ಆಸ್ಪತ್ರೆಯಲ್ಲಿ ಬೆಡ್‌ ಸಿಗದೆ ಬಿಜೆಪಿ ಮಾಜಿ ಸಂಸದರ ಪುತ್ರ ಸಾವು…!

ಲಕ್ನೋ : ಲಕ್ನೋದ ಎಸ್‌ಜಿಪಿಜಿಐ ಆಸ್ಪತ್ರೆಯ ತುರ್ತು ವಾರ್ಡ್‌ನಲ್ಲಿ ಹಾಸಿಗೆಗಳ ಕೊರತೆ ಹಾಗೂ ವೈದ್ಯರ ನಿರ್ಲಕ್ಷ್ಯದಿಂದಾಗಿ ತನ್ನ ಮಗ ಮೃತಪಟ್ಟಿದ್ದಾನೆ ಎಂದು ಬಿಜೆಪಿಯ ಮಾಜಿ ಸಂಸದರೊಬ್ಬರು ಆರೋಪಿಸಿದ್ದಾರೆ ಹಾಗೂ ಸರ್ಕಾರ ವೈದ್ಯರನ್ನು ಅಮಾನತುಗೊಳಿಸುವ ವರೆಗೆ ಮತ್ತು ಮುಂದಿನ ಕ್ರಮದ ಭರವಸೆ ನೀಡುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಮಗನ ಮೃತದೇಹದೊಂದಿಗೆ ವಾರ್ಡ್‌ ಮುಂದೆ ಪ್ರತಿಭಟನೆ ನಡೆಸಿದರು.
ಬಿಜೆಪಿಯ ಮಾಜಿ ಸಂಸದ ಭೈರೋನಪ್ರಸಾದ ಮಿಶ್ರಾ ಅವರ ಪುತ್ರ, 41 ವರ್ಷದ ಪ್ರಕಾಶ ಮಿಶ್ರಾ ಅವರು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಸೋಮವಾರ ರಾತ್ರಿ 11 ಗಂಟೆಗೆ ಎಸ್‌ಜಿಪಿಜಿಐ ಆಸ್ಪತ್ರೆ ತುರ್ತು ವಿಭಾಗಕ್ಕೆ ಕರೆತರಲಾಗಿತ್ತು. ಆದರೆ ಯಾವುದೇ ಹಾಸಿಗೆ ಲಭ್ಯವಿಲ್ಲ ಮತ್ತು ತುರ್ತು ವೈದ್ಯಕೀಯ ಅಧಿಕಾರಿ ಯಾವುದೇ ಸಹಾಯಕ್ಕೆ ಮುಂದಾಗಲಿಲ್ಲ ಎಂದು ಮಿಶ್ರಾ ಆರೋಪಿಸಿದ್ದಾರೆ. ಈ ಕಾರಣಕ್ಕಾಗಿ ತಮ್ಮ ಮಗ ಸ್ವಲ್ಪ ಸಮಯದ ನಂತರ ನಿಧನರಾದರು ಎಂದು ಮಾಜಿ ಸಂಸದರು ದೂರಿದ್ದಾರೆ. ಹೀಗಾಗಿ ಮಿಶ್ರಾ ತಮ್ಮ ಮಗನ ಶವದೊಂದಿಗೆ ತುರ್ತು ವಾರ್ಡ್‌ನ ಹೊರಗೆ ಪ್ರತಿಭಟನೆಗೆ ಕುಳಿತರು.
“ನಾನು ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ನನ್ನ ನಂತರ ಬಂದ ಸುಮಾರು 20-25 ಜನರು ಚಿಕಿತ್ಸೆ ಪಡೆದರು. ಆದನೆ ನನಗೆ ಸಾಲಿನಲ್ಲಿ ನಿಲ್ಲಲು ಹೇಳಿದರು. ನಾನು ಪ್ರತಿಭಟನೆಗೆ ಕುಳಿತಾಗ ಎಲ್ಲರೂ ಆ ವೈದ್ಯರ ಬಗ್ಗೆ ದೂರು ನೀಡುತ್ತಿದ್ದರು. ಅವರಿಗೆ ಶಿಕ್ಷೆಯಾಗಬೇಕು.” ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ...| ಹೆಲಿಕಾಪ್ಟರ್ ಹತ್ತುವಾಗ ಕಾಲು ಜಾರಿ ಬಿದ್ದ ಮಮತಾ ಬ್ಯಾನರ್ಜಿ

ಆಸ್ಪತ್ರೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮದ ಭರವಸೆ ನೀಡಿದ್ದಾರೆ ಮತ್ತು ಪ್ರಕರಣದ ತನಿಖೆಗಾಗಿ ತ್ರಿಸದಸ್ಯ ಸಮಿತಿಯನ್ನು ರಚಿಸಿದ್ದಾರೆ. ಆ ಬಳಿಕವಷ್ಟೇ ಮಿಶ್ರಾ ಅವರು ಮಗನ ಶವದೊಂದಿಗೆ ಮನೆಗೆ ಮರಳಿದ್ದಾರೆ. ಗಾಜಾ ಆಸ್ಪತ್ರೆ ದಾಳಿಗೆ ಕಾರಣ ಯಾರು? ವಿಧಿವಿಜ್ಞಾನ ತನಿಖೆ ಹೇಳುವುದೇನು? “ಅವರನ್ನು ಐಸಿಯುಗೆ (ಇಂಟೆನ್ಸಿವ್ ಕೇರ್ ಯುನಿಟ್) ಕರೆದೊಯ್ಯಲು ವೈದ್ಯರು ಹೇಳಿದರು. ಆದರೆ ಹಾಸಿಗೆಗಳು ಲಭ್ಯವಿಲ್ಲ. ನಾವು ಈ ಬಗ್ಗೆ ಪರಶೀಲನೆಗೆ ಸಮಿತಿಯನ್ನು ರಚಿಸಿದ್ದೇವೆ. ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ … ಸದ್ಯ ವೈದ್ಯರನ್ನು ಅಮಾನತುಗೊಳಿಸಲಾಗಿದೆ ಎಂದು ಆಸ್ಪತ್ರೆ ಮುಖ್ಯಸ್ಥ ಡಾ.ಆರ್.ಕೆ.ಧಿಮಾನ್ ತಿಳಿಸಿದ್ದಾರೆ.

ಘಟನೆಯ ಕುರಿತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ ಯಾದವ್ ಅವರು ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಇದು ಆಸ್ಪತ್ರೆಯ ತಪ್ಪಲ್ಲ. ಇದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ತಪ್ಪು. ಅವರು ಆಸ್ಪತ್ರೆಗೆ ಏಕೆ ಬಜೆಟ್ ನೀಡುತ್ತಿಲ್ಲ?” ಅವರು ಪ್ರಶ್ನಿಸಿದ್ದಾರೆ. ಉಪಮುಖ್ಯಮಂತ್ರಿ ಕೇಶವಪ್ರಸಾದ ಮೌರ್ಯ ಅವರು ಮಿಶ್ರಾ ಅವರ ಮನೆಗೆ ಭೇಟಿ ನೀಡಿ ಕಟ್ಟುನಿಟ್ಟಿನ ಕ್ರಮದ ಭರವಸೆ ನೀಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ದುರದೃಷ್ಟಕರ ಘಟನೆ. ಈ ಬಗ್ಗೆ ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿದೆ. ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ಮುಸ್ಲಿಂ ಮತಗಳು ಬೇಕು, ಆದರೆ ಟಿಕೆಟ್‌ ಕೊಡಲ್ಲ : ಕಾಂಗ್ರೆಸ್‌ ಬಗ್ಗೆ ನಸೀಂ ಖಾನ್ ತೀವ್ರ ಅಸಮಾಧಾನ, ಹುದ್ದೆಗೆ ರಾಜೀನಾಮೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement