ಪೊಲೀಸರ ಮೇಲೆ ಹಲ್ಲೆ ಪ್ರಕರಣ : ಯಲ್ಲಾಪುರ ಮಾಜಿ ಶಾಸಕರ ಪುತ್ರನ ಬಂಧನ

ಕಾರವಾರ : ಪೊಲೀಸರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಮಾಜಿ ಶಾಸಕರೊಬ್ಬರ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕ್ಷೇತ್ರದ ಮಾಜಿ ಶಾಸಕ ವಿ.ಎಸ್. ಪಾಟೀಲ ಅವರ ಪುತ್ರ ಬಾಪು ಗೌಡ ಪಾಟೀಲನನ್ನು ಮುಂಡಗೋಡ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ 2011 ರಲ್ಲಿ ಮುಂಡಗೋಡ ಮುಂಡಗೋಡ … Continued

ಯಲ್ಲಾಪುರ : ಗಂಗಾಧರ ಕೊಳಗಿ ಸೇರಿ ಮೂವರಿಗೆ ‘ವನರಾಗ ಪುಸ್ತಕ ಪ್ರಶಸ್ತಿ’ ಪ್ರದಾನ

ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಅಡಿಕೆ ಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮತ್ತು ಬೆಂಗಳೂರಿನ ಕರ್ನಾಟಕ ಗಮಕ ಕಲಾ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಜಿಲ್ಲಾಮಟ್ಟದ ಸಾಹಿತ್ಯ ಮತ್ತು ಗಮಕ ಅಧಿವೇಶನದ ಮೊದಲ ಅವಧಿಯ ವೇಳೆ ಸ್ವರ್ಣಿಮಾ ಭಾರತಿ ಸಾಹಿತ್ಯ ಸಮ್ಮಾನ ಮತ್ತು ಸಾಹಿತಿಗಳಿಗೆ ‘ವನರಾಗ ಪುಸ್ತಕ … Continued

ಚುನಾವಣೆಯಲ್ಲಿ ಶಾಸಕ ಹೆಬ್ಬಾರ ವಿರುದ್ಧ ಕೆಲಸ ಮಾಡಿದವರನ್ನ ಬಿಜೆಪಿ ಪದಾಧಿಕಾರಿಗಳಾಗಿ ಮರುನಿಯೋಜನೆ : ಹೆಬ್ಬಾರ ಅಭಿಮಾನಿ ಬಳಗ ತೀವ್ರ ವಿರೋಧ

ಯಲ್ಲಾಪುರ : ಚುನಾವಣೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ ವಿರುದ್ಧದ ಕೆಲಸ ಮಾಡಿದವರಿಗೆ ಬಿಜೆಪಿಯಲ್ಲಿ ಈಗ ಮೊದಲಿದ್ದ ಅವರ ಹುದ್ದೆಗೆ ಮತ್ತೆ ಮರುನಿಯೋಜನೆ ಮಾಡಿರುವುದಕ್ಕೆ ಶಿವರಾಂ ಹೆಬ್ಬಾರ ಅಭಿಮಾನ ಬಳಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪಕ್ಷದ ನಾಯಕರ ಈ ನಡೆಯಿಂದ ಪಕ್ಷ ನಿಷ್ಠಾವಂತ ಕಾರ್ಯಕರ್ತರಿಗೆ ಹಾಗೂ ಶಾಸಕರಿಗೆ ತೀವ್ರ ನೋವಾಗಿದೆ ಎಂದು ಮಾಜಿ ಪಟ್ಟಣ ಪಂಚಾಯತ ಸದಸ್ಯ … Continued

ಯಲ್ಲಾಪುರ: ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು

ಯಲ್ಲಾಪುರ: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಸವಾರ ಗಂಭೀರವಾಗಿ ಗಾಯಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ತಟಗಾರ ಕ್ರಾಸ್ ಬಳಿ ಭಾನುವಾರ ಸಂಜೆ ನಡೆದಿದೆ. ಗಾಯಾಳುವನ್ನು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಮೃತರನ್ನು ಮೃತರನ್ನು ತಾಲೂಕಿನ ಹುಣಸೆಕೊಪ್ಪದ ರಾಜು (16) ಮತ್ತು ರಾಮನಕೊಪ್ಪದ ದರ್ಶನ (16) ಎಂದು ಗುರುತಿಸಲಾಗಿದೆ. ಜಬೀರ್ (18) ಗಂಭೀರವಾಗಿ … Continued

ಯಲ್ಲಾಪುರ ಬಳಿ ಬಸ್‌ ಪಲ್ಟಿ; ಚಾಲಕ ಸಾವು, 25 ಪ್ರಯಾಣಿಕರಿಗೆ ಗಾಯ

ಯಲ್ಲಾಪುರ : ರಾಷ್ಟ್ರೀಯ ಹೆದ್ದಾರಿ 63ರ ಹುಬ್ಬಳ್ಳಿ ರಸ್ತೆ ಮಿಲನ್ ಹೋಟೆಲ್ ಬಳಿ ಖಾಸಗಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆ ಪಕ್ಕದಲ್ಲಿ ಉರುಳಿದ ಪರಿಣಾಮ ಚಾಲಕ ಸಾವಿಗೀಡಾಗಿ, 25 ಪ್ರಯಾಣಿಕರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿ ಸಂಭವಿಸಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಖಾಸಗಿ ಬಸ್ … Continued

ಯಲ್ಲಾಪುರ: ಅರಬೈಲ್ ಬಳಿ ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಲಾರಿ, ಚಾಲಕ, ಕ್ಲೀನರ್ ಪಾರು | ವೀಕ್ಷಿಸಿ

ಯಲ್ಲಾಪುರ: ಲಾರಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಬಳಿ ರಾಷ್ಟ್ರೀಯ ಹೆದ್ದಾರಿ ೬೩ರಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ. ಹುಬ್ಬಳ್ಳಿ ಕಡೆಯಿಂದ ಸಿಮೆಂಟ್ ತುಂಬಿಕೊಂಡು ಮಂಗಳೂರು ಕಡೆ ಹೊರಟಿದ್ದ ಲಾರಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಸುದ್ದಿ ತಿಳಿದಿ ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕದವರು ಧಾವಿಸಿ ಬಂದರೂ ದಹಿಸುವ … Continued

ಯಲ್ಲಾಪುರ: ಪಿಕ್ನಿಕ್‌ಗೆ ಹೋಗಿದ್ದ ವಿದ್ಯಾರ್ಥಿ ಗಂಗಾವಳಿ ನದಿಯಲ್ಲಿ ಮುಳುಗಿ ಸಾವು

ಯಲ್ಲಾಪುರ: ಶಾಲೆಯ ವತಿಯಿಂದ ಪಿಕ್ನಿಕ್‌ಗೆ ಹೋದ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಗಂಗಾವಳಿ ನದಿಯಲ್ಲಿ ಮುಳುಗಿ ಹೋಗಿ ಸಾವು ಕಂಡ ಧಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರದಲ್ಲಿ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ. ಗುಳ್ಳಾಪುರ ಸರ್ಕಾರಿ ಪ್ರೌಢಶಾಲೆಯ ಪ್ರಕಾಶ ವಿಠ್ಠು ಪಟಕಾರೆ (೧೬) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಗುಳ್ಳಾಪುರ ಸರ್ಕಾರಿ ಪ್ರೌಢಶಾಲೆಯ ಮಕ್ಕಳು … Continued

ಪ್ರವಾಸಕ್ಕೆಂದು‌ ಬಂದಿದ್ದ ವ್ಯಕ್ತಿ ಸಾತೊಡ್ಡಿ ಜಲಪಾತದಲ್ಲಿ ಮುಳುಗಿ ಸಾವು

ಯಲ್ಲಾಪುರ: ಪ್ರವಾಸಕ್ಕೆಂದು‌ ಬಂದಿದ್ದ ವ್ಯಕ್ತಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸಾತೊಡ್ಡಿ ಜಲಪಾತದಲ್ಲಿ ಸಂಭವಿಸಿದ ವರದಿಯಾಗಿದೆ. ಭಾನುವಾರ ಪ್ರವಾಸಕ್ಕೆ ಬಂದಿದ್ದ ಹುಬ್ಬಳ್ಳಿಯ ಪೋತುಲ್ ರಾಮ ರಾವ್ (೫೧) ಮೃತರು ಎಂದು ಗುರುತಿಸಲಾಗಿದ್ದು, ಇವರ ಮೃತದೇಹವು ಸೋಮವಾರ ದೊರೆತಿದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಾತೊಡ್ಡಿ ಜಲಪಾತಕ್ಕೆ ಪ್ರವಾಸಕ್ಕೆಂದು ಅವರು ಬಂದಿದ್ದರು. ಈಜಲು ನೀರಿಗೆ ಇಳಿದು ನಂತರ ಮುಳುಗಿದ್ದು, … Continued

ಯಲ್ಲಾಪುರ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ಎಸ್.ಹೆಗಡೆ ಕುಂದರಗಿ ನಿಧನ

ಯಲ್ಲಾಪುರ: ಸಾಮಾಜಿಕ ಕಾರ್ಯಕರ್ತ,ಹಿರಿಯ ಸಹಕಾರಿ ಧುರಿಣ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ಎಸ್.ಹೆಗಡೆ ಕುಂದರಗಿ ಗುರುವಾರ ನಿಧನರಾದರು. ಅವರಿಗೆ ೯೦ ವರ್ಷ ವಯಸ್ಸಾಗಿತ್ತು. ಅವರು ವಯೋಸಹಜ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಓರ್ವ ಪುತ್ರ, ಮೂವರು ಪುತ್ರಿಯರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಾಮಾಜಿಕ,ಶೈಕ್ಷಣಿಕ ಹಾಗೂ ಸಹಕಾರಿ ರಂಗದಲ್ಲಿ ಅಪಾರ ಕೊಡುಗೆ ನೀಡಿದ್ದ ಅವರು ಕುಂದರಗಿಯಲ್ಲಿ … Continued

ಯಲ್ಲಾಪುರ: 40ಕ್ಕೂ ಹೆಚ್ಚು ಟರ್ಕಿ ಕೋಳಿಗಳ ಸಾವು, ವಿಷಪ್ರಾಶನದ ಶಂಕೆ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೋಟೆಮನೆಯಲ್ಲಿ ಮಹಿಳೆಯೊಬ್ಬಳ 40ಕ್ಕೂ ಹೆಚ್ಚು ಕೋಳಿಗಳು ಸಾವಿಗೀಡಾದ ವರದಿಯಾಗಿದ್ದು, ವಿಷ ಪ್ರಾಷನದ ಶಂಕೆ ವ್ಯಕ್ತವಾಗಿದೆ. ಕಿಡಿಗೇಡಿಗಳು ವಿಷ ಪ್ರಾಶನ ಮಾಡಿದ್ದರಿಂದ ಉಮ್ಮಚಗಿಯ ಕಲಾವತಿ ಸೋಮಿನ್ ಸಿದ್ದಿ ಎಂಬ ಮಹಿಳೆಗೆ ಸೇರಿದ ಸುಮಾರು 40ಕ್ಕೂ ಹೆಚ್ಚು ಟರ್ಕಿ ಕೋಳಿಗಳು ಎರಡು ಹಂತಗಳಲ್ಲಿ ಸಾವಿಗೀಡಾಗಿದೆ. … Continued