ಯಲ್ಲಾಪುರ ಅರೆಬೈಲ್‌ ಘಟ್ಟದಲ್ಲಿ ಸಿನಿಮೀಯ ರೀತಿಯಲ್ಲಿ ಕಾರು ಅಡ್ಡಗಟ್ಟಿ 2 ಕೋಟಿ ರೂ.ಗಳಿಗೂ ಹೆಚ್ಚು ಹಣ ದರೋಡೆ ..!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಸ್ವಿಫ್ಟ್ ಕಾರು ಸಮೇತ ಕಾರಿನಲ್ಲಿದ್ದ ಕೋಟ್ಯಾಂತರ ರೂ ಹಣವನ್ನು ದರೋಡೆ ಮಾಡಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಡ್ಡಗಟ್ಟಿ 2 ಕೋಟಿ ರೂ.ಗಳಿಗೂ ಹೆಚ್ಚು ಹಣ ದೋಚಿಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ. ಅಕ್ಟೋಬರ್ 1ರ ಶನಿವಾರ ರಾತ್ರಿ ಘಟ್ಟದ ನಿರ್ಜನ ಪ್ರದೇಶದಲ್ಲಿ ಈ ಘಟನೆ … Continued

ಯಲ್ಲಾಪುರ: ಗುಳ್ಳಾಪುರ ಸಮೀಪ ಬೈಕ್‌ಗೆ ಲಾರಿ ಡಿಕ್ಕಿ, ಇಬ್ಬರ ಸಾವು

ಯಲ್ಲಾಪುರ: ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಸೋಮವಾರ ರಾಷ್ಟ್ರೀಯ ಹೆದ್ದಾರಿ ೬೩ ಮೇಲೆ ಉತ್ತರ ಕನ್ನಡ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಸಮೀಪದ ಇಂಚರ ಹೊಟೇಲ್ ಬಳಿ ನಡೆದಿದೆ. ಮೃತರನ್ನು ಮಹಂತೇಶ ರೇವಣಪ್ಪ ಶೀಲವಂತರ( ೨೩) ಹುಬ್ಬಳ್ಳಿ, ಹಾಗೂ ಸುಮಿತ್ ಅಶೋಕ ಬಸವಾ (೨೫) ಹಳೆ ಹುಬ್ಬಳ್ಳಿ ಎಂದು ಗುರುತಿಸಲಾಗಿದೆ. … Continued

ಯಲ್ಲಾಪುರ: ಸಾವಿರ ವರ್ಷದ ಹಿಂದಿನ ಪುರಾತನ ದೇವಾಲಯದ ಬಳಿ ನಿಧಿಗಾಗಿ ಶೋಧ

ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೊನಗದ್ದೆ ಸಮೀಪದ ಗಡುಗದ್ದೆ ಬಳಿ ಇರುವ ಪುರಾತನ ಪಾಳುಬಿದ್ದ ದೇವಾಲಯದ ಬಳಿ ದುಷ್ಕರ್ಮಿಗಳು ನಿಧಿಗಾಗಿ ಶೋಧ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಗಡುಗದ್ದೆ ಬಳಿ ಪಾಳುಬಿದ್ದ ಸ್ಥಿತಿಯಲ್ಲಿ ಇರುವ ಸುಮಾರು ಒಂದೂವರೆ ಸಾವಿರ ವರ್ಷಗಳ ಹಿಂದಿನ ಶಿವ ದೇವಾಲಯದಲ್ಲಿ ಎರಡು ಶಿವ ಲಿಂಗಗಳು, ವರಗಣಪತಿ ಮೂರ್ತಿ, ಮಣ್ಣಿನಲ್ಲಿ … Continued

ಏಪ್ರಿಲ್‌ ೨೫ರಂದು ಜಿಲ್ಲಾಮಟ್ಟದ ಹೆಬ್ಬಾರ ಟ್ರೋಫಿ ಕಬಡ್ಡಿ ಪಂದ್ಯಾವಳಿ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ನಂದೊಳ್ಳಿಯ ಶ್ರೀ ಸಿದ್ಧಿವಿನಾಯಕ ಗೆಳೆಯರ ಬಳಗ (ಕಬಡ್ಡಿ) ಸಮಿತಿಯ ಆಶ್ರಯದಲ್ಲಿ ಏಪ್ರಿಲ್‌ ೨೫ ರಂದು ನಂದೊಳ್ಳಿಯ ಪ್ರೌಢಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ ಮ್ಯಾಟ್ ಹೆಬ್ಬಾರ ಟ್ರೋಫಿ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ಪ್ರಥಮ ಬಹುಮಾನ ೨೫೦೦೧, ದ್ವಿತೀಯ ಬಹುಮಾನ ೧೫೦೦೧, ತೃತೀಯ ೧೦೦೦೧, ಚತುರ್ಥ ಬಹುಮಾನ ೭೦೦೧ ರೂ.ಗಳ ಬಹುಮಾನವಿದೆ. … Continued

ಯಲ್ಲಾಪುರ: ಚಲಿಸುತ್ತಿದ್ದ ಬಸ್ಸಿನಲ್ಲಿ ಬೆಂಕಿ, ಬಸ್ ಸುಟ್ಟು ಕರಕಲು-ವಿಡಿಯೊದಲ್ಲಿ ಸೆರೆ

ಯಲ್ಲಾಪುರ: ಬೆಂಕಿ ಅವಘಢದಿಂದ ಖಾಸಗಿ ಬಸ್ಸೊಂದು ಧಗ, ಧಗನೆ ಹೊತ್ತಿ ಉರಿದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಗುರುವಾರ ಬೆಳಗಿನ ಜಾವ ಯಲ್ಲಾಪುರ ಪಟ್ಟಣದ ಜೋಡುಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿ-63 ರಲ್ಲಿ ನಡೆದಿದೆ. ಈ ಬಸ್ಸು ಮುಂಬೈಯಿಂದ ಕೇರಳಕ್ಕೆ ಹೋಗುತ್ತಿತ್ತು. ಬಸ್ಸಿನಲ್ಲಿ 28 ಜನರು ಪ್ರಯಾಣಿಸುತ್ತಿದ್ದರು. ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ. ತಕ್ಷಣ ಅಗ್ನಿಶಾಮಕ ದಳದವರು ತಕ್ಷಣ … Continued

ಹುಬ್ಬಳ್ಳಿ-ಅಂಕೋಲಾ ರೈಲು: ವನ್ಯಜೀವಿ ಮಂಡಳಿಯಿಂದ ಹೈಕೋರ್ಟ್ ಸಾಧಕ-ಬಾಧಕದ ವರದಿ ಕೇಳಿದ್ದು ಸಕಾರಾತ್ಮಕ ಬೆಳವಣಿಗೆ

ಯಲ್ಲಾಪುರ: ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗಕ್ಕೆ ಈಗಾಗಲೇ ಅರಣ್ಯ ಇಲಾಖೆಯಿಂದ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಆದರೆ, ಕೆಲವು ಸರ್ಕಾರೇತರ ಸಂಘ ಸಂಸ್ಥೆಗಳು ಮತ್ತು ಪರಿಸರವಾದಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಅದಕ್ಕೆ ಹಿನ್ನಡೆಯಾಗಿತ್ತು ಎಂದು ಅರಣ್ಯ ಮತ್ತು ಪರಿಸರ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಉಮೇಶ್ ಕತ್ತಿ ಹೇಳಿದರು. ಪಟ್ಟಣಕ್ಕೆ ಗುರುವಾರ ಸಂಜೆ ತಮ್ಮ ಕುಟುಂಬದೊಂದಿಗೆ … Continued

ಯಲ್ಲಾಪುರ: ತುಡುಗುಣಿಯಲ್ಲಿ ಚಾಕುವಿನಿಂದ ಇರಿದು ಮಹಿಳೆ ಕೊಲೆ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ತುಡುಗುಣಿಯಲ್ಲಿ ಮಹಿಳೆಯೊಬ್ಬಳನ್ನು ಗುರುವಾರ ರಾತ್ರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಕೊಲೆಯಾದವರನ್ನು ಸರೋಜಾ ಅಶೋಕ ನಾಯರ್ (೪೫) ಎಂದು ಗುರುತಿಸಲಾಗಿದೆ. ಶಿರಸಿ ಕೆರೆಕೊಪ್ಪದ ಹಾಲಿ ಗೋವಾ ಮಾಪ್ಸಾದ ನಿವಾಸಿ ಕೃಷ್ಣ  ನಾಯ್ಕ (೪೬) ಕೊಲೆಗೈದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಸರೋಜಾ ನಾಯರ್ ಅಂಗನವಾಡಿ … Continued

ಯಲ್ಲಾಪುರದಲ್ಲಿ ಒಂದೇ ಶಾಲೆಯ 21 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು..!

ಯಲ್ಲಾಪುರ:ಇಲ್ಲಿನ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಪ್ರೌಢಶಾಲೆಯ 21 ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರಿಗೆ ಸೋಮವಾರ ಕೊರೊನಾ ಸೋಂಕು ದೃಢಪಟ್ಟಿದೆ. ಕೆಲವು ದಿನಗಳ ಹಿಂದೆ 10ನೇ ತರಗತಿಯ ಒಬ್ಬ ವಿದ್ಯಾರ್ಥಿನಿಗೆ ಈ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿದಂತೆ 123 ಜನರ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ … Continued