ದೈವಕ್ಕೆ ಅಪಮಾನ ; ಮೈಸೂರು ಚಾಮುಂಡೇಶ್ವರಿ ದೇವಿಯ ಮುಂದೆ ಕ್ಷಮೆಯಾಚಿಸಿದ ನಟ ರಣವೀರ ಸಿಂಗ್

ಮೈಸೂರು:  ಬಾಲಿವುಡ್‌ ನಟ ರಣವೀರ ಸಿಂಗ್ ಅವರು ಮಂಗಳವಾರ (ಮೇ 26) ಬೆಳಿಗ್ಗೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ‘ಕಾಂತಾರ’ ಚಿತ್ರದ ದೈವದ ದೃಶ್ಯವನ್ನು ಅಣಕಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ನಿರ್ದೇಶನದ ಮೇರೆಗೆ ಅವರುಬಚಾಮುಂಡೇಶ್ವರಿ ದೇವಿಯ ಎದುರು ಕ್ಷಮೆಯಾಚಿಸಿದ್ದಾರೆ.
2025ರ ನವೆಂಬರ್ 30 ರಂದು ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಸಮಾರೋಪ ಸಮಾರಂಭದ ವೇದಿಕೆಯ ಮೇಲೆ ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ’ ಚಿತ್ರದ ಪ್ರಸಿದ್ಧ ‘ದೈವಕೋಲ’ದ ದೃಶ್ಯವನ್ನು ರಣವೀರ ಸಿಂಗ್ ಮಿಮಿಕ್ರಿ ಮಾಡಿ ಅಣಕಿಸಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರಿ ಆಕ್ರೋಶ ವ್ಯಕ್ತವಾಗಿ ನಟನ ವಿರುದ್ಧ ಎಫ್‌ಐಆರ್ (FIR) ದಾಖಲಾಗಿತ್ತು. ಆ ಬಳಿಕ ರಣವೀರ ಸಿಂಗ್‌ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೇಷರತ್ ಕ್ಷಮೆಯಾಚಿಸಿದ್ದರು. ಜೊತೆಗೆ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ, ಕ್ಷಮೆ ಕೇಳುವುದಾಗಿ ತಿಳಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಣವೀರ ಸಿಂಗ್ ನೀಡಿದ್ದ ಪರಿಷ್ಕೃತ ಪ್ರಮಾಣಪತ್ರ ಮತ್ತು ಬೇಷರತ್ ಕ್ಷಮಾಪಣೆಯನ್ನು ಪರಿಶೀಲಿಸಿದ ನಂತರ ಹೈಕೋರ್ಟ್, ಪ್ರಕರಣವನ್ನು ಇತ್ಯರ್ಥಪಡಿಸುವ ಮುನ್ನ ನಾಲ್ಕು ವಾರಗಳ ಒಳಗಾಗಿ ಮೈಸೂರಿನ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವಂತೆ ಏಪ್ರಿಲ್‌ನಲ್ಲಿ ಸೂಚಿಸಿತ್ತು. ಅದರಂತೆ ರಣವೀರ ಸಿಂಗ್ ಮಂಗಳವಾರ ಮುಂಜಾನೆ ಮುಂಬೈ ವಿಮಾನ ನಿಲ್ದಾಣದಿಂದ ನೇರವಾಗಿ ಮೈಸೂರಿಗೆ ಆಗಮಿಸಿ, ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಗರ್ಭಗುಡಿಯೊಳಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement