ಬಿಜೆಪಿಯಲ್ಲೇ ಜಂಗೀ ಕುಸ್ತಿ: ಯತ್ನಾಳ ಹೀಗೆ ಮಾತಾಡಿದ್ರೆ ಉಚ್ಚಾಟನೆಗೆ ಒತ್ತಾಯಿಸ್ಬೇಕಾಗುತ್ತೆ ಎಂದ ರೇಣುಕಾಚಾರ್ಯ

ಬೆಂಗಳೂರು: : ವಿಧಾನಸೌಧದಲ್ಲಿ ಮಂಗಳವಾರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಪಿ. ರೇಣುಕಾಚಾರ್ಯ, ಯತ್ನಾಳ್ ಅವರೇ ನಾಟಕ ಮಾಡುವುದನ್ನು ಬಿಡಿ, ಏಕೆ ಪದೇ ಪದೆ ಯಡಿಯೂರಪ್ಪ ಕುಟುಂಬದವರನ್ನು ಟಾರ್ಗೆಟ್ ಮಾಡಿಕೊಂಡು ಹೇಳಿಕೆ ನೀಡಿಕೊಂಡು ಓಡಾಡುತ್ತೀರಿ. ನಿಮಗೆ … Continued

ಯತ್ನಾಳ ಪ್ರಖರ ಹಿಂದುತ್ವವಾದಿ: ಸಚಿವ ಈಶ್ವರಪ್ಪ

ಕಾಂಗ್ರೆಸ್‌ ಹಾಗೂ ಮುಸ್ಲಿಂ ಲೀಗ್‌ ಹೊರತುಪಡಿಸಿ ಯಾವುದೇ ಪಕ್ಷಗಳೊಂದಿಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ಬಿಜೆಪಿಯಲ್ಲಿ ಮಡಿವಂತಿಕೆ ಎಂಬುದಿಲ್ಲ, ಆದರೆ ಕಾಂಗ್ರೆಸ್‌ ದೇಶವನ್ನು ದಿವಾಳಿ ಮಾಡಿದ ಪಕ್ಷವಾಗಿದ್ದರೆ, ಮುಸ್ಲಿಂ ಲೀಗ್‌ ಪಕ್ಷ ದೇಶ ವಿರೋಧಿ ಪಕ್ಷವಾಗಿದೆ ಎಂದು ಅಭಿಪ್ರಾಯಪಟ್ಟರು. ಮೈಸೂರಿನಲ್ಲಿ ಜೆಡಿಎಸ್‌ ಬಿಜೆಪಿಗೆ ಕೈಕೊಟ್ಟಿದೆ. ಜೆಡಿಎಸ್‌ ಕೈಕೊಡುವುದರಲ್ಲಿ … Continued

ಯತ್ನಾಳ ಪರ ವಿಶ್ವನಾಥ ಬ್ಯಾಟಿಂಗ್‌

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಮಾಡಿರುವ ಆರೋಪದಲ್ಲಿ ನ್ಯಾಯವಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ. ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸನಗೌಡ ಪಾಟೀಲ ಯತ್ನಾಳ ಅವರು ಪಕ್ಷ, ಸರ್ಕಾರದ ವಿರುದ್ಧ ಹೇಳಿಕೆ ನೀಡಿಲ್ಲ ಅಲ್ಲದೆ ಜನ ವಿರೋಧಿ ಭಾಷಣಗಳನ್ನೂ ಮಾಡಿಲ್ಲ, ಸರ್ಕಾರದ … Continued

ಯತ್ನಾಳ ದಿಢೀರ್‌ ದೆಹಲಿ ಭೇಟಿ ಕಾರಣ ಬಹಿರಂಗ

ಶಾಸಕ ಬಸನಗೌಡ ಪಾಟೀಲ ಯತ್ನಾಳ ದೆಹಲಿಗೆ ಭೇಟಿ ನೀಡಿದ ಕಾರಣ ಬಹಿರಂಗಗೊಂಡಿದೆ. ವಿಜಯಪುರದ ಶ್ರೀ ಸಿದ್ದೆಶ್ವರ ಸಂಸ್ಥೆಯ ಅಡಿಯಲ್ಲಿ ನಿರ್ಮಿಸಲಾದ ಭಾರತ ರತ್ಬ ಅಟಲ್‌ ಬಿಹಾರಿ ವಾಜಪೇಯಿ ಶಿಶು ನಿಕೇತನ ಶಾಲೆಯ ಸಿಬಿಎಸ್‌ಇ ನೋಂದಣಿ ಕಾರ್ಯಕ್ಕಾಗಿ ಯತ್ನಾಳ ದೆಹಲಿಗೆ ಹೋಗಿದ್ದಾರೆ. ಪಕ್ಷದ ಹೈಕಮಾಂಡ್‌ನಿಂದ ಯಾವುದೇ ಬುಲಾವ್‌ ಬಂದಿಲ್ಲ. ಯಾವುದೇ ಮುಖಂಡರನ್ನು ಭೇಟಿ ಮಾಡಲು ಹೋಗಿಲ್ಲ ಎಂದು ಯತ್ನಾಳ … Continued

ರಾಜ್ಯಕ್ಕೆ ಬಂದ ನಂತರ ಸಚಿವ ನಿರಾಣಿ ಟೀಕೆಗೆ ಸೂಕ್ತ ಉತ್ತರ ಕೊಡುವೆ: ಯತ್ನಾಳ

ನವದೆಹಲಿ: ನಾನು ಕರ್ನಾಟಕಕ್ಕೆ ಹಿಂದಿರುಗಿದ ನಂತರ ಸಚಿವ ಮುರಗೇಶ ನಿರಾಣಿಗೆ ಸೂಕ್ತ ಉತ್ತರ ನೀಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ. ಬಸನಗೌಡ ಪಾಟೀಲ ಯತ್ನಾಳ ಕಾಂಗ್ರೆಸ್‌ “ಬಿʼ ಟೀಮ್‌ ಇದ್ದಂತೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರಗೇಶ ನಿರಾಣಿ ಆರೋಪಕ್ಕೆ ಪ್ರತಿಕ್ರಿಯಿಸಿದ  ಯತ್ನಾಳ,  ರಾಜ್ಯದ ಕೆಲ ಸಚಿವರು ನನ್ನ ಹಾಗೂ ನನ್ನ … Continued

ಯತ್ನಾಳ್‌ ಕಾಂಗ್ರೆಸ್‌ ʼಬಿʼ ಟೀಮ್‌ನಂತೆ ಕೆಲಸ ಮಾಡುತ್ತಿದ್ದಾರೆ: ಸಚಿವ ನಿರಾಣಿ

ಬೆಂಗಳೂರು: ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾಂಗ್ರೆಸ್‌ “ಬಿʼ ಟೀಮ್‌ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಮುರಗೇಶ ನಿರಾಣಿ ಆರೋಪಿಸಿದರು. ಪಂಚಮಸಾಲಿ ಸಮುದಾಯದ ಶಾಸಕರು ಹಾಗೂ ಸಚಿವರು ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸನಗೌಡ ಪಾಟೀಲ ಯತ್ನಾಳ ಬೇರೆ ಪಕ್ಷದವರಿಗಿಂತ ನಮ್ಮ ಪಕ್ಷದವರ ಮೇಲೆ ನಿರಂತರ ವಾಗ್ದಾಳಿ ನಡೆಸುತ್ತ ಬಂದಿದ್ದಾರೆ. ಯತ್ನಾಳ ನಮ್ಮ … Continued

ನೋಟಿಸ್‌ಗೆ ಹೆದರುವವ ನಾನಲ್ಲ, ಪಂಚಮಸಾಲಿಗಳಿಗೆ ೨ಎ ತಗೊಂಡೇ ಹೋಗ್ತೀವಿ:ಯತ್ನಾಳ

ಬೆಂಗಳೂರು: ನನಗೆ ನೋಟಿಸ್ ಕೊಡುವುದರಿಂದ ನನ್ನ ಬಾಯಿ ಬಂದ ಮಾಡ್ಲಿಕ್ಕೆ ಆಗುವುದಿಲ್ಲ. ಅದಕ್ಕೆಲ್ಲ ನಾನು ಹೆದರುವವನೂ ಅಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ೨ಎ ಮೀಸಲಿಗೆ ಒತ್ತಾಯಿಸಿ ಪಂಚಮಸಾಲಿ ಸಮಾಜದ ಬೃಹತ್ ಹಕ್ಕೊತ್ತಾಯದ ಸಮಾವೇಶದಲ್ಲಿ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿ ಸಮಾಜವನ್ನು 3ಬಿಗೆ ಸೇರಿಸಿದ್ದೇ … Continued

ಬಿಹಾರ್‌ ಚುನಾವಣೆಯಲ್ಲಿ ಕಾಂಗ್ರೆಸ್‌, ಆರ್‌ಜೆಡಿ ಪಕ್ಷಗಳಿಗೆ ವಿಜಯೇಂದ್ರ ಹಣ ನೀಡಿದ ಬಗ್ಗೆ ತನಿಖೆಯಾಗಲಿ: ಯತ್ನಾಳ

ಬೆಂಗಳೂರು: ಬಿಜೆಪಿ ಸೋಲಿಸುವ ಮೂಲಕ ಪ್ರಧಾನಿ ಮೋದಿ ತಾಕತ್ತನ್ನು ಕುಗ್ಗಿಸುವ ಉದ್ದೇಶದಿಂದ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಬಿಹಾರ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಆರ್‌ಜೆಡಿ ಪಕ್ಷಗಳಿಗೆ ಹಣ ನೀಡಿದ್ದು, ಈ ಕುರಿತು ಸಮರ್ಪಕ ತನಿಖೆ ನಡೆಯಬೇಕೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ. ವಿಜಯೇಂದ್ರ ಬಿಹಾರ ಚುನಾವಣೆಯಲ್ಲಿ ಹಣ ನೀಡಿದ ಬಗ್ಗೆ ಕೇಂದ್ರ ಸರಕಾರಕ್ಕೂ ಮಾಹಿತಿಯಿದೆ. … Continued

ಯಡಿಯೂರಪ್ಪ ಕುಟುಂಬದ ಮಾರಿಷಿಸ್‌ ಪ್ರವಾಸದ ಗುಟ್ಟು ರಟ್ಟಾಗಬೇಕು: ಯತ್ನಾಳ

ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬ ಇತ್ತೀಚಿಗೆ ಮಾರಿಷಿಸ್‌ಗೆ ವಿಮಾನದಲ್ಲಿ ಯಾಕೆ ಹೋಗಿತ್ತು? ಅಲ್ಲಿ ಏನು ಹಣದ ವ್ಯವಹಾರ ನಡೆದಿದೆ ಎಂಬುದು ರಾಜ್ಯದ ಜನರಿಗೆ ತಿಳಿಯಬೇಕು ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಯತ್ನಾಳ ತಿಳಿಸಿದ್ದಾರೆ. ಸತ್ಯ ಸಂಗತಿ ಜನರ ಎದುರು ಬರಬೇಕು ಎಂದು ಆಗ್ರಹಿಸಿದರು. ಯಡಿಯೂರಪ್ಪ ಅವರ ಕುಟುಂಬದ ಸದಸ್ಯರೇ ಅವರಿಗೆ … Continued

ರಾಜಾಹುಲಿ, ಬೆಟ್ಟದ ಹುಲಿಯಾರೆಂದು ಜನ ತೀರ್ಮಾನ ಮಾಡ್ತಾರೆ: ಯತ್ನಾಳ

ತುಮಕೂರು: ಭವಿಷ್ಯದಲ್ಲಿ ಯಾರು ರಾಜಾಹುಲಿ ಆಗ್ತಾರೆ ಯಾರು ಬೆಟ್ಟದ ಹುಲಿ ಆಗ್ತಾರೆ ಎಂಬುದನ್ನು ರಾಜ್ಯದ ಜನರೇ ತೀರ್ಮಾನ ಮಾಡುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಹೇಳಿದ್ದಾರೆ. ರಾಜ್ಯದಲ್ಲಿ ಲೂಟಿ ಮಾಡಿರುವ ಹಣದಲ್ಲಿ ಎಲ್ಲರನ್ನೂ ಖರೀದಿಸಲಾಗುವುದಿಲ್ಲ. ಹಣದಿಂದ ಎಲ್ಲವನ್ನೂ ಖರೀದಿ ಮಾಡುವುದು ಸಾಧ್ಯವಿದ್ದರೆ ಟಾಟಾ, ಬಿರ್ಲಾರಂಥ ಉದ್ಯಮಿಗಳು ಈ ದೇಶದ ಪ್ರಧಾನಿಗಳು ಆಗಬೇಕಿತ್ತು. ರೈಲಿನಲ್ಲಿ ಚಹಾ … Continued