ಒಂದೂವರೆ ತಿಂಗಳಲ್ಲಿ ಸಿಎಂ ಬದಲಾವಣೆ: ಮತ್ತೆ ಭವಿಷ್ಯ ನುಡಿದ ಯತ್ನಾಳ

posted in: ರಾಜ್ಯ | 0

ಮೈಸೂರು: ಬಿಜೆಪಿ ಹೈಕಮಾಂಡ್ ಎಚ್ಚರಿಕೆಯ ಬಳಿಕವೂ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಳ ಯತ್ನಾಳ ಅವರು ಇನ್ನು ಒಂದೂವರೆ ತಿಂಗಳಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಅವರು ಕೆಳಗಿಳಿಯಲಿದ್ದಾರೆ ಎಂದು ಮತ್ತೆ ಭವಿಷ್ಯ ನುಡಿದಿದ್ದಾರೆ. ಸೋಮವಾರದಿಂದ ದೇಗುಲಗಳು ಸಾರ್ವಜನಿಕರಿಗೆ ತೆರೆದ ಬೆನ್ನಲ್ಲೇ  ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದ ಅವರು,  ಮತ್ತೆ ನಾಯಕತ್ವ ಬದಲಾವಣೆ ಬಗ್ಗೆ ಮಾಧ್ಯಮಗಳಿಗೆ  ಹೇಳಿಕೆ … Continued

ಅರುಣ್‌ ಸಿಂಗ್‌ಜಿ ಭ್ರಷ್ಟಾಚಾರದಲ್ಲಿ ತೊಡಗಿರುವವರನ್ನು ಮೊದಲು ಬಿಜೆಪಿಯಿಂದ ಉಚ್ಚಾಟಿಸಿ,ನಂತರ ನನ್ನ ಬಗ್ಗೆ ಯೋಚಿಸಿ;ಯತ್ನಾಳ

ಹುಬ್ಬಳ್ಳಿ: ಭ್ರಷ್ಟಾಚಾರದಲ್ಲಿ ತೊಡಗಿರುವವರನ್ನು ಮೊದಲು ಬಿಜೆಪಿಯಲ್ಲಿ ಉಚ್ಚಾಟಿಸಲಿ, ಆಮೇಲೆ ನನ್ನ ಬಗ್ಗೆ ಏನು ಎಂಬ ನಿರ್ಧಾರ ಕೈಗೊಳ್ಳಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಶನಿವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತನ್ನನ್ನು ಉಚ್ಚಾಟನೆ ಮಾಡುವುದಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಹೇಳಿಕೆಗೆ ಪ್ರತಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಕುಟುಂಬದ ಭ್ರಷ್ಟಾಚಾರ, … Continued

ಸಿಎಂ ಬಿಎಸ್‌ವೈ ಕುಳಿತ ಹಡಗು ಮುಳುಗುತ್ತಿದೆ, ಯತ್ನಾಳ ಇದಕ್ಕೆ ಸಾಕ್ಷಿ: ಸಿದ್ದರಾಮಯ್ಯ ಲೇವಡಿ

ಬೆಳಗಾವಿ: ಮುಖ್ಯಮಂತ್ರಿ ಯಡಿಯೂರಪ್ಪ ಕುಳಿತಿರುವ ಹಡಗೇ ಮುಳುಗುತ್ತಿದೆ. ಇದಕ್ಕೆ ಅವರದ್ದೇ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರಕ್ಕೆ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂಬ ಯಡಿಯೂರಪ್ಪ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಯಡಿಯೂರಪ್ಪ ಕುಳಿತಿರುವ ಹಡಗೇ ಮುಳುಗುತ್ತಿದೆ. ಯತ್ನಾಳ್ ಅವರೇ ಇದಕ್ಕೆ ಸಾಕ್ಷಿಯಾಗಿದ್ದಾರೆ … Continued

ಯತ್ನಾಳ ಕುರಿತ ಗೊಂದಲ ಬಗೆಹರಿಸದ ಅರುಣ ಸಿಂಗ್‌ ಹೇಳಿಕೆ

ಬೆಳಗಾವಿ :ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಪಕ್ಷದಿಂದ ಹೊರ ಹಾಕಿದರೆ ಅವರು ಸ್ವತಂತ್ರರಾಗುತ್ತಾರೆ. ಕೆಲವು ವಿಷಯಗಳನ್ನು ಮಾಧ್ಯಮದವರ ಮುಂದೆ ಹೇಳಲು ಆಗುವುದಿಲ್ಲ ಎಂದು ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕಬಸನಗೌಡ ಪಾಟೀಲ ಯತ್ನಾಳ ಬಿಜೆಪಿಯಲ್ಲಿ ಜೀರೋ. ಅವರ ಹೆಸರು ಇಲ್ಲಿ ಪ್ರಸ್ತಾಪ ಬೇಡ ಎಂದು ಪಕ್ಷ ವಿರೋಧಿ … Continued

ಮೇ 2ರ ನಂತರ ಏನೇನು ಬದಲಾವಣೆಯಾಗುತ್ತದೆ ಕಾದುನೋಡಿ:ಯತ್ನಾಳ

ಬೆಳಗಾವಿ : ಮುಖ್ಯಮಂತ್ರಿ ಯಡಿಯೂರಪ್ಪನವರು ಮೀಸಲಾತಿ ಕೊಡದಿದ್ರೂ ಪರವಾಗಿಲ್ಲ. ಯಾರು ಹೊಸ ಮುಖ್ಯಮಂತ್ರಿಯಾಗುತ್ತಾರೆಯೋ ಅವರು ಕೊಡುತ್ತಾರೆ. ಮೇ 2ರ ನಂತರ ಏನೇನು ಬದಲಾವಣೆ ಆಗುತ್ತದೆ ಕಾದು ನೋಡಿ.. ಬದಲಾವಣೆ ಖಚಿತ ಬರೆದಿಟ್ಟುಕೊಳ್ಳಿ. ಉತ್ತರ ಕರ್ನಾಟಕದವರೊಬ್ಬರು ಮುಖ್ಯಮಂತ್ರಿಯಾಗುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಪ್ರಚಾರಕ್ಕೆ … Continued

ಏನಂತ ತಿಳಿದುಕೊಂಡಿದ್ದಾನೆ ಅವನು ಎಂದು ಏಕವಚನದಲ್ಲಿ ಯತ್ನಾಳ ಜರೆದ ಸಚಿವ ನಿರಾಣಿ

ಬೆಳಗಾವಿ: ಬಸನಗೌಡ ಪಾಟೀಲ ಯತ್ನಾಳ ಹಿರಿಯರು. ಅಂಥವರು ನಮ್ಮ ಪಕ್ಷದಲ್ಲಿದ್ದುಕೊಂಡು ನಮ್ಮ ಪಕ್ಷದವರನ್ನೇ ಟೀಕೆ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಸಚಿವ ಮುರುಗೇಶ ನಿರಾಣಿ ಪ್ರಶ್ನಿಸಿದರು. ಬೆಳಗವಾವಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ವಿರುದ್ಧ ಯತ್ನಾಳ ವಾಗ್ದಾಳಿ ನಡೆಸಿರುವುದಕ್ಕೆ ಕಿಡಿಕಾರಿದರು. ಯತ್ನಳ ಅವರಿಗೆ ಟೀಕೆ ಮಾಡಲೇಬೇಕು ಎಂದರೆ ಅವರು ರಾಜೀನಾಮೆ ಕೊಟ್ಟು ಹೊರಗಡೆ … Continued

ಈಶ್ವರಪ್ಪ ಏನು ತಪ್ಪು ಮಾಡಿದ್ದಾರೆ..? ಕ್ಯಾಬಿನೆಟ್‌ ಸಚಿವರಿಗೆ ಅಧಿಕಾರ ಇಲ್ಲವೆಂದ್ರೆ ಹೇಗೆ?: ಈಶ್ವರಪ್ಪ ಪರ ಯತ್ನಾಳ್ ಬ್ಯಾಟ್‌ ‌

ವಿಜಯಪುರ: ಸಚಿವ ಈಶ್ವರಪ್ಪನವರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮಾಡಿದ ಆರೋಪಕ್ಕೆ ಮಹತ್ವ ನೀಡಬೇಕು.ಈಶ್ವರಪ್ಪ ಏನು ತಪ್ಪು ಮಾಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಈಶ್ವರಪ್ಪ ಪರ ಬ್ಯಾಟ ಬೀಸಿದ್ದಾರೆ. ವಿಜಯಪುರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ದೂರು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯನ್ನು ಈ ಹಿಂದೆ ಕಟ್ಟಿದವರಲ್ಲಿ ಈಶ್ವರಪ್ಪ ಕೂಡ ಒಬ್ಬರು. … Continued

ಯತ್ನಾಳ ಆರೋಪಗಳಿಗೆ ಈಶ್ವರಪ್ಪ ಬೀಗಮುದ್ರೆ: ಕಾಂಗ್ರೆಸ್‌ ಟೀಕೆ

ಬೆಂಗಳೂರು: ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾಡುತ್ತಿದ್ದ ಆರೋಪಗಳಿಗೆ ಸಚಿವ ಕೆ.ಎಸ್‌. ಈಶ್ವರಪ್ಪ ಬೀಗಮುದ್ರೆ ಒತ್ತಿದ್ದಾರೆ ಎಂದು ಕಾಂಗ್ರೆಸ್‌ ಹೇಳಿದೆ. ಬಿಜೆಪಿ ವಿರುದ್ಧ ಟ್ವೀಟ್‌ ಮಾಡಿದ ಕಾಂಗ್ರೆಸ್‌, ಬಿಜೆಪಿ ಸರಕಾರದಲ್ಲಿ ಭೃಷ್ಟಾಚಾರ, ಸ್ವಜನಪಕ್ಷಪಾತ, ದುರಾಡಳಿತವಿದ್ದು, ರಾಜ್ಯ ಅನಾಥವಾಗಿದೆ ಎಂದು ತಿಳಿಸಿದೆ. ಬಿಜೆಪಿ ಕೂಡಲೇ ಸರಕಾರವನ್ನು ವಿಸರ್ಜಿಸಬೇಕು. ಕೊರೊನಾ ಸೋಂಕಿನಲ್ಲಿ ಭೃಷ್ಟಾಚಾರ, ನೆರೆ ಪರಿಹಾರದಲ್ಲಿ ಭೃಷ್ಟಾಚಾರ, ವರ್ಗಾವಣೆ, … Continued

ಸಿಎಂ ಬಿಎಸ್‌ವೈ ಭೇಟಿ ಮಾಡಿದ ಹಲವು ಶಾಸಕರು: ಯತ್ನಾಳ ಮೇಲೆ ಕ್ರಮಕ್ಕೆ ಒತ್ತಾಯ

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಿಜೆಪಿಯ ಸುಮಾರು ೩೦ ಶಾಸಕರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸೋಮವಾರ ರಾತ್ರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಈ ಶಾಸಕರು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಎಚ್ಚರಿಕೆ ನೀಡಿದ್ದರೂ ಲೆಕ್ಕಿಸದೇ ವಾಗ್ದಾಳಿ ಮುಂದುವರಿಸಿದ್ದಾರೆ. ಇಂತಹ … Continued

ಯತ್ನಾಳಗೆ ತಾಕತ್ತಿದ್ದರೆ ಸಿಎಂ ಬದಲಾವಣೆ ಮಾಡಲಿ: ರೇಣುಕಾಚಾರ್ಯ ಸವಾಲು

ದಾವಣಗೆರೆ : ಸಿಎಂ ಬದಲಾವಣೆ ವಿಚಾರವಾಗಿ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆಯನ್ನು ಖಂಡಿಸಿರುವ ಹೊನ್ನಾಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ, ನಿನಗೆ ತಾಕತ್ತಿದ್ದರೆ ಸಿಎಂ ಬದಲಾವಣೆ ಮಾಡು ಎಂದು ಸವಾಲು ಹಾಕಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ಯಡಿಯೂರಪ್ಪ, ಅನಂತಕುಮಾರ್ ಅವರಂಥ ಹಿರಿಯ ನಾಯಕರೇ ಹೊರತು ನಿನ್ನಂಥ ನಾಯಕರಲ್ಲ ಎಂದು ರೇಣುಕಾಚಾರ್ಯ ಯತ್ನಾಳ ವಿರುದ್ಧ ಹರಿಹಾಯ್ದಿದ್ದಾರೆ. … Continued