯಾಯಾಲಯದೊಳಗೆ ದಿಢೀರ್​ ಮೂರ್ಛೆ ಹೋದ ಘಟನೆ ನಡೆದಿದೆ. ನ್ಯಾಯಾಲಯದ ಒಳಗೆ … Continued

ಪಶ್ಚಿಮ ಬಂಗಾಳ : ತನ್ನ ಕೆಂಪು ಟೀ ಶರ್ಟ್ ಬೀಸುತ್ತ ಎಚ್ಚರಿಕೆ ಸಂದೇಶ ರವಾನಿಸಿ ಸಂಭಾವ್ಯ ರೈಲು ಅಪಘಾತ ತಡೆದ 12 ವರ್ಷದ ಬಾಲಕ…!

ಗಮನಾರ್ಹವಾದ ಧೈರ್ಯ ಹಾಗೂ ಸಮಯಪ್ರಜ್ಞೆಯ ಪ್ರದರ್ಶನದಲ್ಲಿ, ಪಶ್ಚಿಮ ಬಂಗಾಳದಲ್ಲಿ 12 ವರ್ಷದ ಬಾಲಕನೊಬ್ಬ ಸಂಭಾವ್ಯ ರೈಲು ಅಪಘಾತವನ್ನು ತಡೆದಿದ್ದಾನೆ. ಕಳೆದ ಗುರುವಾರ ಪಶ್ಚಿಮ ಬಂಗಾಳದ ಮಾಲ್ಡಾದ ರೈಲ್ವೆ ಯಾರ್ಡ್ ಬಳಿ ಈ ಘಟನೆ ನಡೆದಿದ್ದು, ಬಾಲ ಹೀರೋ ಮುರ್ಸಲೀನ್ ಶೇಖ್ ಅಪಘಾತ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಮುರ್ಸಲೀನ್ ರೈಲ್ವೇ ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ವಲಸೆ … Continued

ಅಯ್ಯೋ ದೇವ್ರೆ…: ಐಫೋನ್ ಖರೀದಿಸಲು ತಮ್ಮ ಎಂಟು ತಿಂಗಳ ಮಗುವನ್ನು ಮಾರಾಟ ಮಾಡಿದ ದಂಪತಿ….!

ಕೋಲ್ಕತ್ತಾ: ಪಶ್ಚಿಮ ಬಂಗಾಳದಿಂದ ವರದಿಯಾದ ಆಘಾತಕಾರಿ ಘಟನೆಯಲ್ಲಿ, ದಂಪತಿ ತಮ್ಮ ಎಂಟು ತಿಂಗಳ ಮಗುವನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ದಂಪತಿ ರೀಲ್‌ಗಳನ್ನು ಮಾಡಲು ದುಬಾರಿ ಐಫೋನ್ ಖರೀದಿಸಿದ್ದಾರೆ ಎನ್ನಲಾಗಿದೆ. ಈ ವಿಲಕ್ಷಣ ಬೆಳವಣಿಗೆಯು ರಾಜ್ಯದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಪೊಲೀಸ್ ತನಿಖೆ ನಡೆಯುತ್ತಿದ್ದು, ಮಗುವಿನ ತಾಯಿ ಸತಿ ಎಂಬವಳನ್ನು … Continued

ಬಿಜೆಪಿ ಕಾರ್ಯಕರ್ತನ ಅಪಹರಣ; ಮುಖದ ಮೇಲೆ ಮೂತ್ರ ವಿಸರ್ಜಿಸಿ ಕ್ರೌರ್ಯ ಮೆರೆದ ಟಿಎಂಸಿ ಕಾರ್ಯಕರ್ತರು : ವರದಿ

ಕೋಲ್ಕತ್ತಾ : ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ಟಿಎಂಸಿ ಮುಖಂಡರು ಬಿಜೆಪಿ ಕಾರ್ಯಕರ್ತನನ್ನು ಅಪಹರಿಸಿ, ಮುಖದ ಮೇಲೆ ಮೂತ್ರ ಮಾಡಿದ ಘಟನೆ ವರದಿಯಾಗಿದೆ. ವರದಿ ಪ್ರಕಾರ, ಗುರುವಾರ ರಾತ್ರಿ, ಇತ್ತೀಚೆಗೆ ಮುಕ್ತಾಯಗೊಂಡ ಪಂಚಾಯತ್ ಚುನಾವಣೆಯ ಪೋಲಿಂಗ್ ಏಜೆಂಟ್ ಆಗಿದ್ದ ಬಿಜೆಪಿ ಕಾರ್ಯಕರ್ತನನ್ನು ಆಡಳಿತ ಪಕ್ಷವಾದ ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರು ಅಪಹರಿಸಿ ಗಾರ್ಬೆಟಾದಲ್ಲಿನ ಪಕ್ಷದ ಸ್ಥಳೀಯ … Continued

ಪಶ್ಚಿಮ ಬಂಗಾಳ ಪಂಚಾಯತ ಚುನಾವಣೆ ಹಿಂಸಾಚಾರಕ್ಕೆ 14 ಸಾವು

ಕೋಲ್ಕತ್ತಾ; ಪಶ್ಚಿಮ ಬಂಗಾಳದ ಪಂಚಾಯತ ಚುನಾವಣೆಗೆ ಶನಿವಾರ ಮತದಾನ ನಡೆಯುತ್ತಿದ್ದಂತೆ ಚುನಾವಣಾ ಸಂಬಂಧಿತ ಹಿಂಸಾಚಾರದಲ್ಲಿ ಕನಿಷ್ಠ 14 ಜನರು ಸಾವಿಗೀಡಾಗಿದ್ದಾರೆ. ಪಶ್ಚಿಮ ಬಂಗಾಳದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಸುಕಾಂತ ಮಜುಂದಾರ್ ಅವರು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು ಹಿಂಸಾಚಾರದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿದ್ದಾರೆ. “ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ಕತ್ತು ಹಿಸುಕಲಾಗಿದೆ ಮತ್ತು ಮುಕ್ತ … Continued

ಪಂಚಾಯತ ಚುನಾವಣೆಗೆ 21 ಕಿಮೀ ಓಡಿ ಬಂದು ನಾಮಪತ್ರ ಸಲ್ಲಿಸಿದ ಪಕ್ಷೇತರ ಅಭ್ಯರ್ಥಿ…! ಕಾರಣ…?

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಅಭ್ಯರ್ಥಿಯೊಬ್ಬರು ನಾಮಪತ್ರ ಸಲ್ಲಿಸಿರುವುದು ಈಗ ಭಾರೀ ಸುದ್ದಿಯಾಗಿದೆ. ಅಬ್ಬರ, ಪಟಾಕಿ, ಜನರ ಜೈಕಾರ ಯಾವುದೂ ಇಲ್ಲದೆ ಅವರು 21 ಕಿಮೀ ಓಡಿ ಬಂದು ವಿಭಿನ್ನವಾಗಿ ನಾಮಪತ್ರ ಸಲ್ಲಿಸಿರುವುದು ಜನರ ಗಮನ ಸೆಳೆದಿದೆ. ಪಶ್ಚಿಮ ಬಂಗಾಳದಲ್ಲಿ ಸದ್ಯ ಪಂಚಾಯತ ಚುನಾವಣೆ ಘೋಷಣೆಯಾಗಿದ್ದು, ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಡಾರ್ಜಿಲಿಂಗ್‌ ಹಿಲ್ಸ್‌ನ ಮಾಜಿ ಸೈನಿಕ, ಶರಣ್‌ … Continued