ನವದೆಹಲಿ: 2024 ರ ವರ್ಷ ಮುಗಿದು ೨೦೨೫ಕ್ಕೆ ಕಾಲಿಡುವ ಹಂತದಲ್ಲಿದ್ದೇವೆ. ಈ ವರ್ಷ ಜನರು ಯಾವ ಯಾವ ವಿಷಯಗಳನ್ನು ಹೆಚ್ಚಾಗಿ ತಿಳಿದುಕೊಳ್ಳಲು ಇಷ್ಟಪಟ್ಟಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಗೂಗಲ್ (Google) ಸರ್ಚ್ ಇಂಜಿನ್ ವಾರ್ಷಿಕವಾಗಿ ತನ್ನ ವಿಶೇಷ “ಇಯರ್ ಇನ್ ಸರ್ಚ್” ವರದಿಯಲ್ಲಿ ವಿವಿಧ ಥೀಮ್ಗಳಲ್ಲಿ ಹೆಚ್ಚು ಹುಡುಕಲಾದ ವಿಷಯಗಳ ಪಟ್ಟಿಯನ್ನು ಮಾಡುತ್ತದೆ.
ಬಿಡುಗಡೆಯಾದ 2024 ರ ವರದಿಯು ವರ್ಷವಿಡೀ ಭಾರತದಲ್ಲಿ ಹೆಚ್ಚು ಹುಡುಕಲ್ಪಟ್ಟ ಟಾಪ್ 10 ವಿಷಯಗಳಾವವು ಎಂಬ ಪಟ್ಟಿಯನ್ನು ಗೂಗಲ್ ಬುಧವಾರ ಬಿಡುಗಡೆ ಮಾಡಿದೆ. ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್(IPL), ಟಿ20 ವಿಶ್ವಕಪ್(“T20 World Cup) ಶಬ್ದಗಳನ್ನು ಜನ ಅತಿ ಹೆಚ್ಚಾಗಿ ಸರ್ಚ್(search) ಮಾಡಿದ್ದಾರೆ.
“ಇಂಡಿಯನ್ ಪೀಮಿಯರ್ ಲೀಗ್(IPL) ಈ ವರ್ಷದ ಅತ್ಯಂತ ಪ್ರಮುಖ ಸುದ್ದಿಯಾಗಿದೆ. ದೇಶ ವಿದೇಶಗಳಲ್ಲಿ ಜನ ಇದರ ತಿಳಿಯಲು ಬಹಳಷ್ಟು ಮಾಹಿತಿ ಸರ್ಚಚ ಮಾಡಿದ್ದಾರೆ ಎಂದು ಗೂಗಲ್ ಬ್ಲಾಗ್ ಪೋಸ್ಟ್ನಲ್ಲಿ ತಿಳಿಸಿದೆ. ಟಿ20 ವಿಶ್ವಕಪ್ (T20 World Cup) ಹಾಗೂ ರತನ ಟಾಟಾ(Ratan Tata) ಎಂಬ ಕೀ ವರ್ಡ್ನಿಂದ ಆರಂಭವಾಗುವ ಸರ್ಚ್ ವಿಷಯಗಳು ಮುಂಚೂಣಿಯಲ್ಲಿದೆ.
ಅಲ್ಲದೆ, ಭಾರತೀಯ ಜನತಾ ಪಾರ್ಟಿ (Bharatiya Janata Party), ಚುನಾವಣಾ ಫಲಿತಾಂಶಗಳು 2024 (Election Results 2024) ಮತ್ತು ಒಲಿಂಪಿಕ್ಸ್ 2024 (Olympics 2024) ಕುರಿತ ಪ್ರಶ್ನೆಗಳು ಟಾಪ್ ಐದರಲ್ಲಿ ಸ್ಥಾನಗಳು ಪಡೆದು ಕೊಂಡಿವೆ. ಅತಿಯಾದ ಶಾಖ (excessive heat), ಇಂಡಿಯನ್ ನ್ಯಾಷನಲ್ ಕಾಂಗ್ರೆಸ್(Indian National Congress) ಪ್ರೊ ಕಬಡ್ಡಿ ಲೀಗ್( Pro Kabaddi ) ಮತ್ತು ಇಂಡಿಯನ್ ಸೂಪರ್ ಲೀಗ್(Indian Super League) ಭಾರತದಲ್ಲಿ ಈ ವರ್ಷದ ಟಾಪ್ 10 ಟ್ರೆಂಡ್ಗಳಲ್ಲಿ ಸ್ಥಾನ ಪಡೆದಿವೆ.
ಇಷ್ಟೇ ಅಲ್ಲದೇ ರಿಲಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ಅಧ್ಯಕ್ಷ ಮುಖೇಶ ಅಂಬಾನಿ (Mukesh Ambani) ಪುತ್ರ ಅನಂತ ಅಂಬಾನಿ (Anant Ambani) ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ರಾಧಿಕಾ ಮರ್ಚೆಂಟ್ (Radhika Merchant) ಬಗ್ಗೆಯೂ ಅತೀ ಹೆಚ್ಚು ಜನರು ಗೂಗಲ್ ಮಾಡಿದ್ದು, ಅವರ ಹಿನ್ನಲೆ, ವಿದ್ಯಾರ್ಹತೆ, ಆಸ್ತಿ-ಪಾಸಿ ಇತ್ಯಾದಿ ವಿಷಗಳ ಕುರಿತು ಜನರು ಸರ್ಚ್ ಮಾಡಿದ್ದಾರೆ.
ಈ ವರ್ಷ ಗೂಗಲ್ನಲ್ಲಿ ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ಟಾಪ್ ಹತ್ತು ವಿಷಯಗಳು:
ಇಂಡಿಯನ್ ಪ್ರೀಮಿಯರ್ ಲೀಗ್
ಟಿ20 ವಿಶ್ವಕಪ್
ಭಾರತೀಯ ಜನತಾ ಪಕ್ಷ
ಚುನಾವಣಾ ಫಲಿತಾಂಶಗಳು 2024
ಒಲಿಂಪಿಕ್ಸ್ 2024
ವಿಪರೀತ ಶಾಖ
ರತನ್ ಟಾಟಾ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಪ್ರೊ ಕಬಡ್ಡಿ ಲೀಗ್
ಇಂಡಿಯನ್ ಸೂಪರ್ ಲೀಗ್
ನಿಮ್ಮ ಕಾಮೆಂಟ್ ಬರೆಯಿರಿ