ಬೀಜಿಂಗ್: ಜಾಗತಿಕ ಕೋವಾಕ್ಸ್ ಉಪಕ್ರಮಕ್ಕೆ 10 ಮಿಲಿಯನ್ ಡೋಸ್ ಕೋವಿಡ್ -19 ಲಸಿಕೆ ನೀಡುವುದಾಗಿ ಚೀನಾ ಬುಧವಾರ ಹೇಳಿದೆ.
ಏಕೆಂದರೆ ಕೋವಿಡ್ಲ ಸಿಕೆ ವಿತರಣೆಗೆ ಭಾರತವು “ಎಂಜಿನ್” ಆಗಬಹುದು ಎಂಬ ತಜ್ಞರ ಅಭಿಪ್ರಾಯದ ನಡುವೆ ಚೀನಾ ತನ್ನ ಲಸಿಕೆ ರಾಜತಾಂತ್ರಿಕತೆ ಬಲಪಡಿಸಲು ಪ್ರಯತ್ನಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕೋವಾಕ್ಸ್ ಉಪಕ್ರಮಕ್ಕೆ ತುರ್ತು ಅನುಮೋದನೆಗೆ ತಯಾರಿ ನಡೆಸಿರುವಾಗ ಚೀನಾ ಕೋವಾಕ್ಸ್‌ಗೆ ಲಸಿಕೆಗಳನ್ನು ಪೂರೈಸಲು ಮುಂದಾಗಿದೆ.
ಕೋವಾಕ್ಸ್ ಅನ್ನು ಔಪಚಾರಿಕವಾಗಿ ಕೊವಿಡ್-19 ಲಸಿಕೆಗಳ ಜಾಗತಿಕ ಪ್ರವೇಶ ಸೌಲಭ್ಯ ಎಂದು ಕರೆಯಲಾಗುತ್ತದೆ, ಇದು ಜಾಗತಿಕ ಉಪಕ್ರಮವಾಗಿದ್ದು, ಮಧ್ಯಮ ಮತ್ತು ಕಡಿಮೆ-ಆದಾಯದ ದೇಶಗಳಿಗೆ ಕೊರೊನಾ ವೈರಸ್ ಲಸಿಕೆಗಳು ಸಮಯಕ್ಕೆ ಸಿಗುವಂತೆ ಖಾತ್ರಿಪಡಿಸಿಕೊಳ್ಳುವ ಗುರಿ ಹೊಂದಿದೆ.
ಅಭಿವೃದ್ಧಿಶೀಲ ರಾಷ್ಟ್ರಗಳ ತುರ್ತು ಅಗತ್ಯಗಳನ್ನು ಪೂರೈಸಲು ಕೋವಾಕ್ಸ್‌ಗೆ 10 ಮಿಲಿಯನ್ ಸಿಒವಿಐಡಿ -19 ಲಸಿಕೆ ಪ್ರಮಾಣವನ್ನು ನೀಡಲು ಚೀನಾ ನಿರ್ಧರಿಸಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ವ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಚೀನಾ ದೇಶವು ಪ್ರಸ್ತುತ 16 ಲಸಿಕೆಗಳಿಗೆ ಪ್ರಯೋಗಗಳನ್ನು ನಡೆಸುತ್ತಿದೆ ಎಂದು ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ, ಆದರೆ ಇದುವರೆಗೆ ಸಿನೊಫಾರ್ಮ್‌ಗೆ ಮಾತ್ರ ಷರತ್ತು ಬದ್ಧ ಅನುಮೋದನೆ ನೀಡಿದೆ, ಇದು ಪಾಕಿಸ್ತಾನ ಸೇರಿದಂತೆ ಹಲವಾರು ದೇಶಗಳಿಗೆ ಪೂರೈಸಲು ಪ್ರಾರಂಭಿಸಿದೆ.
ಇತ್ತೀಚೆಗೆ, ಚೀನಾದಲ್ಲಿ 80 ಕ್ಕೂ ಹೆಚ್ಚು ಜನರನ್ನು ಲವಣಯುಕ್ತ ನೀರಿನಿಂದ ತುಂಬಿದ ನಕಲಿ ಲಸಿಕೆಗಳ ಕಳ್ಳಸಾಗಣೆ ಸಂಬಂಧ ಬಂಧಿಸಲಾಗಿತ್ತು ಎಂಬುದು ಗಮನಾರ್ಹ. ಕೆಲವು ನಕಲಿ ಲಸಿಕೆಗಳನ್ನು ಆಫ್ರಿಕನ್ ದೇಶಗಳಿಗೆ ಕಳುಹಿಸಲಾಗುತ್ತಿದೆ ಎಂದು ವರದಿಯಾಗಿದೆ.
ಭಾರತವು ಈಗಾಗಲೇ ಹಲವಾರು ದೇಶಗಳಿಗೆ ಲಸಿಕೆಗಳನ್ನು ಒದಗಿಸಲು ಪ್ರಾರಂಭಿಸಿರುವುದರಿಂದ ಚೀನಾವು ಸಹ ಕೋವಾಕ್ಸ್‌ಗೆ ಲಸಿಕೆಗಳನ್ನು ನೀಡಲು ಮುಂದಾಗಿದೆ. ಕೊಲಂಬೊಕ್ಕೆ ಐದು ಲಕ್ಷದಷ್ಟು ಲಸಿಕೆಗಳನ್ನು ಭಾರತವು ರವಾನಿಸಿದ ನಂತರ ಶ್ರೀಲಂಕಾಕ್ಕೆ ಮೂರು ಲಕ್ಷ ಲಸಿಕೆಗಳನ್ನು ಪೂರೈಸುವುದಾಗಿ ಬೀಜಿಂಗ್ ಘೋಷಿಸಿತ್ತು. ಈಗಾಗಲೇ ಭಾರತದಿಂದ ಮೊದಲ ಬ್ಯಾಚ್ ಸರಬರಾಜುಗಳನ್ನು ಪಡೆದಿರುವ ಚೀನಾ ತನ್ನ ಲಸಿಕೆ ಸರಬರಾಜನ್ನು ನೇಪಾಳ, ಮಾಲ್ಡೀವ್ಸ್ ಮತ್ತು ಬ್ರೆಜಿಲ್ ದೇಶಗಳಿಗೆ ನೀಡಿದೆ.
ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಒಂದು ಮಿಲಿಯನ್ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ದಕ್ಷಿಣ ಆಫ್ರಿಕಾವು ಪಡೆದುಕೊಂಡಿದೆ, ಭಾರತವು ತನ್ನ ಲಸಿಕೆ ರಾಜತಾಂತ್ರಿಕತೆಯನ್ನು ತನ್ನ ಜಾಗತಿಕವಾಗಿ ಬಳಸಿಕೊಂಡಿತು. ಇದನ್ನು ಹಾಂಗ್ ಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (ಎಸ್‌ಸಿಎಂಪಿ) ಬುಧವಾರ ವರದಿ ಮಾಡಿದೆ.
ಈ ಮಧ್ಯೆ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಈ ತಿಂಗಳ ಕೊನೆಯಲ್ಲಿ ತಮ್ಮ ದೇಶವು ಭಾರತದಿಂದ ಇನ್ನೂ ೫ ಲಕ್ಷದ ಪ್ರಮಾಣದಷ್ಟು ಲಸಿಕೆ ನಿರೀಕ್ಷಿಸುತ್ತದೆ ಎಂದು ಹೇಳಿದ್ದಾರೆ. ಭಾರತದ ಸೀರಮ್ ಸಂಸ್ಥೆ ವಿಶ್ವಕ್ಕೆ ಲಸಿಕೆ ವಿತರಣೆಯ ಎಂಜಿನ್ ಆಗಿರಬಹುದು, ಇದರಿಂದ ವಿಶೇಷವಾಗಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಲಅಭವಾಗಬಹುದು ಎಂದು ನಿರೀಕ್ಷಿಸಲಾಗಿದ್ದು, ಈಗ ಚೀನಾ ಈ ನಿಟ್ಟಿನಲ್ಲಿ ಭಾರತಕ್ಕೆ ಪೈಪೋಟಿ ನೀಡಲು ಮುಂದಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ